logo
ಕನ್ನಡ ಸುದ್ದಿ  /  ಕ್ರೀಡೆ  /  Icc Test Ranking: ಟೆಸ್ಟ್‌ ಶ್ರೇಯಾಂಕದಲ್ಲಿ ಕೊಹ್ಲಿ ಕಮಾಲ್; ಅಶ್ವಿನ್ ಅನಭಿಷಿಕ್ತ ದೊರೆ, ಅಕ್ಷರ್‌ಗೂ ಬಡ್ತಿ

ICC Test ranking: ಟೆಸ್ಟ್‌ ಶ್ರೇಯಾಂಕದಲ್ಲಿ ಕೊಹ್ಲಿ ಕಮಾಲ್; ಅಶ್ವಿನ್ ಅನಭಿಷಿಕ್ತ ದೊರೆ, ಅಕ್ಷರ್‌ಗೂ ಬಡ್ತಿ

HT Kannada Desk HT Kannada

Mar 15, 2023 03:35 PM IST

ವಿರಾಟ್‌ ಕೊಹ್ಲಿ, ಆರ್‌ ಅಶ್ವಿನ್

    • ಬರೋಬ್ಬರಿ ಮೂರು ವರ್ಷಗಳ ನಂತರ ಮೊದಲ ಟೆಸ್ಟ್ ಶತಕ ಗಳಿಸಿದ ವಿರಾಟ್ ಕೊಹ್ಲಿ, ಟೆಸ್ಟ್‌ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಏಳು ಸ್ಥಾನ ಮೇಲೇರಿ 13ನೇ ಸ್ಥಾನದಲ್ಲಿದ್ದಾರೆ.
ವಿರಾಟ್‌ ಕೊಹ್ಲಿ, ಆರ್‌ ಅಶ್ವಿನ್
ವಿರಾಟ್‌ ಕೊಹ್ಲಿ, ಆರ್‌ ಅಶ್ವಿನ್

ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸೇರಿದಂತೆ ಭಾರತ ತಂಡದ ಹಲವು ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದಿತ್ತು. ಅದರ ಬೆನ್ನಲ್ಲೇ ಈಗ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತೀಯರು ಭಾರಿ ಸುಧಾರಣೆ ಕಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ಬರೋಬ್ಬರಿ ಮೂರು ವರ್ಷಗಳ ನಂತರ ಮೊದಲ ಟೆಸ್ಟ್ ಶತಕ ಗಳಿಸಿದ ವಿರಾಟ್ ಕೊಹ್ಲಿ, ಟೆಸ್ಟ್‌ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಏಳು ಸ್ಥಾನ ಮೇಲೇರಿ 13ನೇ ಸ್ಥಾನದಲ್ಲಿದ್ದಾರೆ. ಒಂದು ಕಾಲದಲ್ಲಿ ಎಲ್ಲಾ ಸ್ವರೂಪಗಳಲ್ಲೂ ವಿಶ್ವದ ನಂಬರ್‌ ವನ್ ಶ್ರೇಯಾಂಕದ ಬ್ಯಾಟರ್ ಆಗಿದ್ದ ಕಿಂಗ್‌ ಕೊಹ್ಲಿ, ಕಳಪೆ ಪ್ರದರ್ಶನ ಬೆನ್ನಲ್ಲೇ ಟಾಪ್-10 ಪಟ್ಟಿಯಿಂದ ಹೊರಬಿದ್ದಿದ್ದರು. ಸದ್ಯ ಮತ್ತೆ ಅಗ್ರ ಹತ್ತರೊಳಗೆ ಸ್ಥಾನ ಪಡೆಯಲು ಕೊಹ್ಲಿ ವಿಫಲರಾದರೂ, ಭಾರತದ ಪರ ಅವರು 186 ರನ್ ಗಳಿಸಿರುವುದೇ ಅಭಿಮಾನಿಗಳಿಗೆ ಆಶಾದಾಯಕ ವಿಚಾರವಾಗಿದೆ.

ಏಳು ಸ್ಥಾನಗಳ ಜಿಗಿತ ಕಂಡ ಕೊಹ್ಲಿ, ಭಾರತದ ಪರ ಈ ಬಾರಿಯ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಅತಿ ಹೆಚ್ಚು ಮತ್ತು ಒಟ್ಟಾರೆಯಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಭಾರತದ ಪರ ಅಗ್ರ ಹತ್ತರಲ್ಲಿ ರಿಷಬ್ ಪಂತ್ (9ನೇ ಶ್ರೇಯಾಂಕ) ಮತ್ತು ರೋಹಿತ್ ಶರ್ಮಾ (10 ನೇ) ಮಾತ್ರ ಸ್ಥಾನ ಪಡೆದಿದ್ದಾರೆ.

ಬಿಜಿಟಿ ಟೂರ್ನಿಯಲ್ಲಿ ಕೊಹ್ಲಿ ದೊಡ್ಡ ಮೊತ್ತಗಳನ್ನು ಗಳಿಸದೇ ಇರಬಹುದು. ಆದರೆ ಸರಣಿಯುದ್ದಕ್ಕೂ ಭಾರತದ ಮಾಜಿ ನಾಯಕ ತಮ್ಮ ಸುಧಾರಿತ ಪ್ರದರ್ಶನ ತೋರಿದ್ದಾರೆ. ದೆಹಲಿಯಲ್ಲಿ 44 ರನ್‌‌ ಗಳಿಸಿ ಔಟಾದ ನಂತರ, ಸರಣಿಯ ನಿರ್ಣಾಯಕ ಪಂದ್ಯದಲ್ಲಿ ನಿರ್ಣಾಯಕ ಆಟವಾಡಿದರು. 1205 ದಿನಗಳ ಬಳಿಕ 28ನೇ ಟೆಸ್ಟ್ ಶತಕ ಗಳಿಸಿದರು.

ಈ ನಡುವೆ, ಜೇಮ್ಸ್ ಆಂಡರ್ಸನ್ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿದ ಸ್ಪಿನ್ನರ್‌ ಆರ್‌ ಅಶ್ವಿನ್ ಮತ್ತೆ ನಂಬರ್‌ ವನ್‌ ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. ಅಶ್ವಿನ್ ಮತ್ತು ಆಂಡರ್ಸನ್ ಈ ಹಿಂದೆ ಜಂಟಿಯಾಗಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು. ಆದರೆ ಅಹಮದಾಬಾದ್‌ನಲ್ಲಿ ಮತ್ತೊಮ್ಮೆ ಐದು ವಿಕೆಟ್ ಪಡೆದ ಬಳಿಕ ಅವರ ಪಾಯಿಂಟ್‌ 869ಕ್ಕೇರಿತು. ಸರಣಿಯಲ್ಲಿ 26 ವಿಕೆಟ್‌ಗಳೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅಶ್ವಿನ್‌, ಸದ್ಯ ವಿಶ್ವದ ನಂಬರ್‌ ವನ್‌ ಟೆಸ್ಟ್‌ ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. ಅಶ್ವಿನ್ ಎರಡು ಬಾರಿ 5 ವಿಕೆಟ್‌ಗಳ ಗೊಂಚಲು ಪಡೆದರು. ನಾಗ್ಪುರದಲ್ಲಿ 5/37 ಮತ್ತು ಅಹಮದಾಬಾದ್‌ನಲ್ಲಿ 6/91 ಸಾಧನೆ ಮಾಡಿದರು.

ಕೊಹ್ಲಿ ಮತ್ತು ಅಶ್ವಿನ್ ಜೊತೆಗೆ, ಕೆಳಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಕ್ಸರ್ ಪಟೇಲ್‌ ಕೂಡಾ ಶ್ರೇಯಾಂಕ ಪಟ್ಟಿಯಲ್ಲಿ ಶುಭಸುದ್ದಿ ಪಡೆದಿದ್ದಾರೆ. ಎಡಗೈ ಸ್ಪಿನ್ನರ್ ಕೇವಲ ಎರಡು ವಿಕೆಟ್‌ಗಳನ್ನು ಪಡೆದು, ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೆ ಬ್ಯಾಟ್‌ನಲ್ಲಿ ಅವರು ಮಾಡಿದ ಮೋಡಿ, ಪಂದ್ಯದಲ್ಲಿ ಭಾರತಕ್ಕೆ ಭಾರಿ ಬಲ ತುಂಬಿತು. ಮೂರು ಅರ್ಧ ಶತಕಗಳು ಸೇರಿದಂತೆ ಒಟ್ಟು 264 ರನ್‌ಗಳನ್ನು ಗಳಿಸಿದರು. ಹೀಗಾಗಿ ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಎಂಟು ಸ್ಥಾನ ಮೇಲೇರಿ 44ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ಅಕ್ಷರ್ ಅವರು ಮೊದಲ ಟೆಸ್ಟ್‌ನಲ್ಲಿ 84 ರನ್‌ ಗಳಿಸಿ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು. ದೆಹಲಿಯಲ್ಲಿ ಮತ್ತೆ 74 ರನ್‌ ಗಳಿಸಿ ಮತ್ತೊಮ್ಮೆ ಮಿಂಚಚಿದರು. ಭಾರತವು ಸೋತ ಮೂರನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದರು. ಅಕ್ಷರ್ ಬ್ಯಾಟಿಂಗ್ ಎಷ್ಟು ಸುಧಾರಿಸಿದೆ ಎಂಬುದಕ್ಕೆ ಇದು ಸಾಕ್ಷಿ. ಅವರ ತವರಾದ ಅಹಮದಾಬಾದ್‌ನಲ್ಲಿ, 79 ರನ್ ಗಳಿಸಿ ಕೊಹ್ಲಿ ಜೊತೆ ಉತ್ತಮ ಜೊತೆಯಾಟವಾಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ