logo
ಕನ್ನಡ ಸುದ್ದಿ  /  ಕ್ರೀಡೆ  /  Wpl 2023: ದೀಪಾವಳಿಯಲ್ಲಿ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ ಆಯೋಜಿಸಲು ಚಿಂತನೆ: ಜಯ್​ ಶಾ ಮಾಹಿತಿ

WPL 2023: ದೀಪಾವಳಿಯಲ್ಲಿ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ ಆಯೋಜಿಸಲು ಚಿಂತನೆ: ಜಯ್​ ಶಾ ಮಾಹಿತಿ

Prasanna Kumar P N HT Kannada

Apr 15, 2023 10:22 AM IST

ಮೆಗ್​ ಲ್ಯಾನಿಂಗ್​ ಮತ್ತು ಹರ್ಮನ್​ ಪ್ರೀತ್​ ಕೌರ್​

    • WPL 2023: ಸಮಯ ಕಡಿಮೆ ಇದ್ದ ಕಾರಣ, ಹೋಮ್​ ಮತ್ತು ಅವೇ ಮಾದರಿಯಲ್ಲಿ ಡಬ್ಲ್ಯುಪಿಎಲ್ ಆಯೋಜಿಸಲು ಸಾಧ್ಯವಾಗಿಲ್ಲ. ದೀಪಾವಳಿಯಲ್ಲಿ ಲೀಗ್​ ಆಯೋಜಿಸಲು ಚಿಂತನೆ ನಡೆಸಿದ್ದು, ತವರು ಮತ್ತು ತವರಿನಿಂದಾಚೆ ಸ್ವರೂಪದಲ್ಲಿ ನಿಗದಿಪಡಿಸಲು ಪರಿಗಣಿಸುತ್ತಿದ್ದೇವೆ ಎಂದು ಜಯ್ ಶಾ ಶುಕ್ರವಾರ ಹೇಳಿದ್ದಾರೆ.
ಮೆಗ್​ ಲ್ಯಾನಿಂಗ್​ ಮತ್ತು ಹರ್ಮನ್​ ಪ್ರೀತ್​ ಕೌರ್​
ಮೆಗ್​ ಲ್ಯಾನಿಂಗ್​ ಮತ್ತು ಹರ್ಮನ್​ ಪ್ರೀತ್​ ಕೌರ್​ ( WPL Twitter)

ಉದ್ಘಾಟನಾ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್ (Women's Premier League)​​ ಅತ್ಯಂತ ಯಶಸ್ಸು ಕಂಡಿದೆ. ಮುಂದಿನ ವರ್ಷ ಆಯೋಜಿಸುವ ಎರಡನೇ ಆವೃತ್ತಿಯ ಲೀಗ್​​​ಗೆ ಬಿಸಿಸಿಐ (BCCI) ಈಗಿನಿಂದಲೇ ತಯಾರಿ ಆರಂಭಿಸಿದೆ.​ ಜೊತೆಗೆ ಇಂಡಿಯನ್ ಪ್ರೀಮಿಯರ್​ ಲೀಗ್​ನಂತೆ​ (IPL) ಹೋಮ್​ ಆ್ಯಂಡ್ ಅವೇ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಯೋಜನೆ ರೂಪಿಸಿದೆ. ಈಗ ಮಹಿಳಾ ಐಪಿಎಲ್​ ಅನ್ನು ದೀಪಾವಳಿ ಸಮಯದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಬಗ್ಗೆ ಬಿಗ್​ಬಾಸ್​ಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2019ರ ನಂತರ ಥಾಯ್ಲೆಂಡ್ ಓಪನ್​​ ಗೆದ್ದ ಸಾತ್ವಿಕ್-ಚಿರಾಗ್; ಪ್ರಶಸ್ತಿಯೊಂದಿಗೆ ನಂಬರ್ 1 ಪಟ್ಟಕ್ಕೇರಿದ ಭಾರತದ ಜೋಡಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ (Jay Shah) ಮಾತನಾಡಿದ್ದು, 2ನೇ ಆವೃತ್ತಿಯ ಮಹಿಳಾ ಐಪಿಎಲ್​ ಅನ್ನು ತವರು ಮತ್ತು ತವರಿನಾಚೆ ಮಾದರಿಯಲ್ಲಿ ಆಯೋಜಿಸುವ ಬಗ್ಗೆ ಮಾತುಕತೆ ನಡೆದಿದೆ. ಅದರಂತೆ ದೀಪಾವಳಿ ಸಮಯದಲ್ಲಿ ಟೂರ್ನಿ ನಡೆಸಲು ಚಿಂತನೆ ನಡೆಸಿದ್ದೇವೆ. ಆದರೆ ವರ್ಷದಲ್ಲಿ ಎರಡು ಆವೃತ್ತಿಗಳನ್ನು ಆಯೋಜಿಸುವ ಉದ್ದೇಶ ಇಲ್ಲ ಎಂದು ಖಚಿತಪಡಿಸಿದ್ದಾರೆ. ಮುಂದಿನ ವರ್ಷದಿಂದ ಡಬ್ಲ್ಯುಪಿಎಲ್ - ಐಪಿಎಲ್​ ಅನ್ನು ಬೇರೆ ಬೇರೆ ಸಮಯದಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ.

ಬಿಡುವಿನ ಸಮಯ ನೋಡಿಕೊಂಡು ಟೂರ್ನಿಯನ್ನು ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಿದ್ದೇವೆ. ಮಹಿಳಾ ಪ್ರೀಮಿಯರ್​ ತನ್ನದೇ ಅಭಿಮಾನಿ ಬಳಗ ಹೊಂದಿದೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಲಿದೆ. ಐಪಿಎಲ್​ ವೇಳೆಯೇ ಡಬ್ಲ್ಯುಪಿಎಲ್ ಆಯೋಜಿಸಿದರೆ ಎರಡೂ ಟೂರ್ನಿಗಳು ಘರ್ಷಣೆಯಾಗಲಿದೆ. ಐಪಿಎಲ್​ ಮತ್ತು ಡಬ್ಲ್ಯುಪಿಎಲ್ ನಡುವೆ ಅಂತರವನ್ನು ಹೊಂದಲು ಬಯಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವರ್ಷದ ಮಾರ್ಚ್​ 4ರಿಂದ ಮಾರ್ಚ್ 26 ರವರೆಗೆ ಡಬ್ಲ್ಯುಪಿಎಲ್ ನಡೆದಿತ್ತು. ಈ ಟೂರ್ನಿ ಮುಗಿದ 5 ದಿನಗಳ ನಂತರ IPL ಪ್ರಾರಂಭಗೊಂಡಿದೆ. ಸಮಯ ಕಡಿಮೆ ಇದ್ದ ಕಾರಣ, ಹೋಮ್​ ಮತ್ತು ಅವೇ ಮಾದರಿಯಲ್ಲಿ ಡಬ್ಲ್ಯುಪಿಎಲ್ ಆಯೋಜಿಸಲು ಸಾಧ್ಯವಾಗಿಲ್ಲ. ದೀಪಾವಳಿಯಲ್ಲಿ ಲೀಗ್​ ಆಯೋಜಿಸಲು ಚಿಂತನೆ ನಡೆಸಿದ್ದು, ತವರು ಮತ್ತು ತವರಿನಿಂದಾಚೆ ಸ್ವರೂಪದಲ್ಲಿ ನಿಗದಿಪಡಿಸಲು ಪರಿಗಣಿಸುತ್ತಿದ್ದೇವೆ ಎಂದು ಜಯ್ ಶಾ ಶುಕ್ರವಾರ ಹೇಳಿದ್ದಾರೆ.

WPLನ ಮೊದಲ ಆವೃತ್ತಿಯು 50.78 ಮಿಲಿಯನ್ ಪ್ರೇಕ್ಷಕರಿಗೆ ತಲುಪುವ ಮೂಲಕ ಸಾಕಷ್ಟು ಯಶಸ್ವಿಯಾಗಿದೆ. RCB ಮತ್ತು ಮುಂಬೈ ತಂಡಗಳು ನಡುವಿನ ಹಣಾಹಣಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಪಂದ್ಯ ಎನಿಸಿದೆ. ಗುಜರಾತ್ ಜೈಂಟ್ಸ್ ಮತ್ತು ಆರ್​​ಸಿಬಿ ಪಂದ್ಯವು ಎರಡನೇ ಅತಿ ಹೆಚ್ಚು ವೀಕ್ಷಿಸಿದ ಪಂದ್ಯವಾಗಿದೆ ಎಂದು ಶಾ ಬಹಿರಂಗಪಡಿಸಿದರು. ಇದು ಬಾರ್ಕ್​ ಸಂಸ್ಥೆಯ ವರದಿ.

ಮುಂಬೈ ಇಂಡಿಯನ್ಸ್​ ಚಾಂಪಿಯನ್

ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್ ಮುಂಬೈ ಇಂಡಿಯನ್ಸ್​ ಮಹಿಳಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಫೈನಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್​ ನಡೆಸಿದ್ದ ಡೆಲ್ಲಿ, 9 ವಿಕೆಟ್​ ಕಳೆದುಕೊಂಡು 131 ರನ್​ ಗಳಿಸಿತ್ತು. ಈ ಸುಲಭ ಗುರಿ ಬೆನ್ನತ್ತಿದ ಮುಂಬೈ 19.3 ಓವರ್​​ಗಳಲ್ಲಿ ಗೆಲುವಿನ ಗೆರೆ ದಾಟಿತು. ಇದರೊಂದಿಗೆ ಚೊಚ್ಚಲ ಟೂರ್ನಿಯಲ್ಲೇ ಟ್ರೋಫಿಗೆ ಮುತ್ತಿಕ್ಕಿತು.

ಆರ್​ಸಿಬಿಗೆ 4ನೇ ಸ್ಥಾನ

ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಟೂರ್ನಿಯಲ್ಲಿ ಸತತ ಐದು ಪಂದ್ಯಗಳಲ್ಲಿ ಸೋತು, ಕಳಪೆ ದಾಖಲೆಗೂ ಗುರಿಯಾಯಿತು. ಘಟಾನುಘಟಿ ಆಟಗಾರ್ತಿಯರೇ ತಂಡದಲ್ಲಿದ್ದರೂ ಉತ್ತಮ ನಿರ್ವಹಣೆ ತೋರುವಲ್ಲಿ ವಿಫಲವಾಯಿತು. ಟೂರ್ನಿಯಲ್ಲಿ ಕೇವಲ 2 ಗೆಲುವು ಸಾಧಿಸಿದ ಬೆಂಗಳೂರು ಅಂಕಪಟ್ಟಿಯಲ್ಲಿ 4 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ