Students Making Bhel Puri: ಶಾಲೆಯಲ್ಲಿ ಭೇಲ್ ಪುರಿ ತಯಾರಿಸಿದ 2ನೇ ತರಗತಿ ಮಕ್ಕಳು..
Sep 28, 2022 05:00 PM IST
- ಮುಂಬೈನ ಶಾಲೆಯೊಂದರಲ್ಲಿ 2ನೇ ತರಗತಿ ವಿದ್ಯಾರ್ಥಿಗಳು ಭೇಲ್ ಪುರಿ ತಯಾರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟೀಮ್ ಬಿಲ್ಡಿಂಗ್ ಚಟುವಟಿಕೆಯಾಗಿ ಮಕ್ಕಳ ಬಳಿ ಇದನ್ನು ಶಿಕ್ಷಕರು ಮಾಡಿಸಿದ್ದಾರೆ. ಒಬ್ಬೊಬ್ಬರಾಗಿಯೇ ಬಂದು ಮಂಡಕ್ಕಿ, ಕತ್ತರಿಸಿದ ಈರುಳ್ಳಿ, ಟೊಮೇಟೋ, ಕೊತ್ತುಂಬರಿ ಸೊಪ್ಪು, ನಿಂಬೆ ಹಣ್ಣು, ಖಾರ ಮಿಕ್ಸರ್ ಹೀಗೆ ಭೇಲ್ ಪುರಿ ಮಾಡಲು ಬೇಕಾದ ಪದಾರ್ಥಗಳನ್ನು ಮಕ್ಕಳು ಒಂದು ಬೌಲ್ಗೆ ಹಾಕುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.