ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Angaraka Yoga: ರಾಹು-ಕೇತು ಸಂಯೋಜನೆಯಿಂದ ಅಂಗಾರಕ ಯೋಗ ಸೃಷ್ಟಿ; ಮುಂದಿನ 40 ದಿನಗಳ ಕಾಲ ಈ ಮೂರು ರಾಶಿಯವರಿಗೆ ಕಷ್ಟದ ಸಮಯ

Angaraka Yoga: ರಾಹು-ಕೇತು ಸಂಯೋಜನೆಯಿಂದ ಅಂಗಾರಕ ಯೋಗ ಸೃಷ್ಟಿ; ಮುಂದಿನ 40 ದಿನಗಳ ಕಾಲ ಈ ಮೂರು ರಾಶಿಯವರಿಗೆ ಕಷ್ಟದ ಸಮಯ

Angaraka Yoga: ಏಪ್ರಿಲ್ 23 ರಂದು ಮಂಗಳ ಗ್ರಹವು ​​ಮೀನ ರಾಶಿಯನ್ನು ಪ್ರವೇಶಿಸಿದೆ. ಇದರಿಂದ ಅಂಗಾರಕ ಯೋಗ ಆರಂಭವಾಗಿದೆ. ಈ ಅಂಗಾರಕ ಯೋಗದಿಂದ ದ್ವಾದಶ ರಾಶಿಯವರ ಜನರಿಗೆ ಕೆಲವೊಂದು ವಿಚಾರಗಳಲ್ಲಿ ಸಮಸ್ಯೆ ಉಂಟಾಗಲಿದೆ. ಅದರಲ್ಲೂ 3 ರಾಶಿಯವರಂತೂ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು.

ರಾಹು-ಕೇತು ಸಂಯೋಜನೆಯಿಂದ ಅಂಗಾರಕ ಯೋಗ ಸೃಷ್ಟಿ
ರಾಹು-ಕೇತು ಸಂಯೋಜನೆಯಿಂದ ಅಂಗಾರಕ ಯೋಗ ಸೃಷ್ಟಿ

ಅಂಗಾರಕ ಯೋಗ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಧೈರ್ಯ, ಶೌರ್ಯ ಮತ್ತು ಶಕ್ತಿಯ ಅಧಿಪತಿಯಾದ ಕುಜ ಗ್ರಹವು ಏಪ್ರಿಲ್ 23 ರಂದು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಿದೆ. ರಾಹು ಮತ್ತು ಶುಕ್ರರು ಈಗಾಗಲೇ ಅಲ್ಲಿ ಸಂಚರಿಸುತ್ತಿದ್ದಾರೆ. ಮಂಗಳನ ಛಾಯಾ ಗ್ರಹಗಳಾದ ರಾಹು ಅಥವಾ ಕೇತು ಸೇರಿದಾಗ ಅಂಗಾರಕ ಯೋಗ ಉಂಟಾಗುತ್ತದೆ . ಪ್ರಸ್ತುತ ಮಂಗಳ ಮತ್ತು ರಾಹು ಮೀನದಲ್ಲಿ ಅಂಗಾರಕ ಯೋಗವನ್ನು ರೂಪಿಸುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂಗಾರಕ ಯೋಗವನ್ನು ಅಶುಭವೆಂದು ಪರಿಗಣಿಸಲಾಗಿದೆ.

ಮಂಗಳವು ನೆರಳು ಗ್ರಹವಾದ ರಾಹುನೊಂದಿಗೆ ಬಂದರೆ ಅದು ಜೀವನದಲ್ಲಿ ಅನೇಕ ಕಷ್ಟಕರ ಸಂದರ್ಭಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರಾಗಲಿವೆ. ಹಣ ನಷ್ಟವಾಗುವ ಸಂದರ್ಭಗಳು ಎದುರಾಗುತ್ತವೆ . ಈ ಯೋಗದ ಪ್ರಭಾವದಿಂದ ವ್ಯಕ್ತಿಯು ಯಾವಾಗಲೂ ಕೋಪಗೊಳ್ಳುತ್ತಾನೆ. ವಿನಾಕಾರಣ ಇತರರೊಂದಿಗೆ ಜಗಳವಾಡುತ್ತಾರೆ. ವೈವಾಹಿಕ ಜೀವನದಲ್ಲಿ ಸಂತೋಷದ ಕೊರತೆಯಿರುತ್ತದೆ. ದಂಪತಿ ನಡುವಿನ ಪ್ರೀತಿ ಮರೆಯಾಗುತ್ತದೆ. ಸಹೋದರರು, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಜಗಳವಾಗುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಮೋಸ ಹೋಗುತ್ತೀರಿ. ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ಈ 3 ರಾಶಿಗಳ ಜನರು ಮುಂದಿನ 40 ದಿನಗಳವರೆಗೆ ಬಹಳ ಜಾಗರೂಕರಾಗಿರಬೇಕು.

ಮೇಷ ರಾಶಿ

ಮೇಷ ರಾಶಿಯವರು ಅಂಗಾರಕ ಯೋಗದ ಪ್ರಭಾವದಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳಿಂದ ಬಹಳ ಎಚ್ಚರಿಕೆ ವಹಿಸಬೇಕು. ಈ ಸಮಯದಲ್ಲಿ ನಿಮಗೆ ವೆಚ್ಚಗಳು ಹೆಚ್ಚಾಗಲಿವೆ. ನಿಮ್ಮ ಭಾವನೆಗಳು ಏರುಪೇರಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಅಡೆತಡೆಗಳು ಎದುರಾಗಲಿವೆ. ಶುಭ ಕಾರ್ಯಗಳು ವಿಳಂಬವಾಗುತ್ತವೆ. ಆಸ್ತಿಗೆ ಸಂಬಂಧಿಸಿದ ವಿವಾದಗಳು ಹೆಚ್ಚಾಗುತ್ತವೆ. ನೀವು ನಿರೀಕ್ಷಿಸಿದ ಫಲಿತಾಂಶಗಳನ್ನು ನೀವು ಪಡೆಯದಿರಬಹುದು. ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.

ಕನ್ಯಾರಾಶಿ

ಅಂಗಾರಕ ಯೋಗದ ಪ್ರಭಾವದಿಂದ ತೊಂದರೆಗಳನ್ನು ಎದುರಿಸುವ ಮತ್ತೊಂದು ಚಿಹ್ನೆ ಕನ್ಯಾರಾಶಿ . ಈ ಜಾತಕರು ತಮ್ಮ ಆತ್ಮೀಯರೊಂದಿಗೆ ಜಗಳ ಮಾಡುತತಾರೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬೇಡಿ. ಇಲ್ಲದಿದ್ದರೆ ಹಣ ನಷ್ಟವಾಗುವ ಸಂಭವವಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ಕೆಲಸದಲ್ಲಿ ಅಡೆತಡೆಗಳು ಎದುರಾಗಲಿವೆ. ಸಂಗಾತಿಯ ಆರೋಗ್ಯದ ಬಗ್ಗೆ ಸದಾ ಯೋಚಿಸುವಿರಿ. ವೆಚ್ಚವನ್ನು ನಿಯಂತ್ರಿಸಬೇಕು. ಕೆಲವು ದಿನಗಳವರೆಗೂ ದೂರ ಪ್ರಯಾಣವನ್ನು ಮುಂದೂಡಿ. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಟ್ರಾಫಿಕ್ ನಿಯಮಗಳನ್ನು ಪಾಲಿಸದಿದ್ದರೆ ಪೊಲೀಸ್ ಕೇಸ್‌ನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

ಧನು ರಾಶಿ

ಅಂಗಾರಕ ಯೋಗದ ಪ್ರಭಾವದಿಂದ ಧನು ರಾಶಿಯವರ ಜೀವನ ಏರುಪೇರಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅವಶ್ಯಕ . ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವೈವಾಹಿಕ ಜೀವನದಲ್ಲಿ 3ನೇ ವ್ಯಕ್ತಿಯ ಹಸ್ತಕ್ಷೇಪ ಎದುರಾಗಬಹುದು. ವೃತ್ತಿ ಜೀವನದಲ್ಲೂ ಕಿರಿಕಿರಿಗಳಿರುತ್ತವೆ. ಸ್ತ್ರೀಯರು ಅತ್ತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಪ್ರೀತಿಪಾತ್ರರೊಂದಿಗೆ ಮಾತನಾಡುವಾಗ ಬಹಳ ತಾಳ್ಮೆಯಿಂದ ಇರಬೇಕು. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ಮಾತಿನ ಪ್ರಭಾವದಿಂದ ಬೇರೆಯವರ ಮನಸ್ಸಿಗೆ ನೋವಾಗುವ ಸಂಭವವಿದೆ. ನೀವು ತಪ್ಪಾಗಿ ಅರ್ಥೈಸಿಕೊಳ್ಳುವ ಸೂಚನೆಗಳೂ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.