ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sun Venus Conjunction: ಮೇಷ ರಾಶಿಯಲ್ಲಿ ಸೂರ್ಯ ಶುಕ್ರ ಸಂಯೋಗ; ಈ 3 ರಾಶಿಯವರ ಕಷ್ಟದ ಕಾಲ ಇನ್ನು ಮುಗಿದಂತೆ

Sun Venus conjunction: ಮೇಷ ರಾಶಿಯಲ್ಲಿ ಸೂರ್ಯ ಶುಕ್ರ ಸಂಯೋಗ; ಈ 3 ರಾಶಿಯವರ ಕಷ್ಟದ ಕಾಲ ಇನ್ನು ಮುಗಿದಂತೆ

Sun Venus conjunction: ಮೇಷ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಭೇಟಿಯಾಗುತ್ತಿದ್ದಾರೆ. ಒಂದೇ ರಾಶಿಯಲ್ಲಿ ಎರಡು ಗ್ರಹಗಳ ಸಂಯೋಜನೆಯಿಂದ ಕೆಲವು ರಾಶಿಚಕ್ರದ ಜಾತಕಗಳಿಗೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ. ಶುಕ್ರನು ಇತ್ತೀಚೆಗೆ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಹಿನ್ನೆಲೆಯಲ್ಲಿ ಈ ಸಂಯೋಜನೆಯಿಂದ ಯಾವ ರಾಶಿಯವರಿಗೆ ಏನು ಫಲ ನೋಡೋಣ.

ಮೇಷ ರಾಶಿಯಲ್ಲಿ ಸೂರ್ಯ, ಶುಕ್ರರ ಸಂಯೋಗ
ಮೇಷ ರಾಶಿಯಲ್ಲಿ ಸೂರ್ಯ, ಶುಕ್ರರ ಸಂಯೋಗ (PC: Freepik)

ಸೂರ್ಯ ಶುಕ್ರ ಸಂಯೋಗ: ಗ್ರಹಗಳು ಆಗ್ಗಾಗ್ಗೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಕೆಲವೊಮ್ಮೆ 2 ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗಗೊಳ್ಳುತ್ತವೆ. ಇದರಿಂದಾಗ ವಿವಿಧ ಯೋಗಗಳು ರೂಪುಗೊಳ್ಳುತ್ತವೆ. ಇದೀಗ ಸೂರ್ಯ ಹಾಗೂ ಶುಕ್ರ ಕೂಡಾ ಸಂಯೋಜನೆಗೊಂಡಿದ್ದು ಇದರಿಂದ ವಿವಿಧ ರಾಶಿಚಕ್ರದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಅದೃಷ್ಟ ಒಲಿದು ಬರಲಿದೆ.

ಸಂಪತ್ತು ಮತ್ತು ಐಷಾರಾಮದ ಅಧಿಪತಿ ಶುಕ್ರನು ಏಪ್ರಿಲ್‌ 24ರ ರಾತ್ರಿ 11.58 ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಅಲ್ಲಿ ಗ್ರಹಗಳ ರಾಜನಾದ ಸೂರ್ಯನು ಆಗಲೇ ಸಂಚರಿಸುತ್ತಿದ್ದಾನೆ. ಮೇಷ ರಾಶಿಯಲ್ಲಿ ಸೂರ್ಯ-ಶುಕ್ರ ಸಂಯೋಜನೆಯು ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ವೃತ್ತಿಯಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅಪೇಕ್ಷಿತ ಯಶಸ್ಸನ್ನು ಗಳಿಸುತ್ತಾರೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಮೇಷ ರಾಶಿಯಲ್ಲಿ ಸೂರ್ಯ ಶುಕ್ರ ಸಂಯೋಗದಿಂದ ಯಾವ ರಾಶಿಯವರು ಅದೃಷ್ಟವಂತರು ಎಂಬುದನ್ನು ನೋಡೋಣ.

ಮೇಷ ರಾಶಿ

ಶುಕ್ರ ಮತ್ತು ಸೂರ್ಯನ ಸಂಯೋಜನೆಯು ಮೇಷ ರಾಶಿಯವರಿಗೆ ಬಹಳ ಒಳ್ಳೆಯ ಫಲಿತಾಂಶಗಳನ್ನು ನೀಡುತ್ತದೆ . ಉದ್ಯೋಗ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣವಿದೆ. ಹಣದ ಹರಿವು ಹೆಚ್ಚಾಗುತ್ತದೆ. ವೃತ್ತಿಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆ ಕೆಲಸ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆತು ಸಂಬಳ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.

ಕನ್ಯಾರಾಶಿ

ಶುಕ್ರನ ಸಂಚಾರದಿಂದ ಕನ್ಯಾ ರಾಶಿಯವರಿಗೆ ಕೂಡಾ ಉತ್ತಮ ಫಲಿತಾಂಶ ದೊರೆಯಲಿದೆ. ವೃತ್ತಿ ಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಮನೆಯಲ್ಲಿ ದತ್ತಿ ಕಾರ್ಯಕ್ರಮಗಳು ನಡೆಯುತ್ತವೆ. ದಾಂಪತ್ಯ ಜೀವನ ಚೆನ್ನಾಗಿರಲಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚುತ್ತದೆ. ವ್ಯಕ್ತಿತ್ವ ಸುಧಾರಿಸುತ್ತದೆ. ನೀವು ಆಕರ್ಷಣೆಯ ಕೇಂದ್ರವಾಗಿ ಹೊಮ್ಮಲಿದ್ದೀರಿ.

ತುಲಾ ರಾಶಿ

ಶುಕ್ರನು ಮೇಷರಾಶಿಗೆ ಪ್ರವೇಶಿಸುವುದರಿಂದ ತುಲಾ ರಾಶಿಯವರು ಪ್ರತಿದಿನ ಸಂತೋಷದಿಂದ ಸಮಯ ಕಳೆಯುತ್ತಾರೆ. ಒಳ್ಳೆಯ ಸುದ್ದಿ ಸಿಗಲಿದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ಯಶಸ್ವಿಯಾಗುತ್ತವೆ. ಭೌತಿಕ ಸೌಲಭ್ಯಗಳು ಹೆಚ್ಚುತ್ತವೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಸಂತಾನ ಭಾಗ್ಯ ದೊರೆಯುತ್ತದೆ. ಇಷ್ಟು ದಿನಗಳು ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಯೊಂದು ದೂರಾಗಿ ನೆಮ್ಮದಿ ದೊರೆಯಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.