Kannada News  /  Astrology  /  Weekly Horoscope Check Your Astrology Future For This Week From March 19 To March 25
ನಿಮ್ಮ ವಾರದ ಭವಿಷ್ಯ ತಿಳಿಯಿರಿ
ನಿಮ್ಮ ವಾರದ ಭವಿಷ್ಯ ತಿಳಿಯಿರಿ

Weekly Horoscope: ಮೇಷ ರಾಶಿಯವರಿಗೆ ಈ ವಾರ ಖರ್ಚು ಹೆಚ್ಚು, ಹಣಕಾಸಿನ ನಷ್ಟ ಅಧಿಕ!; ನಿಮ್ಮ ವಾರದ ಭವಿಷ್ಯ ಇಂದೇ ತಿಳಿಯಿರಿ

19 March 2023, 16:42 ISTHT Kannada Desk
19 March 2023, 16:42 IST

Weekly Horoscope: ವಾರದ ಜಾತಕವನ್ನು ಗ್ರಹಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಗ್ರಹಗಳ ಸಂಚಾರದಿಂದಾಗಿ ಮುಂಬರುವ ವಾರ ಕೆಲವು ರಾಶಿಯವರಿಗೆ ತುಂಬಾ ಶುಭಕರವಾಗಲಿದ್ದು, ಕೆಲವು ರಾಶಿಯವರಿಗೆ ಎಚ್ಚರಿಕೆ ಅಗತ್ಯ. 2023ರ ಮಾರ್ಚ್ 19 ರಿಂದ 25 ರವರೆಗೆ ನಿಮ್ಮ ಜಾತಕ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದಿನಿಂದ (19.03.2023) ಮುಂದಿನ ಶನಿವಾರದ(25.03.2023)ವರೆಗೆ ಅಂದರೆ ಒಂದು ವಾರದ ನಿಮ್ಮ ಭವಿಷ್ಯವನ್ನು ಇಂದೇ ತಿಳಿಯಿರಿ.

ಟ್ರೆಂಡಿಂಗ್​ ಸುದ್ದಿ

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ಮಧ್ಯಮದಿಂದ ಕೂಡಿದ ಕೆಟ್ಟ ಫಲಿತಾಂಶಗಳಿವೆ. ಕೆಲಸದಲ್ಲಿ ವಿಳಂಬ, ಮಾನಸಿಕ ಒತ್ತಡ ಮತ್ತು ದೈಹಿಕ ಪರಿಶ್ರಮ ಇರುತ್ತದೆ. ವೆಚ್ಚಗಳು ಹೆಚ್ಚು. ಹಣಕಾಸಿನ ನಷ್ಟದ ಸೂಚನೆಗಳು. ಆರೋಗ್ಯ ವಿಷಯಗಳಲ್ಲಿ ಜಾಗರೂಕರಾಗಿರಿ. ವಾಹನಗಳು, ಮನೆ ಇತ್ಯಾದಿಗಳಿಗೆ ಹಣವನ್ನು ಖರ್ಚು ಮಾಡದಿರಲು ಸಲಹೆ ನೀಡಲಾಗಿದೆ. ಮೇಷ ರಾಶಿಯ ಉದ್ಯೋಗಿಗಳಿಗೆ ಸಕಾರಾತ್ಮಕ ಫಲಿತಾಂಶಗಳಿದ್ದರೂ, ಕೆಲಸದ ಒತ್ತಡ ಹೆಚ್ಚಾಗುತ್ತದೆ. ಉದ್ಯಮಿಗಳಿಗೆ ಆರ್ಥಿಕ ಸಮಸ್ಯೆಗಳು ಅಧಿಕ. ವೆಚ್ಚವನ್ನು ಕಡಿತಗೊಳಿಸಲು ಸಲಹೆ ನೀಡಲಾಗಿದೆ.

ವೃಷಭ ರಾಶಿ

ವೃಷಭ ರಾಶಿಯವರು ಈ ವಾರ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಮಾಡುವ ಎಲ್ಲಾ ಕೆಲಸಗಳು ಉತ್ತಮ ರೀತಿಯಲ್ಲಿ ನಡೆಯಲಿವೆ. ವ್ಯಾಪಾರಸ್ಥರು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಜಗಳ ಮತ್ತು ವಾದಗಳಿಂದ ದೂರವಿರಬೇಕು. ವೆಚ್ಚವನ್ನು ಕಡಿತಗೊಳಿಸಲು ಸಲಹೆ ನೀಡಲಾಗಿದೆ. ದುಡುಕಿನ ನಿರ್ಧಾರಗಳ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಲಹೆ ಇದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರ ಮಧ್ಯಮದಿಂದ ಕೂಡಿದ ಫಲಿತಾಂಶಗಳಿವೆ. ಕುಜು ಗ್ರಹದ ಪ್ರಭಾವದಿಂದ ದೈಹಿಕ ಶ್ರಮ, ಮಾನಸಿಕ ಕಲಹಗಳು ಅಧಿಕ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ರವಿ, ಬುಧ ಮತ್ತು ಗುರು ದಶಮದಲ್ಲಿದ್ದರೆ ಉದ್ಯೋಗಸ್ಥರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಉದ್ಯಮಿಗಳಿಗೆ ಲಾಭದಾಯಕವಾಗಲಿದೆ. ಒತ್ತಡಗಳು ಅಧಿಕ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಈ ವಾರ ಸಾಧಾರಣ ಫಲಿತಾಂಶಗಳಿವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಸಾಧಾರಣ ಫಲಿತಾಂಶಗಳಿನೆ. ಈ ವಾರ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲಕರವಾಗಿದೆ. ರಾಜಕೀಯ ಒತ್ತಡ ಹೆಚ್ಚಿದೆ. ಅಷ್ಟಮ ಶನಿಯ ಪ್ರಭಾವದ ಕಾರಣ ಆರೋಗ್ಯ ಕಾಳಜಿ ವಹಿಸಬೇಕು. ಮಹಿಳೆಯರು ಆರೋಗ್ಯ ವಿಚಾರಗಳಲ್ಲಿ ಕಾಳಜಿ ವಹಿಸುವಂತೆ ಸಲಹೆ ಇದೆ.

ಸಿಂಹ ರಾಶಿ

ಸಿಂಹ ರಾಶಿಯವರು ಈ ವಾರ ಕೆಟ್ಟ ಫಲಿತಾಂಶಗಳನ್ನು ಹೊಂದಿದ್ದಾರೆ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಕೆಲಸದಲ್ಲಿ ಹೆಚ್ಚಿನ ಒತ್ತಡ ಮತ್ತು ಕಿರಿಕಿರಿ ಇರುತ್ತದೆ. ಹಣಕಾಸಿನ ವಿಷಯಗಳು ತೊಂದರೆಯನ್ನು ಸೂಚಿಸುತ್ತಿವೆ. ಜಗಳಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಉದ್ಯೋಗಿಗಳಿಗೆ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಮಧ್ಯಮ ಫಲಿತಾಂಶಗಳಿವೆ. ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ಮಹಿಳೆಯರು ಕೌಟುಂಬಿಕ ವಿಷಯಗಳು ಮತ್ತು ಆರೋಗ್ಯ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ವಾರ ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿಗಳು ಉಂಟಾಗುತ್ತವೆ. ಉದ್ಯೋಗಿಗಳಿಗೆ ಲಾಭವಾಗಲಿದೆ. ಯೋಜಿಸಲಾದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ದೈಹಿಕ ಶ್ರಮ ಮತ್ತು ಒತ್ತಡ ಅಧಿಕವಾಗಿರುತ್ತದೆ. ಆದರೂ ಎಲ್ಲಾ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರಯಾಣ ಲಾಭದಾಯಕವಾಗಿದೆ. ಹಣ ಮತ್ತು ಖ್ಯಾತಿಯನ್ನು ಗಳಿಸುತ್ತೀರಿ.

ತುಲಾ ರಾಶಿ

ತುಲಾ ರಾಶಿಯವರು ಈ ವಾರ ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಉತ್ತಮ ಫಲಿತಾಂಶಗಳು ಮತ್ತು ವ್ಯಾಪಾರಸ್ಥರಿಗೆ ಲಾಭ ಇದೆ. ಆರೋಗ್ಯ ವಿಷಯಗಳು ಮತ್ತು ಕುಟುಂಬ ವ್ಯವಹಾರಗಳ ಬಗ್ಗೆ ಕಾಳಜಿ ವಹಿಸಲು ಸಲಹೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ವಾರ ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಆರೋಗ್ಯದ ವಿಷಯಗಳ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗಲಿವೆ. ಉದ್ಯೋಗದಲ್ಲಿ ಸರಾಸರಿ ಫಲಿತಾಂಶಗಳು ಮತ್ತು ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲಕರ ಫಲಿತಾಂಶಗಳಿವೆ. ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರವಾಗಿದೆ. ಪ್ರಯಾಣಕ್ಕೆ ಸೂಕ್ತವಾಗಿದೆ. ದೈಹಿಕ ಚಟುವಟಿಕೆ ಹೆಚ್ಚು. ವಿವಾದಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ.

ಧನು ರಾಶಿ

ಧನು ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ. ಹಣಕಾಸಿನ ಸಮಸ್ಯೆಗಳಿಂದ ಹೊರಬರುವಿರಿ. ಕುಟುಂಬ ಸೌಕರ್ಯ ಮತ್ತು ಲಾಭ ದೊರೆಯಲಿದೆ. ಪ್ರಯಾಣಕ್ಕೆ ಸೂಕ್ತವಾಗಿದೆ. ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ವಾದ ವಿವಾದಗಳಿಂದ ದೂರವಿರಬೇಕು. ಉದ್ಯೋಗಿಗಳಿಗೆ ಅನುಕೂಲಕರ ವಾರ. ಉದ್ಯಮಿಗಳಿಗೆ ಅನುಕೂಲಕರ ಸಮಯ. ಈ ವಾರವು ಧನು ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಸೌಕರ್ಯದ ಸಂಕೇತವಾಗಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ಮಧ್ಯಮದಿಂದ ಕೂಡಿದ ಫಲಿತಾಂಶಗಳಿವೆ. ಖರ್ಚುಗಳು ಹೆಚ್ಚಾಗುತ್ತವೆ. ಕುಟುಂಬದಲ್ಲಿ ಸಮಸ್ಯೆಗಳು, ವಿವಾದಗಳು ಮತ್ತು ಮಾನಸಿಕ ಕಲಹಗಳು ಹೆಚ್ಚಾಗುತ್ತವೆ. ಕೆಲಸ ಮಾಡುವ ಜನರಿಗೆ ಸರಾಸರಿ ಸಮಯ, ವ್ಯಾಪಾರಸ್ಥರಿಗೆ ಸರಾಸರಿ ಫಲಿತಾಂಶಗಳಿವೆ. ಮಕರ ರಾಶಿಯವರು ಹಣದ ಬಗ್ಗೆ ಜಾಗರೂಕರಾಗಿರಬೇಕು.

ಕುಂಭ ರಾಶಿ

ಕುಂಭ ರಾಶಿಯವರು ಈ ವಾರ ಸಾಧಾರಣ ಫಲಿತಾಂಶಗಳನ್ನು ಹೊಂದಿರುತ್ತಾರೆ. ದೈಹಿಕ ಶ್ರಮ ಮತ್ತು ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಹಣಕಾಸಿನ ವಿಷಯಗಳು ಮತ್ತು ವೆಚ್ಚಗಳಲ್ಲಿ ಹಠಾತ್ ನಿರ್ಧಾರಗಳನ್ನು ಸೂಚಿಸುತ್ತದೆ. ಕೌಟುಂಬಿಕ ಸಮಸ್ಯೆಗಳೊಂದಿಗೆ ಚರ್ಚೆಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಉದ್ಯೋಗಿಗಳಿಗೆ ಸರಾಸರಿ ಸಮಯ. ವ್ಯಾಪಾರಿಗಳಿಗೆ ದುಬಾರಿ ಸಮಯ. ವಿದ್ಯಾರ್ಥಿಗಳು ಸರಾಸರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸದಲ್ಲಿ ವಿಳಂಬ. ಕೌಟುಂಬಿಕ ವ್ಯವಹಾರಗಳಲ್ಲಿ ಗೊಂದಲ ಉಂಟಾಗಲಿದೆ.

ಮೀನ ರಾಶಿ

ಈ ವಾರ ಮೀನ ರಾಶಿಯವರಿಗೆ ಕೆಟ್ಟ ಫಲಿತಾಂಶಗಳು ಅಧಿಕ. ದೈಹಿಕ ಶ್ರಮ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ಖರ್ಚು ಅಧಿಕ. ರಾಜಕೀಯ ಒತ್ತಡ ಹೆಚ್ಚಿದೆ. ಉದ್ಯೋಗಿಗಳಿಗೆ ಕೆಟ್ಟ ಸಮಯ. ಉದ್ಯಮಿಗಳಿಗೆ ಆರ್ಥಿಕ ಸಮಸ್ಯೆಗಳು ಅಧಿಕ. ವಿದ್ಯಾರ್ಥಿಗಳಿಗೆ ಕಷ್ಟದ ಸಮಯ. ನ್ಯಾಯಾಲಯದ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು.

ವಿಭಾಗ