ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Women Horoscope: ಅವಿವಾಹಿತರಿಗೆ ತಂದೆಯ ಸಂಬಂಧದಲ್ಲಿ ವಿವಾಹ ಸಾಧ್ಯತೆ, ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ; ಸ್ತ್ರೀ ವಾರ ಭವಿಷ್ಯ

Women Horoscope: ಅವಿವಾಹಿತರಿಗೆ ತಂದೆಯ ಸಂಬಂಧದಲ್ಲಿ ವಿವಾಹ ಸಾಧ್ಯತೆ, ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ; ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಏ 26 ರಿಂದ ಮೇ 2ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಏ 26 ರಿಂದ ಮೇ 2ವರೆಗೆ ಸ್ತ್ರೀ ವಾರ ಭವಿಷ್ಯ
ಏ 26 ರಿಂದ ಮೇ 2ವರೆಗೆ ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly women Horoscope From April 26th to May 2nd).

ಮೇಷ

ಮನದಲ್ಲಿ ಹಗುರವಾದ ಭಾವನೆ ಇರುತ್ತದೆ. ನಿಮ್ಮ ಮಾತಿಗೆ ಎಲ್ಲರಿಂದ ಧನಾತ್ಮಕ ಪ್ರತಿಕ್ರಿಯೆ ದೊರೆಯುತ್ತದೆ. ಇಷ್ಟಪಟ್ಟು ಕುಟುಂಬದ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮ್ಮ ಪಾತ್ರ ಮುಖ್ಯವಾಗಲಿದೆ. ಜೀವನದಲ್ಲಿನ ತೊಂದರೆಗಳು ದೂರವಾಗಲಿವೆ. ದೈನಂದಿನ ಕೆಲಸಗಳ ನಡುವೆ ಹೊಸ ಜವಾಬ್ದಾರಿಯನ್ನು ಹೆಗಲೇರುತ್ತದೆ. ಕುಟುಂಬದ ಶಾಂತಿ ಸೌಹಾರ್ದತೆಯನ್ನು ಕಾಪಾಡುವಿರಿ. ಪತಿ ಜೊತೆ ಉತ್ತಮ ಅನ್ಯೋನ್ಯತೆ ಇರುತ್ತದೆ. ಉದ್ಯೋಗಸ್ಥರಿಗೆ ಕಾರ್ಯದ ಒತ್ತಡ ಹೆಚ್ಚಾಗುತ್ತದೆ. ಕೆಲಸ ಮಾಡುವ ನಡುವೆ ವಿಶ್ರಾಂತಿಗೂ ಆದ್ಯತೆ ನೀಡಿ. ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಮುಂದಿರುತ್ತಾರೆ

ವೃಷಭ

ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಹಟದ ಗುಣವಿದ್ದರೂ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ನಿಮ್ಮಿಂದ ಉಂಟಾಗಲಿದೆ. ತವರು ಮನೆಯಿಂದ ಹಣದ ಸಹಾಯ ದೊರೆಯುತ್ತದೆ. ತಾಯಿಯ ಹೆಸರಿನಲ್ಲಿನ ಆಸ್ತಿಯ ಅಲ್ಪಭಾಗ ನಿಮಗೆ ದೊರೆಯಲಿದೆ. ದೈನಂದಿನ ದಿನಚರಿಯನ್ನು ಬದಲಾಯಿಸುವಿರಿ. ಕುಟುಂಬದ ಜವಾಬ್ದಾರಿಯ ಹೆಚ್ಚುವ ಕಾರಣ ಉದ್ಯೋಗ ಬದಲಿಸುವಿರಿ. ಕೌಟುಂಬಿಕ ಜೀವನದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿನಿಯರು ವಿನೂತನ ಸಾಧನೆಗೆ ಪಾತ್ರರಾಗುತ್ತಾರೆ. ಅನಿರೀಕ್ಷಿತ ಧನಲಾಭ ದೊರೆಯುತ್ತದೆ.

ಮಿಥುನ

ಕುಟುಂಬ ಮತ್ತು ಸಮಾಜದಲ್ಲಿ ವಿಶೇಷ ಗೌರವ ಗಳಿಸುವಿರಿ. ಒಳ್ಳೆಯ ಕೆಲಸ ಕಾರ್ಯಗಳಿಗೆ ಹಣ ಖರ್ಚಾಗುತ್ತದೆ. ಉದ್ಯೋಗಸ್ಥರಾದಲ್ಲಿ ಉನ್ನತ ಸ್ಥಾನ ಗಳಿಸುವಿರಿ. ಪತಿಯೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಸೋದರನ ಜೀವನವನ್ನು ರೂಪಿಸಲು ಸಹಾಯ ಮಾಡುವಿರಿ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ವ್ಯಾಪಾರದಲ್ಲಿ ಅನಿರೀಕ್ಷಿತ ವರಮಾನ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂತಾನ ಲಾಭವಿದೆ. ಪತಿಯ ಜೊತೆ ಕಿರು ಪ್ರವಾಸ ಕೈಗೊಳ್ಳುವಿರಿ. ಹೊಂದಿಕೊಂಡು ಬಾಳುವ ಕಾರಣ ಯಾವುದೇ ವಿವಾದಗಳು ಎದುರಾಗುವುದಿಲ್ಲ.

ಕಟಕ

ಉತ್ಸಾಹದಿಂದ ಸದಾಕಾಲ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ತಪ್ಪಿಗೆ ಕ್ಷಮೆ ಕೇಳುವ ಕಾರಣ ಎಲ್ಲರ ಅನುಕಂಪ ಗಳಿಸುವಿರಿ. ಕೆಲಸ ಕಾರ್ಯಗಳಲ್ಲಿ ತಪ್ಪಾದಲ್ಲಿ ಪಶ್ಚಾತಾಪ ಪಡುವಿರಿ. ಸ್ವಗೃಹ ಭೂ ಲಾಭವಿದೆ. ಉದ್ಯಮಿಗಳಾದಲ್ಲಿ ಉತ್ತಮ ವರಮಾನ ಗಳಿಸುವಿರಿ. ಕುಟುಂಬದಲ್ಲಿ ನಿಮ್ಮ ನಿರ್ಧಾರವನ್ನು ಎಲ್ಲರೂ ಒಪ್ಪುತ್ತಾರೆ. ಮಕ್ಕಳು ನಿಮ್ಮ ಸಲಹೆ ಸೂಚನೆಯನ್ನು ಪಾಲಿಸುತ್ತಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿರುತ್ತಾರೆ. ಸಮಾಜ ಸೇವೆ ಮಾಡುವ ಆಸೆ ಇರುತ್ತದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಪತಿಯ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಸಂಗೀತ ನಾಟ್ಯದಲ್ಲಿ ಆಸಕ್ತಿ ಇರಲಿದೆ.

ಸಿಂಹ

ಸಿಡುಕುತನದಿಂದ ಹೊರ ಬರುವಿರಿ. ಅವಿವಾಹಿತರ ವಿವಾಹ ನಿಶ್ಚಯವಾಗಲಿದೆ. ದೃಢ ಮನಸ್ಸಿನಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಉನ್ನತ ಅಧಿಕಾರ ದೊರೆಯುತ್ತದೆ ಗೃಹಿಣಿಯರು ಸಹನೆಯಿಂದ ವರ್ತಿಸಿದಲ್ಲಿ ಕುಟುಂಬದಲ್ಲಿ ಸಂತಸ ನೆಲೆಗೊಳ್ಳುವುದು. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳದಿರಿ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸುವಿರಿ. ಮಕ್ಕಳಿಂದ ಹಣದ ಸಹಾಯ ದೊರೆಯುತ್ತದೆ. ಕೌಟುಂಬಿಕ ಸಮಸ್ಯೆಯೊಂದನ್ನು ನಿವಾರಿಸುವಿರಿ. ಆಸ್ತಿಯ ವಿಚಾರದಲ್ಲಿ ಹಿತೈಷಿಗಳ ಸಲಹೆ ಪಾಲಿಸಲು ಪ್ರಯತ್ನಿಸುವಿರಿ.

ಕನ್ಯಾ

ಸಂಗಾತಿಯ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದವೊಂದು ಇರಲಿದೆ. ತವರುಮನೆಯಿಂದ ಉಡುಗೊರೆಯೊಂದು ದೊರೆಯಲಿದೆ. ಉದ್ಯೋಗಸ್ಥರಿಗೆ ಕುಟುಂಬ ಮತ್ತು ಉದ್ಯೋಗಕ್ಕೆ ಸಮಯ ಹೊಂದಿಸಲು ಕಷ್ಟವೆನಿಸುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಜಮೀನು ಅಥವ ಮನೆ ಕೊಳ್ಳಬೇಕಾದರೆ ಕೊಂಚ ಎಚ್ಚರಿಕೆ ವಹಿಸಿ. ಸೋದರಿಯ ಜೊತೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಲಿದೆ. ಬೇರೆಯವರ ಕೆಲಸ ಕಾರ್ಯಗಳನ್ನು ಟೀಕಿಸುವಿರಿ. ಪ್ರೀತಿಯ ಮಾತಿನಿಂದ ಎಲ್ಲರ ಮನಗೆಲ್ಲಲು ಸಾಧ್ಯವಾಗಲಿದೆ. ದಾಂಪತ್ಯ ಜೀವನ ಉಲ್ಲಾಸದಿಂದ ಕೂಡಿರುತ್ತದೆ. ಸಾಲದ ವ್ಯವಹಾರದಿಂದ ಮಾನಸಿಕ ಒತ್ತದ ಹೆಚ್ಚುತ್ತದೆ.

ತುಲಾ

ದೈನಂದಿನ ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯನ್ನು ಕಡೆಗನಿಸುವಿರಿ. ತಪ್ಪಾದ ಗ್ರಹಿಕೆಯಿಂದ ಆತ್ಮೀಯ ಸ್ನೇಹಿತರೊಬ್ಬರನ್ನು ಕಡೆಗಣಿಸುವಿರಿ. ನಿರೀಕ್ಷಿತ ಗುರಿ ತಲುಪುವವರೆಗೂ ಮನಸ್ಸಿಗೆ ನೆಮ್ಮದಿ ಇರದು. ಶ್ವಾಸಕೋಶದ ಸೋಂಕು ಉಂಟಾಗುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆವ ಕಾರಣ ಯಾವುದೇ ತೊಂದರೆ ಇರದು. ನೂತನ ವಸ್ತ್ರ ಮತ್ತು ಆಭರಣಗಳನ್ನು ಕೊಳ್ಳುವಿರಿ. ಕುಟುಂಬದಲ್ಲಿ ಶಾಂತಿ ಸಂಯಮದ ವಾತಾವರಣ ಇರುತ್ತದೆ. ಹೆಚ್ಚಿನ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಬಹುದು. ಪತಿಯೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗಲಿದೆ.

ವೃಶ್ಚಿಕ

ಎಲ್ಲರಿಂದ ಗೌರವವನ್ನು ನಿರೀಕ್ಷಿಸುವಿರಿ. ಚಿಕ್ಕ ಪುಟ್ಟ ಸೋಲನ್ನು ಒಪ್ಪಿಕೊಳ್ಳದೆ ಸಿಡುಕುತನದಿಂದ ವರ್ತಿಸುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಹಟದ ಗುಣದಿಂದಾಗಿ ಕುಟುಂಬದ ಬೇಸರಕ್ಕೆ ಕಾರಣರಾಗುವಿರಿ. ಶಾಂತಿ ಸಹನೆಯ ಮಾತಿನಿಂದ ಎಲ್ಲರ ಮನಸ್ಸನ್ನೂ ಗೆಲ್ಲಲು ಪ್ರಯತ್ನಿಸಿ. ಕುಟುಂಬದಲ್ಲಿನ ಭೂ ವಿವಾದಕ್ಕೆ ಪರಿಹಾರ ಸೂಚಿಸುವಿರಿ. ಪತಿಯೊಂದಿಗೆ ಅನಾವಶ್ಯಕ ವಾದದಲ್ಲಿ ಮುಳುಗುವಿರಿ. ಉದ್ಯೋಗಸ್ಥರಿಗೆ ಸ್ಥಳೀಯ ಸಂಸ್ಥೆಯ ಅಧಿಕಾರ ಲಭಿಸುತ್ತದೆ್. ಕೆಲಸ ಕಾರ್ಯಗಳ ಮಧ್ಯೆ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಪತಿಯ ಕ್ಷಮಾಗುಣದಿಂದಾಗಿ ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಇರುತ್ತದೆ. ವಾರಾಂತ್ಯದಲ್ಲಿ ಪ್ರತಿಯೊಂದಿಗೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ

ಧನಸ್ಸು

ಬುದ್ಧಿವಂತಿಕೆಯ ನಿರ್ಧಾರಗಳು ಕುಟುಂಬವನ್ನು ಆಪತ್ತಿನಿಂದ ಪಾರು ಮಾಡುತ್ತದೆ. ಉದ್ಯೋಗಸ್ಥರು ಉದ್ಯೋಗ ಬದಲಿಸುವರು. ತವರು ಮನೆಯಿಂದ ಶುಭ ವರ್ತಮಾನವೊಂದು ಬರಲಿದೆ. ಸಣ್ಣ ಪ್ರಮಾಣದ ವ್ಯಾಪಾರವೊಂದು ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ. ಕುಟುಂಬದ ಸಂತೋಷಕ್ಕೆ ಯಾವುದೇ ತ್ಯಾಗ ಮಾಡಬಲ್ಲಿರಿ. ಪತಿಯ ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಪಾಲುದಾರರಾಗುವಿರಿ. ಲಾಭದ ಲೆಕ್ಕಾಚಾರದ ನಂತರ ಹೊಸ ಕೆಲಸವನ್ನು ಆರಂಭಿಸುವಿರಿ. ಮಕ್ಕಳ ಕಾರ್ಯ ಸಾಧನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸೋದರನೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಹೊಸ ವಾಹನವನ್ನು ಕೊಳ್ಳುವಿರಿ.

ಮಕರ

ಕೌಟುಂಬಿಕ ಸಮಸ್ಯೆಗಳು ಮರೆಯಾಗಲಿವೆ. ಪತಿಯೊಂದಿಗೆ ಸಮಾಧಾನದ ಜೀವನ ನಡೆಸುವಿರಿ. ನಿಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡವರು ನಿಮ್ಮನ್ನೇ ಅವಲಂಬಿತರಾಗುತ್ತಾರೆ. ಕುಟುಂಬದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಮಕ್ಕಳ ಜೀವನದ ಯಶಸ್ಸು ಸಂತಸ ನೀಡುತ್ತದೆ. ಬೆನ್ನುನೋವಿನಿಂದ ಬಳಲುವಿರಿ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿ ತೆಗೆದುಕೊಳ್ಳುವಿರಿ. ಎಲ್ಲರಿಗೂ ಮಾದರಿಯಾಗಬಲ್ಲ ಜೀವನ ನಡೆಸುವಿರಿ. ಸಣ್ಣ ಪುಟ್ಟ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ಮಕ್ಕಳ ಉನ್ನತಿಯಲ್ಲಿ ನಿಮ್ಮ ಪಾತ್ರ ಮುಖ್ಯವಾಗಲಿದೆ. ಜಗಳ ಕದನಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಸ್ವಗೃಹ ಭೂ ಲಾಭವಿದೆ. ವಾದ ಮಾಡುವುದನ್ನು ಕಡಿಮೆಮಾಡುವುದು ಒಳ್ಳೆಯದು.

ಕುಂಭ

ಬುದ್ಧಿವಂತಿಕೆಯಿಂದ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಿರಿ. ಸುಲಭವಾಗಿ ಯಾರ ಸಲಹೆಯನ್ನೂ ಸ್ವೀಕರಿಸುವುದಿಲ್ಲ. ಸಮಾಜದ ಗಣ್ಯ ವ್ಯಕ್ತಿಯೊಬ್ಬರ ಪರಿಚಯವಾಗಲಿದೆ. ಪತಿಯಿಂದ ಸಹಾಯ ಪಡೆದು ಗುಡಿಕೈಗಾರಿಕೆಯನ್ನು ಆರಂಭಿಸುವಿರಿ. ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಸ್ವಂತ ಕೆಲಸ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಕುಟುಂಬದ ಹಿರಿಯರೊಂದಿಗೆ ಪ್ರೀತಿ ಸಹಕಾರದಿಂದ ನಡೆದುಕೊಳ್ಳುವಿರಿ. ಕಷ್ಟ ಪಟ್ಟು ಕೂಡಿಟ್ಟ ಹಣವನ್ನು ಸೋದರನ ವ್ಯಾಪಾರಕ್ಕಾಗಿ ನೀಡುವಿರಿ. ನೀರಿರುವ ಜಾಗದಲ್ಲಿ ತೊಂದರೆ ಉಂಟಾಗಬಹುದು. ಅದೃಷ್ಟವನ್ನು ನಂಬಿ ಅಸಾಧ್ಯವೆನಿಸುವ ಕೆಲಸವೊಂದನ್ನು ಆರಂಭಿಸುವಿರಿ. ಯಾರನ್ನೂ ಸಹಾಯಕ್ಕಾಗಿ ಯಾಚಿಸುವುದಿಲ್ಲ.

ಮೀನ

ನಗೆ ತುಂಬಿದ ಮಾತಿನಿಂದಲೇ ನಿಮ್ಮ ಕೆಲಸ ಸಾಧಿಸಬಲ್ಲ ಶಕ್ತಿ ನಿಮ್ಮಲ್ಲಿರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಕುಟುಂಬದಲ್ಲಿ ಶಾಂತಿ ಸಂಯಮ ನೆಲೆಸುತ್ತದ್ದೆ. ತಂದೆಯವರಿಗೆ ವಿಶೇಷವಾದ ಉಡುಗೊರೆಯನ್ನು ನೀಡುವಿರಿ. ಉದ್ಯೋಗ ಮತ್ತು ಮನೆಯನ್ನು ಸರಿತೂಗಿಸಿಕೊಂಡು ಹೋಗುವಿರಿ. ಅವಿವಾಹಿತರಿಗೆ ತಂದೆಯ ಸಂಬಂಧದಲ್ಲಿ ವಿವಾಹವಾಗಬಹುದು. ಎಲ್ಲಾ ಕೆಲಸ ಕಾರ್ಯಗಳು ನಿಮ್ಮ ಊಹೆಯಂತೆಯೇ ನಡೆಯುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವಿರಿ. ಕುಟುಂಬದ ಸದಸ್ಯರ ಜೊತೆ ದೀರ್ಘಕಾಲದ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸುವಿರಿ. ನಿಮ್ಮ ಶುಭ್ರವಾದ ಕೆಲಸದ ನಿರ್ವಹಣೆ ಎಲ್ಲರ ಮನ ಗೆಲ್ಲುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).