Chetan Ahimsa: ‘ಅಂಬಿ ಸ್ಮಾರಕ ನಿರ್ಮಾಣಕ್ಕೆ ನೀವೇ 23 ಕೋಟಿ ಖರ್ಚು ಮಾಡಬಹುದಿತ್ತು, ಜನರ ದುಡ್ಡೇ ಬೇಕಿತ್ತಾ?’ ಸುಮಲತಾಗೆ ಚೇತನ್‌ ಪ್ರಶ್ನೆ
ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ‘ಅಂಬಿ ಸ್ಮಾರಕ ನಿರ್ಮಾಣಕ್ಕೆ ನೀವೇ 23 ಕೋಟಿ ಖರ್ಚು ಮಾಡಬಹುದಿತ್ತು, ಜನರ ದುಡ್ಡೇ ಬೇಕಿತ್ತಾ?’ ಸುಮಲತಾಗೆ ಚೇತನ್‌ ಪ್ರಶ್ನೆ

Chetan Ahimsa: ‘ಅಂಬಿ ಸ್ಮಾರಕ ನಿರ್ಮಾಣಕ್ಕೆ ನೀವೇ 23 ಕೋಟಿ ಖರ್ಚು ಮಾಡಬಹುದಿತ್ತು, ಜನರ ದುಡ್ಡೇ ಬೇಕಿತ್ತಾ?’ ಸುಮಲತಾಗೆ ಚೇತನ್‌ ಪ್ರಶ್ನೆ

ಅಂಬರೀಶ್ ಸ್ಮಾರಕಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ & 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸ ಎಂದಿದ್ದಾರೆ ನಟ ಚೇತನ್

‘ಅಂಬಿ ಸ್ಮಾರಕ ನಿರ್ಮಾಣಕ್ಕೆ ನೀವೇ 23 ಕೋಟಿ ಖರ್ಚು ಮಾಡಬಹುದಿತ್ತು, ಜನರ ದುಡ್ಡೇ ಬೇಕಿತ್ತಾ?’ ಸುಮಲತಾಗೆ ಚೇತನ್‌ ಪ್ರಶ್ನೆ
‘ಅಂಬಿ ಸ್ಮಾರಕ ನಿರ್ಮಾಣಕ್ಕೆ ನೀವೇ 23 ಕೋಟಿ ಖರ್ಚು ಮಾಡಬಹುದಿತ್ತು, ಜನರ ದುಡ್ಡೇ ಬೇಕಿತ್ತಾ?’ ಸುಮಲತಾಗೆ ಚೇತನ್‌ ಪ್ರಶ್ನೆ

Chetan Ahimsa on Ambi Memorial: ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಈ ನಟ, ನಿತ್ಯದ ಬೆಳವಣಿಗೆಗಳ ಬಗ್ಗೆ ಒಂದಿಲ್ಲೊಂದು ಕಮೆಂಟ್‌ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಹಿಂದೂ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆ ಕೋರ್ಟ್‌ ಮೆಟ್ಟಿಲೇರಿತ್ತು. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಅದಾದ ಮೇಲೆ ರಾಹುಲ್‌ ಗಾಂಧಿ ಬಗ್ಗೆಯೂ ಮಾತನಾಡಿದ್ದರು. ಕೇಂದ್ರ ಸರ್ಕಾರವನ್ನೂ ಟೀಕಿಸಿದ್ದರು. ಇದೀಗ ಸುಮಲತಾ ಅಂಬರೀಶ್ ಬಗ್ಗೆ ಮಾತನಾಡಿದ್ದಾರೆ.

ರೆಬೆಲ್‌ಸ್ಟಾರ್‌ ಅಂಬರೀಶ್‌ ಅಭಿಮಾನಿಗಳು ಸದ್ಯ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ; ಈಗಷ್ಟೇ ಅವರ ಸ್ಮಾರಕ ಲೋಕಾರ್ಪಣೆಗೊಂಡಿದೆ. ಸಿಎಂ ಬೊಮ್ಮಾಯಿ ಸೇರಿ ಹಲವರಿಂದ ಸ್ಮಾರಕ ಉದ್ಘಾಟನೆಗೊಂಡಿದೆ. ಈ ಉದ್ಘಾಟನೆಯ ಸಂದರ್ಭದಲ್ಲಿ ಸಂಸದೆ ಸುಮಲತಾ ಅವರು, ‘ಅಂಬರೀಶ್‌ ಬದುಕಿದ್ದ ದಿನದವರೆಗೂ ಯಾರ ಬಳಿಯೂ ಕೈ ಚಾಚಿದವರಲ್ಲ’ ಎಂದು ಭಾವುಕವಾಗಿಯೇ ಹೇಳಿಕೊಂಡಿದ್ದರು. ಇದೀಗ ಆ ವಿಚಾರವನ್ನೇ ಮುಂದಿಟ್ಟುಕೊಂಡು ಚೇತನ್‌ ಪ್ರಶ್ನೆ ಮಾಡಿದ್ದಾರೆ.

ಸಾರ್ವಜನಿಕರ ಹಣ ಬಳಸುವ ಜರೂರತ್ತೇನಿತ್ತು?

ಕಂಠೀರವ ಸ್ಟುಡಿಯೋದಲ್ಲಿ ಸರ್ಕಾರ ಎರಡು ಎಕರೆ ಜಾಗದಲ್ಲಿ ಅಂಬಿ ಸ್ಮಾರಕ ನಿರ್ಮಾಣ ಮಾಡಿದೆ. ಇದಕ್ಕೆ 12 ಕೋಟಿ ರೂಪಾಯಿಗಳನ್ನೂ ಸರ್ಕಾರ ವ್ಯಯಿಸಿದೆ. ಇದನ್ನು ಖಂಡಿಸಿರುವ ಚೇತನ್‌ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ಟೀಕಿಸಿದ್ದಾರೆ. ಅವರ ಟ್ವಿಟ್‌ ಹೀಗಿದೆ..

‘ಅಂಬರೀಶ್ ಯಾರನ್ನೂ ಕೈ ಚಾಚಿದವರಲ್ಲ’- ಸುಮಲತಾ

(ಅನಗತ್ಯ) ಅಂಬರೀಶ್ ಸ್ಮಾರಕಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ & 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ.

ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತ 23.4 ಕೋಟಿ ರೂ.ಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ?

ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದಿದ್ದಾರೆ..

ಚೇತನ್‌ ಅಹಿಂಸಾ ಹೇಳಿಕೆ
ಚೇತನ್‌ ಅಹಿಂಸಾ ಹೇಳಿಕೆ

ರಾಹುಲ್‌ ಗಾಂಧಿ ಬಗ್ಗೆಯೂ ಚೇತನ್‌ ಮಾತು..

ಮೋದಿ ಸರ್‌ನೇಮ್‌ ಕೇಸ್‌ನಲ್ಲಿ ದೋಷಿ ಎನಿಸಿಕೊಂಡ ರಾಹುಲ್‌ ಗಾಂಧಿ ಶುಕ್ರವಾರ ಸಂಸತ್‌ ಸದಸ್ಯತ್ವ ಕಳೆದುಕೊಂಡಿದ್ದಾರೆ. ಸೂರತ್‌ ನ್ಯಾಯಾಲಯವು, ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಸಂಸತ್‌ ಪ್ರಕಟಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ್‌ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್‌ ಗಾಂಧಿ ಅವರ ಸಂಸತ್ ಸದಸ್ಯತ್ವ ಮತ್ತು ಜೈಲು ಶಿಕ್ಷೆ ಪ್ರಕಟವಾದ ಬಳಿಕ ಇದು ನಿಜಕ್ಕೂ ಅತಿರೇಕ ಎಂದು ಚೇತನ್‌ ಅಹಿಂಸಾ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಬರಹವೊಂದನ್ನು ತಮ್ಮ ಸೋಷಿಯಲ್‌ ಮೀಡಿಯಾ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಚೇತನ್‌ ಪೋಸ್ಟ್‌ನಲ್ಲೇನಿದೆ?

‘ಎಲ್ಲಾ ಕಳ್ಳರು ಮೋದಿ ಉಪನಾಮಗಳನ್ನು ಹೊಂದಿದ್ದಾರೆ’ ಎಂಬ ವಿಡಂಬನಾತ್ಮಕ ಪ್ರತಿಕ್ರಿಯೆಗಾಗಿ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯಾಗಿದೆ ಮತ್ತು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ- ಇದು ನಿಜಕ್ಕೂ ಅತಿರೇಕವಾಗಿದೆ. ಆದಾಗ್ಯೂ, ಮೋದಿ ಹೆಸರಿನ ವ್ಯಕ್ತಿ ಹೇಗೆ ಸಮರ್ಥನೀಯವಾಗಿ ಆಕ್ರೋಶಗೊಳ್ಳಬಹುದು ಎಂಬುದು ಸ್ಪಷ್ಟವಾಗಿದೆ— ‘ಎಲ್ಲಾ ಭಯೋತ್ಪಾದಕರು ಖಾನ್ ಉಪನಾಮಗಳನ್ನು ಹೇಗೆ ಹೊಂದಿದ್ದಾರೆ' ಎಂಬುದು ಮಾನನಷ್ಟವಾಗುವುದಿಲ್ಲವೇ?" ಎಂದಿದ್ದರು.

Whats_app_banner