ಕನ್ನಡ ಸುದ್ದಿ  /  ಮನರಂಜನೆ  /  Ajay Devgn About Son: ಲಾಂಚ್‌ ಇರಲಿ, ಅವನು ಸರಿಯಾಗಿ ಲಂಚ್‌ ಮಾಡಿದ್ರೆ ಸಾಕು... ಅಜಯ್‌ ದೇವಗನ್‌ ಹೀಗೆ ಹೇಳಿದ್ದು ಏಕೆ?

Ajay Devgn about son: ಲಾಂಚ್‌ ಇರಲಿ, ಅವನು ಸರಿಯಾಗಿ ಲಂಚ್‌ ಮಾಡಿದ್ರೆ ಸಾಕು... ಅಜಯ್‌ ದೇವಗನ್‌ ಹೀಗೆ ಹೇಳಿದ್ದು ಏಕೆ?

ಅಜಯ್‌ ದೇವಗನ್‌ ಕೂಡಾ ಅಭಿಮಾನಿಗಳ ಪ್ರಶ್ನೆಗೆ ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ಅಜಯ್‌-ಕಾಜೊಲ್‌ ಪುತ್ರ ಯುಗ್‌ ಅವರ ಬಗ್ಗೆ ಪ್ರಶ್ನಿಸಿದ್ದಾರೆ. ನಿಮ್ಮ ಪುತ್ರ ಯುಗ್‌ ಅವರನ್ನು ಚಿತ್ರರಂಗಕ್ಕೆ ಯಾವಾಗ ಪರಿಚಯಿಸುತ್ತೀರಿ..? ಎಂದು ಕೇಳಿದ್ದಾರೆ. ಇದಕ್ಕೆ ಅಜಯ್‌ ದೇವಗನ್‌ ತಮಾಷೆಯಾಗಿ ಉತ್ತರಿಸಿದ್ದಾರೆ.

ಬಾಲಿವುಡ್‌ ನಟ ಅಜಯ್‌ ದೇವಗನ್‌
ಬಾಲಿವುಡ್‌ ನಟ ಅಜಯ್‌ ದೇವಗನ್‌ (PC: Ajay Devgn)

ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದು ಸುಲಭದ ಮಾತಲ್ಲ, ಅದಕ್ಕಾಗಿ ಸಾಕಷ್ಟು ತಯಾರಿ ಬೇಕು. ಆದರೆ ಕುಟುಂಬದ ಸದಸ್ಯರು ಯಾರಾದರೂ ಚಿತ್ರರಂಗದಲ್ಲಿ ಇದ್ದರೆ ಹಾದಿ ಸಲೀಸು ಎಂದೇ ಹೇಳಬಹುದು. ಹಾಗೇ ಇದುವರೆಗೂ ಅನೇಕ ಸ್ಟಾರ್‌ ನಟರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಲಾಂಚ್‌ ಮಾಡಿದ್ದಾರೆ. ಇದೀಗ ಬಾಲಿವುಡ್‌ ನಟ ಅಜಯ್‌ ದೇವಗನ್‌ ಹಾಗೂ ಕಾಜೊಲ್‌ ದಂಪತಿ ಪುತ್ರನ ಬಾಲಿವುಡ್ ಎಂಟ್ರಿ ಬಗ್ಗೆ ಕೂಡಾ ಚರ್ಚೆಯಾಗುತ್ತಿದೆ.

ಅಜಯ್‌ ದೇವಗನ್‌ ಹಾಗೂ ಕಾಜೊಲ್‌ ಇಂದಿಗೂ ಸಿನಿಮಾಗಳಲ್ಲಿ ಬ್ಯುಸಿ ಇದ್ಧಾರೆ. ಸದ್ಯಕ್ಕೆ ಅಜಯ್‌ ದೇವಗನ್‌ ಅಭಿನಯದ 'ಭೋಲಾ' ಸಿನಿಮಾ ತಂಡ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದೆ. ಮಾರ್ಚ್‌ 30 ರಂದು ಈ ಸಿನಿಮಾ ತೆರೆ ಕಾಣುತ್ತಿದೆ. ಅಜಯ್‌ ದೇವಗನ್‌ ಕೂಡಾ ಈ ಸಿನಿಮಾ ಪ್ರಮೋಷನ್‌ ಮಾಡುತ್ತಿದ್ಧಾರೆ. ಈ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ಅವರು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಆಸ್ಕ್‌ ಮಿ ಎನಿಥಿಂಗ್‌ ಸೆಷನ್‌ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳು ಅಜಯ್‌ ದೇವಗನ್‌ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಅಜಯ್‌ ದೇವಗನ್‌ ಕೂಡಾ ಅಭಿಮಾನಿಗಳ ಪ್ರಶ್ನೆಗೆ ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ಅಜಯ್‌-ಕಾಜೊಲ್‌ ಪುತ್ರ ಯುಗ್‌ ಅವರ ಬಗ್ಗೆ ಪ್ರಶ್ನಿಸಿದ್ದಾರೆ. ನಿಮ್ಮ ಪುತ್ರ ಯುಗ್‌ ಅವರನ್ನು ಚಿತ್ರರಂಗಕ್ಕೆ ಯಾವಾಗ ಪರಿಚಯಿಸುತ್ತೀರಿ..? ಎಂದು ಕೇಳಿದ್ದಾರೆ. ಇದಕ್ಕೆ ಅಜಯ್‌ ದೇವಗನ್‌ ತಮಾಷೆಯಾಗಿ ಉತ್ತರಿಸಿದ್ದಾರೆ. ''ಮಗನ ಲಾಂಚ್‌ ಯಾವಾಗ ಎಂದು ಗೊತ್ತಿಲ್ಲ, ಆದರೆ ಅವನು ಸಮಯಕ್ಕೆ ಸರಿಯಾಗಿ ಲಂಚ್‌ ಮಾಡಿದರೆ ಸದ್ಯಕ್ಕೆ ಸಾಕು'' ಎಂದು ಉತ್ತರಿಸಿದ್ದಾರೆ. ಅಜಯ್‌ ದೇವಗನ್‌ ಅವರ ಈ ಸೆನ್ಸ್‌ ಆಫ್‌ ಹ್ಯೂಮರ್‌ ಅಭಿಮಾನಿಗಳಿಗೆ ಮೆಚ್ಚುಗೆ ಆಗಿದೆ.

'ಭೋಲಾ' ಸಿನಿಮಾ ಹೊರತುಪಡಿಸಿ ಅಜಯ್‌ ದೇವಗನ್‌, ಮೈದಾನ್‌, ಔರೊ ಮೇ ಕಹಾ ಥಮ್‌ ಥಾ, ಸಿಂಗಂ ಎಗೇನ್‌, ನಾಮ್‌ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸಿಂಗಂ ಎಗೇನ್‌ ಹಾಗೂ ನಾಮ್‌ ಚಿತ್ರಗಳಿಗೆ ಅಜಯ್‌ ದೇವಗನ್‌ ಬಂಡವಾಳ ಹೂಡಿದ್ದಾರೆ. ಇನ್ನು ಮಾರ್ಚ್‌ 30 ರಂದು ತೆರೆ ಕಾಣುತ್ತಿರುವ 'ಭೋಲಾ' ಚಿತ್ರಕ್ಕೆ ಕೂಡಾ ಅಜಯ್‌ ದೇವಗನ್‌ ಬಂಡವಾಳ ಹೂಡಿದ್ದು ಅವರೇ ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರದಲ್ಲಿ ಅಜಯ್‌ ದೇವಗನ್‌, ತಬು, ಅಮಲಾ ಪೌಲ್‌, ರಾಯ್‌ ಲಕ್ಷ್ಮಿ ನಟಿಸಿದ್ದಾರೆ. ಅಭಿಷೇಕ್‌ ಬಚ್ಚನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ಕುರಿತಾದ ಮತ್ತಷ್ಟು ಮನರಂಜನೆ ಸುದ್ದಿಗಳು

ನ್ಯಾಯಾಂಗ ನಿಂದನೆ ಪ್ರಕರಣ... ಏಪ್ರಿಲ್‌ 10ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ವಿವೇಕ್‌ ಅಗ್ನಿಹೋತ್ರಿಗೆ ಸೂಚನೆ

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ ಏಪ್ರಿಲ್‌ 10 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ದೆಹಲಿ ಕೋರ್ಟ್‌ ಸೂಚಿಸಿದೆ. ನ್ಯಾಯಮೂರ್ತಿ ಅವರನ್ನು ನಿಂದಿಸಿದ ನಂತರ ವಿವೇಕ್‌ ರಂಜನ್‌ ಅಗ್ನಿಹೋತ್ರಿ ಕ್ಷಮೆ ಯಾಚಿಸಿದ್ದರೂ ಅವರಿಗೆ ಸಂಕಷ್ಟ ತಪ್ಪಿಲ್ಲ. ಖುದ್ದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಒಟಿಟಿಗೆ ಬರುತ್ತಿದೆ ಶಾರುಖ್‌ ಖಾನ್‌ ನಟನೆಯ ‘ಪಠಾಣ್‌’; ಯಾವಾಗಿನಿಂದ, ಯಾವ ವೇದಿಕೆಯಲ್ಲಿ ಸ್ಟ್ರೀಮಿಂಗ್‌? ಇಲ್ಲಿದೆ ಮಾಹಿತಿ

ಜನವರಿ 25ರಂದು ವಿಶ್ವದಾದ್ಯಂತ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗಿದ್ದ ‘ಪಠಾಣ್‌’ ಚಿತ್ರ, ಮೊದಲ ದಿನವೇ ದಾಖಲೆಯ ಮೊತ್ತ ಗಳಿಸುವ ಮೂಲಕ ಗೆಲುವಿನ ಹಳಿಗೇರಿತು. ದಿನಗಳೆದಂತೆ, ನೂರು, ಇನ್ನೂರು, ಐನೂರು, ಸಾವಿರ ಕೋಟಿ ಗಳಿಕೆ ಕಂಡು ಶಾರುಖ್‌ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಬಾದ್ಶಾ ಆಗಿ ಹೊರಹೊಮ್ಮಿದರು. ಈಗಲೂ ಹಲವು ಚಿತ್ರಮಂದಿರಗಳಲ್ಲಿ ‘ಪಠಾಣ್‌’ ಓಟ ಮುಂದುವರಿದಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್‌ ಒತ್ತಿ.

IPL_Entry_Point