ಕನ್ನಡ ಸುದ್ದಿ  /  ಮನರಂಜನೆ  /  Rakhi Sawant In Mysore: ಮೈಸೂರಿನಲ್ಲಿ ರಾಖಿ ಸಾವಂತ್‌.. ಆದಿಲ್‌, ಕಾರ್‌ ಡ್ರೈವರ್‌ ಎಂಬ ಹೊಸ ನಿಜ ತಿಳಿಯಿತು ಎಂದ ನಟಿ! ವಿಡಿಯೋ

Rakhi Sawant in Mysore: ಮೈಸೂರಿನಲ್ಲಿ ರಾಖಿ ಸಾವಂತ್‌.. ಆದಿಲ್‌, ಕಾರ್‌ ಡ್ರೈವರ್‌ ಎಂಬ ಹೊಸ ನಿಜ ತಿಳಿಯಿತು ಎಂದ ನಟಿ! ವಿಡಿಯೋ

ಮೈಸೂರು ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಆದಿಲ್‌, ಯಾವ ಉದ್ಯಮಿಯೂ ಅಲ್ಲ, ಆತ ಇಲ್ಲಿನ ಒಬ್ಬರ ಬಳಿ ಕಾರ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ ವಿಚಾರ ಇಲ್ಲಿಗೆ ಬಂದಾಗ ತಿಳಿಯಿತು. ಆದಿಲ್‌ ಸುಳ್ಳಿನ ಮೇಲೆ ಸುಳ್ಳು ಹೇಳಿದ್ದಾನೆ.

ಮೈಸೂರಿನಲ್ಲಿ ರಾಖಿ ಸಾವಂತ್
ಮೈಸೂರಿನಲ್ಲಿ ರಾಖಿ ಸಾವಂತ್

ಬಾಲಿವುಡ್‌ ನಟಿ ರಾಖಿ ಸಾವಂತ್‌ ಪತಿ ಆದಿಲ್‌ ಖಾನ್ ಈಗ ಮೈಸೂರು ಪೊಲೀಸರ ವಶದಲ್ಲಿದ್ದಾರೆ. ರಾಖಿ ಸಾವಂತ್‌ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಇರಾನಿ ಯುವತಿಯನ್ನು ಅತ್ಯಾಚಾರ ಮಾಡಿದ್ದ ಆರೋಪ ಎದುರಿಸುತ್ತಿರುವ ಆದಿಲ್‌ನನ್ನು ಮೈಸೂರು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಇಷ್ಟು ದಿನಗಳ ಕಾಲ ಒಬ್ಬರಿಗೊಬ್ಬರು ಕಿಡಿ ಕಾರುತ್ತಾ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ರಾಖಿ ಸಾವಂತ್‌ ಹಾಗೂ ಶೆರ್ಲಿನ್‌ ಚೋಪ್ರಾ ಈಗ ಒಂದಾಗಿದ್ದಾರೆ. ಒಟ್ಟಿಗೆ ಮೈಸೂರಿಗೆ ಕೂಡಾ ತೆರಳಿದ್ದಾರೆ. ಕೋರ್ಟ್‌ ಮುಂದೆ ಗೋಳಾಡಿದ್ದಾರೆ. ಮೈಸೂರಿನ ಆದಿಲ್‌ ಖಾನ್‌ ಮನೆಗೆ ಕೂಡಾ ರಾಖಿ ಸಾವಂತ್‌ ಭೇಟಿ ನೀಡಿದ್ದಾರೆ. ಆದರೆ ಮನೆಯಲ್ಲಿ ಯಾರೂ ಆಕೆಯನ್ನು ಒಳಗೆ ಕರೆದಿಲ್ಲ. ರಾಖಿ ಸಾವಂತ್‌ ಮೈಸೂರಿಗೆ ಸೀರೆ ಧರಿಸಿ ಬಂದಿದ್ದು ವಿಶೇಷವಾಗಿತ್ತು. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

''ಮೈಸೂರು ಕೋರ್ಟ್‌ನಲ್ಲಿ ಆದಿಲ್‌ನನ್ನು ಭೇಟಿ ಮಾಡಿದ್ದೆ. ಅವರ ಮನೆಗೆ ಕೂಡಾ ಹೋಗಿದ್ದೆ. ಆದರೆ ಯಾರೂ ಮನೆ ಬಾಗಿಲು ತೆಗೆಯಲಿಲ್ಲ. ಮನೆ ಒಳಗೆ ಕೂಡಾ ಕರೆಯಲಿಲ್ಲ. ನಾನು ಹಿಂದೂ ಆಗಿರುವ ಕಾರಣ ನನಗೆ ಬೈದರು. ನನಗೆ ಬಹಳ ನೋವಾಗಿದೆ. ಮೈಸೂರು ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಆದಿಲ್‌, ಯಾವ ಉದ್ಯಮಿಯೂ ಅಲ್ಲ, ಆತ ಇಲ್ಲಿನ ಒಬ್ಬರ ಬಳಿ ಕಾರ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ ವಿಚಾರ ಇಲ್ಲಿಗೆ ಬಂದಾಗ ತಿಳಿಯಿತು. ಆದಿಲ್‌ ಸುಳ್ಳಿನ ಮೇಲೆ ಸುಳ್ಳು ಹೇಳಿದ್ದಾನೆ. ನನ್ನ ಜೀವನ ಹೀಗೆ ಆಗುತ್ತದೆ ಎಂದುಕೊಂಡಿರಲಿಲ್ಲ. ಆತ ನನ್ನ ಜೀವನವನ್ನು ಸಂಪೂರ್ಣ ನಾಶ ಮಾಡಿದ'' ಎಂದು ರಾಖಿ ಸಾವಂತ್‌ ಕಣ್ಣೀರಿಟ್ಟಿದ್ದಾರೆ.‌

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಖಿ ಸಾವಂತ್‌, ''ಆದಿಲ್‌ ಖಾನ್‌ ನನಗೆ ವರ್ಷದ ಹಿಂದೆ ಮುಂಬೈನಲ್ಲಿ ಪರಿಚಯ ಆಗಿದ್ದರು. ನನ್ನನ್ನು ಭೇಟಿ ಮಾಡಿದ್ದಾಗ ಆತ ತಾನು ಮೈಸೂರಿನ ವ್ಯಕ್ತಿ, ಅಲ್ಲಿನ ಜನರು ನನಗೆ ಮೋಸ ಮಾಡಿದರು, ನನಗೆ ಮೈಸೂರಿನಲ್ಲಿ ಇರಲು ಇಷ್ಟವಿಲ್ಲ, ನನ್ನದೇ ಆದ ಬ್ಯುಸ್ನೆಸ್‌ ಇದೆ. ಆದ್ದರಿಂದ ಇಲ್ಲಿಗೆ ಬಂದಿದ್ದೇನೆ, ಲೈಫ್‌ನಲ್ಲಿ ಸೆಟಲ್‌ ಆಗಬೇಕು, ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನನ್ನೊಂದಿಗೆ ಹೇಳಿದ್ದ. ನಾನು ಅದನ್ನು ನಂಬಿದೆ. ಆದರೆ ದಿನ ದಿನಾ ಆತನ ನಿಜ ಸ್ವರೂಪ ಬಯಲಾಯ್ತು. ಆತ ಹೇಳಿದ್ದೆಲ್ಲಾ ಸುಳ್ಳು ಎಂದು ಈಗ ತಿಳಿಯುತ್ತಿದೆ'' ಎಂದು ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು. ನಂತರ ಮಾತನಾಡಿದ ಶೆರ್ಲಿನ್‌ ಚೋಪ್ರಾ, ''ರಾಖಿ ಸಾವಂತ್‌ ಮೋಸ ಹೋಗಿದ್ದಾರೆ, ನಾನು ಆಕೆಯ ಗೆಳತಿ, ಆದಿಲ್‌ ಖಾನ್‌ ದುರ್ರಾನಿ ಒಬ್ಬ ಪೋರ್ನ್‌ ಸ್ಟಾರ್.‌ ಆತನಿಗೆ ಅನೇಕ ಯುವತಿಯರೊಂದಿಗೆ ಅಫೇರ್‌ ಇದೆ'' ಎಂದು ಆರೋಪಿಸಿದರು. ರಾಖಿ ಹಾಗೂ ಟೀಮ್‌ ಈಗ ಮೈಸೂರಿನಿಂದ ಮುಂಬೈಗೆ ವಾಪಸ್‌ ತೆರಳಿದ್ದಾರೆ.

ಫ್ರಿಡ್ಜ್‌ ಒಳಗೆ ಶವ ಆಗುವುದನ್ನು ದೇವರು ತಪ್ಪಿಸಿದ ಎಂದ ರಾಖಿ

ಕೆಲವು ದಿನಗಳ ಹಿಂದೆ ರಾಖಿ ಸಾವಂತ್‌ ಮುಂಬೈ ಕೋರ್ಟಿನಲ್ಲಿ ಆದಿಲ್‌ ಖಾನ್‌ನನ್ನು ಭೇಟಿ ಆದ ನಂತರ ಮೀಡಿಯಾದೊಂದಿಗೆ ಮಾತನಾಡಿದ್ದರು. ''ಆದಿಲ್‌ ಖಾನ್‌ ಎದುರಾದಾಗ ಕೋರ್ಟ್‌ ಆವರಣದಲ್ಲೇ ಆತ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ಜೈಲಿನಲ್ಲಿ ರೌಡಿಗಳನ್ನು ಭೇಟಿ ಮಾಡಿದ್ದೇನೆ, ನೀವು ಹೇಗೆ ಬದುಕುತ್ತೀಯ ನೋಡುತ್ತೇನೆ ಎಂದಿದ್ದಾನೆ. ಆದಿಲ್‌ ಖಾನ್‌ನನ್ನು ಪ್ರೀತಿಸಿದ್ದಕ್ಕೆ ಈಗ ಪಶ್ಚಾತಾಪ ಆಗುತ್ತಿದೆ. ನನ್ನನ್ನು ಫ್ರಿಡ್ಜ್‌ನಲ್ಲಿ ಹೆಣವನ್ನಾಗಿ ತುಂಬುವುದು ಅವನ ಉದ್ಧೇಶವಾಗಿತ್ತೋ ಏನೋ..? ಆದರೆ ದೇವರು ದೊಡ್ಡವನು, ಹಾಗೆ ಆಗಲು ಬಿಡಲಿಲ್ಲ. ಆದ್ದರಿಂದ ದೇವರಿಗೆ ನಾನು ಥ್ಯಾಂಕ್ಸ್‌ ಹೇಳುತ್ತೇನೆ. ಆದಿಲ್‌ ನನ್ನನ್ನು ನಡುರಸ್ತೆಯಲ್ಲಿ ನಿಲ್ಲಿಸಿಬಿಟ್ಟ, ನನ್ನ ಜೀವನದಲ್ಲೇ ಇದೆಲ್ಲಾ ಏಕೆ ಆಗುತ್ತಿದೆ. ಮೈಸೂರಿನಲ್ಲಿರುವ ಆದಿಲ್‌ ಖಾನ್‌ ತಂದೆ-ತಾಯಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವೊಂದು ವಿಚಾರಗಳನ್ನು ಅವರ ಬಳಿ ಹೇಳಬೇಕಿದೆ. ಆದರೆ ಅವರು ಫೋನ್‌ ರಿಸೀವ್‌ ಮಾಡುತ್ತಿಲ್ಲ'' ಎಂದು ರಾಖಿ ಸಾವಂತ್‌ ಹೇಳಿಕೊಂಡಿದ್ದರು.

ಟಿ20 ವರ್ಲ್ಡ್‌ಕಪ್ 2024