ಕನ್ನಡ ಸುದ್ದಿ  /  ಮನರಂಜನೆ  /  Lily Pan India Movie: ಮಕ್ಕಳ ಬಾಯಿಂದ ಹೊಮ್ಮಲಿದೆ ಮಾನವೀಯ ಮೌಲ್ಯ.. ಐದು ಭಾಷೆಗಳಲ್ಲಿ ಬಿಡುಗಡೆ ಆಗ್ತಿದೆ ಮಕ್ಕಳ ಚಿತ್ರ ‘ಲಿಲ್ಲಿ’

Lily Pan India Movie: ಮಕ್ಕಳ ಬಾಯಿಂದ ಹೊಮ್ಮಲಿದೆ ಮಾನವೀಯ ಮೌಲ್ಯ.. ಐದು ಭಾಷೆಗಳಲ್ಲಿ ಬಿಡುಗಡೆ ಆಗ್ತಿದೆ ಮಕ್ಕಳ ಚಿತ್ರ ‘ಲಿಲ್ಲಿ’

‘ಲಿಲ್ಲಿ’ ಹೆಸರಿನ ಚಿತ್ರವೊಂದು ಇದೀಗ ಬಿಡುಗಡೆಯ ಸನಿಹ ಬಂದು ನಿಂತಿದೆ. ಈ ಸಿನಿಮಾದ ವಿಶೇಷತೆ ಏನೆಂದರೆ, ಕನ್ನಡದ ಜತೆಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

ಮಕ್ಕಳ ಬಾಯಿಂದ ಹೊಮ್ಮಲಿದೆ ಮಾನವೀಯ ಮೌಲ್ಯ.. ಐದು ಭಾಷೆಗಳಲ್ಲಿ ಬಿಡುಗಡೆ ಆಗ್ತಿದೆ ಮಕ್ಕಳ ಚಿತ್ರ ‘ಲಿಲ್ಲಿ’
ಮಕ್ಕಳ ಬಾಯಿಂದ ಹೊಮ್ಮಲಿದೆ ಮಾನವೀಯ ಮೌಲ್ಯ.. ಐದು ಭಾಷೆಗಳಲ್ಲಿ ಬಿಡುಗಡೆ ಆಗ್ತಿದೆ ಮಕ್ಕಳ ಚಿತ್ರ ‘ಲಿಲ್ಲಿ’

Lily Pan India Movie: ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಿನಿಮಾಗಳ ಪ್ರಮಾಣವೇ ಕಡಿಮೆಯಾಗಿವೆ. ವರ್ಷಕ್ಕೆ ಕೇವಲ ಬೆರಳೆಣಿಕೆಯ ಮಕ್ಕಳ ಚಿತ್ರಗಳಷ್ಟೇ ತೆರೆಗೆ ಬರುತ್ತಿವೆಯಾದರೂ, ಪರಿಣಾಮ ಬೀರುತ್ತಿಲ್ಲ. ಸದ್ದು ಮಾಡುತ್ತಿಲ್ಲ. ಕನ್ನಡದಲ್ಲಿ 80- 90ರ ಕಾಲಘಟ್ಟದಲ್ಲಿ ಕನ್ನಡದಲ್ಲಿ ಮಕ್ಕಳ ಸಿನಿಮಾಗಳು ಹಿಟ್‌ ಪಟ್ಟಿ ಸೇರುವುದು ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿಯೂ ಪ್ರಶಸ್ತಿ ಮುಡಿಗೇರಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದೀಗ ಅಂಥದ್ದೇ ಮಕ್ಕಳ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿ ನಿಂತಿದೆ.

ಟ್ರೆಂಡಿಂಗ್​ ಸುದ್ದಿ

‘ಲಿಲ್ಲಿ’ ಹೆಸರಿನ ಚಿತ್ರವೊಂದು ಇದೀಗ ಬಿಡುಗಡೆಯ ಸನಿಹ ಬಂದು ನಿಂತಿದೆ. ಈ ಸಿನಿಮಾದ ವಿಶೇಷತೆ ಏನೆಂದರೆ, ಕನ್ನಡದ ಜತೆಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ‘ಲಿಲ್ಲಿ’ ಚಿತ್ರ ತೆರೆಕಾಣಲಿದೆ. ಕೆ. ಬಾಬು ರೆಡ್ಡಿ ಹಾಗೂ ಜಿ. ಸತೀಶ್ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಶಿವಂ ನಿರ್ದೇಶನ ಮಾಡಿದ್ದಾರೆ. ತಂಡದ ಮಾಹಿತಿಯಂತೆ ಇದು ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ.

ಇತ್ತೀಚೆಗಷ್ಟೇ ‘ಲಿಲ್ಲಿ’ ಚಿತ್ರದ ಹಾಡು, ಟ್ರೇಲರ್‌ ಮತ್ತು ಪೋಸ್ಟರ್‌ ಬಿಡುಗಡೆ ಸಮಾರಂಭ ನಡೆಯಿತು. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಡಾ. ಮೌಲಾ ಶರೀಫ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ತೆಲುಗು ಚಿತ್ರನಟ ಶಿವಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

ಹಾಡು ಬಿಡುಗಡೆ‌ ಮಾಡಿದ ನಟಿ ರಾಗಿಣಿ, ಎಲ್ಲದಕ್ಕಿಂತ ಮುಖ್ಯ ಮಾನವೀಯತೆ ಎಂಬ ಉತ್ತಮ ಕಥಾಹಂದರ ಹೊಂದಿರುವ ಈ ಮಕ್ಕಳ ಚಿತ್ರ ದೊಡ್ಡಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸಿದರು. ಉಮೇಶ್ ಬಣಕಾರ್, ಮೌಲಾ ಶರೀಫ್ ಹಾಗೂ ನಟ ಶಿವಕೃಷ್ಣ ಸಹ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ಶಿವಂ ತಮ್ಮ ಈ ಸಿನಿಮಾ ಬಗ್ಗೆ ಹೇಳಿಕೊಂಡಿದ್ದು ಹೀಗೆ.. "ನಾನು ಕನ್ನಡದಲ್ಲೂ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದೀನಿ. ಆದರೆ ಇದು ನಿರ್ದೇಶಕನಾಗಿ ಮೊದಲ ಚಿತ್ರ. ಮಾನವೀಯತೆಯ ಮೌಲ್ಯವನ್ನು ಸಾರುವ ಚಿತ್ರವಿದು. ಯಾವುದೇ ಒಂದು ವಿಷಯವನ್ನು ಮಕ್ಕಳ ಮೂಲಕ ಹೇಳಿದಾಗ ಬೇಗ ತಲುಪುತ್ತದೆ. ಈ ಹಿಂದೆ ಮಣಿರತ್ನಂ ಅವರ ಅಂಜಲಿ ಚಿತ್ರ ಎಲ್ಲರ ಮನ ಗೆದ್ದಿತ್ತು. ಈಗ ನಮ್ಮ ಲಿಲ್ಲಿ ಚಿತ್ರ ಸಹ ಮಕ್ಕಳ ಜೊತೆಗೆ ಹಿರಿಯರಿಗೂ ಇಷ್ಟವಾಗುತ್ತದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್‌ ಮಾಡುತ್ತಿದ್ದೇವೆ. ನೋಡಿ ಪ್ರೋತ್ಸಾಹ ನೀಡಿ" ಎಂದರು.

ಮಕ್ಕಳ ಚಿತ್ರ ಅಂತ ಯಾವುದಕ್ಕೂ ಕೊರತೆ ಬಾರದ ಹಾಗೆ ಈ ಸಿನಿಮಾ ನಿರ್ಮಾಣವಾಗಬೇಕು. ಉತ್ತಮ ಕಥೆಯಿರುವ ಈ ಚಿತ್ರ ಎಲ್ಲಾ ಭಾಷೆಯ ಜನರಿಗೂ ತಲುಪಬೇಕು ಎಂದು ನಾನು ನಿರ್ದೇಶಕರಿಗೆ ಹೇಳಿದ್ದೆ. ಅಂದುಕೊಂಡಿದಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ಮಾಪಕ ಬಾಬು ರೆಡ್ಡಿ. ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ಬೇಬಿ ನೇಹಾ, ಮಾಸ್ಟರ್ ವೇದಾಂತ್ ವರ್ಮ, ಬೇಬಿ ಪ್ರಣೀತಾ ರೆಡ್ಡಿ ಹಾಗೂ ರಾಜ್ ವೀರ್ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

IPL_Entry_Point