ಕನ್ನಡ ಸುದ್ದಿ  /  Entertainment  /  Does Maheshbabu 28th Movie Title Fixed?

Mahesh Babu ̇28th Movie Title: ಮಹೇಶ್‌ಬಾಬು 28ನೇ ಚಿತ್ರಕ್ಕೆ ಕೊನೆಗೂ ಅದೇ ಟೈಟಲ್‌ ಫಿಕ್ಸ್‌ ಆಯ್ತಾ...?

ತ್ರಿವಿಕ್ರಮ್‌ ನಿರ್ದೇಶನದ ಮಹೇಶ್‌ ಬಾಬು 28ನೇ ಸಿನಿಮಾ ಟೈಟಲ್‌ ಬಗ್ಗೆ ಅಭಿಮಾನಿ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ. ಪ್ರತಿ ಬಾರಿ ಮಹೇಶ್‌ ಬಾಬು ಹೊಸ ಸಿನಿಮಾ ಅನೌನ್ಸ್‌ ಆದಾಗ ಚಿತ್ರದ ಟೈಟಲ್‌ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಇದೀಗ ಅವರ 28ನೇ ಸಿನಿಮಾಗೆ ಯಾವ ಟೈಟಲ್‌ ಫೈನಲ್‌ ಮಾಡಬಹುದು ಎಂಬು ಚರ್ಚೆ ನಡೆಯುತ್ತಿದೆ.

ಮಹೇಶ್‌ ಬಾಬು 28ನೇ ಸಿನಿಮಾ ಟೈಟಲ್
ಮಹೇಶ್‌ ಬಾಬು 28ನೇ ಸಿನಿಮಾ ಟೈಟಲ್ (PC: namratashirodkar)

ಬುಧವಾರ ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ತಾಯಿ ಇಂದಿರಾದೇವಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಂದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ನಿನ್ನೆ ಜ್ಯೂಬ್ಲಿಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ಅಂತ್ಯಕ್ರಿಯೆ ಕೂಡಾ ನೆರವೇರಿದೆ.

ತಾಯಿ ನಿಧನರಾದ್ದರಿಂದ ಮಹೇಶ್‌ ಬಾಬು ಸಿನಿಮಾ ಕೆಲಸಗಳಿಗೆ ಬ್ರೇಕ್‌ ನೀಡಿದ್ದಾರೆ. 11 ದಿನಗಳ ಕಾರ್ಯ ಮುಗಿದ ನಂತರ ಎಂದಿನಂತೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟಾಲಿವುಡ್‌ ಮೂಲಗಳು ಮಾಹಿತಿ ನೀಡಿವೆ. ಈ ನಡುವೆ ತ್ರಿವಿಕ್ರಮ್‌ ನಿರ್ದೇಶನದ ಮಹೇಶ್‌ ಬಾಬು 28ನೇ ಸಿನಿಮಾ ಟೈಟಲ್‌ ಬಗ್ಗೆ ಅಭಿಮಾನಿ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ. ಪ್ರತಿ ಬಾರಿ ಮಹೇಶ್‌ ಬಾಬು ಹೊಸ ಸಿನಿಮಾ ಅನೌನ್ಸ್‌ ಆದಾಗ ಚಿತ್ರದ ಟೈಟಲ್‌ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಇದೀಗ ಅವರ 28ನೇ ಸಿನಿಮಾಗೆ ಯಾವ ಟೈಟಲ್‌ ಫೈನಲ್‌ ಮಾಡಬಹುದು ಎಂಬು ಚರ್ಚೆ ನಡೆಯುತ್ತಿದೆ.

ಸಾಮಾನ್ಯವಾಗಿ ಮಹೇಶ್‌ ಬಾಬು ಸಿನಿಮಾಗಳಿಗೆ ಶ್ರೀಮಂತುಡು, ಒಕ್ಕಡು, ದೂಕುಡು, ಆಗಡು ಎಂದು 'ಡು' ಅಕ್ಷರಗಳಿಂದ ಟೈಟಲ್‌ ಕೊನೆಯಾಗುತ್ತದೆ. ಹಾಗೇ ನಿರ್ದೇಶಕ ತ್ರಿವಿಕ್ರಮ್‌ ಸಿನಿಮಾಗಳು ಅತ್ತಾರಿಂಟಿಕಿ ದಾರೇದಿ, ಅರವಿಂದ ಸಮೇತ, ಅಲಾ ವೈಕುಂಠಪುರಮುಲೋ...ಹೀಗೆ 'ಅ' ನಿಂದ ಶುರುವಾಗುತ್ತದೆ. ಮೂಲವೊಂದರ ಪ್ರಕಾರ ಈ ಚಿತ್ರಕ್ಕೆ 'ಅಯೋಧ್ಯಲೋ ಅರ್ಜುನುಡು' ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಇದುವರೆಗೂ ತುಟಿ ಬಿಚ್ಚಿಲ್ಲ. ನಿಜವಾಗಲೂ ಮಹೇಶ್‌ ಬಾಬು ಚಿತ್ರಕ್ಕೆ ಅದೇ ಹೆಸರನ್ನು ಫೈನಲಸ್‌ ಮಾಡಲಾಗಿದೆಯೋ ಅಥವಾ ಬೇರೆ ಏನಾದರೂ ಇದೆಯೋ ಎಂಬುದು ಮಾತ್ರ ಹಾಟ್‌ ಟಾಪಿಕ್‌ ಆಗಿದೆ.

2005 ರಲ್ಲಿ ತೆರೆ ಕಂಡ ಅತಡು, 2010ರಲ್ಲಿ ಖಲೇಜ ಸಿನಿಮಾ ನಂತರ ಸುಮಾರು 12 ವರ್ಷಗಳ ಬಳಿಕ ಮತ್ತೆ ತ್ರಿವಿಕ್ರಮ್‌ ಹಾಗೂ ಮಹೇಶ್‌ ಬಾಬು ಜೋಡಿ ಮತ್ತೆ ತೆರೆ ಮೇಲೆ ಮೋಡಿ ಮಾಡಲು ಹೊರಟಿದೆ. ಹಾರಿಕಾ ಅಂಡ್‌ ಹಾಸಿನಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಾಗವಂಶಿ ನಿರ್ಮಿಸುತ್ತಿರುವ ಚಿತ್ರವನ್ನು ತ್ರಿವಿಕ್ರಮ್‌ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ನಮ್ರತಾ ಶಿರೋಡ್ಕರ್‌ ಹಂಚಿಕೊಂಡಿದ್ದ ಮಹೇಶ್‌ ಬಾಬು ಹೊಸ ಲುಕ್‌ ಬಹಳ ವೈರಲ್‌ ಆಗಿತ್ತು. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಮುಂದಿನ ವರ್ಷ ಏಪ್ರಿಲ್‌ 28 ರಂದು ಸಿನಿಮಾ ತೆರೆಗೆ ಬರುವುದಾಗಿ ಅಧಿಕೃತವಾಗಿ ಅನೌನ್ಸ್‌ ಕೂಡಾ ಆಗಿದೆ.

ಈ ಚಿತ್ರದ ಮೂಲಕ ಪೂಜಾ ಹೆಗ್ಡೆ ಮತ್ತೊಮ್ಮೆ ಮಹೇಶ್ ಬಾಬುಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ 'ಮಹರ್ಷಿ' ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಈ ಹೊಸ ಚಿತ್ರದ ಹಾಡುಗಳಿಗೆ ತಮನ್ ಸಂಗೀತ ನೀಡುತ್ತಿದ್ದಾರೆ. ಮುಂದಿನ ವರ್ಷ ಬೇಸಿಗೆ ವೇಳೆಗೆ ಸಿನಿಮಾವನ್ನು ಚಿತ್ರಮಂದಿರಕ್ಕೆ ತರಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾ ನಂತರ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ.

IPL_Entry_Point

ವಿಭಾಗ