ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ತಾಂಡವ್‌ಗೆ ಬುದ್ಧಿ ಕಲಿಸಲು ಅಡುಗೆ ಹಾಳು ಮಾಡಿದ ಸೆಲೆಬ್ರಿಟಿ ಶೆಫ್‌ ರೂಪಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ತಾಂಡವ್‌ಗೆ ಬುದ್ಧಿ ಕಲಿಸಲು ಅಡುಗೆ ಹಾಳು ಮಾಡಿದ ಸೆಲೆಬ್ರಿಟಿ ಶೆಫ್‌ ರೂಪಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 16ರ ಎಪಿಸೋಡ್‌. ಭಾಗ್ಯಾ ಕುಸುಮಾಗೆ ಬುದ್ಧಿ ಕಲಿಸಲು ಬಂದ ಸೆಲೆಬ್ರಿಟಿ ಶೆಫ್‌ ರೂಪಾ, ನಂತರ ನಿಜ ವಿಚಾರ ತಿಳಿದು ಭಾಗ್ಯಾ ಪರ ನಿಲ್ಲುತ್ತಾಳೆ. ತಾಂಡವ್‌ಗೆ ಪಾಠ ಕಲಿಸಲು ಎಲ್ಲಾ ಅಡುಗೆಯನ್ನು ಹಾಳು ಮಾಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 16ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 16ರ ಎಪಿಸೋಡ್‌ (PC: Colors Kannada)

Bhagyalakshmi Serial: ಧರ್ಮರಾಜ್‌ ಸೂರ್ಯವಂಶಿ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಕುಸುಮಾ ಮನೆಯೊಳಗೆ ಗೆರೆ ಎಳೆದು ಮನೆಯನ್ನು ಎರಡು ಭಾಗ ಮಾಡಿದ್ದಾಳೆ. ಮನೆ ಬಿಟ್ಟು ಹೋಗು ಎಂದು ಸೊಸೆಗೆ ದುಂಬಾಲು ಬಿದ್ದಿದ್ದ ಮಗ ತಾಂಡವ್‌ಗೆ ಕುಸುಮಾ ಪಾಠ ಕಲಿಸಲು ಮುಂದಾಗಿದ್ಧಾಳೆ. ಹಬ್ಬದ ದಿನ ತಾನು ರುಚಿಯಾದ ಊಟ ಮಾಡಲು ತಾಂಡವ್‌ ಕೇಳಿದಷ್ಟು ಹಣ ಕೊಟ್ಟು ಸೆಲೆಬ್ರಿಟಿ ಶೆಫ್‌ ರೂಪಾಳನ್ನು ಮನೆಗೆ ಕರುತ್ತಾನೆ.

ಟ್ರೆಂಡಿಂಗ್​ ಸುದ್ದಿ

ತಾಂಡವ್‌ ನನಗೆ ಹೇಳಿದಂತೆ ಇಲ್ಲಿ ಏನೂ ಇಲ್ಲ, ಬೇಕಂತಲೇ ತಾಂಡವ್‌ ಭಾಗ್ಯಾಳಿಂದ ದೂರ ಇದ್ದಾನೆ. ಮಕ್ಕಳು, ಅಪ್ಪ ಅಮ್ಮನನ್ನೂ ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ತಿಳಿದ ನಂತರ ರೂಪಾ ಕೂಡಾ ತಾಂಡವ್‌ಗೆ ಬುದ್ಧಿ ಕಲಿಸಲು ನಿರ್ಧರಿಸುತ್ತಾಳೆ. ಭಾಗ್ಯಾ ಕುಸುಮಾ ಬಳಿ ಬಂದು ಕ್ಷಮೆ ಕೇಳುತ್ತಾಳೆ. ನಿಮ್ಮ ಮಗ ನನ್ನ ಬಳಿ ಬಂದು ಸುಳ್ಳು ಹೇಳಿದರು. ಭಾಗ್ಯಾಳದ್ದೇ ಎಲ್ಲಾ ತಪ್ಪು ಎನ್ನುವಂತೆ ಆರೋಪ ಮಾಡಿದ್ದರು. ಆದರೆ ಈಗ ನನಗೆ ಸತ್ಯ ಏನೆಂದು ಗೊತ್ತಾಗಿದೆ. ಇನ್ಮುಂದೆ ನಾನು ನಿಮ್ಮ ಪರ ಇದ್ದೇನೆ ಎಂದು ಧೈರ್ಯ ಹೇಳುತ್ತಾಳೆ.

ತಾಂಡವ್‌ಗೆ ಮದುವೆ ದಿನಾಂಕ ತಿಳಿಸಿದ ಶ್ರೇಷ್ಠಾ ಹೆತ್ತವರು

ಇತ್ತ ತಾಂಡವ್‌ಗೆ ಕರೆ ಮಾಡುವ ಶ್ರೇಷ್ಠಾ ತಂದೆ ತಾಯಿ ಮದುವೆಗೆ ಮುನ್ನ ಜೊತೆಯಾಗಿ ಇರಬಾರದು ಎಂದು ಎಷ್ಟು ಹೇಳಿದರೂ ನಿಮ್ಮ ತಾಯಿ ಇನ್ನೂ ನನ್ನ ಮಗಳ ಮನೆಯಲ್ಲಿದ್ಧಾರೆ. ಆದಷ್ಟು ಬೇಗ ನಿಮ್ಮ ತಾಯಿಯನ್ನು ಮನೆಯಿಂದ ಹೊರ ಬರುವಂತೆ ಹೇಳು. ಮದುವೆ ದಿನಾಂಕ ಫಿಕ್ಸ್‌ ಆಗಿದೆ. ನಿನಗೆ ನನ್ನ ಮಗಳು ಬೇಕು ಎಂದರೆ ಬಂದು ಮದುವೆ ಮಾಡಿಕೋ ಎನ್ನುತ್ತಾರೆ. ಅವರ ಮಾತು ಕೇಳಿದ ತಾಂಡವ್‌ ಶಾಕ್‌ ಆಗುತ್ತಾನೆ. ಈ ಶ್ರೇಷ್ಠಾ ಹಾಗೂ ಸುಂದರಿಯಿಂದ ನಾನು ಅನುಭವಿಸುತ್ತಿದ್ದೇನೆ. ಒಮ್ಮೆ ಈ ಮದುವೆ ನಾಟಕ ಮುಗಿದರೆ ಸಾಕು. ಸದ್ಯಕ್ಕೆ ಊಟ ಮಾಡೋಣ ಎಂದು ಅಡುಗೆ ಮನೆ ಕಡೆ ಬರುತ್ತಾನೆ. ಅಡುಗೆ ಆಗಿದ್ರೆ ಊಟ ಬಡಿಸಿ ಎಂದು ರೂಪಾಗೆ ಹೇಳುತ್ತಾನೆ. ನಾನು ಏನಿದ್ರೂ ಅಡುಗೆ ಮಾಡುತ್ತೇನೆ, ಬೇಕಿದ್ದರೆ ನೀನೇ ಬಡಿಸಿಕೋ ಎಂದು ರೂಪಾ ಹೇಳುತ್ತಾಳೆ.

ಮತ್ತೊಂದೆಡೆ ಭಾಗ್ಯಾ ಕಡೆಯ ಎಲ್ಲರೂ ಸಾಲಾಗಿ ಊಟಕ್ಕೆ ಕೂರುತ್ತಾರೆ. ಅವರನ್ನು ನೋಡಿ ತಾಂಡವ್‌ ಕೊಂಕು ಆಡುತ್ತಾನೆ. ಹೋ ಎಲ್ಲರೂ ಊಟಕ್ಕೆ ಕುಳಿತರಾ? ಹಬ್ಬ ಎಂದರೆ ಕನಿಷ್ಠ 5-6 ಐಟಮ್‌ ಆದ್ರೂ ಇರಬೇಕಲ್ಲವೇ. ನಮ್ಮ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ತಯಾರಾಗಿದೆ ನಾನಂತೂ ಎಂಜಾಯ್‌ ಮಾಡುತ್ತೇನೆ ಎಂದು ಡೈನಿಂಗ್‌ ಟೇಬಲ್‌ ಮೇಲೆ ಕುಳಿತು ಊಟ ಶುರು ಮಾಡುತ್ತಾನೆ. ಆದರೆ ರೂಪಾ ಬೇಕಂತಲೇ ಅಡುಗೆ ಹಾಳು ಮಾಡಿರುತ್ತಾಳೆ. ಅಡುಗೆ ರುಚಿ ಮಾಡಿದ ತಾಂಡವ್‌, ಏನು ಇಷ್ಟು ಕೆಟ್ಟದಾಗಿ ಅಡುಗೆ ಮಾಡಿದ್ದೀರ ಎಂದು ಕೇಳುತ್ತಾನೆ. ಹೌದು ನಾನು ಮಾಡುವುದೇ ಹೀಗೆ. ನಾನು ಮಾಡುವ ಅಡುಗೆ ಚೆನ್ನಾಗಿದೆಯೋ ಇಲ್ಲವೋ ಎಂದು ಯೂಟ್ಯೂಬ್‌ ನೋಡುವ ಜನರಿಗೆ ಹೇಗೆ ಗೊತ್ತಾಗುತ್ತದೆ. ಜನರಿಗೆ ಬಣ್ಣ ಬಣ್ಣದ ಪಾತ್ರೆಗಳು, ಒಳ್ಳೆ ವಿಡಿಯೋ ಇದ್ದರೆ ಸಾಕು ಎನ್ನುತ್ತಾಳೆ.

ಪಾರ್ಟಿ ಬದಲಿಸಿದ ಶೆಫ್‌ ರೂಪಾ

ಹಾಗಿದ್ರೆ ನೀವೂ ಇದೇ ಊಟ ತಿನ್ನುತ್ತೀರಾ ಎಂದು ತಾಂಡವ್‌ ಕೇಳುತ್ತಾನೆ. ಇಲ್ಲ ನನಗಾಗಿ ಅಡುಗೆಯವರು ಇದ್ದಾರೆ ಅವರು ತಯಾರಿಸಿದ ಊಟ ಮಾಡುತ್ತೇನೆ. ಈಗಲೂ ಅಷ್ಟೇ ನಾನು ಈ ಊಟ ಮಾಡುವುದಿಲ್ಲ. ಪಕ್ಕದ ಮನೆಯವರು ನನ್ನನ್ನು ಊಟಕ್ಕೆ ಕರೆದಿದ್ದಾರೆ ಎಂದು ಹೇಳಿ, ಗೆರೆ ದಾಟಿ ಭಾಗ್ಯಾ ಕಡೆ ಹೋಗಿ ಊಟಕ್ಕೆ ಕೂರುತ್ತಾಳೆ. ಅದುವರೆಗೂ ಭಾಗ್ಯಾಳನ್ನು ನೋಡಿ ಕೊಂಕು ಮಾಡುತ್ತಿದ್ದ ತಾಂಡವ್‌ಗೆ ಅವಮಾನವಾದಂತೆ ಆಗುತ್ತದೆ.

ತಾಂಡವ್‌ ಉಪವಾಸವಿರುತ್ತಾನಾ ಅಥವಾ ಭಾಗ್ಯಾ ಕೊಟ್ಟ ಊಟ ಮಾಡುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point