ಕನ್ನಡ ಸುದ್ದಿ  /  Entertainment  /  Sandalwood News Ramayana Movies List Sampoorna Ramayana Adipurush Ravan Sati Sulochana Dashavatara Pcp

Rama Navami 2024: ಸಿನಿಮಾಗಳಲ್ಲಿ ರಾಮಾಯಣ; ರಾಮಭಕ್ತರು ಮಿಸ್‌ ಮಾಡದೆ ನೋಡಬೇಕಾದ ರಾಮಾಯಣ ಸಿನಿಮಾಗಳಿವು

Ramayana Movies List: ಎಲ್ಲೆಡೆ ರಾಮ ನವಮಿ ಸಂಭ್ರಮ. ರಾಮನ ಜನ್ಮದಿನದ ಸಂಭ್ರಮದ ಸಮಯದಲ್ಲಿ ರಾಮಾಯಣಕ್ಕೆ ಸಂಬಂಧಪಟ್ಟ ಸಿನಿಮಾಗನ್ನು ನೆನಪಿಸಿಕೊಳ್ಳಬಹುದು. ಸಂಪೂರ್ಣ ರಾಮಾಯಣ, ಲವ್‌ ಕುಶ್‌, ಆದಿಪುರುಷ್‌, ಭಕ್ತೆ ಶಬರಿ, ಶ್ರೀ ರಾಮಾಂಜನೇಯ ಯುದ್ಧ, ಸತಿ ಸುಲೋಚನ, ಮೈರಾವಣ, ದಶಾವತಾರ ಸೇರಿದಂತೆ ಹಲವು ಸಿನಿಮಾಗಳು ತೆರೆಕಂಡಿವೆ.

ರಾಮಾಯಣ ಸಿನಿಮಾಗಳ ಪಟ್ಟಿ
ರಾಮಾಯಣ ಸಿನಿಮಾಗಳ ಪಟ್ಟಿ

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥ. ರಾಮ, ಸೀತೆ, ಲಕ್ಷ್ಮಣ, ಹನುಮಂತ, ರಾವಣ ಸೇರಿದಂತೆ ರಾಮಾಯಣದ ಪ್ರಮುಖ ಪಾತ್ರಗಳ ಹೆಸರಿನಲ್ಲಿ ಹಲವು ಸಿನಿಮಾಗಳೂ ಬಿಡುಗಡೆಯಾಗಿವೆ. ರಾಕಿಂಗ್‌ ಸ್ಟಾರ್‌ ಯಶ್‌ ಮುಂಬರುವ ರಾಮಾಯಣ ಸಿನಿಮಾಕ್ಕೆ ಪ್ರೊಡ್ಯುಸರ್‌ ಆಗಿದ್ದಾರೆ. ಕೆಲವು ತಿಂಗಳ ಹಿಂದೆ ಹನುಮಾನ್‌ ಹೆಸರಿನ ಸಿನಿಮಾವೊಂದು ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿತ್ತು. ಕನ್ನಡದಲ್ಲೂ ಭಕ್ತೆ ಶಬರಿ, ಶ್ರೀ ರಾಮಾಂಜನೇಯ ಯುದ್ಧ, ಸತಿ ಸುಲೋಚನ, ಮೈರಾವಣ, ದಶಾವತಾರ, ಶ್ರೀ ರಾಮಾ ಪೂಜಾ ಸೇರಿದಂತೆ ಹಲವು "ರಾಮಾಯಣ ಕಥೆಯ" ಸಿನಿಮಾಗಳು ಬಿಡುಗಡೆಯಾಗಿವೆ. ಬಾಲಿವುಡ್‌ನಲ್ಲೂ ಹಲವು ರಾಮಾಯಣದ ಸಿನಿಮಾಗಳು, ಧಾರಾವಾಹಿಗಳು ಬಂದಿವೆ. ಆದಿಪುರುಷ್‌ ಸಿನಿಮಾವೂ ರಾಮಾಯಣದ ಕಥೆಯನ್ನು ಆಧರಿತವಾಗಿದೆ.

ಸಂಪೂರ್ಣ ರಾಮಾಯಣ (1961)

1961ರಲ್ಲಿ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾವನ್ನು ಬಾಬುಬಾಯ್‌ ಮಿಸ್ಟ್ರೀ ನಿರ್ದೇಶಣ ಮಾಡಿದ್ದರು. ಮಹಿಪಾಲ್‌ ಮತ್ತು ಅನಿತಾ ಗುಪ್ತಾ ಅವರು ರಾಮಾ ಸೀತೆಯಾಗಿ ನಟಿಸಿದ್ದಾರೆ. 1943ರಲ್ಲಿ ರಾಮರಾಜ್ಯ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಇದಾದ ಬಳಿಕ ಬಂದ ಸಿನಿಮಾವಿದು.ಲತಾ ಮಂಗೇಶ್ವಕರ್‌ ಸೇರಿದಂತೆ ಪ್ರಮುಖ ಗಾಯಕಿ ಗಾಯಕರು ಈ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಜೈ ಸಂತೋಷಿ ಮಾ

ಈ ಸಿನಿಮಾ ಸಂಪೂರ್ಣವಾಗಿ ರಾಮಾಯಣಕ್ಕೆ ಸಂಬಂಧಪಟ್ಟದ್ದಲ್ಲ. ಹಿಂದೂ ದೇವತಿ ಸಂತೋಷಿ ಮಾತಾರಿಗೆ ಸಂಬಂಧಪಟ್ಟದ್ದು. ಈ ದೇವಿಯೇ ಸೀತಾಮಾತೆ. ವಿಜಯ್‌ ಶರ್ಮಾ ನಿರ್ದೇಶನದ ಸಂತೋಷಿ ಮಾತಾ ಸಿನಿಮಾ 1975ರಲ್ಲಿ ಬಿಡುಗಡೆಯಾಗಿತ್ತು. ಕನನ್‌ ಕೌಶಲ್‌, ಭಾರತ್‌ ಭೂಷನ್‌, ಅನಿತಾ ಗುಹಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಾಮ್‌ ತೇರಿ ಗಂಗಾ ಮೈಲಿ (1985)

ರಾಜ್‌ ಕಪೂರ್‌ ನಿರ್ದೇಶನದ ಸಿನಿಮಾವಿದು. ನರೇನ್‌ ಎಂಬ ವ್ಯಕ್ತಿಯ ಜತೆ ಗಂಗಾ ಹೆಸರಿನ ಯುವತಿಯ ಜತೆ ಪ್ರೀತಿಗೆ ಬೀಳುವ ಕಥೆ ಹೊಂದಿದೆ. ರಾಮಾ ಮತ್ತು ಸೀತೆಯ ಕಥೆಯನ್ನು ಹೋಲುವ ಕಥೆಯನ್ನು ಈ ಸಿನಿಮ ಹೊಂದಿದೆ.

ಲವ್‌ ಕುಶ್‌ (1997)

ರಾಮಾ ಮತ್ತು ಸೀತೆಯ ಅವಳಿ ಮಕ್ಕಳ ಕಥೆಯನ್ನು ಈ ಸಿನಿಮಾ ಹೊಂದಿದೆ. ವಿ. ಮಧುಸೂಧನ್‌ ರಾವ್‌ ನಿರ್ದೇಶನದ ಈ ಸಿನಿಮಾದಲ್ಲಿ ಜಿತೇಂದ್ರ, ಜಯಪ್ರದಾ, ಅರುಣಾ ಇರಾನಿ ನಟಿಸಿದ್ದಾರೆ.

ಹಮ್‌ ಸಾತ್‌ ಸಾತ್‌ ಹೇನ್‌ (1999)

ಇದು ಫ್ಯಾಮಿಲಿ ಕಥೆಯಾಗಿ ಜನಪ್ರಿಯತೆ ಪಡೆದಿತ್ತು. ಇದು ರಾಮಾಯಾಣದಿಂದ ಸ್ಪೂರ್ತಿ ಪಡೆದ ಸಿನಿಮಾವಾಗಿದೆ.

ರಾವಣ್‌ (2010)

ಮಣಿರತ್ನ ನಿರ್ದೇಶನದ ಈ ಸಿನಿಮಾವು ರಾಮಾಯಣದ ಕಥೆಯನ್ನು ಆಧುನಿಕವಾಗಿ ಹೊಸದಾಗಿ ಹೇಳುವ ಪ್ರಯತ್ನ ಮಾಡಿತ್ತು. ಅಭಿಷೇಕ್‌ ಬಚ್ಚನ್‌ ಈ ಸಿನಿಮಾದಲ್ಲಿ ರಾವಣನಾಗಿ ನಟಿಸಿದ್ದರು. ಐಶ್ವರ್ಯಾ ರೈ ಅವರು ಸೀತೆಯಾಗಿ ಮತ್ತು ರಾಮನಾಗಿ ವಿಕ್ರಮ್‌ ನಟಿಸಿದ್ದಾರೆ.

ಬಾಹುಬಲಿ : ದಿ ಕನ್‌ಕ್ಲೂಷನ್‌

ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಾಹುಬಲಿ ಎರಡನೇ ಭಾಗವು ರಾಮಾಯಣದಿಂದ ಸ್ಪೂರ್ತಿ ಪಡೆದಿದೆ. ನನ್ನ ಎಲ್ಲಾ ಸಿನಿಮಾಗಳು ಮಹಾಭಾರತ ಮತ್ತು ರಾಮಾಯಣದಿಂದ ಸ್ಪೂರ್ತಿ ಪಡೆದಿವೆ. ನಾನು ಬಾಲ್ಯದಿಂದಲೇ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕೇಳುತ್ತ ಬಂದಿದ್ದು, ಇವು ನನ್ನ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿವೆ ಎಂದು ರಾಜಮೌಳಿ ಹೇಳಿದ್ದರು.

ರಾಮಾ ಸೇತು (2022)

ರಾಮನು ಲಂಕೆಗೆ ಹೋಗಲು ನಿರ್ಮಿಸಿದ ರಾಮಸೇತು ಸೇತುವೆಗೆ ಸಂಬಂಧಪಟ್ಟ ಸಿನಿಮಾವಿದು.

ಆದಿಪುರುಷ್‌ (2023)

ಓಮ್‌ ರಾಹುತ್‌ ನಿರ್ದೇಶನದ ಆದಿಪುರುಷ್‌ ಸಿನಿಮಾವು ರಾಮಾಯಣದ ಕಥೆ ಹೊಂದಿದೆ. ಇದು ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಹಿಟ್‌ ಆಗಲಿಲ್ಲ.

ರಾಮಾಯಣ- ಕನ್ನಡ ಸಿನಿಮಾಗಳು

ಭಕ್ತೆ ಶಬರಿ, ಶ್ರೀ ರಾಮಾಂಜನೇಯ ಯುದ್ಧ, ಸತಿ ಸುಲೋಚನ, ಮೈರಾವಣ, ದಶಾವತಾರ, ಶ್ರೀ ರಾಮಾ ಪೂಜಾ ಸೇರಿದಂತೆ ರಾಮಾಯಣಕ್ಕೆ ಸಂಬಂಧಪಟ್ಟ ಹಲವು ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಿವೆ.

IPL_Entry_Point