ಕನ್ನಡ ಸುದ್ದಿ  /  ಮನರಂಜನೆ  /  Shilpa Shetty: ಮಗಳು ಶಮಿಶಾಗೆ ಕನ್ಯಾ ಪೂಜೆ ಮಾಡಿದ ನಟಿ ಶಿಲ್ಪಾ ಶೆಟ್ಟಿ, ಅಮ್ಮನ ಅಷ್ಟಮಿ ಪೂಜಾ ವಿಧಿಯನ್ನು ಅಚ್ಚರಿಯಿಂದ ನೋಡಿದ ಪುಟಾಣಿ

Shilpa Shetty: ಮಗಳು ಶಮಿಶಾಗೆ ಕನ್ಯಾ ಪೂಜೆ ಮಾಡಿದ ನಟಿ ಶಿಲ್ಪಾ ಶೆಟ್ಟಿ, ಅಮ್ಮನ ಅಷ್ಟಮಿ ಪೂಜಾ ವಿಧಿಯನ್ನು ಅಚ್ಚರಿಯಿಂದ ನೋಡಿದ ಪುಟಾಣಿ

ಚೈತ್ರಾ ದುರ್ಗಾ ಅಷ್ಟಮಿಯ ಪ್ರಯುಕ್ತ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮಗಳು ಶಮಿಶಾಗೆ ಕನ್ಯಾ ಪೂಜೆ ಮಾಡಿದ್ದಾರೆ. "ನಮ್ಮ ಸ್ವಂತ ದೇವಿ" ಎಂಬ ಕ್ಯಾಪ್ಷನ್‌ನಡಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Shilpa Shetty: ಮಗಳು ಶಮಿಶಾಗೆ ಕನ್ಯಾ ಪೂಜೆ ಮಾಡಿದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ
Shilpa Shetty: ಮಗಳು ಶಮಿಶಾಗೆ ಕನ್ಯಾ ಪೂಜೆ ಮಾಡಿದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತನ್ನ ಮಗಳು ಶಮಿಶಾಗೆ ಅಷ್ಟಮಿ ಪ್ರಯುಕ್ತ ಕನ್ಯಾ ಪೂಜೆ ಮಾಡಿದ್ದಾರೆ. ಈಗ ಯಾವ ಅಷ್ಟಮಿ? ಶ್ರೀ ಕೃಷ್ಣ ಜನ್ಮಾಷ್ಟಮಿ ಅಕ್ಟೋಬರ್‌ 2024ಕ್ಕೆ ಅಲ್ವಾ ಎಂಬ ಸಂದೇಹ ನಿಮಗಿರಬಹುದು. ಇದು ಚೈತ್ರಾ ದುರ್ಗಾ ಅಷ್ಟಮಿ. ಉತ್ತರ ಭಾರತ ಸೇರಿದಂತೆ ವಿವಿಧೆಡೆ ಚೈತ್ರಾ ದುರ್ಗಾ ಅಷ್ಟಮಿಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ನಮ್ಮ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮುಂಬೈ ನಿವಾಸಿ ಅಲ್ವೆ. ಹಾಗಾಗಿ ಅಲ್ಲಿ ಚೈತ್ರಾ ದುರ್ಗಾ ಅಷ್ಟಮಿಯನ್ನು ಆಚರಿಸುತ್ತಾರೆ. ಈ ದಿನದಂದು ಕನ್ಯಾ ಪೂಜೆಯನ್ನು ಆಚರಿಸಲಾಗುತ್ತದೆ. ಶಿಲ್ಪಾ ಶೆಟ್ಟಿ ತನ್ನ ನಾಲ್ಕು ವರ್ಷದ ಮಗಳ ಕಾಲು ತೊಳೆದು ಪೂಜೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಗಳಿಗೆ ಕನ್ಯಾ ಪೂಜೆ ಮಾಡಿದ ಶಿಲ್ಪಾ ಶೆಟ್ಟಿ

ಇಂದು ಶಿಲ್ಪಾ ಶೆಟ್ಟಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಮನೆಯಲ್ಲಿ ಅಷ್ಟಮಿ ಪೂಜೆ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಶಿಲ್ಪಾ ಶೆಟ್ಟಿ ಪಿಂಕ್‌ ಕುರ್ತಾ ಹಾಕಿಕೊಂಡಿದ್ದಾರೆ. ಪುಟಾಣಿ ಶಮಿಶಾ ಪಿಂಕ್‌ ಕ್ರಾಪ್‌ ಟಾಪ್‌ ಮತ್ತು ಶರ್ಟ್‌ ಧರಿಸಿದ್ದಾಳೆ. ಇವರಿಬ್ಬರೂ ತಮ್ಮ ಮನೆಯ ದೇವರಕೋಣೆಯಲ್ಲಿ ಕುಳಿತು ಪೂಜೆ ಮಾಡುವ ದೃಶ್ಯ ವಿಡಿಯೋದಲ್ಲಿದೆ. ಈ ಸಮಯದಲ್ಲಿ ವಿಡಿಯೋದಲ್ಲಿ ದೇವಿಯ ಮೂರ್ತಿ ಕೂಡ ಕಾಣಬಹುದು.

ಮಗಳು ಶಮಿಶಾಳ ಕಾಲುಗಳನ್ನು ತೊಳೆದು ಬಳಿಕ ಆರತಿ ಮಾಡುವ ದೃಶ್ಯ ವಿಡಿಯೋದಲ್ಲಿದೆ. ಇದಾದ ಬಳಿಕ ಮಗಳಿಗೆ ಪ್ರಸಾದ ಸೇವಿಸಲು ನೀಡುತ್ತಾರೆ. ಅಪ್ಪ ಮಾಡುವ ಆಚರಣೆಯನ್ನು ಮಗಳು ತದೇಕಚಿತ್ತದಿಂದ ನೋಡುತ್ತಿದ್ದಾಳೆ. ಇದೇ ಸಮಯದಲ್ಲಿ ಶಮಿಶಾಳ ಬಳಿಗೆ ಆಕೆಯ ಪ್ರೀತಿಯ ಪೆಟ್‌ ನಾಯಿ ಕೂಡ ಆಗಮಿಸಿರುವುದನ್ನು ನೋಡಬಹುದು. ನವರತ್ನ ಆಹಾರಗಳನ್ನು ತೋರಿಸಿದ ಬಳಿಕ ವಿಡಿಯೋ ಕೊನೆಗೊಳ್ಳುತ್ತದೆ.

ಚೈತ್ರಾ ದುರ್ಗಾ ಅಷ್ಟಮಿಯಂದು ಮಹಾಷ್ಟಮಿ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದೇವಿ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯು ಒಂಬತ್ತು ರಾತ್ರಿ ನಡೆಯುತ್ತದೆ. ಈ ಒಂಬತ್ತು ದಿನಗಳಂದು ದೇವಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ನಮ್ಮಲ್ಲಿ ದಸರಾ ಹಬ್ಬದ ಸಮಯದಲ್ಲಿ ನಡೆಯುವಂತೆ ಚೈತ್ರಾ ದುರ್ಗಾಷ್ಟಮಿಯಂದು ದೇವಿಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಈ ಬಾರಿ ಚೈತ್ರಾ ದುರ್ಗಾಷ್ಟಮಿ ಏಪ್ರಿಲ್‌ 16, 2024ರಂದು ಬಂದಿದೆ.

ಶಿಲ್ಪಾ ಶೆಟ್ಟಿ 1994ರಲ್ಲಿ ಅಕ್ಷಯ್‌ ಕುಮಾರ್‌ ಜತೆ ಮೇನ್‌ ಖಿಲಾಡಿ ಹೂ ಅನಾರಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಂದರ್ಭದಲ್ಲಿ ಅಕ್ಷಯ್‌ ಕುಮಾರ್‌ ಜತೆ ಡೇಟಿಂಗ್‌ನಲ್ಲಿದ್ದರು. ಆ ಸಮಯದಲ್ಲಿ ಶಿಲ್ಪಾ ಶೆಟ್ಟಿ ತನಗೆ ಅಕ್ಷಯ್‌ ಕುಮಾರ್‌ ಜತೆಗೆ ಇರುವ ಸಂಬಂಧದ ಕುರಿತು ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡುತ್ತಿದ್ದರು. ಇನ್ನೇನೂ ಇವರಿಬ್ಬರು ಎಂಗೇಜ್‌ಮೆಂಟ್‌ ಆಗಿ ಮದುವೆಯಾಗುವುದರಲ್ಲಿದ್ದರು. ಆದರೆ, ಆ ಸಮಯದಲ್ಲಿ ಅಕ್ಷಯ್‌ ಕುಮಾರ್‌ ಅವರು ಮದುವೆ ಬಳಿಕ ಶಿಲ್ಪಾ ಶೆಟ್ಟಿ ಸಿನಿಮಾ ನಟನೆ ಬಿಡಲು ಬಯಸಿದ್ದರು. ಇದಕ್ಕೆ ಶಿಲ್ಪಾ ಶೆಟ್ಟಿ ಒಪ್ಪಿರಲಿಲ್ಲ. ಇದಾದ ಬಳಿಕ ಇವರ ಸಂಬಂಧ ಮದುವೆ ತನಕ ಹೋಗಲಿಲ್ಲ. 2000ರಲ್ಲಿ ಇವರಿಬ್ಬರು ತಮ್ಮ ಸಂಭಂಧ ಕಡಿದುಕೊಂಡರು.

2009ರಲ್ಲಿ ಶಿಲ್ಪಾ ಶೆಟ್ಟಿಯು ರಾಜ್‌ ಕುಂದ್ರಾ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡರು. ಐಪಿಎಲ್‌ನ ಸಹ ಮಾಲೀಕರಾದ ರಾಜ್‌ ಕುಂದ್ರರ ಜತೆ ಅದೇ ವರ್ಷ ನವೆಂಬರ್‌ ತಿಂಗಳಲ್ಲಿ ವಿವಾಹವಾದರು. 2012ರಲ್ಲಿ ಶಿಲ್ಪಾ ಶೆಟ್ಟಿಗೆ ಗಂಡು ಮಗು ಜನಿಸಿತು. 2020ರ ಫೆಬ್ರವರಿ 15ರಂದು ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದರು. ಆ ಪುಟಾಣಿಯೇ ಈ ಶಮಿಶಾ.

IPL_Entry_Point