ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡದ ಪ್ರಚಂಡ ಕುಳ್ಳ ಇನ್ನಿಲ್ಲ; ದ್ವಾರಕೀಶ್ ಅಭಿನಯದ ಸಿನಿಮಾಗಳಿಂದ 5 ಕಾಮಿಡಿ ಸೀನ್‌ಗಳ ವಿಡಿಯೋ ಇಲ್ಲಿವೆ

ಕನ್ನಡದ ಪ್ರಚಂಡ ಕುಳ್ಳ ಇನ್ನಿಲ್ಲ; ದ್ವಾರಕೀಶ್ ಅಭಿನಯದ ಸಿನಿಮಾಗಳಿಂದ 5 ಕಾಮಿಡಿ ಸೀನ್‌ಗಳ ವಿಡಿಯೋ ಇಲ್ಲಿವೆ

ಕನ್ನಡ ಪ್ರಚಂಡ ಕುಳ್ಳ, ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರು ಇಂದು (ಏಪ್ರಿಲ್ 15) ನಿಧನರಾದರು. ಹಾಸ್ಯ ನಟರಾಗಿ ಅವರು ಮೂಡಿಸಿರುವ ಛಾಪು ಅವಿಸ್ಮರಣೀಯ. ಈ ಸನ್ನಿವೇಶದಲ್ಲಿ ದ್ವಾರಕೀಶ್ ಅಭಿನಯದ ಸಿನಿಮಾಗಳಿಂದ 5 ಕಾಮಿಡಿ ಸೀನ್‌ಗಳ ವಿಡಿಯೋ ನೋಡುವಾಸೆ ಇದ್ದರೆ ಇಲ್ಲಿವೆ ಆಯ್ದ ವಿಡಿಯೋಗಳು.

ದ್ವಾರಕೀಶ್ ಅಭಿನಯದ ಸಿನಿಮಾಗಳಿಂದ 5 ಕಾಮಿಡಿ ಸೀನ್‌: ಭಕ್ತ ಕುಂಬಾರ ಸಿನಿಮಾದಲ್ಲಿ ಗೋಪಿಯಾಗಿ ದ್ವಾರಕೀಶ್‌.
ದ್ವಾರಕೀಶ್ ಅಭಿನಯದ ಸಿನಿಮಾಗಳಿಂದ 5 ಕಾಮಿಡಿ ಸೀನ್‌: ಭಕ್ತ ಕುಂಬಾರ ಸಿನಿಮಾದಲ್ಲಿ ಗೋಪಿಯಾಗಿ ದ್ವಾರಕೀಶ್‌.

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ಹಿರಿಯ ಚಿತ್ರ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇಂದು (ಏಪ್ರಿಲ್ 16) ನಿಧನರಾದರು. ಅವರ ನೆನಪುಗಳ ಮೆರವಣಿಗೆ ಈಗ ಎಲ್ಲೆಡೆ ಪಸರಿಸಿದ್ದು, ಹಾಸ್ಯನಟರಾಗಿ ಮಿಂಚಿದ್ದ ಅವರ ನಟನೆಯೂ ಕಣ್ಕಟ್ಟುವಂತೆ ಇದೆ. ಕೆಲವು ಸಿನಿಮಾಗಳಲ್ಲಿ ದ್ವಾರಕೀಶ್ ಅವರ ಹಾಸ್ಯ ನಟನೆ ಸದಾ ನೆನಪಿಗೆ ಬರುವಂಥವು. ಅವುಗಳ ಪೈಕಿ ಕೆಲವು ದೃಶ್ಯಗಳನ್ನು ನೆನಪಿಸಿಕೊಳ್ಳವುದಕ್ಕೆ ಈ ಸಂದರ್ಭ ಸರಿಯಾದುದು.

ಟ್ರೆಂಡಿಂಗ್​ ಸುದ್ದಿ

1) ಭಕ್ತ ಕುಂಬಾರ ಸಿನಿಮಾದ “ಗೋಪಿ”ಯಾಗಿದ್ದ ದ್ವಾರಕೀಶ್

ಭಕ್ತ ಕುಂಬಾರ ಚಿತ್ರದಲ್ಲಿ ಗೋಪಿ ಪಾತ್ರದಲ್ಲಿ ನಟಿಸಿದ್ದ ದ್ವಾರಕೀಶ್ ಅವರ ಹಾಸ್ಯ ಅಭಿನಯ ಮನೋಜ್ಞವಾಗಿತ್ತು. ಇದರ ತುಣುಕು ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಈ ಸಿನಿಮಾದಲ್ಲಿ ಡಾ. ರಾಜಕುಮಾರ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಈ ಸಿನಿಮಾ 1974ರಲ್ಲಿ ತೆರೆ ಕಂಡಿತ್ತು.

2) ಪೊಲೀಸ್ ಪಾಪಣ್ಣ ಚಿತ್ರದಲ್ಲಿ ಲೋಕಜ್ಞಾನದೊಂದಿಗೆ ಕಾಫಿ ಕಾಮಿಡಿ

ದಾಸರಿ ನಾರಾಯಣ ರಾವ್ ನಿರ್ದೇಶನದ ಸಿನಿಮಾ ಪೊಲೀಸ್ ಪಾಪಣ್ಣ. ಇದು 1984ರಲ್ಲಿ ತೆರೆಕಂಡಿದೆ. ಇದರಲ್ಲಿ ಪೊಲೀಸ್ ಪಾಪಣ್ಣನಾಗಿ ದ್ವಾರಕೀಶ್ ಅಭಿನಯ ಮಂತ್ರಮುಗ್ಧಗೊಳಿಸುವಂತೆ ಇದೆ. ಪೊಲೀಸ್ ಪಾಪಣ್ಣ ಸಿನಿಮಾದಲ್ಲಿ ದ್ವಾರಕೀಶ್ ಅವರು ಮುಸುರಿ ಕೃಷ್ಣಮೂರ್ತಿ ಜೊತೆಗೂಡಿದ ಕೆಲವು ಸನ್ನಿವೇಶಗಳು ಹಾಸ್ಯಮಯವಾಗಿವೆ. ಅದರಲ್ಲಿ ಈ ಕಾಫಿ ಕಾಮಿಡಿ ದೃಶ್ಯವೂ ಒಂದು. ಪೊಲೀಸ್ ವ್ಯವಸ್ಥೆಯೊಳಗಿನ ಲೋಕಜ್ಞಾನದ ಪಾಠವೂ ಇದೆ. ಈ ದೃಶ್ಯಗಳಲ್ಲಿ ದ್ವಾರಕೀಶ್ ಅವರ ಮುಗ್ಧ ಅಭಿನಯ ಮನಗೆಲ್ಲುವಂತೆ ಇರುವುದು ವಿಶೇಷ.

3) ಹದ್ದಿನ ಕಣ್ಣು ಸಿನಿಮಾದಲ್ಲಿ ದೋಸೆ ದಾಮೋದರ

ಹದ್ದಿನ ಕಣ್ಣು ಸಿನಿಮಾ 1980ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಶ್ರೀನಾಥ್, ಮಂಜುಳಾ ಜೋಡಿ ಅಭಿನಯಿಸಿದೆ. ಈ ಚಿತ್ರದಲ್ಲಿ ದೋಸೆ ದಾಮೋದರನಾಗಿ ದ್ವಾರಕೀಶ್ ಹಾಸ್ಯದ ಹೊನಲು ಹರಿಸಿದ್ದಾರೆ. ಅದರ ವಿಡಿಯೋ ಈ ಕೆಳಗಿರುವುದು.

4) ಗುರು ಶಿಷ್ಯರು ಸಿನಿಮಾದಲ್ಲಿ ಶಿಷ್ಯ ನಂದೀಶ್ವರನಾಗಿ ದ್ವಾರಕೀಶ್

ಗುರು ಶಿಷ್ಯರು ಇಂದಿಗೂ ಜನ ನೆನಪಿಸಿಕೊಳ್ಳವು ದ್ವಾರಕೀಶ್ ಸಿನಿಮಾ. ಇದು 1981ರಲ್ಲಿ ತೆರೆಕಂಡಿತು. ಎಚ್. ಆರ್‌. ಭಾರ್ಗವ ನಿರ್ದೇಶನದ ಸಿನಿಮಾವನ್ನು ದ್ವಾರಕೀಶ್‌ ಚಿತ್ರ ಸಂಸ್ಥೆಯೇ ನಿರ್ಮಾಣ ಮಾಡಿತ್ತು. ಗುರು ಮತ್ತು 7 ಶಿಷ್ಯಂದಿರ ಕಥೆ ಇದಾಗಿದ್ದು, ವಿಷ್ಣುವರ್ಧನ್ ಮತ್ತು ಮಂಜುಳಾ ಜೋಡಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿತ್ತು. ಗುರು ಶಿಷ್ಯರ ಹಾಸ್ಯದ ಹೊನಲಿನ ತುಣಕು ಇಲ್ಲಿದೆ ನೋಡಿ.

5) ಸರ್ವರ್ ಸೋಮಣ್ಣ ಚಿತ್ರದಲ್ಲಿ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌

ಸರ್ವರ್ ಸೋಮಣ್ಣ ಚಿತ್ರ ಎಂದ ಕೂಡಲೇ ಜಗ್ಗೇಶ್ ನೆನಪಾಗುತ್ತಾರೆ. ಆದರೆ ಈ ಚಿತ್ರ ನಿರ್ಮಿಸಿದ್ದು ದ್ವಾರಕೀಶ್‌. ಅವರು ಇದರಲ್ಲಿ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮನ್ನು ತಾವೇ ಕನ್ನಡ ಚಿತ್ರರಂಗದ ಕುಳ್ಳ, ಕರ್ನಾಟಕದ ಕುಳ್ಳ ಎಂಬಿತ್ಯಾದಿ ವಿಶೇಷಣಗಳೊಂದಿಗೆ ಗುರುತಿಸಕೊಂಡು, ನಿಜ ಜೀವನದ ವಾಸ್ತವಗಳನ್ನು ಹಾಸ್ಯಮಿಶ್ರಿತ ವಿಡಂಬಿಸಿರುವುದು ಈ ಚಿತ್ರದ ವಿಶೇಷ. ಈ ಚಿತ್ರದಲ್ಲಿ ಜಗ್ಗೇಶ್, ದ್ವಾರಕೀಶ್‌, ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ 1993ರಲ್ಲಿ ತೆರೆಕಂಡಿತ್ತು.

ಜಗ್ಗೇಶ್ ಅವರು ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಕೇಳಿ ಬರುವ ಹಾಸ್ಯ ಸನ್ನಿವೇಶ ಈ ಕೆಳಗಿನ ತುಣುಕಿನಲ್ಲಿದ್ದು, ಭಾರಿ ಸೂಪರ್ ನನ್ ಮಗ ಕಣಯ್ಯ ನೀನು ಎಂಬ ಡೈಲಾಗ್ ಗಮನ ಸೆಳೆಯುತ್ತಿದೆ. ಇದಲ್ಲದೇ, ವಾಸ್ತವವನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪರಿಯೂ ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತದೆ. ಸ್ವಲ್ಪ ನಾಟಕೀಯವೆನಿಸಿದರೂ ಹಾಸ್ಯದ ಕಾರಣಕ್ಕೆ ಆ ನಾಟಕೀಯ ಭಾವ ಮರೆಯಾಗುತ್ತದೆ.

ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್‌ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್‌ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.

IPL_Entry_Point