ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಭಾಗ್ಯಾ ಹಾಲ್‌ ಟಿಕೆಟ್‌ ಕದ್ದಿದ್ದು ತಾಂಡವ್‌, ಮತ್ತೊಂದು ನಿಜ ಬಯಲು; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾ ಹಾಲ್‌ ಟಿಕೆಟ್‌ ಕದ್ದಿದ್ದು ತಾಂಡವ್‌, ಮತ್ತೊಂದು ನಿಜ ಬಯಲು; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 18ರ ಸಂಚಿಕೆ. ಭಾಗ್ಯಾ ಮುಂದೆ ದರ್ಪ ತೋರಲು ಹೋಗಿ ತಾಂಡವ್‌ ಮತ್ತೆ ಸಿಕ್ಕಿಬಿದ್ದಿದ್ದಾನೆ. ಪರೀಕ್ಷೆ ಬರೆಯಬಾರದು ಎಂದು ತಾಂಡವ್‌ ಕದ್ದಿದ್ದ ಹಾಲ್‌ ಟಿಕೆಟ್‌ ಅವನ ಪರ್ಸ್‌ನಿಂದ ಕೆಳಗೆ ಬಿದ್ದು ಅದು ಭಾಗ್ಯಾ ಕೈಗೆ ಸಿಕ್ಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 18ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 18ರ ಎಪಿಸೋಡ್‌ (PC: Colors Kannada)

Bhagyalakshmi Serial: ಭಾಗ್ಯಾ ಸಂಸಾರ ಹಾದಿ ತಪ್ಪಿದೆ. ಹೇಗಾದರೂ ಮಾಡಿ ಭಾಗ್ಯಾಳಿಂದ ದೂರ ಹೋಗಬೇಕು ಎಂದು ತಾಂಡವ್‌ ಮಾಸ್ಟರ್‌ ಪ್ಲಾನ್‌ ಮಾಡುತ್ತಿದ್ದರೆ , ಭಾಗ್ಯಾ ಮಾತ್ರ ಹೇಗಾದರೂ ಮಾಡಿ ನನ್ನ ಸಂಸಾರವನ್ನು ಉಳಿಸಿಕೊಳ್ಳಬೇಕು ಎಂದು ಹೆಣಗಾಡುತ್ತಿದ್ದಾಳೆ. ಭಾಗ್ಯಾ ಕಷ್ಟ ನೋಡಲಾಗದೆ ಮಾವ ಧರ್ಮರಾಜ್‌ ನನ್ನ ಮಗನನ್ನು ಬಿಟ್ಟು, ಇನ್ನಾದರೂ ನಿನ್ನ ಸಂತೋಷ ನೋಡಿಕೋ ಎಂದು ಸಲಹೆ ನೀಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಮಾವನ ಮಾತುಗಳನ್ನು ಕೇಳಿದ ಭಾಗ್ಯಾ ಶಾಕ್‌ ಆಗುತ್ತಾಳೆ. ಸಮಾಧಾನ ಮಾಡಿಕೊಳ್ಳುವ ಭಾಗ್ಯಾ, ಹೌದು ಇನ್ನು ಮುಂದಾದರೂ ನನ್ನ ಖುಷಿಯನ್ನು ನಾನು ನೋಡಿಕೊಳ್ಳಬೇಕು. ಆದರೆ ಮಾವ, ನನ್ನ ಖುಷಿ ಇರುವುದು ಈ ಸಂಸಾರದಲ್ಲೇ, ಬೇರೆ ಎಲ್ಲೂ ಅಲ್ಲ. ಬೆಳಗ್ಗೆ ಎದ್ದು ಮನೆ ಸ್ವಚ್ಛಗೊಳಿಸಬೇಕು, ಬಾಗಿಲಿಗೆ ರಂಗೋಲಿ ಹಾಕಬೇಕು. ಅತ್ತೆ ಮಾವ ಎದ್ದೇಳುವಷ್ಟರಲ್ಲಿ ಅವರಿಗೆ ಏನು ಬೇಕೋ ಅದನ್ನು ತಯಾರಿ ಮಾಡಬೇಕು. ಮಕ್ಕಳಿಗೆ ಇಷ್ಟವಾದ ಅಡುಗೆ ಮಾಡಿ ಬಡಿಸಬೇಕು. ಅವರಿಗೆ ನನ್ನ ಕೈಯಾರೆ ಹೆಣೆದ ಸ್ವೆಟರ್‌ ತೊಡಿಸಬೇಕು. ಇದೇ ನನ್ನ ಖುಷಿ. ನನ್ನ ಸಂಸಾದರಲ್ಲೇ ನಾನು ಖುಷಿ ಕಾಣುತ್ತೇನೆ. ಅದಕ್ಕಾಗಿ ನಾನು ಇಷ್ಟು ಹೋರಾಟ ಮಾಡುತ್ತಿದ್ದೇನೆ. ಅದರೆ ಯಾವುದೇ ಕಾರಣಕ್ಕೂ ಈ ಮನೆ ಬಿಟ್ಟು ಹೋಗುವುದಿಲ್ಲ ಎಂದು ತನ್ನ ಮನಸ್ಸಿನ ಆಸೆಯನ್ನು ಹೇಳಿಕೊಳ್ಳುತ್ತಾಳೆ.‌

ಭಾಗ್ಯಾ ಬಟ್ಟೆಗಳನ್ನು ಎಸೆಯುವ ತಾಂಡವ್‌

ಇತ್ತ ತಾಂಡವ್‌ ಶ್ರೇಷ್ಠಾಗೆ ಕರೆ ಮಾಡಿ ಸೆಲಬ್ರಿಟಿ ಶೆಫ್‌ ರೂಪಾಳಿಂದ ತನಗೆ ಆದ ಅವಮಾನವನ್ನು ಹೇಳಿಕೊಂಡು ನೀನು ಮಾಡುವ ಪ್ಲ್ಯಾನ್‌ಗಳೆಲ್ಲಾ ಹೀಗೆ ಎಂದು ರೇಗುತ್ತಾನೆ. ಹೇಗಾದರೂ ಮಾಡಿ ಭಾಗ್ಯಾಳನ್ನು ಮನೆಯಿಂದ ಹೊರ ಕಳಿಸಿದರೆ ನನಗೆ ನೆಮ್ಮದಿ, ನನ್ನ ಜೀವನದಲ್ಲಿ ಏನೆಲ್ಲಾ ಆಗುತ್ತಿದೆಯೋ ಅದೆಲ್ಲವೂ ಭಾಗ್ಯಾಳಿಂದ. ಅವಳು ನನ್ನ ಜೀವನದಿಂದ ಹೊರ ಹೋದರೆ ಎಲ್ಲವೂ ಸರಿ ಆಗುತ್ತದೆ ಎಂದುಕೊಳ್ಳುತ್ತಾನೆ. ಭಾಗ್ಯಾ ಬಟ್ಟೆಗಳು ತನ್ನ ಕಪಾಟಿನಲ್ಲಿ ಇರುವುದನ್ನು ನೆನಪಿಸಿಕೊಳ್ಳುವ ತಾಂಡವ್‌, ಮನೆ ಇಬ್ಭಾಗವಾದ ಮೇಲೂ ಅವಳ ಬಟ್ಟೆಗಳು ನನ್ನ ಕಪಾಟಿನಲ್ಲಿ ಏಕಿರಬೇಕು? ಇವರಿಗೆಲ್ಲಾ ಮನೆ ಭಾಗವಾಗುವುದು ಎಂದರೆ ಏನೆಂದು ತಿಳಿಸಿಕೊಡುತ್ತೇನೆ ಎಂದು ಭಾಗ್ಯಾ ಬಟ್ಟೆಗಳನ್ನು ತೆಗೆದುಕೊಂಡು ಬಂದು ಅವರಿರುವ ಭಾಗಕ್ಕೆ ಎಸೆಯುತ್ತಾನೆ.

ಇದನ್ನು ನೋಡಿದ ಸುನಂದಾ ಹಾಗೂ ಪೂಜಾ ಬೇಸರಗೊಳ್ಳುತ್ತಾರೆ. ಎಷ್ಟು ದಿನ ಹೀಗೆ ಮಾಡುತ್ತೀರಿ? ದ್ವೇಷ ಸಾಧಿಸುತ್ತಲೇ ಇರುತ್ತೀರಿ ಎಂದು ಕೇಳುತ್ತಾರೆ. ಅದೇ ಸಮಯಕ್ಕೆ ಕುಸುಮಾ, ಧರ್ಮರಾಜ್‌, ಭಾಗ್ಯಾ ಹಾಗು ಮಕ್ಕಳು ಅಲ್ಲಿಗೆ ಬರುತ್ತಾರೆ. ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಗೊಂದಲಕ್ಕೆ ಒಳಗಾಗುತ್ತಾರೆ. ನೀನು ಆದಷ್ಟು ಬೇಗ ನನ್ನ ಜೀವನದಿಂದ ಹೊರ ಹೋಗು. ಈ ಮನೆಯನ್ನು ಬಿಟ್ಟು ಹೋಗಲು ನಿನಗೆ ಏನು ಬೇಕು ಹೇಳು. ಒಡವೆ ಬೇಕಾ? ಹಣ ಬೇಕಾ? ನೀನು ಏನು ಕೇಳಿದರೂ ನಾನು ಕೊಡುತ್ತೇನೆ. ದಯವಿಟ್ಟು ನನ್ನ ಜೀವನದಿಂದ ಹೊರ ಹೋಗು ಎನ್ನುತ್ತಾನೆ.

ದರ್ಪ ತೋರಲು ಹೋಗಿ ಸಿಕ್ಕಿ ಬಿದ್ದ ತಾಂಡವ್

ನೀನು ಕೊಂಪೆಯಿಂದ ಬಂದು ಈ ಮನೆಯಲ್ಲಿ ಸುಖವಾಗಿ ಬದುಕಿದವಳು. ಮತ್ತೆ ಆ ಕೊಂಪೆಗೆ ಹೋಗಿ ಬದುಕಲು ಕಷ್ಟವಾಗಬಹುದು. ಹಾಗಾದರೂ ಎಷ್ಟು ದುಟ್ಟು ಬೇಕು ಕೇಳು ಕೊಡುತ್ತೇನೆ ಎಂದು ತನ್ನ ಜೇಬಿನಿಂದ ಹಣ, ಕ್ರೆಡಿಟ್‌ ಕಾರ್ಡ್‌ ಎಲ್ಲವನ್ನೂ ಭಾಗ್ಯಾ ಮುಂದೆ ಎಸೆಯುತ್ತಾನೆ. ತಾನು ಏನು ಮಾಡುತ್ತಿದ್ದೇನೆ ಎಂದು ಜ್ಞಾನವೇ ಇಲ್ಲದೆ ತಾಂಡವ್‌ ಅಂದು ತಾನು ಕದ್ದಿದ್ದ ಭಾಗ್ಯಾ ಹಾಲ್‌ ಟಿಕೆಟನ್ನೂ ಎಸೆಯುತ್ತಾನೆ. ಅದನ್ನು ತನ್ವಿ ನೋಡಿ, ಅಮ್ಮ ನಿನ್ನ ಹಾಲ್‌ ಟಿಕೆಟ್‌ ಎನ್ನುತ್ತಾಳೆ. ಅದನ್ನು ನೋಡುವ ಭಾಗ್ಯಾ ಹಾಗೂ ಮನೆ ಮಂದಿಯೆಲ್ಲಾ ಶಾಕ್‌ ಆಗುತ್ತಾರೆ. ನನ್ನ ಹಾಲ್‌ ಟಿಕೆಟ್‌ ನಿಮ್ಮ ಬಳಿ ಹೇಗೆ ಬಂತು. ಅದು ಕಳೆದುಹೋಗಿದ್ದಾ, ಕದ್ದಿದ್ದಾ ಎಂದು ದನಿಯೇರಿಸಿ ಕೇಳುತ್ತಾಳೆ.

ಭಾಗ್ಯಾ ಮುಂದೆ ದುರಹಂಕಾರ ತೋರಲು ಹೋದ ತಾಂಡವ್‌ ಸಿಕ್ಕಿಬಿದ್ದಿದ್ದಾನೆ. ತಪ್ಪನ್ನು ಒಪ್ಪಿಕೊಳ್ಳುತ್ತಾನಾ ಅಥವಾ ಮತ್ತೆ ದರ್ಪ ತೋರಲಿದ್ದಾನೋ ಎಂಬುದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

IPL_Entry_Point