ಕನ್ನಡ ಸುದ್ದಿ  /  ಮನರಂಜನೆ  /  Shilpa Shetty: ಸಲ್ಮಾನ್‌ ಖಾನ್‌ ಮನೆಗೆ ಶಿಲ್ಪಾ ಶೆಟ್ಟಿ, ತಾಯಿ ಸುನಂದ ಶೆಟ್ಟಿ ಭೇಟಿ; ಇಡಿ ರೈಡ್‌, ಗುಂಡಿನ ದಾಳಿ ಬಳಿಕದ ವಿದ್ಯಮಾನ

Shilpa Shetty: ಸಲ್ಮಾನ್‌ ಖಾನ್‌ ಮನೆಗೆ ಶಿಲ್ಪಾ ಶೆಟ್ಟಿ, ತಾಯಿ ಸುನಂದ ಶೆಟ್ಟಿ ಭೇಟಿ; ಇಡಿ ರೈಡ್‌, ಗುಂಡಿನ ದಾಳಿ ಬಳಿಕದ ವಿದ್ಯಮಾನ

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ತಾಯಿ ಸುನಂದ ಶೆಟ್ಟಿ ಸಲ್ಮಾನ್‌ ಖಾನ್‌ ಮನೆಗೆ ಭೇಟಿ ನೀಡಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾರ ಮನೆಗೆ ಇಡಿ ರೈಡ್‌ ಆದ ಬಳಿಕ, ಸಲ್ಮಾನ್‌ ಖಾನ್‌ ಮನೆ ಮುಂದೆ ಬಿಷ್ನೋಯ್‌ ಗ್ಯಾಂಗ್‌ನ ಗುಂಡಿನ ದಾಳಿಯಾದ ಬಳಿಕ ಈ ಭೇಟಿ ನಡೆದಿದೆ.

Shilpa Shetty: ಸಲ್ಮಾನ್‌ ಖಾನ್‌ ಮನೆಗೆ ಶಿಲ್ಪಾ ಶೆಟ್ಟಿ, ತಾಯಿ ಸುನಂದ ಶೆಟ್ಟಿ ಭೇಟಿ
Shilpa Shetty: ಸಲ್ಮಾನ್‌ ಖಾನ್‌ ಮನೆಗೆ ಶಿಲ್ಪಾ ಶೆಟ್ಟಿ, ತಾಯಿ ಸುನಂದ ಶೆಟ್ಟಿ ಭೇಟಿ

ಬೆಂಗಳೂರು: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಸಲ್ಮಾನ್‌ ಖಾನ್‌ಗೆ ಅವರದ್ದೇ ಆದ ಕಷ್ಟದ ದಿನಗಳಿವು. ಶಿಲ್ಪಾ ಶೆಟ್ಟಿ ಅವರ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ. ಪತಿ ರಾಜ್‌ ಕುಂದ್ರಾರ ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ವಿದ್ಯಮಾನ ಜರುಗಿದೆ. ಇತ್ತೀಚೆಗೆ ಸಲ್ಮಾನ್‌ ಖಾನ್‌ ಮನೆ ಮುಂದೆ ಬಿಷ್ಣೋಯ್‌ ಗ್ಯಾಂಗ್‌ನವರು ಶೂಟೌಟ್‌ ಮಾಡಿದ್ದಾರೆ. ಬಾಲಿವುಡ್‌ನ ಈ ಸೆಲೆಬ್ರಿಟಿಗಳು ಇದೀಗ ಪರಸ್ಪರ ಭೇಟಿಯಾಗಿದ್ದಾರೆ. ಶಿಲ್ಪಾ ಶೆಟ್ಟಿ ತನ್ನ ತಾಯಿ ಸುನಂದ ಶೆಟ್ಟಿ ಜತೆಗೆ ಸಲ್ಮಾನ್‌ ಖಾನ್‌ ಮನೆಗೆ ಭೇಟಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಲ್ಮಾನ್‌ ಖಾನ್‌ ಮನೆಗೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ

ಗುರುವಾರ ಪೇಪರಾಝೊಗಳು ಸಲ್ಮಾನ್‌ ಖಾನ್‌ ಮನೆಗೆ ಶಿಲ್ಪಾ ಶೆಟ್ಟಿ ಮತ್ತು ಅವರ ತಾಯಿ ಸುನಂದ ಶೆಟ್ಟಿ ಭೇಟಿ ನೀಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇವರಿಬ್ಬರು ತಮ್ಮ ವಿಲಾಸಿ ಕಾರಿನಿಂದ ಇಳಿದು ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಸಲ್ಮಾನ್‌ ಖಾನ್‌ ಮನೆಯಿದೆ. ಇವರ ಭೇಟಿಯ ಅಜೆಂಡಾ ಏನು ಎನ್ನುವುದು ತಿಳಿದುಬಂದಿಲ್ಲ. ಇವರಿಬ್ಬರು ತಮ್ಮ ಇತ್ತೀಚಿನ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಲ್ಮಾನ್‌ ಖಾನ್‌ ಮನೆಗೆ ಭೇಟಿ ನೀಡಿರಬಹುದು. ಇವರಿಬ್ಬರು ಹಲವು ದಶಕಗಳಿಂದ ಆತ್ಮೀಯರಾಗಿರುವುದರಿಂದ ಈ ಭೇಟಿ ನಡೆದಿರಬಹುದು.

ಶಿಲ್ಪಾ ಶೆಟ್ಟಿ ಮತ್ತು ಸಲ್ಮಾನ್‌ ಖಾನ್‌ ಅವರು ಔಜಾರ್ (1997), ಗರ್ವ್: ಪ್ರೈಡ್ ಅಂಡ್ ಹಾನರ್ (2004), ಫಿರ್ ಮಿಲೇಂಗೆ (2004), ಮತ್ತು ಶಾದಿ ಕರ್ಕೆ ಫಾಸ್ ಗಯಾ ಯಾರ್ (2006) ಮುಂತಾದ ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ.

ಸಮಸ್ಯೆಯೇನು?

ಸದ್ಯ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹೊಸ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಡಿಜಿಟಲ್‌ ಕರೆನ್ಸಿ ಬಿಟ್‌ಕಾಯಿನ್‌ ಮೂಲಕ ಹೂಡಿಕೆದಾರರ ನಿಧಿಯ ದುರುಪಯೋಗ ಪಡೆಸಿಕೊಂಡ ಪ್ರಕರಣವನ್ನು ಇಡಿ ತನಿಖೆ ಮಾಡುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ಪತಿ ರಾಜ್‌ ಕುಂದ್ರಾರಿಗೆ ಸೇರಿರುವ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಜುಹುವಿನಲ್ಲಿರುವ ಫ್ಲಾಟ್‌, ಷೇರುಗಳು, ವಸತಿ ಬಂಗಲೆ ಒಳಗೊಂಡಿದೆ. ಇವೆಲ್ಲರವೂ ರಾಜ್‌ ಕುಂದ್ರಾ ಹೆಸರಿನಲ್ಲಿವೆ. ಈ ಪ್ರಾಪರ್ಟಿಗಳನ್ನು ಫ್ರೀಜ್‌ ಮಾಡಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದೆಡೆ ಸಲ್ಮಾನ್‌ ಖಾನ್‌ ಮನೆ ಮುಂದೆ ಇತ್ತೀಚೆಗೆ ಶೂಟೌಟ್‌ ನಡೆದಿತ್ತು. ಇದಾದ ಬಳಿಕ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆಯ ಹೊರಗೆ ಗುಂಡಿನ ದಾಳಿ ಮಾಡಿದ್ದು ತಾನೇ ಎಂದು ಲಾರೆನ್ಸ್​ ಬಿಷ್ಣೋಯ್ ಸಹೋದರ ಅನ್ಮೋಲ್ ತಿಳಿಸಿದ್ದನು. ಭಾನುವಾರ ಮುಂಜಾನೆ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹೊಡೆದಿದ್ದರು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮುಂಜಾನೆ 4.51 ರ ಸುಮಾರಿಗೆ ಈ ಘಟನೆ ನಡೆದಿತ್ತು.

IPL_Entry_Point