ಕನ್ನಡ ಸುದ್ದಿ  /  ಮನರಂಜನೆ  /  Drama Juniors Season 5 Grand Finale ಹಣಾಹಣಿಗೆ ಇನ್ನೊಂದೇ ದಿನ ಬಾಕಿ; ಯಾವ ಪುಟಾಣಿ ಈ ಸಲದ ವಿನ್ನರ್‌?

Drama Juniors Season 5 Grand Finale ಹಣಾಹಣಿಗೆ ಇನ್ನೊಂದೇ ದಿನ ಬಾಕಿ; ಯಾವ ಪುಟಾಣಿ ಈ ಸಲದ ವಿನ್ನರ್‌?

ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ಸ್ ಸೀಸನ್-‌5 ಫಿನಾಲೆ ಹಂತ ತಲುಪಿದೆ. 14 ಪುಟಾಣಿಗಳಲ್ಲಿ ಸೀಸನ್‌ 5ರ ವಿಜೇತರು ಯಾರಾಗಲಿದ್ದಾರೆ ಎಂಬ ಕೌತುಕಕ್ಕೂ ಕ್ಷಣಗಣನೆ ಆರಂಭವಾಗಿದೆ.

Drama Juniors Season 5 Grand Finale ಹಣಾಹಣಿಗೆ ಇನ್ನೊಂದೇ ದಿನ ಬಾಕಿ; ಯಾವ ಪುಟಾಣಿ ಈ ಸಲದ ವಿನ್ನರ್‌?
Drama Juniors Season 5 Grand Finale ಹಣಾಹಣಿಗೆ ಇನ್ನೊಂದೇ ದಿನ ಬಾಕಿ; ಯಾವ ಪುಟಾಣಿ ಈ ಸಲದ ವಿನ್ನರ್‌?

Drama Juniors Season 5: ಕಳೆದ 20 ವಾರಗಳಿಂದ ಮನೆಮಂದಿಯನ್ನೆಲ್ಲ ಮನರಂಜಿಸುತ್ತಿದ್ದ, ಮುದ್ದು ಮಕ್ಕಳ ನೆಚ್ಚಿನ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್-‌5 ಫಿನಾಲೆ ಹಂತವನ್ನು ತಲುಪಿದೆ. 14 ಪುಟಾಣಿಗಳಲ್ಲಿ ಸೀಸನ್‌ 5ರ ವಿಜೇತರು ಯಾರಾಗಲಿದ್ದಾರೆ ಎಂಬ ಕೌತುಕಕ್ಕೂ ಕ್ಷಣಗಣನೆ ಆರಂಭವಾಗಿದೆ. ತಮ್ಮ ನಟನಾ ಪ್ರತಿಭೆಯ ಮೂಲಕವೇ ನಾಡಿನ ವೀಕ್ಷಕರ ಮನಗೆದ್ದ ಪುಟಾಣಿಗಳ ಎದೆಯಲ್ಲೂ ಇದೀಗ ಚಿಟ್ಟೆ ಹಾರಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

31 ಜಿಲ್ಲೆಗಳಿಂದ ಆಯ್ದು ತಂದ ಹತ್ತಾರು ಬಾಲ ಪ್ರತಿಭೆಗಳನ್ನು ನಿರಂತರವಾಗಿ ತಿದ್ದಿ ಮಾರ್ಗದರ್ಶನ ಮಾಡುವ ಮೂಲಕ‌, ಮಕ್ಕಳಲ್ಲಿರುವ ನಟನಾ ಪ್ರತಿಭೆಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿತ್ತು ಡ್ರಾಮಾ ಜೂನಿಯರ್ಸ್ ಸೀಸನ್ 5. ಈ ಬಾರಿ 200ಕ್ಕೂ ಅಧಿಕ ಸ್ಕಿಟ್‌ಗಳ ಮೂಲಕ ಇಡೀ ಕರುನಾಡನ್ನು ಮನರಂಜಿಸಿದ್ದರು ಪುಟಾಣಿಗಳು. ಹಾಸ್ಯ ನಾಟಕಗಳು, ಪೌರಾಣಿಕ ಕಥೆಗಳ ಜೊತೆ ಇತಿಹಾಸ ಪುರುಷರ ಕುರಿತ ಕಥೆಗಳೂ ಈ ಸಲದ ಹೈಲೈಟ್.

AR ತಂತ್ರಜ್ಞಾನದ ವೈಭವ

ನೆಲದ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹ ಕಲಾ ಪ್ರಕಾರಗಳನ್ನೂ ತೆರೆಯ ಮೇಲೆ ತಂದು ಜನರಿಗೆ ಪರಿಚಯಿಸಿದ ಖ್ಯಾತಿ ಡ್ರಾಮಾ ಜೂನಿಯರ್ಸ್‌ನದ್ದು. ಇದೆಲ್ಲದರ ಜತೆಗೆ ಭಾರತದ ಕಿರುತೆರೆ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಎಆರ್‌ ತಂತ್ರಜ್ಞಾನ ಬಳಸಿ ಸಂಚಿಕೆಯೊಂದನ್ನು ಚಿತ್ರೀಕರಿಸಿದ ರಿಯಾಲಿಟಿ ಶೋ ಎಂಬ ಖ್ಯಾತಿಯನ್ನು ಡ್ರಾಮಾ ಜೂನಿಯರ್ಸ್ ಸೀಸನ್- ‌5 ಪಡೆದಿದೆ. ಈ ಸೀಸನ್‌ನ ವಿಶೇಷತೆಗಳಲ್ಲೂ ಇದೂ ಒಂದಾಗಿದೆ.

ಕ್ರೇಜಿಸ್ಟಾರ್‌ ರವಿಚಂದ್ರನ್‌, ಹಿರಿಯ ನಟಿ ಲಕ್ಷ್ಮೀ ಮತ್ತು ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಜೊತೆ ವಿಶೇಷವಾಗಿ ಕಂಡವರು ಅರುಣ್‌ ಸಾಗರ್‌ ಮತ್ತು ರಾಜು ತಾಳಿಕೋಟೆ. ಈ ಹಿರಿಯ ರಂಗಕರ್ಮಿಗಳು ಡ್ರಾಮಾ ಜೂನಿಯರ್ಸ್‌ ವೇದಿಕೆಯ ಕಳೆಯನ್ನು ಹೆಚ್ಚಿಸಿದ್ದಲ್ಲದೆ, ಮಕ್ಕಳು ಅಭಿನಯದಲ್ಲಿ ಪರಿಣಿತಿ ಹೊಂದುವ ಕೆಲಸದಲ್ಲಿಯೂ ಸಹಕಾರಿಯಾದರು.

14 ಪುಟಾಣಿಗಳಲ್ಲಿ ಯಾರು ವಿನ್ನರ್‌

14 ಮಕ್ಕಳು 20 ವಾರಗಳ ಕಾಲ ಹಲವು ಪಾತ್ರಗಳನ್ನು ನಿರ್ವಹಿಸುವ ಮೂಲಕ, ಕಾರ್ಯಕ್ರಮವನ್ನು ವೀಕ್ಷಿಸುವ ಮನೆಮಂದಿಗೆಲ್ಲ ಮನರಂಜನೆಯ ಜೊತೆ ಮಾಹಿತಿಯನ್ನು ರವಾನಿಸಿದ್ದಾರೆ. ಇದೀಗ ಫಿನಾಲೆ ಹಂತಕ್ಕೆ ಬಂದಿರುವ ಡ್ರಾಮಾ ಜೂನಿಯರ್ಸ್‌ ಈ ಬಾರಿ ತನ್ನ ಗ್ರ್ಯಾಂಡ್‌ ಫಿನಾಲೆಯಲ್ಲಿ ಮತ್ತಷ್ಟು ರೋಚಕ ಕಥೆಗಳನ್ನು ನೋಡುಗರಿಗೆ ನೀಡಲಿದೆ.

ಈ ಭಾನುವಾರ ಮಹಾಸಂಚಿಕೆ

ಫಿನಾಲೆ ವೇದಿಕೆಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ ಆಲ್‌ ಟೈಮ್‌ ಹಿಟ್‌ ಪ್ರೇಮಲೋಕ ಚಿತ್ರವನ್ನು ರೀ ಕ್ರಿಯೇಟ್‌ ಮಾಡಿದ್ದಾರೆ. ಈ ಸಂಚಿಕೆಯನ್ನು ವೀಕ್ಷಿಸಲು ಚಿತ್ರರಂಗದ ಹಲವು ನಟ ನಟಿಯರ ಆಗಮಿಸಿ ಕಾರ್ಯಕ್ರಮದ ಮೆರುಗನ್ನೂ ಹೆಚ್ಚಿಸಿದ್ದಾರೆ. 14 ಮಕ್ಕಳ ಪೈಕಿ ಯಾರ ಪಾಲಿಗೆ ಡ್ರಾಮಾ ಜೂನಿಯರ್ಸ್‌ ಪಟ್ಟ ಎಂಬ ಪ್ರಶ್ನೆಗೆ ಏ. 21ರ ಭಾನುವಾರ ಸಂಜೆ 7ರಿಂದ 11ಗಂಟೆಯವರೆಗೆ ಮಹಾಸಂಚಿಕೆ ಪ್ರಸಾರವಾಗಲಿದೆ. ಅಲ್ಲಿಯೇ ಉತ್ತರ ಸಿಗಲಿದೆ.

IPL_Entry_Point