ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಭೂಮಿಕಾ ಕಾಲಿಗೆ ಗೌತಮ್‌ ಗೆಜ್ಜೆ ಕಟ್ಟಿದ್ರು, ಶಕುಂತಲಾ ಕಣ್ಣಿಗೆ ಬಿದ್ದ ಅಪೇಕ್ಷಾ ಪಾರ್ಥ, ಡೆಲಿವರಿ ಕೆಲಸ ಆರಂಭಿಸಿದ ಜೀವನ್‌

Amruthadhaare: ಭೂಮಿಕಾ ಕಾಲಿಗೆ ಗೌತಮ್‌ ಗೆಜ್ಜೆ ಕಟ್ಟಿದ್ರು, ಶಕುಂತಲಾ ಕಣ್ಣಿಗೆ ಬಿದ್ದ ಅಪೇಕ್ಷಾ ಪಾರ್ಥ, ಡೆಲಿವರಿ ಕೆಲಸ ಆರಂಭಿಸಿದ ಜೀವನ್‌

Amruthadhaare Serial Story: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಗುರುವಾರದ ಸಂಚಿಕೆಯಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಟ್ರಿಪ್‌ಗೆ ಹೊರಟ ಅಪೇಕ್ಷಾ ಮತ್ತು ಪಾರ್ಥನನ್ನು ಶಕುಂತಲಾದೇವಿ ನೋಡುತ್ತಾರೆ. ಇನ್ನೊಂದೆಡೆ ಭೂಮಿಕಾಳಿಗೆ ಡುಮ್ಮ ಸಾರ್‌ ಕಾಲ್ಗೆಜ್ಜೆ ಗಿಫ್ಟ್‌ ಮಾಡುತ್ತಾರೆ. ಮತ್ತೊಂದೆಡೆ ಡೆಲಿವರಿ ಬಾಯ್‌ ಆಗಿ ಪಾರ್ಥ ಕೆಲಸ ಆರಂಭಿಸುತ್ತಾನೆ.

ಅಮೃತಧಾರೆ ಧಾರಾವಾಹಿ ಕಥೆ
ಅಮೃತಧಾರೆ ಧಾರಾವಾಹಿ ಕಥೆ

ಅಮೃತಧಾರೆ ಧಾರಾವಾಹಿಯ ಗುರುವಾರದ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾರ ಪ್ರಪೋಸ್‌ ಪ್ರಯತ್ನ ಮುಂದುವರೆದಿದೆ. ಇನ್ನೊಂದೆಡೆ ಅಪ್ಪಿ ಮತ್ತು ಭಾವನತಮ್ಮ ಪಾರ್ಥ ಟ್ರಿಪ್‌ ಪ್ಲ್ಯಾನ್‌ ಮಾಡ್ತಾ ಇದ್ದಾರೆ. ಮತ್ತೊಂದೆಡೆ ಶಕುಂತಲಾದೇವಿ ಮತ್ತು ಅಶ್ವಿನಿ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತದೆ. ಅಶ್ವಿನಿಗೆ ಗೌತಮ್‌ ಕಡೆಯಿಂದ ಹಣ ಕಸಿಯಲು ಕಷ್ಟವಾಗುತ್ತಿದೆ. ತನ್ನ ಪತಿಗಾಗಿ ಹಣ ಕಬಲಿಸಲು ಪ್ರಯತ್ನಿಸುತ್ತಿದ್ದಾರೆ. ಪತಿ ವಿಲ್ಲಾ ಖರೀದಿಸಲು ಅಶ್ವಿನಿಗೆ ಹಣ ಬೇಕೆಂದು ಹೇಳುತ್ತಾಳೆ. ಆದರೆ, ಇದೇ ಸಮಯದಲ್ಲಿ ಹಣ ಪಡೆಯುವುದು ಕಷ್ಟವಾಗುತ್ತಿದೆ. ಏಕೆಂದರೆ ಚೆಕ್‌ಗಳ ಉಸ್ತುವಾರಿ ಭೂಮಿಕಾಳ ಕೈಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಭೂಮಿಕಾ ಮತ್ತು ಅಪರ್ಣ ಮಾತನಾಡುತ್ತಾರೆ. ಅಲ್ಲೂ ಲವ್‌ ಪ್ರಪೋಸ್‌ ಬಗ್ಗೆಯೇ ಚರ್ಚೆ. ಬೇಗ ಪ್ರಪೋಸ್‌ ಮಾಡಿ ಎಂದು ಅಪರ್ಣ ಸಲಹೆ ನೀಡುತ್ತಾಳೆ. "ಅವರೇ ಮೊದಲು ಪ್ರಪೋಸ್‌ ಮಾಡ್ತಾರೆ" ಎಂದುಕೊಳ್ಳುತ್ತಾಳೆ ಭೂಮಿಕಾ.

ಇನ್ನೊಂದೆಡೆ ಪಾರ್ಥ ತನ್ನ ಟ್ರಿಪ್‌ ಪ್ಲ್ಯಾನ್‌ಗೆ ಅನುಮತಿ ಪಡೆಯಲು ಶಕುಂತಲಾದೇವಿ ಬಳಿಗೆ ಬರುತ್ತಾನೆ. "ನೀನು ನನ್ನನ್ನೇ ಮರೆತೇ ಬಿಟ್ಟಿದ್ದಿ" ಎಂದು ಶಕುಂತಲಾದೇವಿ ಹೇಳುತ್ತಾಳೆ. "ಹೈದರಾಬಾದ್‌ಗೆ ಮದುವೆಗೆ ಹೋಗಬೇಕು. ಪರ್ಮಿಷನ್‌ ಕೊಡು" ಎನ್ನುತ್ತಾನೆ. ತಾಯಿ ಪರ್ಮಿಷನ್‌ ಕೊಡುತ್ತಾರೆ. "ನೀನು ಒಬ್ನೆ ನನಗೆ ಕಷ್ಟಕೊಡದೆ ಇರೋ ಮಗ. ಬೆಸ್ಟ್‌ ಮಗ" ಎಂದೆಲ್ಲ ಶಕುಂತಲಾದೇವಿ ಹೊಗಳುತ್ತಾಳೆ. ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ಭೇಟಿಯಾಗುತ್ತಾರೆ. ಇಬ್ಬರೂ ಸುಳ್ಳು ಹೇಳಿ ಬಂದಿರುತ್ತಾರೆ. ಇಬ್ಬರೂ ಊಟಿಗೆ ಪ್ರಯಾಣ ಹೊರಡುತ್ತಿದ್ದಾರೆ. ಆದರೆ, ಇವರಿಬ್ಬರು ಟ್ರಿಪ್‌ಗೆ ಶಾಪಿಂಗ್‌ ಮಾಡುವ ಸಮಯದಲ್ಲಿ ಶಕುಂತಲಾದೇವಿ ಮರೆಯಲ್ಲಿ ನೋಡುತ್ತಾರೆ. ಇವರಿಬ್ಬರ ಪ್ರೀತಿ ಶಕುಂತಲಾದೇವಿಗೆ ತಿಳಿಯುತ್ತದೆ.

ಇನ್ನೊಂದೆಡೆ ಜೀವನ್‌ ಕೆಲಸಕ್ಕೆ ಪ್ರಯತ್ನಿಸುತ್ತಿದ್ದಾನೆ. ಆತ ಫುಡ್‌ ಡೆಲಿವರಿ ಆಫೀಸ್‌ಗೆ ಬಂದಿರುತ್ತಾನೆ. "ತುಂಬಾ ಓದಿಕೊಂಡಿದ್ದೀರಾ, ಈ ಕೆಲಸ ಮಾಡಲು ಯಾಕೆ ಪ್ರಯತ್ನಿಸ್ತಿರಾ?" ಎಂದು ಕೇಳುತ್ತಾರೆ. "ಪಾರ್ಟ್‌ ಟೈಮ್‌ ಕೆಲಸ ಮಾಡಲು ಬಯಸಿದ್ದೇನೆ" ಎನ್ನುತ್ತಾನೆ. ಬ್ಯಾಗ್‌ ಮತ್ತು ಟೀಶರ್ಟ್‌ ಕೊಡುತ್ತಾರೆ. ಈ ಮೂಲಕ ದೊಡ್ಡ ಕಂಪನಿಯಲ್ಲಿ ಹುದ್ದೆಯಲ್ಲಿದ್ದ ಜೀವನ್‌ ಡೆಲಿವರಿ ಬಾಯ್‌ ಆಗುತ್ತಿದ್ದಾನೆ.

ಜೀವನ್‌ ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಆರಂಭಿಸುತ್ತಾನೆ. ಆದರೆ, ಆತ ಹೆಲ್ಮೆಟ್‌ ಹಾಕುವುದಿಲ್ಲ. ಟೋಪಿ ಹಾಕಿರುತ್ತಾನೆ. ಬಹುಶಃ ಮುಂದಿನ ದಿನಗಳಲ್ಲಿ ಮನೆಯವರ ಕಣ್ಣಿಗೆ ಈತ ಬೀಳುವ ಉದ್ದೇಶದಿಂದ ಡೈರೆಕ್ಟರ್‌ ಟೋಪಿ ಹಾಕಿಸಿರಬಹುದು.

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಾರೆ. ಕಾಶ್ಮಿರದಲ್ಲಿ ಟೂರಿಸಂನಲ್ಲಿ ಏಕೆ ಇನ್ವೆಸ್ಟ್‌ ಮಾಡಬಾರದು ಎಂದು ಗೌತಮ್‌ ಕೇಳುತ್ತಾನೆ. ಆತನೂ ಭೂಮಿಕಾಳ ಜತೆ ಟ್ರಿಪ್‌ ಹೋಗುವ ಪ್ಲ್ಯಾನ್‌ನಲ್ಲಿದ್ದಾನೆ. ಹೆಂಡ್ತಿಗೆ ಕಾಲ್ಜೆಜ್ಜೆ ಕೊಡು ಎಂದು ಆನಂದ್‌ ಸಲಹೆ ನೀಡುತ್ತಾನೆ. ಅದೇ ರೀತಿ ಗೆಜ್ಜೆ ಮನೆಗೆ ತರುತ್ತಾನೆ ಗೌತಮ್‌. ಕಾಫಿ ಕೊಡಲು ಬಂದ ಭೂಮಿಕಾಳಿಗೆ ಗೆಜ್ಜೆ ನೀಡುತ್ತಾನೆ. ಗಿಫ್ಟ್‌ ಬಾಕ್ಸ್‌ ನೋಡಿ ಭೂಮಿಕಾ ಖುಷಿಪಡುತ್ತಾಳೆ. "ಎಲ್ಲಾ ಹೆಣ್ಣು ಮಕ್ಕಳಿಗೂ ಗೆಜ್ಜೆ ಇಷ್ಟ" ಎಂದು ತಂದೆ ಅನ್ನುತ್ತಾನೆ. "ನನಗೆ ಇಷ್ಟ ಇಲ್ಲ" ಎನ್ನುತ್ತಾಳೆ. ಆದ್ರೆ ನೀವು ಪ್ರೀತಿಯಿಂದ ತಂದು ಕೊಟ್ಟಿದ್ದೀರಿ, ಹಾಗಾಗಿ ಹಾಕಿಕೊಳ್ಳುವೆ ಎನ್ನುತ್ತಾಳೆ. "ನಾನೇ ಗೆಜ್ಜೆ ಹಾಕಿದ್ರೆ ಏನೂ ಚೆನ್ನಾಗಿರುತ್ತದೆ. ಅವರತ್ರನ್ನೇ ಹಾಕಿಸ್ಕೋತೀನಿ" ಎಂದುಕೊಳ್ಳುತ್ತಾರೆ. ಗೆಜ್ಜೆ ಬೀಳಿಸುತ್ತಾಳೆ. ಗೌತಮ್‌ ಗೆಜ್ಜೆ ಹೆಕ್ಕಿಕೊಂಡು ಭೂಮಿಕಾಳ ಕಾಲಿಗೆ ಕಟ್ಟುತ್ತಾನೆ. ಇಷ್ಟು ಆಗುವಾಗ ಅಮೃತಧಾರೆ ಸೀರಿಯಲ್‌ ಶುಕ್ರವಾರಕ್ಕೆ ಮುಂದುವರೆದಿದೆ.

IPL_Entry_Point