ಕನ್ನಡ ಸುದ್ದಿ  /  ಮನರಂಜನೆ  /  ಮನೆ ಇಎಂಐ ಕಟ್ಟಲು ಹೆಣಗಾಡುತ್ತಿರುವ ಭಾಗ್ಯಾಗೆ ಮತ್ತೊಂದು ಹೊರೆ, ಸಾಲದ ಹಣ ವಾಪಸ್‌ ಕೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮನೆ ಇಎಂಐ ಕಟ್ಟಲು ಹೆಣಗಾಡುತ್ತಿರುವ ಭಾಗ್ಯಾಗೆ ಮತ್ತೊಂದು ಹೊರೆ, ಸಾಲದ ಹಣ ವಾಪಸ್‌ ಕೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ನಮ್ಮ ಸಂಬಂಧದ ಬಗ್ಗೆ ಶ್ರೇಷ್ಠಾ, ಭಾಗ್ಯಾಗೆ ಹೇಳಿದರೆ ಮುಂದೆ ಏನಾಗುವುದೋ ಎಂದು ತಾಂಡವ್ ಹೆದರುತ್ತಾನೆ. ಪೂಜಾ ಕೂಡಾ ಅಕ್ಕನ ಜೀವನ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾಳೆ. ಆದರೆ ಶ್ರೇಷ್ಠಾ ಲಕ್ಷ್ಮಿ ಮದುವೆ ಸಮಯದಲ್ಲಿ ತಾನು ನೀಡಿದ್ದ 2 ಲಕ್ಷ ರೂ ಹಣವನ್ನು ಭಾಗ್ಯಾ ಬಳಿ ವಾಪಸ್‌ ಕೇಳುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: colors Kannada)

ಭಾಗ್ಯಲಕ್ಷ್ಮೀ ಧಾರಾವಾಹಿ: ಪೂಜಾ ಜೊತೆ ಮಾತನಾಡಿದ ನಂತರ ಕೋಪಗೊಂಡ ಶ್ರೇಷ್ಠಾ, ಇಷ್ಟು ದಿನಗಳಿಂದ ಮುಚ್ಚಿಟ್ಟಿದ್ದ ಸತ್ಯವನ್ನು ನಿಮ್ಮ ಮನೆಯವರ ಮುಂದೆ ಹೇಳುವುದಾಗಿ ತಾಂಡವ್‌ ಮನೆಗೆ ಬರುತ್ತಾಳೆ. ಆದರೆ ಶ್ರೇಷ್ಠಾ ನಿಜ ಹೇಳಿದರೆ ಮುಂದೆ ಏನು ಸಮಸ್ಯೆ ಕಾದಿದೆಯೋ ಎಂದು ನೆನಪಿಸಿಕೊಂಡು ಪೂಜಾ ಹಾಗೂ ತಾಂಡವ್‌ ಭಯಗೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ನಾನು ಭಾಗ್ಯಾ ಜೊತೆ ಮಾತನಾಡಬೇಕು ಎಂದು ಆಕೆಗೆ ಕಾಯುವ ಶ್ರೇಷ್ಠಾ, ಏನು ಮಾತನಾಡುತ್ತಾಳೋ ಎಂದು ಪೂಜಾ, ತಾಂಡವ್‌ ಕಳವಳ ವ್ಯಕ್ತಪಡಿಸುತ್ತಾರೆ. ನಿನಗಾಗಿ ನಾನು ಕಾಯುತ್ತಿದ್ದೆ. ಇಷ್ಟು ದಿನಗಳ ಕಾಲ ನಾನು ಸುಮ್ಮನಿದ್ದೆ, ಆದರೆ ಇನ್ಮುಂದೆ ಸುಮ್ಮನಿರುವುದಿಲ್ಲ. ನಿನ್ನ ಪರಿಸ್ಥಿತಿ ಹೇಗೋ ಏನೋ ನನಗೆ ಗೊತ್ತಿಲ್ಲ. ಆದರೆ ನಾನು ಈಗ ನಿನಗೆ ಏನೋ ಕೇಳುತ್ತೇನೆ. ಅದನ್ನು ನೀನು ನನಗೆ ಕೊಡಬೇಕು, ಕೊಟ್ಟೇ ಕೊಡುತ್ತೀಯ ಎನ್ನುತ್ತಾಳೆ. ಶ್ರೇಷ್ಠಾ ಖಂಡಿತ ತಾಂಡವ್‌ನನ್ನು ನನಗೆ ಕೊಡುವಂತೆ ಕೇಳುತ್ತಾಳೆ ಎಂದುಕೊಂಡ ಪೂಜಾಗೆ ಶ್ರೇಷ್ಠಾ ಮಾತುಗಳನ್ನು ಕೇಳಿ ಶಾಕ್‌ ಆಗುತ್ತದೆ. ಲಕ್ಷ್ಮಿ ಮದುವೆ ಸಮಯದಲ್ಲಿ ನನ್ನಿಂದ ಪಡೆದಿದ್ದ 2 ಲಕ್ಷ ರೂ. ನನಗೆ ಈಗ ಬೇಕು ಎಂದು ಕೇಳುತ್ತಾಳೆ.

2 ಲಕ್ಷ ಸಾಲ ವಾಪಸ್‌ ಕೇಳಿದ ಶ್ರೇಷ್ಠಾ

ಜನರು ದುಡ್ಡು ಪಡೆದು ಸುಮ್ಮನಾಗಿಬಿಡುತ್ತಾರೆ. ಆದರೆ ಈಗ ನನಗೆ ಆ ಹಣ ಬೇಕು, ನನ್ನ ಮದುವೆಗೆ ಆ ದುಡ್ಡಿನ ಅವಶ್ಯಕತೆ ಇದೆ. ಆದಷ್ಟು ಬೇಗ ನನಗೆ ಆ 2 ಲಕ್ಷ ವಾಪಸ್‌ ಕೊಡು ಭಾಗ್ಯಾ ಎಂದು ಶ್ರೇಷ್ಠಾ ಹೇಳುತ್ತಾಳೆ. ನನಗೆ ಸ್ವಲ್ಪ ಸಮಯ ಕೊಡಿ ಖಂಡಿತ ನಿಮ್ಮ ದುಡ್ಡನ್ನು ವಾಪಸ್‌ ಕೊಡುತ್ತೇನೆ ಎಂದು ಭಾಗ್ಯಾ ಶ್ರೇಷ್ಠಾಗೆ ಮನವಿ ಮಾಡುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿದ ತಾಂಡವ್‌ ಖುಷಿಯಾಗುತ್ತಾನೆ. 

ಸದ್ಯ ನನ್ನ ಬಗ್ಗೆ ಹೇಳಲಿಲ್ಲ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ 100 ವರ್ಷ ಆಯಸ್ಸು, ಭಾಗ್ಯಾ ಎಷ್ಟೇ ದುಡಿದರೂ 2 ಲಕ್ಷ ರೂ. ಹೊಂದಿಸಲು ಸಾಧ್ಯವೇ ಇಲ್ಲ. ಶ್ರೇಷ್ಠಾ ದುಡ್ಡು ಕೇಳಿ ಒಳ್ಳೆ ಕೆಲಸ ಮಾಡಿದಳು ಎಂದುಕೊಳ್ಳುತ್ತಾನೆ. ಇತ್ತ ಪೂಜಾ ಈ ವಿಚಾರ ಕೇಳಿ ಬೇಸರಗೊಳ್ಳುತ್ತಾಳೆ. ಲಕ್ಷ್ಮಿ ಮದುವೆ ಸಮಯದಲ್ಲಿ ನಾನು ದುಡ್ಡು ಕದ್ದಿದ್ದರಿಂದಲೇ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ ಎಂದು ಮನಸ್ಸಿನಲ್ಲೇ ನೊಂದುಕೊಳ್ಳುತ್ತಾಳೆ. 

ಭಾಗ್ಯಾಳನ್ನು ಹೀಯಾಳಿಸುವ ತಾಂಡವ್‌

ಭಾಗ್ಯಾ, ಲಕ್ಷ್ಮಿ ಮದುವೆ ಸಮಯದಲ್ಲಿ ಶ್ರೇಷ್ಠಾ ಬಳಿ ದುಡ್ಡು ಪಡೆದಿರುವ ವಿಚಾರ ಕೇಳಿ ಕುಸುಮಾ ಕೋಪಗೊಳ್ಳುತ್ತಾಳೆ. ಆಗ ಅವಳ ಬಳಿ ಏಕೆ ಕೇಳಬೇಕಿತ್ತು? ನಮ್ಮ ಬಳಿ ಕೇಳಬೇಕಿತ್ತು ಎನ್ನುತ್ತಾಳೆ. ಕುಸುಮಾ, ಭಾಗ್ಯಾ ಮಾತುಗಳನ್ನು ಕೇಳಿ ತಾಂಡವ್‌ ಖುಷಿಯಾಗುತ್ತಾನೆ. ಈ ವಿಚಾರದ ಮೂಲಕವಾದರೂ ಅತ್ತೆ ಸೊಸೆ ನಡುವೆ ಮನಸ್ತಾಪ ಬರುತ್ತದೆ ಎಂದು ಖುಷಿಯಾಗುತ್ತಾನೆ. ಮರುದಿನ ಧರ್ಮರಾಜ್‌ ಕುಸುಮಾಗೆ ಕಾಫಿ ಕೊಡಲು ಬಂದ ಭಾಗ್ಯಾಳನ್ನು ನೋಡಿ ತಾಂಡವ್‌ ಹೀಯಾಳಿಸುತ್ತಾನೆ. ಆ 2 ಲಕ್ಷ ಹಣ ಹೇಗೆ ತೀರಿಸುತ್ತೀಯ? ನಾನು ನಿನಗೆ 20 ಲಕ್ಷ ರೂ. ಕೊಡುತ್ತೇನೆ. ಆ ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕು ಎನ್ನುತ್ತಾನೆ.

ತಾಂಡವ್‌ ಅಂದುಕೊಂಡಂತೆ ಕುಸುಮಾ ನಿಜವಾಗಲೂ ಭಾಗ್ಯಾ ಮೇಲೆ ಕೋಪಗೊಳ್ಳುತ್ತಾಳಾ, ಸಾಲ ತೀರಿಸಲು ಭಾಗ್ಯಾ ಏನು ದಾರಿ ಹುಡುಕುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point