ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಗೌತಮ್‌ ಹುಟ್ಟುಹಬ್ಬಕ್ಕೆ ಭೂಮಿಕಾ ತವರಿನ ನೆಕ್ಲೆಸ್‌ ಧರಿಸಬೇಕಂತೆ; ಪ್ರೇಮಧಾರೆಗೆ ಚಿಂತೆ ತರುವುದೇ ಗಿರವಿಗಿಟ್ಟ ಬಂಗಾರ

Amruthadhaare: ಗೌತಮ್‌ ಹುಟ್ಟುಹಬ್ಬಕ್ಕೆ ಭೂಮಿಕಾ ತವರಿನ ನೆಕ್ಲೆಸ್‌ ಧರಿಸಬೇಕಂತೆ; ಪ್ರೇಮಧಾರೆಗೆ ಚಿಂತೆ ತರುವುದೇ ಗಿರವಿಗಿಟ್ಟ ಬಂಗಾರ

Amruthadhaare Serial Story: ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್‌ ದಿವಾನ್‌ ಹುಟ್ಟುಹಬ್ಬದ ಸಂಭ್ರಮ ತುಂಬಿತುಳುಕಾಡುತ್ತಿದೆ. ಇನ್ನೊಂದೆಡೆ ಜೀವನ್‌ಗಾಗಿ ಭೂಮಿಕಾ ತವರುಮನೆಯ ಒಡವೆಗಳನ್ನು ಗಿರವಿಗಿಟ್ಟಿದ್ದಾಳೆ. ಆ ಒಡವೆಯನ್ನು ಹುಟ್ಟುಹಬ್ಬದಂದು ಧರಿಸಬೇಕೆಂದು ಹೇಳಿದಾಗ ಭೂಮಿಕಾಳಿಗೆ ಕಸಿವಿಸಿಯಾಗುತ್ತದೆ.

ಗೌತಮ್‌ ಹುಟ್ಟುಹಬ್ಬಕ್ಕೆ ಭೂಮಿಕಾ ತವರಿನ ನೆಕ್ಲೆಸ್‌ ಧರಿಸಬೇಕಂತೆ
ಗೌತಮ್‌ ಹುಟ್ಟುಹಬ್ಬಕ್ಕೆ ಭೂಮಿಕಾ ತವರಿನ ನೆಕ್ಲೆಸ್‌ ಧರಿಸಬೇಕಂತೆ

Amruthadhaare Serial Yesterday Episode: ಗೌತಮ್‌ ಆನಂದ್‌ಗೆ ಕಾಲ್‌ ಮಾಡಿ ಇಂದು ನನ್ನ ಬರ್ತ್‌ಡೇ ಎಂದು ಹೇಳಿದಾಗ ಆನಂದ್‌ ವಿಷ್‌ ಮಾಡುತ್ತಾನೆ. ಯಾರೂ ವಿಷ್‌ ಮಾಡಿಲ್ಲ, ನೀನೂ ವಿಷ್‌ ಮಾಡಿಲ್ಲ ಎನ್ನುತ್ತಾನೆ. ಭೂಮಿಕಾ ಅವರೂ ಏನಾದ್ರೂ ಸರ್‌ಪ್ರೈಸ್‌ ಕೊಟ್ಟಿಲ್ಲ ಎಂದು ಗೌತಮ್‌ ಅವಲತ್ತುಕೊಳ್ಳುತ್ತಾನೆ. ಇನ್ನೊಂದೆಡೆ ಗೌತಮ್‌ಗೆ ಶಕುಂತಲಾದೇವಿ ಮತ್ತು ಬಾವ ಹುಟ್ಟುಹಬ್ಬದ ವಿಷ್‌ ತಿಳಿಸುತ್ತಾರೆ. ಶಕುಂತಲಾಳ ಬಳಿಯೂ ಭೂಮಿಕಾಳಿಗೆ ಹುಟ್ಟುಹಬ್ಬದ ವಿಷಯ ಹೇಳಿಲ್ವ ಎಂದು ಕೇಳುತ್ತಾನೆ. ಈತನ ಚಡಪಡಿಕೆ ನೋಡಿ ಅವರಿಗೆ ಅಸೂಯೆಯಾಗುತ್ತದೆ. ಇನ್ನೊಂದೆಡೆ "ಗೌತಮ್‌ಗಾಗಿ ಸರ್‌ಪ್ರೈಸ್‌ ಪಾರ್ಟಿ ರೆಡಿ ಮಾಡ್ತಿನಿ" ಎಂದು ಭೂಮಿಕಾ ಶಕುಂತಲಾದೇವಿಗೆ ಹೇಳುತ್ತಾಳೆ. ಈ ಮೂಲಕ ಶಕುಂತಲಾದೇವಿಗೆ ಹೊಟ್ಟೆ ಉರಿಸುವಂತಹ ಕೆಲವು ಮಾತುಗಳನ್ನು ಹೇಳುತ್ತಾಳೆ. ಇದಾದ ಬಳಿಕ ಅಪೇಕ್ಷಾಳಿಗೆ ಶಕುಂತಲಾ ಕಾಲ್‌ ಮಾಡುತ್ತಾಳೆ. ಇನ್ನಷ್ಟು ಸಾಕ್ಷಿಯನ್ನು ಕಲೆ ಹಾಕಬೇಕು ಅಲ್ವ ಎಂದು ಶಕುಂತಲಾದೇವಿ ಹೇಳುತ್ತಾಳೆ. ಬರ್ತ್‌ಡೇಯಂದು ಅಪೇಕ್ಷಾ ಮತ್ತು ಪಾರ್ಥ ಇನ್ನಷ್ಟು ಕ್ಲೋಸ್‌ ಆಗುವಂತೆ ಮಾಡಿ ಅದನ್ನು ಗೌತಮ್‌ ನೋಡುವಂತೆ ಮಾಡಿ ಅಕ್ಕನ ಕೈಯಿಂದ ಭೇಷ್‌ ಎನಿಸಿಕೊಳ್ಳುವೆ ಎಂದು ಮನೆಹಾಳ ಮಾವ ಯೋಚಿಸುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಅಪೇಕ್ಷಾಳಿಗೆ ಶಕುಂತಲಾ ಫೋನ್‌ ಮಾಡುತ್ತಾರೆ. "ಎಲ್ಲಿ ಇತ್ತೀಚೆಗೆ ನನ್ನ ಮನೆ ಕಡೆಗೆ ಬರೋದೇ ಇಲ್ಲ" ಎನ್ನುತ್ತಾಳೆ. ಭಾವನ ಬರ್ತ್‌ಡೇ ಅಲ್ವ, ನೀನು ಬರಬೇಕು ಎನ್ನುತ್ತಾಳೆ. ಯಾವ ಸಂಕೋಚ, ಮುಜುಗರ ಇಟ್ಟುಕೊಳ್ಳದೆ ಬಾ ಎನ್ನುತ್ತಾಳೆ. ಅಪೇಕ್ಷಾಳಿಗೂ ಖುಷಿಯಾಗಿ ಬರ್ತಿನಿ ಅನ್ನುತ್ತಾಳೆ. "ಸುನಾಮಿ ಏಳುವ ಮೊದಲು ಸಮುದ್ರ ಶಾಂತವಾಗಿರುತ್ತದೆ ಎಂದು ಅಪೇಕ್ಷಾಳಿಗೆ ಗೊತ್ತಿಲ್ಲ" ಎಂದು ಶಕುಂತಲಾದೇವಿಯ ಸ್ವಗತ ಇರುತ್ತದೆ. ಅಪೇಕ್ಷಾ ಭಾವನತಮ್ಮನಿಗೆ ಕಾಲ್‌ ಮಾಡಿ ಖುಷಿಯಿಂದ ಈ ವಿಷಯ ತಿಳಿಸುತ್ತಾಳೆ. "ನಮ್ಮ ವಿಷಯ ತಿಳಿದಿರಬಹುದಾ ಎಂದು ಟೆನ್ಷನ್‌ ಆಗಿದೆ" ಎಂದುಹೇಳುತ್ತಾಳೆ. ಪಾರ್ಥ ಒಂದಿಷ್ಟು ಖುಷಿಯ ಮಾತು ಹೇಳುತ್ತಾನೆ.

ಭೂಮಿಕಾಳಿಗೆ ಆನಂದ್‌ ಕಾಲ್‌ ಮಾಡುತ್ತಾನೆ. ಒಂದು ಸಹಾಯ ಬೇಕಿತ್ತು ಎನ್ನುತ್ತಾನೆ. "ನನ್ನ ಹುಟ್ಟುಹಬ್ಬವನ್ನು ಮರೆತುಬಿಟ್ಟಿದ್ದಾರೆ. ಯಾರೋ ಕೇರ್‌ ಮಾಡ್ತಿಲ್ಲ ಎಂದು ಗೌತಮ್‌ ಚಡಪಡಿಸ್ತಾ ಇದ್ದಾನೆ" ಎಂದು ಗೌತಮ್‌ನ ಕಥೆಯನ್ನು ಹೇಳುತ್ತಾನೆ. "ಒಳಗೊಳಗೆ ಒದ್ದಾಡೋ ಕಷ್ಟ ಗೊತ್ತಾಗಲಿ" ಎಂದು ಹೇಳುತ್ತಾಳೆ. "ಹುಟ್ಟುಹಬ್ಬಕ್ಕೆ ಯಾರೂ ಕೇಕ್‌ ಕಟ್‌ ಮಾಡಿಸಿಲ್ಲ ಎಂದು ಬೇಸರದಲ್ಲಿದ್ದಾನೆ" ಎಂದು ಹೇಳುತ್ತಾನೆ. ಸಂಜೆಯವರೆಗೆ ಕಾಯಲಿ ಎನ್ನುತ್ತಾಳೆ ಭೂಮಿಕಾ. ಈ ಸಂಭಾಷಣೆಯ ವಿಡಿಯೋ ಕೆಳಗಿದೆ ನೋಡಿ.

ಇನ್ನೊಂದೆಡೆ ಗೌತಮ್‌ ಟೆನ್ಷನ್‌ನಲ್ಲಿ ಕುಳಿತಿದ್ದಾನೆ. ಆಗ ಅಲ್ಲಿಗೆ ಭೂಮಿಕಾ ಬಂದು "ಹ್ಯಾಪಿ ಬರ್ತ್‌ಡೇ" ಎಂದು ಕೇಕ್‌ ತರುತ್ತಾಳೆ. ಹೇಗಿದೆ ಸರ್‌ಪ್ರೈಸ್‌ ಎಂದು ಕೇಳುತ್ತಾಳೆ. ಕೇಕ್‌ ನೋಡಿ ಗೌತಮ್‌ ಮುಖ ಖುಷಿಯಿಂದ ನಳಿದಾಡುತ್ತದೆ. ಹ್ಯಾಪಿ ಬರ್ತ್‌ಡೇ ಟು ಯು ಎಂದು ವಿಷ್‌ ಮಾಡುತ್ತಾಳೆ. ಗೌತಮ್‌ ಬಾಯಿಗೆ ಕೇಕ್‌ ನೀಡುತ್ತಾಳೆ. ನಾನು ಇಷ್ಟು ವರ್ಷ ಹುಟ್ಟುಹಬ್ಬವನ್ನು ಬೇರೆ ಕಡೆ ಸೆಲೆಬ್ರೆಷನ್‌ ಮಾಡ್ತಾ ಇದ್ದೆ. ಸಿಂಪಲ್‌ ಆಗಿದ್ದರೂ ಸ್ಪೆಷಲ್‌ ಆಗಿದೆ ಎನ್ನುತ್ತಾನೆ. "ಸಂಜೆ ನಿಮಗಾಗಿ ಸರ್‌ಪ್ರೈಸ್‌ ಪಾರ್ಟಿ ಇದೆ" ಎನ್ನುತ್ತಾಳೆ. ಸಂಜೆಯ ಪಾರ್ಟಿಗೆ ನೆಕ್ಲೆಸ್‌ ಹಾಕಿ, ನಿಮ್ಮ ಮನೆಯಲ್ಲಿ ಕೊಟ್ಟದ್ದು ಎಂದಾಗ ಭೂಮಿಕಾಳಿಗೆ ಟೆನ್ಷನ್‌ ಆಗುತ್ತಾಳೆ. ಏಕೆಂದರೆ, ಆ ನೆಕ್ಲೆಸ್‌ ಅನ್ನು ಬ್ಯಾಂಕ್‌ನಲ್ಲಿ ಗಿರವಿ ಇಟ್ಟಿರುತ್ತಾಳೆ. ಈ ಮೂಲಕ ಬರ್ತ್‌ಡೇ ಪಾರ್ಟಿಯ ಖುಷಿಯಲ್ಲೂ ಭೂಮಿಕಾಳಿಗೆ ಆತಂಕವಾಗುತ್ತದೆ. ಭೂಮಿಕಾ ಟೆನ್ಷನ್‌ನಲ್ಲಿರುವಾಗ ಮಲ್ಲಿ ಬರುತ್ತಾಳೆ. "ನೀವು ಯಾಕೆ ಸಪ್ಪೆಯಾಗಿದ್ದೀರಿ" ಎಂದು ಕೇಳುತ್ತಾಳೆ. ಏನೂ ಇಲ್ಲ ಎನ್ನುತ್ತಾಳೆ. ಒಂದಿಷ್ಟು ಆತ್ಮೀಯ ಮಾತುಗಳು ನಡೆಯುತ್ತವೆ. ಇದೇ ಸಮಯದಲ್ಲಿ ಮಲ್ಲಿ ಗೌತಮ್‌ಗೆ ಹೆಸರು ಬೇಳೆ ಪಾಯಸ ಮಾಡಿ ನೀಡುತ್ತಾಳೆ. ಗೌತಮ್‌ಗೆ ಸಖತ್‌ ಖುಷಿಯಾಗುತ್ತದೆ. ಒಟ್ಟಾರೆ ಮುಂದಿನ ಸಂಚಿಕೆಯಲ್ಲಿ ಹುಟ್ಟುಹಬ್ಬದ ಸೆಲೆಬ್ರೆಷನ್‌ ಗ್ರ್ಯಾಂಡ್‌ ಆಗಿರುವ ಸೂಚನೆಯಿದೆ.

IPL_Entry_Point