ಕನ್ನಡ ಸುದ್ದಿ  /  ಮನರಂಜನೆ  /  Ntr 30: ʼಎನ್‌ಟಿಆರ್‌30ʼ ಸಿನಿಮಾಕ್ಕೆ ಹಾಲಿವುಡ್‌ ಆಕ್ಷನ್‌ ಕೊರಿಯೊಗ್ರಾಫರ್‌ ಎಂಟ್ರಿ

NTR 30: ʼಎನ್‌ಟಿಆರ್‌30ʼ ಸಿನಿಮಾಕ್ಕೆ ಹಾಲಿವುಡ್‌ ಆಕ್ಷನ್‌ ಕೊರಿಯೊಗ್ರಾಫರ್‌ ಎಂಟ್ರಿ

NTR 30: ಜೂನಿಯರ್‌ ಎನ್‌ಟಿಆರ್‌ ನಟನೆಯ ಕೊರಟಾಲ ಶಿವ ನಿರ್ದೇಶನದ ʼಎನ್‌ಟಿಆರ್‌30ʼ ಚಿತ್ರದಿಂದ ಹೊಸದೊಂದು ಅಪ್‌ಡೇಟ್‌ ಸಿಕ್ಕಿದೆ. ಚಿತ್ರದ ಆಕ್ಷನ್‌ ದೃಶ್ಯಗಳ ಸಂಯೋಜನೆಗಾಗಿ ಹಾಲಿವುಡ್‌ನ ಖ್ಯಾತ ಆಕ್ಷನ್‌ ಕೊರಿಯೊಗ್ರಾಫರ್‌ ಕೆನ್ನಿ ಬೇಟ್ಸ್‌ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಎನ್‌ಟಿಆರ್‌ 30 ಸಿನಿಮಾ ತಂಡದೊಂದಿಗೆ ಕೆನ್ನಿ ಬೇಟ್ಸ್
ಎನ್‌ಟಿಆರ್‌ 30 ಸಿನಿಮಾ ತಂಡದೊಂದಿಗೆ ಕೆನ್ನಿ ಬೇಟ್ಸ್

ಆರ್‌ಆರ್‌ಆರ್‌ ಸಿನಿಮಾದ ಯಶಸ್ಸಿನ ಬಳಿಕ ಜೂನಿಯರ್‌ ಎನ್‌ಟಿಆರ್‌ ಗ್ಲೋಬಲ್‌ ಸ್ಟಾರ್‌ ಎನ್ನಿಸಿಕೊಂಡಿದ್ದಾರೆ. ಆರ್‌ಆರ್‌ಆರ್‌ ಸಿನಿಮಾ ವಿಶ್ವ ಮಟ್ಟದಲ್ಲಿ ಹಿಟ್‌ ಆದ ಬಳಿಕ ಅಭಿಮಾನಿಗಳಲ್ಲಿ ಎನ್‌ಟಿಆರ್‌ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ.

ಸದ್ಯ ಟಾಲಿವುಡ್‌ ಯಂಗ್‌ ಟೈಗರ್‌ ಎನ್‌ಟಿಆರ್‌, ಕೊರಟಾಲ ಶಿವ ನಿರ್ದೇಶನದ ʼಎನ್‌ಟಿಆರ್‌30ʼ ಸಿನಿಮಾದಲ್ಲಿ ನಟಿಸಲಿದ್ದು, ಇದು ಎನ್‌ಟಿಆರ್‌ ನಟನೆಯ 30ನೇ ಸಿನಿಮಾವಾಗಿದೆ. ಚಿತ್ರಕ್ಕೆ ಶೀರ್ಷಿಕೆ ಇನ್ನೂ ಅಂತ್ಯವಾಗದ ಕಾರಣ ಎನ್‌ಟಿಆರ್‌ 30 ಎಂದು ಕರೆಯಲಾಗುತ್ತಿದೆ.

ಈ ಚಿತ್ರದಿಂದ ಈಗ ಹೊಸದೊಂದು ಅಪ್‌ಡೇಟ್‌ ಹೊರ ಬಿದಿದ್ದೆ. ಅದೇನೆಂದರೆ ಚಿತ್ರದ ಆಕ್ಷನ್‌ ದೃಶ್ಯಗಳ ಸಂಯೋಜನೆಗಾಗಿ ಹಾಲಿವುಡ್‌ನ ಖ್ಯಾತ ಆಕ್ಷನ್‌ ಕೊರಿಯೊಗ್ರಾಫರ್‌ ಕೆನ್ನಿ ಬೇಟ್ಸ್‌ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಕೊರಟಾಲ ಶಿವ, ಪ್ರೊಡಕ್ಷನ್ ಡಿಸೈನರ್ ಸಾಬು ಸಿರಿಲ್ ಮತ್ತು ಛಾಯಾಗ್ರಾಹಕ ಆರ್ ರತ್ನವೇಲು ಅವರೊಂದಿಗೆ ಬೇಟ್ಸ್ ಒಳಗೊಂಡಿರುವ ತೆರೆಮರೆಯ ಫೋಟೋವನ್ನು ನಿರ್ಮಾಣ ತಂಡ ಬಿಡುಗಡೆ ಮಾಡಿದ್ದಾರೆ.

ಮಿಷನ್‌ ಇಂಪಾಸಿಬಲ್‌, ಘೋಸ್ಟ್‌ ಪ್ರೊಟೊಕಾಲ್‌, ಟ್ರಾನ್ಸ್‌ಫಾರ್ಮರ್ಸ್‌: ದಿ ಲಾಸ್ಟ್‌ ನೈಟ್‌, ಪ್ರೆಡೇಟರ್‌ ಹಾಗೂ ಪರ್ಲ್‌ ಹಾರ್ಬರ್‌ನಂತಹ ಖ್ಯಾತ ಹಾಲಿವುಡ್‌ ಸಿನಿಮಾಗಳಿಗೆ ಕೆನ್ನಿ ಆಕ್ಷನ್‌ ಕೊರಿಯೊಗ್ರಫಿ ಮಾಡಿದ್ದರು. ಇವರು ಪ್ರಭಾಸ್‌ ನಟನೆಯ ಸಾಹೋ ಹಾಗೂ ರಜನಿಕಾಂತ್‌ ನಟನೆಯ 2.0 ಸಿನಿಮಾದಲ್ಲೂ ಕೆಲಸ ಮಾಡಿದ್ದರು. ಎನ್‌ಟಿಆರ್ 30 ರ ಪ್ರಮುಖ ಆಕ್ಷನ್ ಸೀಕ್ವೆನ್ಸ್‌ಗಳಿಗೆ ಅವರು ದೃಶ್ಯ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ.

ಇದು ತಾರಕ್‌ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಅಪ್‌ಡೇಟ್‌ಗಾಗಿ ಚಿತ್ರತಂಡದ ಬಗ್ಗೆ ಸಂತಸ ವ್ಯಕ್ತಪಡಿಸಿದೆ ಅಭಿಮಾನಿ ಬಳಗ.

ಈ ಚಿತ್ರದಲ್ಲಿ ಬಾಲಿವುಡ್‌ ಬೆಡಗಿ ಜಾಹ್ನವಿ ಕಪೂರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಯುವಸುಧಾ ಆರ್ಟ್ಸ್‌ ಎನ್‌ಟಿಆರ್‌ ಆರ್ಟ್ಸ್‌ ಜೊತೆ ಈ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಅನಿರುದ್ಧ್‌ ರವಿಚಂದ್ರರ್‌ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಚಿತ್ರವು ಏಪ್ರಿಲ್ 5, 2024 ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ

OTTplay Changemaker Award 2023: ಒಟಿಟಿ ಪ್ಲೇ ಚೇಂಜ್‌ ಮೇಕರ್‌ ಅವಾರ್ಡ್‌ ಕಾರ್ಯಕ್ರಮ; ಸ್ಯಾಂಡಲ್‌ವುಡ್‌ನಿಂದ ರಿಷಬ್‌ ಶೆಟ್ಟಿ ಭಾಗಿ

ಹಿಂದೂಸ್ತಾನ್‌ ಟೈಮ್ಸ್‌ ಗ್ರೂಪ್‌ನ ಸೋದರ ಸಂಸ್ಥೆಯಾಗಿರುವ OTTPlay ಆಯೋಜಿಸಲಿರುವ ಒಟಿಟಿ ಪ್ಲೇ ಚೇಂಜ್‌ಮೇಕರ್ ಅವಾರ್ಡ್‌ಗೆ ಕ್ಷಣಗಣನೆ ಶುರುವಾಗಿದೆ. OTTplay Changemaker ಪ್ರಶಸ್ತಿಗಳ ಮೊದಲ ಆವೃತ್ತಿ, ಕಲರ್‌ಫುಲ್‌ ದೀಪಾಲಂಕಾರಗಳ ನಡುವೆ, ಕೆಂಪು ಹಾಸಿನ ಸೊಬಗಿನಲ್ಲಿ ಇಂದು (ಮಾರ್ಚ್ 26) ನಡೆಯಲಿದೆ.

Kiran Raj Ronny First Look: ನೋಡಿ ಇವರ ಗುರ್ತು ಸಿಕ್ತಾ? ಹಿರಿತೆರೆಯಲ್ಲಿ ರಗಡ್‌ ‘ರಾನಿ’ಯಾದ ಕಿರುತೆರೆಯ ಕ್ಯೂಟ್‌ ಬಾಯ್‌ ಕಿರಣ್‌ ರಾಜ್‌!

ಕಿರುತೆರೆ, ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳಿಂದ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಕಿರಣ್ ರಾಜ್ ‘ಕನ್ನಡತಿ’ ಧಾರಾವಾಹಿ ನಂತರ ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೆಂಬಂತೆ ‘ರಾನಿ’ ಸಿನಿಮಾವನ್ನೂ ಘೋಷಣೆ ಮಾಡಿದ್ದರು. ದೂರದ ದುಬೈನಲ್ಲಿ ಹೆಲಿಕಾಪ್ಟರ್‌ನಿಂದ ಹದಿಮೂರು ಸಾವಿರ ಅಡಿ ಮೇಲಿಂದ ಜಿಗಿದು (ಸ್ಕೈ ಡ್ರೈವ್) ತಮ್ಮ ನೂತನ ಚಿತ್ರ ‘ರಾನಿ’ ಶೀರ್ಷಿಕೆಯನ್ನು ಅನಾವರಣ ಮಾಡಿದ್ದರು. ಇದೀಗ ಫಸ್ಟ್‌ ಲುಕ್‌ ಸರದಿ..

IPL_Entry_Point

ವಿಭಾಗ