ಕನ್ನಡ ಸುದ್ದಿ  /  ಮನರಂಜನೆ  /  Kiran Raj Ronny First Look: ನೋಡಿ ಇವರ ಗುರ್ತು ಸಿಕ್ತಾ? ಹಿರಿತೆರೆಯಲ್ಲಿ ರಗಡ್‌ ‘ರಾನಿ’ಯಾದ ಕಿರುತೆರೆಯ ಕ್ಯೂಟ್‌ ಬಾಯ್‌ ಕಿರಣ್‌ ರಾಜ್‌!

Kiran Raj Ronny First Look: ನೋಡಿ ಇವರ ಗುರ್ತು ಸಿಕ್ತಾ? ಹಿರಿತೆರೆಯಲ್ಲಿ ರಗಡ್‌ ‘ರಾನಿ’ಯಾದ ಕಿರುತೆರೆಯ ಕ್ಯೂಟ್‌ ಬಾಯ್‌ ಕಿರಣ್‌ ರಾಜ್‌!

ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ದೊಡ್ಡ ಸ್ಟಾರ್‌ಡಮ್‌ ಬೆಳೆಸಿಕೊಂಡಿದ್ದ ಈ ನಟ ಇದೀಗ ಹಿರಿತೆರೆಯ ಹಾದಿ ಹಿಡಿದಿದ್ದಾರೆ.

ನೋಡಿ ಇವರ ಗುರ್ತು ಸಿಕ್ತಾ ಅಂತ? ಹಿರಿತೆರೆಯಲ್ಲಿ ರಗಡ್‌ ‘ರಾನಿ’ಯಾದ ಕಿರುತೆರೆಯ ಕ್ಯೂಟ್‌ ಬಾಯ್‌ ಕಿರಣ್‌ ರಾಜ್‌!
ನೋಡಿ ಇವರ ಗುರ್ತು ಸಿಕ್ತಾ ಅಂತ? ಹಿರಿತೆರೆಯಲ್ಲಿ ರಗಡ್‌ ‘ರಾನಿ’ಯಾದ ಕಿರುತೆರೆಯ ಕ್ಯೂಟ್‌ ಬಾಯ್‌ ಕಿರಣ್‌ ರಾಜ್‌!

Kiran Raj as Ronny: ಕಿರುತೆರೆ, ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳಿಂದ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಕಿರಣ್ ರಾಜ್ ‘ಕನ್ನಡತಿ’ ಧಾರಾವಾಹಿ ನಂತರ ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೆಂಬಂತೆ ‘ರಾನಿ’ ಸಿನಿಮಾವನ್ನೂ ಘೋಷಣೆ ಮಾಡಿದ್ದರು. ದೂರದ ದುಬೈನಲ್ಲಿ ಹೆಲಿಕಾಪ್ಟರ್‌ನಿಂದ ಹದಿಮೂರು ಸಾವಿರ ಅಡಿ ಮೇಲಿಂದ ಜಿಗಿದು (ಸ್ಕೈ ಡ್ರೈವ್) ತಮ್ಮ ನೂತನ ಚಿತ್ರ ‘ರಾನಿ’ ಶೀರ್ಷಿಕೆಯನ್ನು ಅನಾವರಣ ಮಾಡಿದ್ದರು. ಇದೀಗ ಫಸ್ಟ್‌ ಲುಕ್‌ ಸರದಿ..

ಟ್ರೆಂಡಿಂಗ್​ ಸುದ್ದಿ

ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ದೊಡ್ಡ ಸ್ಟಾರ್‌ಡಮ್‌ ಬೆಳೆಸಿಕೊಂಡಿದ್ದ ಈ ನಟ ಇದೀಗ ಹಿರಿತೆರೆಯ ಹಾದಿ ಹಿಡಿದಿದ್ದಾರೆ. ಮಾಸ್‌ ಮತ್ತು ಆಕ್ಷನ್‌ ಹಿನ್ನೆಲೆಯ ‘ರಾನಿ’ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೂ ಅಬ್ಬರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾ ತಂಡ ಯುಗಾದಿ ಪ್ರಯುಕ್ತ ಫಸ್ಟ್‌ ಲುಕ್‌ ಬಿಡುಗಡೆ ಮಾಡಿತ್ತು. ರಗಡ್‌ ಅವತಾರದ ‘ರಾನಿ’ ಲುಕ್‌ನಲ್ಲಿ ಕಿರಣ್‌ ಎದುರಾಗಿದ್ದರು.

7 ಸೆಟ್‌, 6 ಸಾಹಸ ಸನ್ನಿವೇಶ..

ಇದೊಂದು ಆಕ್ಷನ್‌ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಅದಕ್ಕೆ ತಕ್ಕಂತೆ ದೇಹವನ್ನು ಮತ್ತಷ್ಟು ಹುರಿಗೊಳಿಸಿರುವ ಕಿರಣ್‌, ಸಿಕ್ಸ್‌ ಪ್ಯಾಕ್‌ ಪ್ರದರ್ಶಿಸಿದ್ದಾರೆ. ಈಗಾಗಲೇ ‘ರಾನಿ’ಯ ಚಿತ್ರೀಕರಣ ಭರದಿಂದ ಸಾಗಿದ್ದು, ಒಟ್ಟು ಏಳು ಬಗೆಬಗೆ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು 6 ಸಾಹಸ ಸನ್ನಿವೇಶಗಳಿವೆ. ಈಗಾಗಲೇ ಶೇ. 60 ಭಾಗದ ಶೂಟಿಂಗ್‌ ಸಹ ಮುಗಿದಿದೆ.

ಎಲ್ಲ ಕಡೆ ಕನ್ನಡದಲ್ಲಿಯೇ ರಿಲೀಸ್..

ಕಾಂತಾರ ಚಿತ್ರದ ಸಿಂಗಾರ ಸಿರಿಯೆ.. ಹಾಡು ಬರೆದಿರುವ ಪ್ರಮೋದ್ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಈ ಚಿತ್ರಕ್ಕಿದೆ. ಸೂಕ್ಷ್ಮ ಕಥೆಯುಳ್ಳ, ಪಕ್ಕಾ ಆಕ್ಷನ್ ಚಿತ್ರ ಇದಾಗಿದ್ದು, ಕರ್ನಾಟಕ ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿಯೂ ಕನ್ನಡದಲ್ಲೇ ಈ ಸಿನಿಮಾ ಹೊರಬರಲಿದೆಯಂತೆ. ತಂಡದ ಪ್ಲಾನ್‌ ಪ್ರಕಾರ ಡಿಸೆಂಬರ್‌ನಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಚಿತ್ರದಲ್ಲಿ ಕಿರಣ್‌ಗೆ ಮೂವರು ನಾಯಕಿಯರಿದ್ದಾರೆ. ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸಿರುವ ಈ ಚಿತ್ರವನ್ನು ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಬಹುತಾರಾಗಣವೇ ಇದೆ. ರವಿಶಂಕರ್, ಮೈಕೋ ನಾಗರಾಜ್, ನಾಗತಿಹಳ್ಳಿ ಚಂದ್ರಶೇಖರ್, ಬಿ. ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್‌, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ.

IPL_Entry_Point