ಕನ್ನಡ ಸುದ್ದಿ  /  ಮನರಂಜನೆ  /  Oscar 2023 Live Telecast: ಭಾರತದಲ್ಲಿ ಯಾವ ಚಾನೆಲ್‌ನಲ್ಲಿ ಎಷ್ಟೊತ್ತಿಗೆ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

Oscar 2023 Live Telecast: ಭಾರತದಲ್ಲಿ ಯಾವ ಚಾನೆಲ್‌ನಲ್ಲಿ ಎಷ್ಟೊತ್ತಿಗೆ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

ಇಂದು ಸಂಜೆ (ಮಾ.12) ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ರಾತ್ರಿ 8 ಗಂಟೆಗೆ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಸಮಾರಂಭವನ್ನು ಭಾರತದಲ್ಲಿ ಯಾವಾಗ ನೋಡಬಹುದು?

ಭಾರತದಲ್ಲಿ ಯಾವ ಚಾನೆಲ್‌ನಲ್ಲಿ, ಎಷ್ಟೊತ್ತಿಗೆ ಆಸ್ಕರ್‌ ಕಾರ್ಯಕ್ರಮ ನೋಡಬಹುದು? ಇಲ್ಲಿದೆ ಮಾಹಿತಿ..
ಭಾರತದಲ್ಲಿ ಯಾವ ಚಾನೆಲ್‌ನಲ್ಲಿ, ಎಷ್ಟೊತ್ತಿಗೆ ಆಸ್ಕರ್‌ ಕಾರ್ಯಕ್ರಮ ನೋಡಬಹುದು? ಇಲ್ಲಿದೆ ಮಾಹಿತಿ..

Oscar 2023: 95ನೇ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಮೆರಿಕಾದ ಲಾಸ್‌ಏಂಜಲಸ್‌ನಲ್ಲಿ ಈ ಕಲರ್‌ಫುಲ್‌ ಸಮಾರಂಭಕ್ಕೆ ಬೃಹತ್‌ ವೇದಿಕೆ ಸಿದ್ಧವಾಗಿದ್ದು, ಭಾರತೀಯರ ಪಾಲಿಗೆ ಈ ಸಲದ ಆಸ್ಕರ್‌ ಮತ್ತಷ್ಟು ಮಗದಷ್ಟು ವಿಶೇಷ ಎನಿಸಿದೆ. ಅದಕ್ಕೆ ಕಾರಣ ಪ್ರಶಸ್ತಿ ಸುತ್ತಿಗೆ ಭಾರತದಿಂದ ಮೂರು ಚಿತ್ರಗಳು ನಾಮನಿರ್ದೇಶನಗೊಂಡಿವೆ.

ಭಾರತಕ್ಕೆ ಹ್ಯಾಟ್ರಿಕ್‌ ಭರವಸೆ..

2023ರ ಆಸ್ಕರ್‌ನಲ್ಲಿ ಮೂರು ವಿಭಿನ್ನ ಸಿನಿಮಾಗಳು ಭಾರತವನ್ನು ಪ್ರತಿನಿಧಿಸುತ್ತಿವೆ. ಭಾರತದಿಂದ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗ ಮತ್ತು ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಎರಡು ಚಿತ್ರಗಳು ಆಯ್ಕೆಯಾಗಿವೆ. RRR ನ ಜನಪ್ರಿಯ ಹಾಡು ನಾಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಆಲ್ ದಟ್ ಬ್ರೀತ್ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಭಾರತದಿಂದ ಸೇರ್ಪಡೆಗೊಂಡರೆ, ದಿ ಎಲಿಫೆಂಟ್ ವಿಸ್ಪರ್ಸ್ ಚಿತ್ರವನ್ನು ಅತ್ಯುತ್ತಮ ಕಿರುಚಿತ್ರವಾಗಿ ಸೇರಿಸಲಾಗಿದೆ. ಹಾಗಾಗಿ ಸಹಜವಾಗಿ ಈ ಸಲದ ಆಸ್ಕರ್‌ ಮೇಲೆ ಕುತೂಹಲದ ಕಣ್ಣು ನೆಟ್ಟಿದೆ.

ಭಾರತದಲ್ಲಿ ವೀಕ್ಷಣೆ ಹೇಗೆ?

ಇಂದು ಸಂಜೆ (ಮಾರ್ಚ್ 12) ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ರಾತ್ರಿ 8 ಗಂಟೆಗೆ ಈ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಮಾರ್ಚ್13 ರಂದು ಬೆಳಗ್ಗೆ 5:30 ಕ್ಕೆ ವೀಕ್ಷಿಸಬಹುದು. ಪ್ರಶಸ್ತಿ ಸಮಾರಂಭದ ಸ್ಟ್ರೀಮಿಂಗ್ ಅನ್ನು YouTube, Hulu Live TV, DirecTV, FUBO TV, AT&T TVಯಲ್ಲಿ ವೀಕ್ಷಣೆ ಮಾಡಬಹುದು. ಎಬಿಸಿ ನೆಟ್‌ವರ್ಕ್ ಪ್ರಸಾರದ ಹಕ್ಕು ಪಡೆದುಕೊಂಡಿದೆ. ಭಾರತದಲ್ಲಿ ಈ ಕಾರ್ಯಕ್ರಮವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ದೀಪಿಕಾ ಪಡುಕೋಣೆ ಆಕರ್ಷಣೆ

ಈ ಬಾರಿ ಭಾರತದಿಂದ ದೀಪಿಕಾ ಪಡುಕೋಣೆ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಲದ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ದೀಪಿಕಾ ಭಾರತವನ್ನು ಪ್ರತಿನಿಧಿಸುತ್ತಿಲ್ಲವಾದರೂ, ವಿಶ್ವದ ಅತಿದೊಡ್ಡ ಪ್ರಶಸ್ತಿ ಕಾರ್ಯಕ್ರಮದಲ್ಲಿ ಹಾಜರಿ ಹಾಕಲಿದ್ದಾರೆ. ದೀಪಿಕಾ ಅವರೊಂದಿಗೆ ಎಮಿಲಿ ಬ್ಲಂಟ್, ಡ್ವೇನ್ ಜಾನ್ಸನ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ರಿಜ್ ಅಹ್ಮದ್, ಝೋ ಸಲ್ಡಾನಾ, ಮೈಕೆಲ್ ಬಿ. ಜೋರ್ಡಾನ್ ಸೇರಿ ಅನೇಕ ನಟರು ಕಾಣಿಸಿಕೊಳ್ಳಲಿದ್ದಾರೆ.

2023ರ ಆಸ್ಕರ್‌ನಲ್ಲಿ ಏಷ್ಯಾದ ಪ್ರಮುಖರು ಪ್ರಶಸ್ತಿ ಪಡೆಯಲಿದ್ದಾರಾ?

ʼಎವೆರಿಥಿಂಗ್‌ ಎವೆರಿವೇರ್‌ ಆಲ್‌ ಅಟ್‌ ಒನ್ಸ್‌ʼ ಚಿತ್ರದಲ್ಲಿನ ಪಾತ್ರಕ್ಕಾಗಿ ಮಿಚೆಲ್‌ ಯೋಹ್‌ ಅತ್ಯುತ್ತಮ ನಟಿ ವಿಭಾಗಕ್ಕೆ ನಾಮನಿರ್ದೇಶಗೊಂಡಿದ್ದಾರೆ. ಆ ಮೂಲಕ ನಟನೆಯಿಂದ ಗುರುತಿಸಿಕೊಂಡ ಏಷ್ಯಾದ ನಟಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಆಸ್ಕರ್‌ ವಿಜೇತರಾದರೆ ಪುನಃ ಇತಿಹಾಸವನ್ನು ಸೃಷ್ಟಿಸುತ್ತಾರೆ. ಆದರೆ ಇದರಿಂದ ಇವರು ಮಾತ್ರ ಇತಿಹಾಸ ಸೃಷ್ಟಿಸುವುದಲ್ಲ, ಈ ಚಿತ್ರದಲ್ಲಿ ಇವರೊಂದಿಗೆ ನಟಿಸಿದ ಕೆ ಹುಯ್‌ ಕ್ವಾನ್‌, ಸ್ಟೆಫನಿ ಹ್ಸು ಹಾಗೂ ಹಾಂಗ್‌ ಚೌ ಕೂಡ ಸಹ ನಾಮನಿರ್ದೇಶನಗೊಂಡಿದ್ದಾರೆ. ಇವೆಲ್ಲರೂ ಪ್ರಶಸ್ತಿ ಗೆದ್ದುಕೊಂಡರೆ ಮೊದಲ ಬಾರಿ ಏಷ್ಯಾದ ನಟರು ಒಟ್ಟಿಗೆ ಪ್ರಶಸ್ತಿ ವಿಜೇತರಾಗುವುದನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದೆ.

IPL_Entry_Point