ಕನ್ನಡ ಸುದ್ದಿ  /  ಮನರಂಜನೆ  /  Rakhi Sawant: ಅಣ್ಣ, ಸ್ವಲ್ಪ ದೂರ ನಿಲ್ಲಿ.. ನಾನೀಗ ಗೃಹಿಣಿ ಎಂದು ಅಭಿಮಾನಿಗೆ ಗದರಿದ ರಾಖಿ..ನೀವು ಬಹಳ ಫನ್ನಿ ಎಂದ ನೆಟಿಜನ್ಸ್‌.. ವಿಡಿಯೋ

Rakhi sawant: ಅಣ್ಣ, ಸ್ವಲ್ಪ ದೂರ ನಿಲ್ಲಿ.. ನಾನೀಗ ಗೃಹಿಣಿ ಎಂದು ಅಭಿಮಾನಿಗೆ ಗದರಿದ ರಾಖಿ..ನೀವು ಬಹಳ ಫನ್ನಿ ಎಂದ ನೆಟಿಜನ್ಸ್‌.. ವಿಡಿಯೋ

ವ್ಯಕ್ತಿಯೊಬ್ಬರು ರಾಖಿಯನ್ನು ನೋಡುತ್ತಿದ್ದಂತೆ ಸೆಲ್ಫಿ ತೆಗೆಸಿಕೊಳ್ಳಲು ಹತ್ತಿರ ಬಂದಿದ್ದಾರೆ. ಇದಕ್ಕೆ ಗರಂ ಆದ ರಾಖಿ ಸಾವಂತ್‌, ''ಸ್ವಲ್ಪ ದೂರ ನಿಂತು ಫೋಟೋ ಕ್ಲಿಕ್‌ ಮಾಡಿ, ನಾನೀಗ ಮದುವೆಯಾಗಿದ್ದಾನೆ, ಗೃಹಿಣಿ, ಮೊದಲಿನ ವಿಚಾರವೇ ಬೇರೆ'' ಎಂದಿದ್ದಾರೆ.

ರಾಖಿ ಸಾವಂತ್‌ ಜೊತೆ ಅಭಿಮಾನಿ
ರಾಖಿ ಸಾವಂತ್‌ ಜೊತೆ ಅಭಿಮಾನಿ (PC: Viral bhayani)

ರಾಖಿ ಸಾವಂತ್‌ ಹೆಸರು ಕೇಳಿದೊಡನೆ ಯಾರಿಗಾದರೂ ತುಟಿ ಅಂಚಿನಲ್ಲಿ ಕಿರುನಗೆ ಮೂಡದೆ ಇರದು. ಇದಕ್ಕೆಲ್ಲಾ ಕಾರಣ ಆಕೆಯ ವರ್ತನೆ. ತಾನು ಯಾವಾಗಲೂ ಸುದ್ದಿಯಾಗಿರಬೇಕು ಎಂಬ ಕಾರಣಕ್ಕೆ ರಾಖಿ ಹೀಗೆ ಸುಖಾ ಸುಮ್ಮನೆ ಇಲ್ಲದ್ದೆಲ್ಲಾ ಮಾತನಾಡುತ್ತಾರೆ ಅನ್ನೋದು ಎಲ್ಲರ ಅಭಿಪ್ರಾಯ.

ಟ್ರೆಂಡಿಂಗ್​ ಸುದ್ದಿ

ಬಾಲಿವುಡ್‌ನಲ್ಲಿ ರಾಖಿ ಸಾವಂತ್ ಐಟಂ ಗರ್ಲ್ ಎಂದು ಹೆಸರಾಗಿದ್ದರೂ ಹೊರಗೆ ಅವರ ನಡವಳಿಕೆ ಕೊಂಚ ಭಿನ್ನ. ರಾಖಿಗೆ ತನಗೆ ಅನಿಸಿದ್ದನ್ನು ಹೇಳುವ ಅಭ್ಯಾಸವಿದೆ. 2 ವರ್ಷಗಳ ಹಿಂದೆ ಮದುವೆ ವಿಚಾರವಾಗಿ ರಾಖಿ ಸುದ್ದಿಯಲ್ಲಿದ್ದರು. ನಾನು ರಿತೇಶ್‌ ಸಿಂಗ್‌ ಎನ್ನುವವರನ್ನು ಮದುವೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದರು. ಇದೀಗ ಕಳೆದ ವಾರ ಕೂಡಾ ಅವರು ಎರಡನೇ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕೆಲವು ದಿನಗಳಿಂದ ಪ್ರೀತಿಸುತ್ತಿರುವ ಆದಿಲ್‌ ಖಾನ್‌ ದುರ್ರಾನಿಯನ್ನು ಮದುವೆಯಾಗಿದ್ದೇನೆ ಎಂದಿದ್ದರು. ಈಗ ತಮ್ಮೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯೊಬ್ಬರಿಗೆ ಆಕೆ ಹೇಳಿದ ಮಾತುಗಳು ವೈರಲ್ ಆಗುತ್ತಿವೆ. ಇದನ್ನು ನೋಡಿ ನೆಟಿಜನ್ಸ್‌ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವ್ಯಕ್ತಿಯೊಬ್ಬರು ರಾಖಿಯನ್ನು ನೋಡುತ್ತಿದ್ದಂತೆ ಸೆಲ್ಫಿ ತೆಗೆಸಿಕೊಳ್ಳಲು ಹತ್ತಿರ ಬಂದಿದ್ದಾರೆ. ಇದಕ್ಕೆ ಗರಂ ಆದ ರಾಖಿ ಸಾವಂತ್‌, ''ಸ್ವಲ್ಪ ದೂರ ನಿಂತು ಫೋಟೋ ಕ್ಲಿಕ್‌ ಮಾಡಿ, ನಾನೀಗ ಮದುವೆಯಾಗಿದ್ದಾನೆ, ಗೃಹಿಣಿ, ಮೊದಲಿನ ವಿಚಾರವೇ ಬೇರೆ'' ಎಂದಿದ್ದಾರೆ. ಇದನ್ನು ಕೇಳಿದ ಆತ ಸರಿ ಮೇಡಂ ಎಂದು ದೂರ ಸರಿದು ಫೋಟೋ ಕ್ಲಿಕ್‌ ಮಾಡಿದ್ದಾರೆ. ಖ್ಯಾತ ಬಾಲಿವುಡ್‌ ಪಾಪರಾಜಿ ವಿರಾಲ್‌ ಭಯಾನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಬಹಳ ವೈರಲ್‌ ಆಗುತ್ತಿದೆ. ರಾಖಿ ಯಾವಾಗಲೂ ಹೊಸ ಹೊಸ ವಿಚಾರಗಳನ್ನು ಹೊತ್ತು ತರುತ್ತಲೇ ಇರುತ್ತಾರೆ ಎಂದು ಒಬ್ಬರು ನೆಟಿಜನ್‌ ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಡ್ರಾಮಾ ಕ್ವೀನ್‌ ಎಂದಿದ್ದಾರೆ. ಕೆಲವರು ನೀವು ಬಹಳ ಫನ್ನಿ ಎಂದಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ರಸ್ತೆಯಲ್ಲೇ ಏಕೆ ಪರಿಹಾರ ಹುಡುಕುತ್ತೀರಿ? ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ರಾಖಿ ತಮ್ಮ ವರ್ತನೆಯಿಂದ ಟಾಕ್‌ ಆಫ್‌ ದಿ ಟೌನ್‌ ಎನಿಸಿಕೊಳ್ಳುತ್ತಾರೆ.

ಆದಿಲ್‌ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದ ರಾಖಿ

ಆದಿಲ್‌ನನ್ನು ಮದುವೆಯಾಗಿದ್ದೇನೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದ ರಾಖಿ ಸಾವಂತ್‌, ಮರುದಿನವೇ ಆತ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು. ಆದಿಲ್‌ ಖಾನ್‌ ಹಾಗೂ ನಾನು 6 ತಿಂಗಳ ಹಿಂದೆಯೇ ಮದುವೆಯಾಗಿದ್ದೆವು. ಆತನ ಇಷ್ಟದಂತೆ ನಾನು ಫಾತಿಮಾ ಆಗಿ ಬದಲಾದೆ. ನಮ್ಮ ಮದುವೆ ವಿಚಾರವನ್ನು ಆದಿಲ್‌ ಖಾನ್‌ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದರು. ಈಗ ನೋಡಿದರೆ ಆತ ನನ್ನನ್ನು ಮದುವೆಯೇ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು.

ಆದರೆ ಈಗ ಈ ವಿವಾದ ಸುಖಾಂತ್ಯ ಕಂಡಿದೆಯಂತೆ. ಆಂಗ್ಲ ಪತ್ರಿಕೆಯೊಂದಿಗೆ ಆದಿಲ್‌ ಖಾನ್‌ ಮಾತನಾಡಿದ್ದು, ರಾಖಿ ಹಾಗೂ ನಾನು ಮದುವೆಯಾಗಿರುವುದು ನಿಜ. ಆದರೆ ಇದು ನನ್ನ ಮನೆಯವರಿಗೆ ತಿಳಿದಿರಲಿಲ್ಲ. ನಮ್ಮಿಬ್ಬರ ಮದುವೆ ವಿಚಾರ ತಿಳಿದರೆ ನನ್ನ ತಂಗಿಗೆ ಗಂಡು ಸಿಗುವುದಿಲ್ಲ ಎಂದು ಭಯವಿತ್ತು. ರಾಖಿ ಹಾಗೂ ನಾನು ಪ್ರೀತಿಸುತ್ತಿದ್ದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಗುಟ್ಟಾಗಿ ಮದುವೆಯಾಗಬೇಕಾಯ್ತು. ಇದನ್ನು ನಾನು ನನ್ನ ಪೋಷಕರಿಗೆ ನಿಧಾನವಾಗಿ ಮನವರಿಕೆ ಮಾಡುತ್ತೇನೆ. ರಾಖಿ ಹಾಗೂ ನಾವಿಬ್ಬರೂ ಈಗ ಸಂತೋಷವಾಗಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024