ಕನ್ನಡ ಸುದ್ದಿ  /  ಮನರಂಜನೆ  /  Rakhi Sawant Controversy: ಆದಿಲ್‌ ಖಾನ್‌ ವಿರುದ್ಧ ರಾಖಿ ಸಾವಂತ್‌ ಹೊಸ ಆರೋಪ...ನನಗೆ ನ್ಯಾಯ ಬೇಕು ಎಂದು ಮನವಿ ಮಾಡಿದ ನಟಿ

Rakhi Sawant Controversy: ಆದಿಲ್‌ ಖಾನ್‌ ವಿರುದ್ಧ ರಾಖಿ ಸಾವಂತ್‌ ಹೊಸ ಆರೋಪ...ನನಗೆ ನ್ಯಾಯ ಬೇಕು ಎಂದು ಮನವಿ ಮಾಡಿದ ನಟಿ

ಆದಿಲ್‌ಗೆ ಮೊದಲೇ ಒಂದು ಮದುವೆಯಾಗಿ ಡಿವೋರ್ಸ್‌ ಆಗಿತ್ತು. ನಂತರ ನನ್ನನ್ನು ಎರಡನೇ ಮದುವೆ ಆಗಿದ್ದ. ಈಗ ತನು ಎಂಬ ಹುಡುಗಿಯನ್ನು ಮೂರನೇ ಮದುವೆ ಆಗಲು ಮುಂದಾಗಿದ್ದಾನೆ. ಅಸಲಿಗೆ ಆದಿಲ್‌ ಖಾನ್‌ ಯಾವ ಉದ್ಯಮಿಯೂ ಅಲ್ಲ‌, ತನ್ನನ್ನು ಉದ್ಯಮಿ ಎಂದು ಹೇಳುವಂತೆ ಆತ ನನಗೆ ಬ್ಲಾಕ್‌ ಮೇಲ್‌ ಮಾಡಿದ್ದ.

ಆದಿಲ್‌ ಖಾನ್‌ ವಿರುದ್ಧ ರಾಖಿ ಹೊಸ ಆರೋಪ
ಆದಿಲ್‌ ಖಾನ್‌ ವಿರುದ್ಧ ರಾಖಿ ಹೊಸ ಆರೋಪ

ಪತಿ ಆದಿಲ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ದೂರು ನೀಡಿ ಅರೆಸ್ಟ್‌ ಮಾಡಿಸಿದ್ದ ಬಾಲಿವುಡ್‌ ನಟಿ ರಾಖಿ ಸಾವಂತ್‌ ಈಗ ಆತನ ವಿರುದ್ಧ ಹೊಸ ಆರೋಪ ಮಾಡಿದ್ದಾರೆ. ಕೆಲವು ದಿನಗಳಿಂದ ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ನಾನು ಮದುವೆಯಾಗಿದ್ದೇನೆ ಎಂದು ಖುಷಿಯಾಗಿದ್ದ ರಾಖಿ ಸಾವಂತ್‌, ಈಗ ಪತಿ ನನಗೆ ಮೋಸ ಮಾಡಿದ್ದಾನೆ ಎಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಳೆದ ವರ್ಷ ಜುಲೈನಲ್ಲಿ ನಾನು ಹಾಗೂ ಆದಿಲ್‌ ಖಾನ್‌ ಕೋರ್ಟ್‌ ಮ್ಯಾರೇಜ್‌ ಮಾಡಿಕೊಂಡಿದ್ದೆವು. ತಂಗಿಗೆ ಗಂಡು ಸಿಗುವುದಿಲ್ಲ ಎಂದು ಆದಿಲ್‌ ಖಾನ್‌ ಮನವಿ ಮಾಡಿಕೊಂಡಿದ್ದಕ್ಕೆ ನಾನು ಮದುವೆ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಆದಿಲ್‌ ನನಗೆ ಮೋಸ ಮಾಡಲು ಪ್ರಯತ್ನಿಸಿದ. ಆತನಿಗೆ ಬೇರೊಬ್ಬ ಹುಡುಗಿಯೊಂದಿಗೆ ಅಫೇರ್‌ ಇದೆ. ನನ್ನ ದುಡ್ಡನ್ನು ಆತ ದುರ್ಬಳಕೆ ಮಾಡಿಕೊಂಡಿದ್ದಾನೆ. ಬಿಗ್‌ ಬಾಸ್‌ನಿಂದ ದೊರೆತ ಹಣವನ್ನು ನನ್ನ ತಾಯಿಯ ಆಸ್ಪತ್ರೆ ಖರ್ಚಿಗೆ ಬಳಸುವಂತೆ ಹೇಳಿ, ಆದಿಲ್‌ನನ್ನು ನಂಬಿ ಆತನಿಗೆ ದುಡ್ಡು ಕೊಟ್ಟಿದ್ದೆ. ಅದರೆ ಆತ ಮಾತ್ರ ಆ ಹಣವನ್ನು ಅಮ್ಮನ ಖರ್ಚಿಗೆ ಬಳಸದೆ ಅವರನ್ನು ಸಾಯಿಸಿದ್ದಾನೆ. ನಾನು ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಇದ್ದೇನೆ ಎಂದು ರಾಖಿ ಸಾವಂತ್‌ ಆದಿಲ್‌ ಖಾನ್‌ ವಿರುದ್ಧ ಆರೋಪಿಸಿದ್ದರು.

ಇದೀಗ ರಾಖಿ ಸಾವಂತ್‌ ಮತ್ತೆ ಹೊಸ ಆರೋಪ ಮಾಡಿದ್ದಾರೆ. ಆದಿಲ್‌ ಖಾನ್‌ ನನ್ನ ನಗ್ನ ವಿಡಿಯೋ ಮಾಡಿ ಅದನ್ನು ಮಾರಿ ಹಣ ಗಳಿಸಿದ್ದಾನೆ ಎಂದು ಗೋಳಾಡಿದ್ದಾರೆ. ಈ ಕೇಸ್‌ ಸೈಬರ್‌ ಕ್ರೈಮ್‌ ಇಲಾಖೆಯಲ್ಲಿದೆ. ಆದಿಲ್‌ಗೆ ಮೊದಲೇ ಒಂದು ಮದುವೆಯಾಗಿ ಡಿವೋರ್ಸ್‌ ಆಗಿತ್ತು. ನಂತರ ನನ್ನನ್ನು ಎರಡನೇ ಮದುವೆ ಆಗಿದ್ದ. ಈಗ ತನು ಎಂಬ ಹುಡುಗಿಯನ್ನು ಮೂರನೇ ಮದುವೆ ಆಗಲು ಮುಂದಾಗಿದ್ದಾನೆ. ಅಸಲಿಗೆ ಆದಿಲ್‌ ಖಾನ್‌ ಯಾವ ಉದ್ಯಮಿಯೂ ಅಲ್ಲ‌, ತನ್ನನ್ನು ಉದ್ಯಮಿ ಎಂದು ಹೇಳುವಂತೆ ಆತ ನನಗೆ ಬ್ಲಾಕ್‌ ಮೇಲ್‌ ಮಾಡಿದ್ದ. ಆತನಿಗೆ ಬಾಲಿವುಡ್‌ಗೆ ಬರಲು ಒಂದು ಅಸ್ತ್ರ ಬೇಕಿತ್ತು. ಅದಕ್ಕಾಗಿ ಪ್ರೀತಿ ಹೆಸರಿನಲ್ಲಿ ನನ್ನನ್ನು ಬಳಸಿಕೊಂಡ ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

ಮಂಗಳವಾರ ಆದಿಲ್‌ನನ್ನು ಅರೆಸ್ಟ್‌ ಮಾಡಿಸಿದ್ದ ರಾಖಿ ಸಾವಂತ್‌

ನಾನು ನಾಟಕವಾಡುತ್ತಿಲ್ಲ. ''ಆದಿಲ್‌ ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ನನಗೆ ದೈಹಿಕ ಹಿಂಸೆ ನೀಡಿದ್ದಾನೆ. ನನ್ನ ಹಣ ದೋಚಿದ್ದಾನೆ. ಇದಕ್ಕೆ ನನ್ನ ಬಳಿ ಎಲ್ಲಾ ಸಾಕ್ಷಿ ಇವೆ. ಆದಿಲ್‌ ನನ್ನನ್ನು ಕ್ಷಮೆ ಕೇಳಲು ಬಂದಿದ್ದರು. ಆದರೆ ನಾನು ಅವನನ್ನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಅವನಿಗೆ ಮನೆಯಲ್ಲಿ ಅಡುಗೆ ಮಾಡಿ ತಿನ್ನಿಸುತ್ತಿದ್ದೆ, ಶತ್ರುಗಳು ಮನೆಗೆ ಬಂದಾಗ ಕೂಡಾ ನಾವು ಅವರಿಗೆ ಊಟ ನೀಡಿ ಕಳಿಸುತ್ತೇವೆ. ಇವತ್ತು ಆದಿಲ್‌ಗೆ ಕೊನೆಯ ತುತ್ತು ತಿನ್ನಿಸಿದ್ದೇನೆ. ಆದಿಲ್‌ ನನ್ನ‌ ಪತಿ. ಆತನನ್ನು ಕೊನೆಯವರೆಗೂ ಪ್ರೀತಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಆತನನ್ನು ಕ್ಷಮಿಸುವುದಿಲ್ಲ. ಮಂಗಳವಾರ ಬೆಳಗ್ಗೆ ಆದಿಲ್‌ ನನ್ನ ಮನೆಗೆ ಬಂದು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಕೂಡಲೇ ಪೊಲೀಸರಿಗೆ ಕರೆ ಮಾಡಿ ಅವರನ್ನು ಅರೆಸ್ಟ್‌ ಮಾಡಿಸಿದ್ದೇನೆ'' ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

''ಆದಿಲ್‌ ಖಾನ್‌ ನನ್ನ ಮೂಲಕ ಫೇಮಸ್‌ ಆಗಲು ಆಸೆ ಪಡುತ್ತಿದ್ದಾನೆ. ಅದರೆ ದಯವಿಟ್ಟು ಆತನನ್ನು ಯಾರೂ ಇಂಟರ್‌ವ್ಯೂ ಮಾಡಬೇಡಿ. ನನ್ನ ವೈವಾಹಿಕ ಜೀವನ ಅಪಾಯದಲ್ಲಿದೆ. ಆದಿಲ್ ಬೇರೆ ಹುಡುಗಿಗೆ ಹತ್ತಿರವಾಗುತ್ತಿದ್ದಾನೆ, ಆ ಹುಡುಗಿಯನ್ನು ಮರೆತುಬಿಡುತ್ತೇನೆ ಎಂದು ಆದಿಲ್‌ ಕುರಾನ್‌ ಮೇಲೆ ಆಣೆ ಮಾಡಿ ಹೇಳಿದ್ದನು. ಆದರೆ ಅವನು ತಪ್ಪು ಮಾಡಿದ್ದಾನೆ. ನುಡಿದಂತೆ ನಡೆಯುತ್ತಿಲ್ಲ, ಆದಿಲ್ ದೊಡ್ಡ ವಂಚಕ. ಆದಿಲ್‌ಗೆ ತನ್ನೊಂದಿಗೆ ಅಫೇರ್‌ ಇದೆ ಎಂದು ಹೇಳುವ ಆ ಹುಡುಗಿ ತನ್ನ ಬಳಿ ಸಾಕ್ಷಿ ಕೂಡಾ ಇದೆ ಎನ್ನುತ್ತಿದ್ದಾಳೆ. ಇದೇ ವಿಚಾರವಾಗಿ ಬ್ಲ್ಯಾಕ್‌ಮೇಲ್ ಕೂಡಾ ಮಾಡುತ್ತಿದ್ದಾಳೆ. ನಾನು ಒಳ್ಳೆ ಪತ್ನಿಯಾಗಬೇಕು ಎಂದುಕೊಂಡಿದ್ದೆ, ತಾಯಿ ಆಗಬೇಕೆಂದುಕೊಂಡಿದ್ದೆ,'' ಆದರೆ ಆದಿಲ್‌ ಎಲ್ಲಾ ಕನಸನ್ನು ಭಗ್ನ ಮಾಡಿದ್ದಾನೆ ಎಂದು ರಾಖಿ ಸಾವಂತ್‌ ಆರೋಪಿಸಿದ್ದಾರೆ.

IPL_Entry_Point