Kannada News  /  Entertainment  /  Rakhi Sawant Requested Media Not To Interview His Husband Adil Khan

Rakhi Sawant on Husband: ಆ ಹುಡುಗಿಯನ್ನು ಬಿಟ್ಟುಬಿಡು...ಮತ್ತೆ ಪತಿ ವಿಚಾರಕ್ಕೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ರಾಖಿ ಸಾವಂತ್‌..ವಿಡಿಯೋ

ಪದಿ ಆದಿಲ್‌ ಖಾನ್‌ ವಿರುದ್ಧ ಮತ್ತೆ ಆರೋಪ ಮಾಡಿದ ರಾಖಿ ಸಾವಂತ್‌
ಪದಿ ಆದಿಲ್‌ ಖಾನ್‌ ವಿರುದ್ಧ ಮತ್ತೆ ಆರೋಪ ಮಾಡಿದ ರಾಖಿ ಸಾವಂತ್‌

ನನ್ನ ವೈವಾಹಿಕ ಜೀವನ ಅಪಾಯದಲ್ಲಿದೆ. ಆದಿಲ್ ಬೇರೆ ಹುಡುಗಿಗೆ ಹತ್ತಿರವಾಗುತ್ತಿದ್ದಾನೆ, ಆ ಹುಡುಗಿಯನ್ನು ಮರೆತುಬಿಡುತ್ತೇನೆ ಎಂದು ಆದಿಲ್‌ ಕುರಾನ್‌ ಮೇಲೆ ಆಣೆ ಮಾಡಿ ಹೇಳಿದ್ದನು. ಆದರೆ ಅವನು ತಪ್ಪು ಮಾಡಿದ್ದಾನೆ. ನುಡಿದಂತೆ ನಡೆಯುತ್ತಿಲ್ಲ, ಆದಿಲ್ ದೊಡ್ಡ ವಂಚಕ. ಆದಿಲ್‌ಗೆ ತನ್ನೊಂದಿಗೆ ಅಫೇರ್‌ ಇದೆ ಎಂದು ಹೇಳುವ ಆ ಹುಡುಗಿ ತನ್ನ ಬಳಿ ಸಾಕ್ಷಿ ಕೂಡಾ ಇದೆ ಎನ್ನುತ್ತಿದ್ದಾಳೆ.

ಬಾಲಿವುಡ್ ಬೆಡಗಿ ರಾಖಿ ಸಾವಂತ್ ಇತ್ತೀಚೆಗಷ್ಟೇ ತನ್ನ ತಾಯಿಯ ನಿಧನದ ದುಃಖದಿಂದ ಹೊರ ಬರುತ್ತಿದ್ದಾರೆ. ಆದರೆ ಈ ನೋವು ಮರೆಯಾಗುವ ಮುನ್ನವೇ ರಾಖಿ ಸಾವಂತ್‌ ಮತ್ತೆ ಕಣ್ಣೀರಿಡುತ್ತಿದ್ದಾರೆ. 6 ತಿಂಗಳ ಹಿಂದೆ ಮದುವೆಯಾದ ಪತಿ ಆದಿಲ್‌ ಖಾನ್‌ ದುರ್ರಾನಿ ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ರಾಖಿ ಮತ್ತೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಖಿ ಸಾವಂತ್‌ ಒಮ್ಮೆ ನಗುತ್ತಾರೆ, ಒಮ್ಮೆ ಅಳುತ್ತಾರೆ, ಇದೇನೂ ನಾಟಕ ಇರಬಹುದಾ ಅಥವಾ ನಿಜಕ್ಕೂ ರಾಖಿ ಸಾವಂತ್‌ ಜೀವನದಲ್ಲಿ ಇಷ್ಟೆಲ್ಲಾ ಸಮಸ್ಯೆ ಇದೆಯಾ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಇತ್ತೀಚೆಗೆ ರಾಖಿ ಸಾವಂತ್‌ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ. ಆದಿಲ್‌ ಖಾನ್‌ನನ್ನು ಪ್ರೀತಿಸಿ, ಅವನೊಂದಿಗೆ ಸಂತೋಷದ ಜೀವನ ನಡೆಸಬೇಕೆಂದುಕೊಂಡಿದ್ದ ನನಗೆ ಆತ ನೋವುಕೊಡುತ್ತಿದ್ದಾನೆ ಎಂದು ರಾಖಿ ಆರೋಪಿಸಿದ್ದಾರೆ. ಜಿಮ್‌ನಿಂದ ಹೊರ ಬಂದು ಕಣ್ಣೀರು ಹರಿಸಿದ್ದಾರೆ. ಆದಿಲ್‌ ಖಾನ್‌ ನನ್ನ ಮೂಲಕ ಫೇಮಸ್‌ ಆಗಲು ಆಸೆ ಪಡುತ್ತಿದ್ದಾನೆ. ಅದರೆ ದಯವಿಟ್ಟು ಆತನನ್ನು ಯಾರೂ ಇಂಟರ್‌ವ್ಯೂ ಮಾಡಬೇಡಿ ಎಂದು ರಾಖಿ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

''ನನ್ನ ವೈವಾಹಿಕ ಜೀವನ ಅಪಾಯದಲ್ಲಿದೆ. ಆದಿಲ್ ಬೇರೆ ಹುಡುಗಿಗೆ ಹತ್ತಿರವಾಗುತ್ತಿದ್ದಾನೆ, ಆ ಹುಡುಗಿಯನ್ನು ಮರೆತುಬಿಡುತ್ತೇನೆ ಎಂದು ಆದಿಲ್‌ ಕುರಾನ್‌ ಮೇಲೆ ಆಣೆ ಮಾಡಿ ಹೇಳಿದ್ದನು. ಆದರೆ ಅವನು ತಪ್ಪು ಮಾಡಿದ್ದಾನೆ. ನುಡಿದಂತೆ ನಡೆಯುತ್ತಿಲ್ಲ, ಆದಿಲ್ ದೊಡ್ಡ ವಂಚಕ. ಆದಿಲ್‌ಗೆ ತನ್ನೊಂದಿಗೆ ಅಫೇರ್‌ ಇದೆ ಎಂದು ಹೇಳುವ ಆ ಹುಡುಗಿ ತನ್ನ ಬಳಿ ಸಾಕ್ಷಿ ಕೂಡಾ ಇದೆ ಎನ್ನುತ್ತಿದ್ದಾಳೆ. ಇದೇ ವಿಚಾರವಾಗಿ ಬ್ಲ್ಯಾಕ್‌ಮೇಲ್ ಕೂಡಾ ಮಾಡುತ್ತಿದ್ದಾಳೆ. ದಯವಿಟ್ಟು ಆದಿಲ್‌ನನ್ನು ಯಾರೂ ಇಂಟರ್‌ವ್ಯೂ ಮಾಡಬೇಡಿ. ಏಕೆಂದರೆ ಅವನು ನನ್ನನ್ನು ಬಳಸಿಕೊಂಡು ಸಿನಿಮಾ ಇಂಡಸ್ಟ್ರಿಗೆ ಬರಲು ಆಸೆ ಪಡುತ್ತಿದ್ದಾನೆ. ನನ್ನ ಹಾಗೂ ಆದಿಲ್‌ ಮಧ್ಯೆ ಬರಬೇಡ ಎಂದು ಮಾಧ್ಯಮಗಳ ಮೂಲಕವೇ ನಾನು ಆ ಹುಡುಗಿಗೆ ಎಚ್ಚರಿಸಲು ಇಷ್ಟಪಡುತ್ತೇನೆ. ಆಕೆ ಹೆಣ್ಣಾಗಿದ್ದು ಇನ್ನೊಬ್ಬ ಹೆಣ್ಣಿನ ಬದುಕನ್ನು ಹಾಳು ಮಾಡುವುದು ತಪ್ಪು. ಆದಿಲ್, ಆ ಹುಡುಗಿಯಿಂದ ದೂರ ಇರುವಂತೆ ನಿನಗೂ ಎಚ್ಚರಿಕೆ ನೀಡುತ್ತಿದ್ದೇನೆ'' ಎಂದು ರಾಖಿ ಆವೇಶದಿಂದ ಹೇಳಿದ್ದಾರೆ.

ಜನವರಿ 28 ರಂದು ನಿಧನರಾದ ರಾಖಿ ಸಾವಂತ್‌ ತಾಯಿ

ಕೆಲವು ದಿನಗಳ ಹಿಂದಷ್ಟೇ ರಾಖಿ ಸಾವಂತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣೀರಿಡುತ್ತಾ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. '' ನಾನು ಮರಾಠಿ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ. ಅಮ್ಮನಿಗೆ ಆರೋಗ್ಯ ಸರಿ ಇಲ್ಲ, ದಯವಿಟ್ಟು ಅಮ್ಮನಿಗಾಗಿ ಪ್ರಾರ್ಥಿಸಿ, ಅಮ್ಮ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ಧಾರೆ. ಅಮ್ಮನಿಗೆ ಬ್ರೈನ್‌ ಟ್ಯೂಮರ್‌ ಇರುವ ವಿಚಾರ ಈಗಷ್ಟೇ ಗೊತ್ತಾಯ್ತು. ದಯವಿಟ್ಟು ಪ್ರತಿಯೊಬ್ಬರೂ ಅಮ್ಮನಿಗಾಗಿ ಪ್ರಾರ್ಥನೆ ಮಾಡಿ. ನಿಮ್ಮ ಹಾರೈಕೆಯಿಂದ ಅಮ್ಮ ಗುಣಮುಖರಾಗುತ್ತಾರೆ'' ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ತಾಯಿಯನ್ನು ಕೂಡಾ ವಿಡಿಯೋದಲ್ಲಿ ತೋರಿಸಿದ್ದರು. ಆದರೆ ರಾಖಿ ತಾಯಿ ಜಯಾ ಸಾವಂತ್‌ ಚಿಕಿತ್ಸೆ ಫಲಕಾರಿಯಾಗದೆ ಕಳೆದ ತಿಂಗಳು 28 ರಂದು ನಿಧನರಾದರು.