ಕನ್ನಡ ಸುದ್ದಿ  /  ಮನರಂಜನೆ  /  Rana Daguubati: ವೆಬ್‌ಸಿರೀಸ್‌ ಪ್ರಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿದ ನಟ ರಾಣಾ ದಗ್ಗುಬಾಟಿ- ಜಾನ್ವಿ ಕಪೂರ್

Rana Daguubati: ವೆಬ್‌ಸಿರೀಸ್‌ ಪ್ರಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿದ ನಟ ರಾಣಾ ದಗ್ಗುಬಾಟಿ- ಜಾನ್ವಿ ಕಪೂರ್

ಕಾರಿನಲ್ಲಿ ಬಂದು ವ್ಯಕ್ತಿಯೋರ್ವನನ್ನು ಕಿಡ್ನಾಪ್‌ ಮಾಡಿಕೊಂಡು, ಕಾರಿನ ಹಿಂದಿನ ಡಿಕ್ಕಿಯಲ್ಲಿ ಹಾಕಿದ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೋಡುಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ವೆಬ್‌ಸಿರೀಸ್‌ ಪ್ರಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿದ ನಟ ರಾಣಾ ದಗ್ಗುಬಾಟಿ- ಜಾನ್ವಿ ಕಪೂರ್
ವೆಬ್‌ಸಿರೀಸ್‌ ಪ್ರಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿದ ನಟ ರಾಣಾ ದಗ್ಗುಬಾಟಿ- ಜಾನ್ವಿ ಕಪೂರ್

Rana Daggubati: ಟಾಲಿವುಡ್‌ ನಟ ರಾಣಾ ದಗ್ಗುಬಾಟಿಗೆ ದೊಡ್ಡ ಮಟ್ಟದ ಹೆಸರು ಮತ್ತು ಯಶಸ್ಸು ತಂದು ಕೊಟ್ಟ ಸಿನಿಮಾ ಬಾಹುಬಲಿ ಸರಣಿ. ಅದಾದ ಮೇಲೆ ಹಲವು ಸಿನಿಮಾಗಳಲ್ಲಿ ರಾಣಾ ನಟಿಸಿದರಾದರೂ, ಯಾವ ಚಿತ್ರವೂ ಕೈ ಹಿಡಿಯಲಿಲ್ಲ. ಸರಣಿ ಸೋಲುಗಳೇ ರಾಣಾ ಸುತ್ತುವರಿದವು. ಹೀಗಿರುವಾಗಲೇ ಇದೀಗ ಹೊಸ ಕೆಲಸಕ್ಕೆ ಇಳಿದಿದ್ದಾರೆ. ಸದ್ದಿಲ್ಲದೆ ಕಿಡ್ನಾಪರ್‌ ಆಗಿದ್ದಾರೆ! ಇವರ ಈ ಮಹಾನ್‌ ಕೆಲಸಕ್ಕೆ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಸಹ ಸಾಥ್‌ ನೀಡಿದ್ದಾರೆ.

ಕಾರಿನಲ್ಲಿ ಬಂದು ವ್ಯಕ್ತಿಯೋರ್ವನನ್ನು ಕಿಡ್ನಾಪ್‌ ಮಾಡಿಕೊಂಡು, ಕಾರಿನ ಹಿಂದಿನ ಡಿಕ್ಕಿಯಲ್ಲಿ ಹಾಕಿದ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೋಡುಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಾಗಂತ ಇದು ರಿಯಲ್‌ ಕಿಡ್ನಾಪ್‌ ಅಲ್ಲ; ಬದಲಿಗೆ ರೀಲ್‌ ಅಪಹರಣ! ನೆಟ್‌ಫ್ಲಿಕ್ಸ್‌ನಲ್ಲಿ ಇನ್ನೇನು ಸ್ಟ್ರೀಮಿಂಗ್‌ಗೆ ಸಿದ್ಧವಾಗಿರುವ ‘ರಾಣಾ ನಾಯ್ಡು’ ವೆಬ್‌ಸಿರೀಸ್‌ನ ಪ್ರಮೋಷನ್‌ ಗಿಮಿಕ್.‌

ಈ ಪ್ರಮೋಷನ್‌ ವಿಡಿಯೋವನ್ನು ಶೇರ್‌ ಮಾಡಿರುವ ನೆಟ್‌ಫ್ಲಿಕ್ಸ್‌, "ಜಾನ್ವಿ ಮತ್ತು ರಾಣಾ ಮಾಡಿದ ಕರಾಳ ಕೆಲಸವೊಂದನ್ನು ನೋಡೋಣ ಬನ್ನಿ" ಎಂಬ ಕ್ಯಾಪ್ಶನ್‌ ನೀಡಿ ಪೋಸ್ಟ್‌ ಮಾಡಿದೆ. ಸದ್ಯ ಈ ವಿಡಿಯೋ ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಆದರೆ, ಈ ವೆಬ್‌ಸಿರೀಸ್‌ನಲ್ಲಿ ರಾಣಾ ಮತ್ತು ಜಾನ್ವಿ ಪಾತ್ರ ಏನಿರಬಹುದು ಎಂಬ ವಿಚಾರ ಮಾತ್ರ ರಿವೀಲ್‌ ಆಗಿಲ್ಲ. ಕಿಡ್ನಾಪರ್ಸ್‌ ಇರಬಹುದಾ ಎಂಬ ಪ್ರಶ್ನೆಗೂ ನಿಖರ ಉತ್ತರವಿಲ್ಲ.

ರಾಣಾ ನಾಯ್ಡು ವೆಬ್‌ಸಿರೀಸ್‌ನಲ್ಲಿ ವೆಂಕಟೇಶ್‌ ದಗ್ಗುಬಾಟಿ, ರಾಣಾ ದಗ್ಗುಬಾಟಿ ಮುಖ್ಯಭೂಮಿಕೆಯಲ್ಲಿದ್ದರೆ, ಜಾನ್ವಿ ಕಪೂರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೇರಿಕನ್ ಟಿವಿ ಸರಣಿ ರೇ ಡೊನೊವನ್‌ ರಿಮೇಕ್ ಇದಾಗಿದ್ದು, ಕರಣ್ ಅಂಶುಮಾನ್ ಮತ್ತು ಸುಪರ್ಣ್ ವರ್ಮಾ ಜಂಟಿಯಾಗಿ ನಿರ್ದೇಶಿಸಿದ್ದಾರೆ.

ಲೋಕೋಮೋಟಿವ್ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಸುಂದರ್ ಆರನ್ ಈ ಸರಣಿಯನ್ನು ನಿರ್ಮಿಸಿದ್ದಾರೆ. ಸುರ್ವೀನ್ ಚಾವ್ಲಾ, ಸುಶಾಂತ್ ಸಿಂಗ್, ಆಶಿಶ್ ವಿದ್ಯಾರ್ಥಿ, ಗೌರವ್ ಚೋಪ್ರಾ, ಸುಚಿತ್ರಾ ಪಿಳ್ಳೈ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಣಾ ನಾಯ್ಡು ಮಾರ್ಚ್ 10 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

IPL_Entry_Point