ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್ ಕಿಂಗ್ಸ್ Vs ಆರ್​​ಸಿಬಿ ಪಂದ್ಯ ಮಳೆಯಿಂದ ರದ್ದುಗೊಂಡರೆ, ಯಾವ ತಂಡಕ್ಕೆ ಹೆಚ್ಚು ಲಾಭ; ಫಾಫ್ ಪಡೆಯ ಕಥೆ ಏನು?

ಪಂಜಾಬ್ ಕಿಂಗ್ಸ್ vs ಆರ್​​ಸಿಬಿ ಪಂದ್ಯ ಮಳೆಯಿಂದ ರದ್ದುಗೊಂಡರೆ, ಯಾವ ತಂಡಕ್ಕೆ ಹೆಚ್ಚು ಲಾಭ; ಫಾಫ್ ಪಡೆಯ ಕಥೆ ಏನು?

Punjab Kings vs RCB : ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ನಡುವಿನ ಪಂದ್ಯ ಒಂದು ವೇಳೆ ಮಳೆಯಿಂದ ರದ್ದುಗೊಂಡರೆ ಯಾವ ತಂಡಕ್ಕೆ ಹೆಚ್ಚು ಲಾಭ ಸಿಗಲಿದೆ? ಇಲ್ಲಿದೆ ವಿವರ.

ಪಂಜಾಬ್ ಕಿಂಗ್ಸ್ vs ಆರ್​​ಸಿಬಿ ಪಂದ್ಯ ಮಳೆಯಿಂದ ರದ್ದುಗೊಂಡರೆ, ಯಾವ ತಂಡಕ್ಕೆ ಹೆಚ್ಚು ಲಾಭ; ಫಾಫ್ ಪಡೆಯ ಕಥೆ ಏನು?
ಪಂಜಾಬ್ ಕಿಂಗ್ಸ್ vs ಆರ್​​ಸಿಬಿ ಪಂದ್ಯ ಮಳೆಯಿಂದ ರದ್ದುಗೊಂಡರೆ, ಯಾವ ತಂಡಕ್ಕೆ ಹೆಚ್ಚು ಲಾಭ; ಫಾಫ್ ಪಡೆಯ ಕಥೆ ಏನು?

ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಆರ್​​ಸಿಬಿ 10 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು 119 ರನ್ ಕಲೆ ಹಾಕಿದೆ. ರಜತ್ ಪಾಟೀದಾರ್ 55 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಅಜೇಯ 42 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. (ಮಳೆಯಿಂದ ಸ್ಥಗಿತಗೊಂಡಿದ್ದ ವೇಳೆಗೆ)

ಟ್ರೆಂಡಿಂಗ್​ ಸುದ್ದಿ

ಪಂದ್ಯ ರದ್ದಾದರೆ ಯಾವ ತಂಡಕ್ಕೆ ಲಾಭ?

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆದ್ದವರಿಗೆ ಪ್ಲೇಆಫ್ ಆಸೆ ಜೀವಂತವಾಗಿರಲಿದೆ. ಆದರೆ ಸೋತವರು ಅಧಿಕೃತವಾಗಿ ಮನೆಗೆ ಹೋಗಲಿದೆ. ಮಳೆ ಸುರಿಯುತ್ತಿರುವ ಕಾರಣ ಪಂದ್ಯ ರದ್ದುಗೊಂಡರೆ ಇದರ ಲಾಭ ಯಾರಿಗೆ ಸಿಗಲಿದೆ? ಆರ್​ಸಿಬಿ ಕಥೆ ಏನು? ಒಂದು ವೇಳೆ ಮಳೆಯಿಂದ ಆರ್​ಸಿಬಿ ಮತ್ತು ಪಿಬಿಕೆಎಸ್ ಪಂದ್ಯ ರದ್ದುಗೊಂಡರೆ, ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆಯಲಿದ್ದು, ಆಗ 9 ಅಂಕವಾಗಲಿದೆ.

ಹೀಗಾದರೆ ಉಭಯ ತಂಡಗಳು ಟೂರ್ನಿಯಲ್ಲಿ 13 ಅಂಕ (ಉಳಿದ ಎರಡು ಪಂದ್ಯ ಗೆದ್ದರೆ) ಪಡೆಯಲಷ್ಟೇ ಸಾಧ್ಯವಾಗಲಿದೆ. ಒಂದು ವೇಳೆ ಆರ್​ಸಿಬಿ vs ಪಿಬಿಕೆಎಸ್​ ಪಂದ್ಯ ರದ್ದುಗೊಂಡರೆ ಸಿಎಸ್​ಕೆ, ಡೆಲ್ಲಿ ಜಿಟಿ ಮತ್ತು ಲಕ್ನೋ ತಂಡಗಳಿಗೆ ಹೆಚ್ಚು ಲಾಭ ಸಿಗಲಿದೆ. ಏಕೆಂದರೆ ಈ ತಂಡಗಳಿಗೆ 14 ಅಂಕ ಪಡೆಯುವ ಅವಕಾಶ ಇದೆ. ಆದರೆ ಆರ್​​ಸಿಬಿ-ಪಂಜಾಬ್ ಬಹುತೇಕ ಟೂರ್ನಿಯಿಂದ ಹೊರಬೀಳಲಿವೆ.

ಆರ್​ಸಿಬಿಗೆ ಇನ್ನೂ ಇರಲಿದೆ ಅವಕಾಶ?

ಮಳೆಯಿಂದ ಪಂದ್ಯ ರದ್ದುಗೊಂಡರೂ ಆರ್​ಸಿಬಿಗೆ ಇನ್ನೂ ಒಂದು ಕೊನೆಯ ಅವಕಾಶ ಇರಲಿದೆ. ಇದು ಸಾಧ್ಯವಾಗಬೇಕೆಂದರೆ, ತಲಾ 12 ಅಂಕ ಪಡೆದಿರುವ ಡೆಲ್ಲಿ, ಲಕ್ನೋ, ಸಿಎಸ್​ಕೆ ಎಲ್ಲಾ ಪಂದ್ಯಗಳನ್ನು ಸೋಲಬೇಕು. ಅಂಕಪಟ್ಟಿಯಲ್ಲಿ 12 ಅಂಕ ದಾಟಬಾರದು. ಆದರೆ, ಆರ್​ಸಿಬಿ ಎಲ್ಲಾ ಪಂದ್ಯಗಳಲ್ಲಿ ಗೆದ್ದರೆ 13 ಅಂಕಗಳೊಂದಿಗೆ ಪ್ಲೇಆಫ್​ಗೆ ಪ್ರವೇಶಿಸುವ ಸಾಧ್ಯತೆ ಇದೆ. ಆದರೆ ಇದಕ್ಕೆ ಪವಾಡವೇ ನಡೆಯಬೇಕು.

ಸ್ಥಾನತಂಡಪಂದ್ಯಗೆಲುವುಸೋಲುಅಂಕNRR
1.ಕೋಲ್ಕತ್ತಾ ನೈಟ್ ರೈಡರ್ಸ್118316+1.453
2.ರಾಜಸ್ಥಾನ್ ರಾಯಲ್ಸ್118316+0.476
3.ಸನ್ ರೈಸರ್ಸ್ ಹೈದರಾಬಾದ್127514+0.41
4.ಚೆನ್ನೈ ಸೂಪರ್ ಕಿಂಗ್ಸ್116512+0.700
5.ಡೆಲ್ಲಿ ಕ್ಯಾಪಿಟಲ್ಸ್126612-0.316
6.ಲಕ್ನೋ ಸೂಪರ್ ಜೈಂಟ್ಸ್126612-0.769
7.ರಾಯಲ್ ಚಾಲೆಂಜರ್ಸ್ ಬೆಂಗಳೂರು11478-0.049
8.ಪಂಜಾಬ್ ಕಿಂಗ್ಸ್11478-0.187
9.ಮುಂಬೈ ಇಂಡಿಯನ್ಸ್12488-0.212
10.ಗುಜರಾತ್ ಟೈಟಾನ್ಸ್11478-1.320

IPL_Entry_Point