ಕನ್ನಡ ಸುದ್ದಿ  /  Entertainment  /  Sandalwood News Kannada Actress Sanjana Galrani Traveling Mecca Medina By Wearing Burqa Sanjana Galrani Instagram Rsm

Sanjana Galrani: ಬುರ್ಖಾ ಧರಿಸಿ ಮೆಕ್ಕಾ ಮದೀನಾ ಹೊರಟ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ, ಹರಿದು ಬಂತು ಪರ ವಿರೋಧ ಕಾಮೆಂಟ್ಸ್‌; ವಿಡಿಯೋ

ನಾನು ನನ್ನ ಪರಿವಾರದೊಂದಿಗೆ ಮೆಕ್ಕಾ ಹಾಗೂ ಮದೀನಕ್ಕೆ ಆಧ್ಯಾತ್ಮಿಕ ಪ್ರಯಾಣ ಮಾಡುತ್ತಿದ್ದೇನೆ. ನಮ್ಮ ಪ್ರಯಾಣದ ಪ್ರತಿಯೊಂದು ವ್ಲಾಗನ್ನು ನಾನು ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತೇನೆ. ಈ ನನ್ನ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದ ಕೂಡಾ ಜೊತೆ ಇರಲಿ ಎಂದು ಸಂಜನಾ ಹೇಳಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ
ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ (PC: Sandalwood Actress Instagram)

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಈಗ ಸಿನಿಮಾಗಳಿಂದ ದೂರ ಉಳಿದು ಕಂಪ್ಲೀಟ್‌ ಗೃಹಿಣಿಯಾಗಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ತಾವು ಮತ್ತೆ ಮಲಯಾಳಂ ಚಿತ್ರದ ಮೂಲಕ ಕಮ್‌ ಬ್ಯಾಕ್‌ ಮಾಡುತ್ತಿರುವುದಾಗಿ ಸಂಜನಾ ಇತ್ತೀಚೆಗೆ ಹೇಳಿಕೊಂಡಿದ್ದರು. ಇದೀಗ ಸಂಜನಾ ಹಂಚಿಕೊಂಡಿರುವ ಮತ್ತೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಸಂಜನಾ ಗಲ್ರಾನಿ ಬುರ್ಖಾ ಧರಿಸಿ ವಿಡಿಯೋ ಮಾಡಿ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ನನ್ನ ಪ್ರೀತಿಯ ವಂದನೆಗಳು, ಇದೇನಪ್ಪಾ ಸಂಜನಾ ಗಲ್ರಾನಿ ಬುರ್ಖಾ ಧರಿಸಿ ಏನು ಮಾಡ್ತಿದ್ದಾರೆ ಅಂದುಕೊಂಡ್ರಾ, ನಾನು ನನ್ನ ಪರಿವಾರದೊಂದಿಗೆ ಮೆಕ್ಕಾ ಹಾಗೂ ಮದೀನಕ್ಕೆ ಆಧ್ಯಾತ್ಮಿಕ ಪ್ರಯಾಣ ಮಾಡುತ್ತಿದ್ದೇನೆ. ನಮ್ಮ ಪ್ರಯಾಣದ ಪ್ರತಿಯೊಂದು ವ್ಲಾಗನ್ನು ನಾನು ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತೇನೆ. ಈ ನನ್ನ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದ ಕೂಡಾ ಜೊತೆ ಇರಲಿ ಎಂದು ಸಂಜನಾ ಹೇಳಿಕೊಂಡಿದ್ದಾರೆ. ಸಂಜನಾ ವಿಡಿಯೋಗೆ ಪರ ವಿರೋಧ ಕಾಮೆಂಟ್‌ ಹರಿದು ಬರುತ್ತಿವೆ. ಕೆಲವರು ಸಂಜನಾ ಮೆಕ್ಕಾ ಮದೀನಾ ಪ್ರಯಾಣಕ್ಕೆ ಶುಭ ಕೋರಿದರೆ, ಇನ್ನೂ ಕೆಲವರು ವಿರುದ್ಧವಾಗಿ ಕಾಮೆಂಟ್ಸ್‌ ಮಾಡುತ್ತಿದ್ದಾರೆ.

ಮದುವೆ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಸಂಜನಾ

ಸಂಜನಾ ಗಲ್ರಾನಿ ತಾವು ಮದುವೆ ಆಗಿರುವ ಸುದ್ದಿಯನ್ನು ಸೀಕ್ರೇಟ್‌ ಆಗಿ ಇಟ್ಟಿದ್ದರು. ಆದರೆ ಡ್ರಗ್ಸ್‌ ವಿವಾದದ ಸಮಯದಲ್ಲಿ ಆಕೆ ಮುಸ್ಲಿಂ ಧರ್ಮಕ್ಕೆ ಸೇರಿದ ಅಜೀಜ್‌ ಪಾಷಾ ಎಂಬ ವೈದ್ಯರೊಬ್ಬರನ್ನು ಮದುವೆ ಆಗಿದ್ದು ಇಸ್ಲಾಂ ಧರ್ಮಕ್ಕೆ ಕೂಡಾ ಮತಾಂತರಗೊಂಡಿದ್ದಾರೆ ಎಂಬ ಸತ್ಯ ತಿಳಿಯಿತು. ಕಳೆದ ವರ್ಷ ಮೇ ತಿಂಗಳಲ್ಲಿ ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದು ಮಗನಿಗೆ ಅಲಾರಿಕ್‌ ಎಂದು ನಾಮಕರಣ ಕೂಡಾ ಮಾಡಿದ್ದಾರೆ.

ಮಲಯಾಳಂ ಸಿನಿಮಾ ಮೂಲಕ ಕಮ್‌ ಬ್ಯಾಕ್‌

ಇಷ್ಟು ದಿನಗಳ ಕಾಲ ಸಿನಿಮಾಗಳಿಂದ ದೂರ ಇದ್ದ ಸಂಜನಾ ಗಲ್ರಾನಿ ಈಗ ಮಲಯಾಳಂ ಸಿನಿಮಾ ಮೂಲಕ ಕಮ್‌ ಬ್ಯಾಕ್‌ ಮಾಡಿದ್ದಾರೆ. 'ಕಪ್ಪ' ಸಿನಿಮಾ ಖ್ಯಾತಿಯ ವಿಜಯ್‌ ಕುಮಾರ್‌ ನಿರ್ದೇಶನದ ಸಿನಿಮಾ ಮೂಲಕ ನಟನೆಗೆ ವಾಪಸ್‌ ಬಂದಿರುವುದಾಗಿ ಸಂಜನಾ ಇತ್ತೀಚೆಗೆ ಹೇಳಿಕೊಂಡಿದ್ದರು.

'ಗಂಡ ಹೆಂಡತಿ' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದ ಸಂಜನಾ

ಸಂಜನಾ ಗಲ್ರಾನಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ, ಕಾಲೇಜಿನ ದಿನಗಳಲ್ಲಿ ಮಾಡೆಲಿಂಗ್​​​​​​​​​ನಲ್ಲಿ ಸಕ್ರಿಯರಾಗಿದ್ದ ಸಂಜನಾ, 2005 ರಲ್ಲಿ 'ಸೊಗ್ಗಾಡು' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ನಂತರ ತಮಿಳು ಚಿತ್ರದಲ್ಲಿ ನಟಿಸಿದ ಅವರು 2006 ರಲ್ಲಿ 'ಗಂಡ ಹೆಂಡತಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಗಂಡ ಹೆಂಡತಿ ಚಿತ್ರದ ಬೋಲ್ಡ್ ಆ್ಯಕ್ಟಿಂಗ್ ಕೆಲವರಿಗೆ ಇಷ್ಟವಾದರೆ, ಇನ್ನೂ ಕೆಲವರು ಟೀಕೆ ವ್ಯಕ್ತಪಡಿಸಿದ್ದರು. ಜಾಕ್ ಪಾಟ್, ಆಟೋಗ್ರಾಫ್ ಪ್ಲೀಸ್, ಸತ್ಯಮೇವ ಜಯತೇ, ಮಸ್ತ್ ಮಜಾ ಮಾಡಿ, ಹುಡುಗ ಹುಡುಗಿ, ಮೈಲಾರಿ, ನರಸಿಂಹ ಸೇರಿ ಅನೇಕ ಸಿನಿಮಾಗಳಲ್ಲಿ ಸಂಜನಾ ನಟಿಸಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲಿ ಕೂಡಾ ಸಂಜನಾ ಗಲ್ರಾನಿ ಗುರುತಿಸಿಕೊಂಡಿದ್ದಾರೆ.

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.