Brundavana Serial: ಮನೆ ಬಾಗಿಲಲ್ಲಿ ಆಕಾಶ್‌ನನ್ನು ನೋಡಿ ತಲೆ ತಿರುಗಿ ಬಿದ್ದ ಗಿರಿಜಾ, ಸುಧಾಮೂರ್ತಿಗಳ ಮನೆಯಲ್ಲಿ ಬಿರುಕಿನ ಮುನ್ಸೂಚನೆ-television news colors kannada brindavana kannada serial today episode 127 mar 28th sudha anxious about bhargavi rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಮನೆ ಬಾಗಿಲಲ್ಲಿ ಆಕಾಶ್‌ನನ್ನು ನೋಡಿ ತಲೆ ತಿರುಗಿ ಬಿದ್ದ ಗಿರಿಜಾ, ಸುಧಾಮೂರ್ತಿಗಳ ಮನೆಯಲ್ಲಿ ಬಿರುಕಿನ ಮುನ್ಸೂಚನೆ

Brundavana Serial: ಮನೆ ಬಾಗಿಲಲ್ಲಿ ಆಕಾಶ್‌ನನ್ನು ನೋಡಿ ತಲೆ ತಿರುಗಿ ಬಿದ್ದ ಗಿರಿಜಾ, ಸುಧಾಮೂರ್ತಿಗಳ ಮನೆಯಲ್ಲಿ ಬಿರುಕಿನ ಮುನ್ಸೂಚನೆ

Brindavana Kannada Serial Today Episode Mar 28th: : ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಆಕಾಶ್‌-ಪುಷ್ಪಾ ಅಪ್ಪಣ್ಣನ ಮನೆಗೆ ಸಡನ್‌ ವಿಸಿಟ್‌ ಮಾಡ್ತಾರೆ. ಅನುಪಮಾ ಬಳಿ ಭಾರ್ಗವಿ ವಿಚಾರ ಹೇಳುವ ಸುಧಾಮೂರ್ತಿ ಆತಂಕ ತೋಡಿಕೊಳ್ಳುತ್ತಾರೆ. ಮನೆ ಬಾಗಿಲಲ್ಲಿ ಆಕಾಶ್‌ನನ್ನ ನೋಡಿ ತಲೆ ತಿರುಗಿ ಬೀಳ್ತಾಳೆ ಗಿರಿಜಾ.

ಮನೆ ಬಾಗಿಲಲ್ಲಿ ಆಕಾಶ್‌ನನ್ನು ನೋಡಿ ತಲೆ ತಿರುಗಿ ಬಿದ್ದ ಗಿರಿಜಾ
ಮನೆ ಬಾಗಿಲಲ್ಲಿ ಆಕಾಶ್‌ನನ್ನು ನೋಡಿ ತಲೆ ತಿರುಗಿ ಬಿದ್ದ ಗಿರಿಜಾ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 28) ಸಂಚಿಕೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಸಡನ್‌ ಆಗಿ ಒಂದೆಡೆ ಬ್ರೇಕ್‌ ಹಾಕ್ತಾನೆ ಆಕಾಶ್‌. ಗಾಬರಿಯಾಗುವ ಪುಷ್ಪಾ ಏನಾಯ್ತು ಎಂದು ಎದುರು ನೋಡ್ತಾಳೆ. ಆಗ ಆಕಾಶ್‌ ʼಗಾಬರಿಯಾಗ್ಬೇಡಿ, ಎದುರುಗಡೆ ಯಾರೂ ಬಂದಿಲ್ಲ, ಹಿಂದೆನೂ ಯಾರಿಲ್ಲ, ನಿಮಗೆ ಕಬ್ಬಿನ ಜ್ಯೂಸ್‌ ಇಷ್ಟ ಅಲ್ವಾ ಅದಕ್ಕೆ ಕಬ್ಬಿನ ಜ್ಯೂಸ್‌ ಕುಡಿಯೋಣ ಅಂತ ನಿಲ್ಲಿಸದೆʼ ಎಂದು ಹೆಂಡತಿಗೆ ಕಬ್ಬಿನ ಜ್ಯೂಸ್‌ ಕೊಡಿಸ್ತಾನೆ. ಗಂಡನ ಪ್ರೀತಿ, ಕಾಳಜಿ ಕಂಡು ಪುಷ್ಪಾ ಮನ ತುಂಬಿ ಬರುತ್ತದೆ. 

ಸತ್ಯಮೂರ್ತಿ ಪಜೀತಿ

ಆಕಾಶ್‌ ಎಲ್ಲಿಗೆ ಹೋಗಿದ್ದಾನೆ ಎಂದು ತಿಳಿಯಲು ಕಾರ್‌ ಟ್ರ್ಯಾಕರ್‌ ಅಳವಡಿಸುತ್ತಾರೆ ಸತ್ಯಮೂರ್ತಿ. ಮನೆಯವರ ಬಳಿ ʼಆಕಾಶ್‌ ಪುಷ್ಪಾಳನ್ನು ಕರೆದುಕೊಂಡು ಎಲ್ಲಿಗೆ ಹೋಗಿದ್ದಾನೆ, ಈಗ ಎಲ್ಲಿದ್ದಾನೆ ಎಲ್ಲವೂ ನನಗೆ ಗೊತ್ತುʼ ಎಂದು ಜಂಭ ಕೊಚ್ಚಿಕೊಳ್ಳುತ್ತಾರೆ. ಆಗ ಮನೆಯವರು ಅವನನ್ನು ಕಿಚಾಯಿಸುತ್ತಾ, ʼಹೌದಾ ಹಾಗಾದ್ರೆ ಸರಿ ಈಗ ಎಲ್ಲಿದ್ದಾನೆ ಹೇಳಿ, ನೀವು ಹೇಗೆ ತಿಳಿದುಕೊಂಡ್ರಿ ಅದನ್ನೆಲ್ಲಾʼ ಎಂದು ಕೇಳಿದಾಗ ಟ್ರ್ಯಾಕ್ಟರ್‌ ಅಳವಡಿಸಿರುವ ಬಗ್ಗೆ ಹೇಳುತ್ತಾರೆ ಸತ್ಯಮೂರ್ತಿ. ʼಸರಿ ಮಾವ, ಹಾಗಾದ್ರೆ ಈಗ ಆಕಾಶ್‌-ಪುಷ್ಪಾ ಎಲ್ಲಿದ್ದಾರೆ ಹೇಳಿʼ ಎಂದು ಅನುಪಮಾ ಕೇಳಿದ್ದಕ್ಕೆ ʼಇರು ಈಗಲೇ ಹೇಳ್ತೀನಿʼ ಎಂದು ಮೊಬೈಲ್‌ ಹುಡುಕುವ ಸತ್ಯಮೂರ್ತಿಗೆ ಜೇಬಿನಲ್ಲಿ ಮೊಬೈಲ್‌ ಇಲ್ಲದೇ ಇರುವುದು ತಿಳಿಯುತ್ತದೆ. ಕೊನೆಗೆ ತಾನು ಟ್ರ್ಯಾಕರ್‌ ಅಳವಡಿಸುವ ಗಡಿಬಿಡಿಯಲ್ಲಿ ಮೊಬೈಲ್‌ ಅನ್ನು ಕಾರಿನಲ್ಲೇ ಇರಿಸಿ ಬಂದಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ. ಅದನ್ನ ಕೇಳಿ ಮನೆಯವರೆಲ್ಲಾ ಬಿದ್ದು ಬಿದ್ದು ನಗುತ್ತಾರೆ ಮಾತ್ರವಲ್ಲ, ಪುಷ್ಪಾ ಆಕಾಶ್‌ ಅವರ ಅಣ್ಣನ ಮನೆಗೆ ಹೋಗಿದ್ದು ಎಂಬ ವಿಚಾರವನ್ನೂ ಅವರ ಮುಂದೆ ಹೇಳಿ ಈ ವಿಚಾರ ನಮಗೆ ಮುಂಚೆ ಗೊತ್ತಿತ್ತು ಎಂದು ಇನ್ನಷ್ಟು ಗೋಳು ಹೊಯ್ದುಕೊಳ್ಳುತ್ತಾರೆ.

ಅನುಪಮಾ ಎದುರು ಭಾರ್ಗವಿ ವಿಚಾರ ಬಯಲು

ತಾಯಿಯ ಕಾಲು ಒತ್ತುತ್ತಾ ಅನುಪಮಾ ʼಯಾಕಮ್ಮ, ಆಸ್ಪತ್ರೆಗೆ ಹೋಗಿ ಬಂದಾಗಿನಿಂದ ನೀವು ಡಲ್‌ ಇದ್ದೀಯಾ, ಎಂದೂ ಕಾಡದ ಭಯ ನಿನ್ನಲ್ಲಿ ಕಾಣುತ್ತಿದೆ, ಏನಾಯ್ತು ಹೇಳಮ್ಮ, ನೀನು ಮೊದಲಿನ ಹಾಗೆ ಇಲ್ಲವೇ ಇಲ್ಲʼ ಎಂದು ಆತಂಕ ವ್ಯಕ್ತಪಡಿಸುತ್ತಾಳೆ. ಆಗ ಸುಧಾಮೂರ್ತಿ ʼಬೃಂದಾವನದ ಒಗ್ಗಟ್ಟೇ ನನ್ನ ಉಸಿರು, ಆದರೆ ಇದೀಗ ಈ ಮನೆಯ ಒಗ್ಗಟ್ಟಿಗೆ ಸಂಚಕಾರ ಬರುವ ಹಾಗಿದೆ, ಹಾಗೇನಾದ್ರು ಆದ್ರೆ ನನ್ನ ಉಸಿರು ನಿಂತು ಹೋಗುತ್ತೆʼ ಎಂದು ಗಾಬರಿ ವ್ಯಕ್ತಪಡಿಸುತ್ತಾಳೆ. ʼಅಂಥದ್ದು ಏನಾಯ್ತಮ್ಮ ಈಗ, ಬೃಂದಾವನದ ಒಗ್ಗಟ್ಟ ಯಾವ ಕಾರಣಕ್ಕೆ ಮುರಿಯುತ್ತದೆ, ನಮ್ಮ ಮನೆಯ ಒಗ್ಗಟ್ಟು ಮುರಿಯೋಕೆ ಯಾರಿಂದ ಸಾಧ್ಯʼ ಎಂದು ಪ್ರಶ್ನೆ ಮಾಡ್ತಾಳೆ. ಆಗ ಸುಧಾಮೂರ್ತಿ ʼಭಾರ್ಗವಿ, ಅವಳು ಮತ್ತೆ ಬಂದಿದ್ದಾಳೆ. ನಮ್ಮೆಲ್ಲರ ನೆಮ್ಮದಿ ಕಿತ್ತು, ಈ ಮನೆಯನ್ನು ಸರ್ವನಾಶ ಮಾಡ್ತೀನಿ ಅನ್ನುವ ಪಣ ತೊಟ್ಟಿದ್ದಾಳೆ. ಅವಳು ತಾನು ಅಂದುಕೊಂಡಿದ್ದನ್ನು ಸಾಧಿಸದೇ ಬಿಡುವವಳಲ್ಲʼ ಎಂದು ಹೇಳಿ ಆಸ್ಪತ್ರೆಯಲ್ಲಿ ಭಾರ್ಗವಿ ಸಿಕ್ಕಿದ್ದು, ಬೃಂದಾವನದ ಬಗ್ಗೆ ಅವಳ ದ್ವೇಷದ ಮಾತು, ಮನೆಗೆ ಸ್ವೀಟ್‌ ಕಳುಹಿಸಿ ಅದರಲ್ಲಿ ವಿಷ ಇದೆ ಎಂದು ಹೆದರಿಸಿದ್ದು ಈ ಎಲ್ಲವನ್ನೂ ಅನುಪಮಾಳ ಮುಂದೆ ಹೇಳುತ್ತಾರೆ. ಭಾರ್ಗವಿಯ ವಿಚಾರ ಕೇಳಿ ಕ್ಷಣ ಕಾಲ ಹೆದರುವ ಅನುಪಮಾ ನಂತರ ಸಾವರಿಸಿಕೊಂಡು ʼಅಮ್ಮ ಬೃಂದಾವನಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಬೃಂದಾವನ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ ಎಂದು ತಿಳಿದ ಮೇಲೆ ಅವಳು ನಿನಗೆ ಭಯ ಪಡಿಸೋಕೆ ಹೇಳಿದ್ದಾಳೆʼ ಎಂದು ಸಮಾಧಾನ ಮಾಡುತ್ತಾಳೆ.

ಆಕಾಶ್‌-ಪುಷ್ಪಾ ನೋಡಿ ತಲೆ ಸುತ್ತಿ ಬೀಳುವ ಗಿರಿಜಾ

ಚಮಲ್‌ಲಾಲ್‌ಗೆ 50 ಸಾವಿರ ಹೊಂದಿಸಲು ಪರದಾಡುತ್ತಿರುವ ಗಿರಿಜಾ, ಗೆಳತಿ ಲಲಿತಾ ಬಳಿ ಸಹಾಯ ಕೇಳಿ ಕಾಲ್‌ ಮಾಡ್ತಾಳೆ. ಆಗ ಲಲಿತಾ ಕೊನೆಯ ಪ್ರಯತ್ನ ಪುಷ್ಪಾಳ ಮನೆಗೆ ಹೋಗಿ ಒಂದಿಷ್ಟು ಬಾಚ್ಕೊಂಡ್‌ ಬಂದ್‌ ಬಿಡು ಎಂದು ಸಲಹೆ ಕೊಡ್ತಾಳೆ. ಅದಕ್ಕೆ ಗಿರಿಜಾ ʼಅವರ ಮನೆಗೆ ಹೋಗೋದು ಇರ್ಲಿ ಆಕಾಶಪ್ಪನ ಹೆಸರನ್ನ ನನ್ನ ಗಂಡನ ಬಾಯಲ್ಲಿ ಕೇಳಿದ್ರೆ ನಂಗೆ ನಡುಕ ಶುರುವಾಗುತ್ತೆ. ಇನ್ನು ಅವರು ಎದುರು ಬಂದ್ರೆ ನಾನು ಸತ್ತೆ ಹೋಗ್ತೀನಿ ಅನ್ಸುತ್ತೆʼ ಎನ್ನುತ್ತಿರುವಾಗ ಬಾಗಿಲು ಬಡಿದ ಶಬ್ದ ಕೇಳಿಸುತ್ತೆ. ಯಾರಿರಬಹುದು ಎಂದು ಬಾಗಿಲು ತೆರೆದು ನೋಡುವ ಗಿರಿಜಾ ಮನೆ ಬಾಗಿಲಲ್ಲಿ ನಿಂತ ಆಕಾಶ್‌-ಪುಷ್ಪಾರನ್ನು ನೋಡಿ ಗಾಬರಿಗೊಳ್ಳುತ್ತಾಳೆ. ಅವರು ಮನೆಯೊಳಗೆ ಬಂದಾಗ ತಲೆಸುತ್ತಿ ಬಿದ್ದು ಬಿಡುತ್ತಾಳೆ. ಇತ್ತ ಗಿರಿಜಾ ಇದ್ದಕ್ಕಿದ್ದಂತೆ ಫೋನ್‌ ಕಟ್‌ ಮಾಡಿದ್ದು ನೋಡಿದ್ದು ಗಾಬರಿಯಾಗಿ ಅಪ್ಪಣ್ಣನ ಮನೆಗೆ ಓಡಿ ಬರುವ ಲಲಿತಾ ಪುಷ್ಪಾ-ಆಕಾಶ್‌ನನ್ನ ನೋಡಿ ಗಾಬರಿಯಾಗುತ್ತಾಳೆ. ಗಿರಿಜಾಳನ್ನು ಎಬ್ಬಿಸಿ ಕೂರಿಸುವ ಲಲಿತಾ ಅಪರೂಪಕ್ಕೆ ಪುಷ್ಪಾಳನ್ನು ನೋಡಿ ಖುಷಿಯಿಂದ ಬಿದ್ದಿದ್ದಾಳೆ ಎಂದು ಮಾತು ತೇಲಿಸುತ್ತಾಳೆ. ಇತ್ತ ಆಕಾಶ್‌ ಗಿರಿಜಾ ಬಳಿ ನಿಮ್ಮ ಬಣ್ಣ ಬಯಲು ಮಾಡ್ತೇನೆ ಎಂದು ಹೆದರಿಸುತ್ತಾನೆ.

ಬಹುದಿನಗಳ ನಂತರ ತಂಗಿಯನ್ನು ನೋಡಿದ ಅಪ್ಪಣ್ಣ ಸಂತೋಷದಲ್ಲಿ ಹಾರಾಡುತ್ತಾನೆ. ಇತ್ತು ಸುಧಾಮೂರ್ತಿಗಳ ಮನೆಯಲ್ಲಿ ವ್ಯವಹಾರ ವಿಚಾರಕ್ಕೆ ರಾಘು ಹಾಗೂ ತಿಶ್ರೂಲ್‌ ನಡುವೆ ಮನಸ್ತಾಪ ಮೂಡಿರುತ್ತದೆ. ಇಬ್ಬರೂ ಮನೆಯಲ್ಲಿ ಕೂಗಾಡುತ್ತಾರೆ, ಜಗಳ ತಾರಕಕ್ಕೇರಿ ರಾಘು ಹೆಂಡತಿ ರತ್ನಾಳ ಬಳಿ ನಾವು ಈ ಮನೆ ಬಿಟ್ಟು ಹೋಗೋಣ ಎನ್ನುತ್ತಾನೆ. ಇದನ್ನು ಕೇಳಿಸಿಕೊಂಡ ಸುಧಾಮೂರ್ತಿ ಗಾಬರಿಯಾಗಿ ಓಡಿಬಂದು ಇಬ್ಬರನ್ನು ಸಮಾಧಾನ ಮಾಡುತ್ತಾರೆ.

ರಾಘು-ತ್ರಿಶೂಲ್‌ ಜಗಳ ಸುಧಾಮೂರ್ತಿ ಮನೆ ಬಿರುಕು ಮೂಡುವ ಮುನ್ಸೂಚನೆಯೇ, ಗಿರಿಜಾಳ ಬಂಡವಾಳ ಬಯಲು ಮಾಡ್ತಾನಾ ಆಕಾಶ್‌, ಚಮಲ್‌ಲಾಲ್‌ಗೆ ಹಣ ಕೊಡಲು ಗಿರಿಜಾ ಏನು ವ್ಯವಸ್ಥೆ ಮಾಡ್ತಾಳೆ ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

mysore-dasara_Entry_Point