ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 125 Mar 26th Someone Sent Sweet Box Rst

Brundavana Serial: ಬೃಂದಾವನಕ್ಕೆ ಬಂತು ಫ್ರಮ್‌ ಅಡ್ರೆಸ್‌ ಇಲ್ಲದ ಸ್ವೀಟ್‌ ಬಾಕ್ಸ್‌; ಅಜ್ಜಮ್ಮನ ವರ್ತನೆ ಪುಷ್ಪಾಳಲ್ಲಿ ಮೂಡಿಸಿದೆ ಅನುಮಾನ

Brindavana Kannada Serial Today Episode Mar 26th: : ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಬೃಂದಾವನಕ್ಕೆ ಸ್ವೀಟ್‌ ಬಾಕ್ಸ್‌ ಕಳುಹಿಸುವ ಭಾರ್ಗವಿ ಅದನ್ನು ಕರೆ ಮಾಡಿ ಸುಧಾಮೂರ್ತಿಗೆ ಹೇಳುತ್ತಾಳೆ. ಸ್ವೀಟ್‌ ಬಾಕ್ಸ್‌ನಲ್ಲಿ ವಿಷ ಬೆರೆಸಿದೆ ಎಂಬ ಭಾರ್ಗವಿಯ ಮಾತಿಗೆ ಗಾಬರಿಯಾಗುವ ಅಜ್ಜಮ್ಮ ಮನೆಮಂದಿ ಸ್ವೀಟ್‌ ತಿನ್ನುವುದನ್ನು ತಡೆಯುತ್ತಾರೆ.

ಬೃಂದಾವನಕ್ಕೆ ಬಂತು ಫ್ರಮ್‌ ಅಡ್ರೆಸ್‌ ಇಲ್ಲದ ಸ್ವೀಟ್‌ ಬಾಕ್ಸ್‌; ಅಜ್ಜಮ್ಮನ ವರ್ತನೆ ಪುಷ್ಪಾಳಲ್ಲಿ ಮೂಡಿಸಿದೆ ಅನುಮಾನ
ಬೃಂದಾವನಕ್ಕೆ ಬಂತು ಫ್ರಮ್‌ ಅಡ್ರೆಸ್‌ ಇಲ್ಲದ ಸ್ವೀಟ್‌ ಬಾಕ್ಸ್‌; ಅಜ್ಜಮ್ಮನ ವರ್ತನೆ ಪುಷ್ಪಾಳಲ್ಲಿ ಮೂಡಿಸಿದೆ ಅನುಮಾನ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 26) ಸಂಚಿಕೆಯಲ್ಲಿ ಮನೆಯವರೆಲ್ಲರೂ ಹಾಲ್‌ನಲ್ಲಿ ಕಾಫಿ ಕುಡಿಯುತ್ತಿರುವ ಹೊತ್ತಿಗೆ ಸತ್ಯಮೂರ್ತಿ ಹಾಗೂ ಅಲಮೇಲು ಒಂದು ಗಿಫ್ಟ್‌ ಬಾಕ್ಸ್‌ ಹಿಡಿದು ಒಳಗೆ ಬರುತ್ತಾರೆ. ʼಬೃಂದಾವನ ಮನೆಗೆ ಗಿಫ್ಟ್‌ ಬಾಕ್ಸ್‌ ಬಂದಿದೆ, ಆದರೆ ಇದರಲ್ಲಿ ಯಾರು ಕಳುಹಿಸಿದ್ದು ಎಂಬುದಿಲ್ಲʼ ಎನ್ನುತ್ತಾಳೆ ಅಲುಮೇಲು. ನೇತ್ರಾ ಕೂಡ ಗಿಫ್ಟ್‌ ಬಾಕ್ಸ್‌ ಚೆಕ್‌ ಮಾಡುತ್ತಾಳೆ. ಆದರೆ ಅದರಲ್ಲಿ ಫ್ರಮ್‌ ಅಡ್ರೆಸ್‌ ಇಲ್ಲದ್ದನ್ನು ನೋಡಿ ಯಾರು ಕಳುಹಿಸಿ ಇರಬಹುದು ಎಂದು ಯೋಚಿಸುತ್ತಾರೆ. ಆಗ ಸತ್ಯಮೂರ್ತಿ ಅತ್ತೆ ಮಾವ ಯಾವುದರೂ ಮಳಿಗೆ, ಬೇಕರಿ ಉದ್ಘಾಟನೆಗೆ ಹೋದಾಗ ಅಲ್ಲಿಯವರು ಗಿಫ್ಟ್‌ ಕೊಡುವುದು ಸಹಜ, ಇದು ಮೊನ್ನೆ ಬೇಕರಿ ಉದ್ಘಾಟನೆಗೆ ಹೋಗಿದ್ರಲ್ವಾ ಅವರು ಕೊಟ್ಟಿದ್ದು, ಸ್ವೀಟ್ಸ್‌ ಇರುತ್ತೆ ತಿನ್ನೋಣ ಎಂದು ಗಿಫ್ಟ್‌ ಪ್ಯಾಕ್‌ ತೆರೆದು ನೋಡಿದ್ರೆ ಅದರಲ್ಲಿ ಲಾಡು ಇರುತ್ತೆ. ಸತ್ಯಮೂರ್ತಿಗಳು ಎಲ್ಲರಿಗೂ ಲಾಡು ಹಂಚುತ್ತಾರೆ. ನೇತ್ರಾ ಮಗ ಮಾತ್ರ ಎರಡು ಲಾಡು ತೆಗೆದುಕೊಳ್ಳುತ್ತಾನೆ. ಅಷ್ಟೊತ್ತಿಗೆ ರೂಮ್‌ನಲ್ಲಿದ್ದ ಸುಧಾಮೂರ್ತಿ ನಂಬರ್‌ಗೆ ಅಪರಿಚಿತ ನಂಬರ್‌ನಿಂದ ಕಾಲ್‌ ಬರುತ್ತೆ.

ಸ್ವೀಟ್‌ನಲ್ಲಿ ವಿಷ ಬೆರೆಸಿದ್ದೇನೆ ಎಂದು ಎದೆ ನಡುಗಿಸುವ ಭಾರ್ಗವಿ

ಯಾರದಪ್ಪಾ ಇದು, ನಂಬರ್‌ ಎಂದುಕೊಂಡು ಸುಧಾಮೂರ್ತಿ ಕಾಲ್‌ ರಿಸೀವ್‌ ಮಾಡಿ ಹಲೋ ಎನ್ನುತ್ತಾರೆ. ಆ ಕಡೆ ನಿಶಬ್ದ ಇದ್ರೂ ಸುಧಾಮೂರ್ತಿಗೆ ಕಾಲ್‌ ಮಾಡಿದ್ದು ಭಾರ್ಗವಿಯೇ ಎಂಬುದು ಅರಿವಾಗುತ್ತದೆ. ʼಹಲೋ ಭಾರ್ಗವಿʼ ಎಂದು ಗಾಬರಿಯಲ್ಲೇ ಹೇಳುತ್ತಾರೆ ಸುಧಾಮೂರ್ತಿ. ʼನನ್ನ ಉಸಿರಿನಿಂದಲೇ ನೀನು ನನ್ನನ್ನು ಕಂಡು ಹಿಡಿದಿದ್ದೀಯಾ ಎಂದರೆ, ನನ್ನ ಮೇಲೆ ನಿನಗೆ ಎಷ್ಟು ಭಯ ಇದೆ ನೋಡು, ಈ ಭಯ ಯಾವಾಗ್ಲೂ ನಿನ್ನ ಕಾಡಬೇಕುʼ ಎಂದು ಭಾರ್ಗವಿ ಹೇಳುತ್ತಾಳೆ. ʼನಾನು ನಿನಗೆ ಸುಲಭವಾಗಿ ಸಾಯಲು ಬಿಡುವುದಿಲ್ಲ. ನಿನ್ನ ಮನೆಯವರು ಒಬ್ಬೊಬ್ಬರಾಗಿಯೇ ಸಾಯುವುದನ್ನು ನೀನು ನನ್ನ ಕಣ್ಣಾರೆ ನೋಡಬೇಕು. ಆ ನೋವನ್ನು ನೀವು ಅನುಭವಿಸಿ ನಂತರ ನೀನು ಸಾಯಬೇಕುʼ ಎಂದು ರೋಷದಿಂದ ಭಾರ್ಗವಿ, ಈಗಷ್ಟೇ ನಿನ್ನ ಮನೆಗೆ ಒಂದು ಸ್ವೀಟ್ ಬಾಕ್ಸ್‌ ಪಾರ್ಸೆಲ್‌ ಬಂದಿದೆ. ಅದನ್ನು ನಿನ್ನ ಮನೆಯವರೆಲ್ಲಾ ಹಂಚಿಕೊಂಡು ತಿಂದಿರ್ತಾರೆ, ಇದರಲ್ಲಿ ವಿಷ ಬೆರೆಸಿದ್ದೇನೆ. ಹೋಗು ನಿನ್ನ ಮನೆಯವರನ್ನು ಕಾಪಾಡಿಕೋʼ ಎಂದು ಹೇಳಿ ಫೋನ್‌ ಇಡುತ್ತಾಳೆ. ಅವಳ ಮಾತು ಕೇಳಿ ಗಾಬರಿಯಿಂದ ಹಾಲ್‌ಗೆ ಓಡೋದಿ ಬರುವ ಸುಧಾಮೂರ್ತಿ ʼಯಾರೂ ಸ್ವೀಟ್ಸ್‌ ತಿನ್ಬೇಡಿʼ ಎಂದು ಕಿರುಚಾಡುತ್ತಾರೆ. ಜೊತೆಗೆ ಎಲ್ಲರ ಕೈಯಿಂದ ಸ್ವೀಟ್‌ ಕಸಿದು ನೆಲಕ್ಕೆ ಎಸೆಯುತ್ತಾರೆ. ಪುಷ್ಪಾಳಿಗೆ ಇದನ್ನೆಲ್ಲಾ ಕ್ಲೀನ್‌ ಮಾಡಿ ಪ್ರಾಣಿ, ಪಕ್ಷಿ ಕೂಡ ತಿನ್ನದ ಜಾಗದಲ್ಲಿ ಎಸೆದು ಬಿಡು ಎನ್ನುತ್ತಾರೆ.

ಮನೆಯವರ ಮುಂದೆ ಸುಳ್ಳು ಹೇಳುವ ಸುಧಾಮೂರ್ತಿ ಅಜ್ಜಮ್ಮನ ಗಾಬರಿ ಕಂಡು ಮನೆಯವರೆಲ್ಲ ಅಚ್ಚರಿ ಪಡುತ್ತಾರೆ. ಅಲ್ಲದೇ ಈ ಸ್ವೀಟ್‌ ಬಾಕ್ಸ್‌ ಎಸೆಯಲು ಕಾರಣ ಏನಿರಬಹುದು ಎಂದು ಯೋಚಿಸುತ್ತಾರೆ. ಸುಧಾಮೂರ್ತಿ ಅವರನ್ನು ಕೂರಿಸಿ ಸಮಾಧಾನ ಮಾಡುವ ಮನೆಯವರು ʼನೀವ್ಯಾಕೆ ಇಷ್ಟೊಂದು ಗಾಬರಿ ಆಗಿದ್ದೀರಿ, ಅಷ್ಟಕ್ಕೂ ಆ ಸ್ವೀಟ್‌ ಬಾಕ್ಸ್‌ನಲ್ಲಿ ಏನಿತ್ತು, ಅದನ್ನು ತಿನ್ನಬಾರದು ಅಂತ ಎಸೆದಿದ್ದು ಯಾಕೆʼ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಸಾವರಿಸಿಕೊಂಡ ಸುಧಾಮೂರ್ತಿ ʼಪೇಪರ್‌ನಲ್ಲಿ ನೋಡಿಲ್ವಾ, ಸ್ವೀಟ್‌ ಬಾಕ್ಸ್‌ನಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಮನೆಯಲ್ಲಿ ಇರುವ ಚಿನ್ನ, ಬಣ್ಣ ದೋಚಿಕೊಂಡು ಹೋಗುತ್ತಾರೆ ಅಂತ ಬಂದಿರೋದು. ಯಾರೋ ಅಪರಿಚಿತರು ಕಳುಹಿಸಿದ ಸ್ವೀಟ್‌ ಬಾಕ್ಸ್‌ ಅನ್ನು ತಿನ್ನೋದು ತಪ್ಪಲ್ವಾ?ʼ ಎಂದು ಮರು ಪ್ರಶ್ನೆ ಕೇಳುತ್ತಾರೆ. ಆಗ ಸತ್ಯಮೂರ್ತಿ ʼಅಲ್ಲ ಅತ್ತೆ, ಸ್ವೀಟ್‌ ಬಾಕ್ಸ್‌ ಬಂದಿದ್ದು ಈಗಷ್ಟೇ, ನೀವಾಗ ರೂಮ್‌ನಲ್ಲಿದ್ರಿ, ನಿಮಗೆ ಹೇಗೆ ಗೊತ್ತಾಯ್ತು ಸ್ವೀಟ್‌ ಬಾಕ್ಸ್‌ ಬಂದಿದ್ದುʼ ಎಂದು ಪ್ರಶ್ನೆ ಮಾಡಿದಾಗ ಸತ್ಯಮೂರ್ತಿಯನ್ನೇ ಗದರಿ ಬಾಯಿ ಮುಚ್ಚಿಸುತ್ತಾರೆ ಸುಧಾಮೂರ್ತಿ. ಆದರೆ ಯಾವುದೇ ಕಾರಣಕ್ಕೂ ಮನೆಯವರ ಎದುರು ಸತ್ಯ ಮಾತ್ರ ಹೇಳುವುದಿಲ್ಲ. ಯಾರೂ ಸ್ವೀಟ್‌ ತಿಂದಿಲ್ಲಾ ಅಲ್ವಾ, ಎಲ್ರೂ ಸ್ವೀಟ್‌ ಎಸೆದ್ರಿ ಅಲ್ವಾ ಎನ್ನುವ ಸುಧಾಮೂರ್ತಿ ನೆಮ್ಮದಿಯ ನಿಟ್ಟುಸಿರು ಬಿಟ್ಟಂತೆ ಮಾಡುತ್ತಾರೆ. ಆದರೆ ಆಗ ಸತ್ಯಮೂರ್ತಿ ʼನಾನು ಇನ್ನು ಯಾರಿಗೋ ಸ್ವೀಟ್‌ ಕೊಟ್ನಲ್ಲಾ, ಯಾರದು?ʼ ಎಂದು ಯೋಚಿಸುತ್ತಾರೆ. ತಕ್ಷಣಕ್ಕೆ ನೆನಪಾಗುವ ಸತ್ಯಮೂರ್ತಿ ʼನಾನು ನೇತ್ರಾ ಮಗನಿಗೆ ಸ್ವೀಟ್‌ ಕೊಟ್ಟಿದ್ದೆ ಅವನು ಎರಡು ಸ್ವೀಟ್‌ ತಗೊಂಡಿದ್ದʼ ಎಂದು ಹೇಳಿದ್ದು ಕೇಳಿ ಮತ್ತೆ ಗಾಬರಿಯಾಗುತ್ತಾರೆ ಸುಧಾಮೂರ್ತಿ. ಪುಷ್ಪಾಳ ಕೈ ಹಿಡಿದು ಎಳೆದುಕೊಂಡು ರೂಮ್‌ಗೆ ಹೋಗುವ ಅಜ್ಜಿ ಅಲ್ಲಿ ನೇತ್ರಾ ಮಗ ಕುಳಿತಿರುವುದು ನೋಡುತ್ತಾರೆ, ಅಲ್ಲದೆ ಕೂಡಲೇ ಇವನನ್ನು ಆಸ್ಪತ್ರೆಗೆ ತೋರಿಸಬೇಕು ಎಂದು ಅರ್ಜೆಂಟ್‌ ಮಾಡುತ್ತಾರೆ. ಆದರೆ ಪುಷ್ಪಾ ನಿಧಾನಕ್ಕೆ ಆ ಹುಡುಗ ಬಳಿ ಆ ಸ್ವೀಟ್ಸ್‌ ತಿಂದ್ಯಾ ನೀನು, ಎಲ್ಲಿದೆ ಸ್ವೀಟ್ಸ್‌ ಎಂದು ಕೇಳಿದಾಗ ಆ ಹುಡುಗ ತನ್ನ ಎರಡೂ ಕೈಯಲ್ಲಿ ಎರಡು ಲಾಡು ಹಿಡಿದಿರುವುದನ್ನು ತೋರಿಸುತ್ತಾನೆ. ಇದರಿಂದ ಸುಧಾಮೂರ್ತಿ ಇನ್ನಷ್ಟು ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾರೆ.

ಮತ್ತೆ ಬಂತು ಭಾರ್ಗವಿ ಕಾಲ್‌

ಸುಧಾಮೂರ್ತಿ ರೂಮ್‌ಗೆ ಕಾಲಿರಿಸಿದ್ದೇ ತಡ ಮತ್ತೆ ಕಾಲ್‌ ಮಾಡುವ ಭಾರ್ಗವಿ ʼಗಾಬರಿ ಆಯ್ತಾ, ನಾನು ಸ್ವೀಟ್‌ ಬಾಕ್ಸ್‌ನಲ್ಲಿ ವಿಷ ಹಾಕಿರಲಿಲ್ಲ, ಆದ್ರೆ ನಿಂಗೆ ಭಯ ಹುಟ್ಟಿಸೋಕೆ ಅಂತಾನೇ ಹೇಳ್ದೆ, ನಿನ್ನಲ್ಲಿ ಎಷ್ಟೊಂದು ಭಯ ಹುಟ್ಟಿತು. ಆ ಭಯದಲ್ಲೇ ನೀನು ಬದುಕುಬೇಕು. ನಿನ್ನ ಮನೆಯವರು ಸಾಯತ್ತಾರೆ ಎಂಬ ಸಂಕಟದಲ್ಲೇ ನೀನು ನರಳಬೇಕುʼ ಎಂದು ದ್ವೇಷಾರೋಷದಿಂದ ಮಾತನಾಡಿ ಕಾಲ್‌ಕಟ್‌ ಮಾಡ್ತಾಳೆ ಭಾರ್ಗವಿ. ಅಷ್ಟೊತ್ತಿಗೆ ರೂಮ್‌ಗೆ ಬರುವ ಪುಷ್ಪಾಳನ್ನು ನೋಡಿ ಮತ್ತಿಷ್ಟು ಗಾಬರಿಯಾಗುತ್ತಾರೆ ಸುಧಾಮೂರ್ತಿ. ಅವರ ಗಾಬರಿ ಕಂಡು ʼನೀವು ನಮ್ಮಿಂದ ಏನೂ ಮುಚ್ಚಿಡ್ತಾ ಇಲ್ಲಾ ಅಲ್ವಾ ಅಜ್ಜಮ್ಮʼ ಎಂದು ಕೇಳುತ್ತಾಳೆ. ಅದಕ್ಕೆ ʼಹೇ, ಇಲ್ಲಮ್ಮ ಪುಷ್ಪಾ, ಮುಚ್ಚಿಡೋಕೆ ಏನಿದೆ, ಪೇಪರ್‌ನಲ್ಲಿ ಬಂದಿದ್ದು ಓದಿ ಗಾಬರಿ ಆಯ್ತು ಅಷ್ಟೇʼ ಎಂದು ಪುಷ್ಪಾಳ ಮಾತು ತೇಲಿಸುತ್ತಾಳೆ. ಆದರೆ ಪುಷ್ಪಾಳಿಗೆ ಮಾತ್ರ ಅಜ್ಜಮ್ಮನಿಗೆ ಏನೋ ಆಗಿದೆ, ಯಾವುದೋ ಇಲ್ಲದ ಭಯ ಕಾಡುತ್ತಿದೆ ಎಂಬುದು ಮಾತ್ರ ಸ್ಪಷ್ಟವಾಗುತ್ತದೆ.

ಕಾಲೇಜಿನಲ್ಲಿ ಮಿಂಚು ಜೊತೆ ಮಾತನಾಡುತ್ತಿರುವ ಆಕಾಶ್‌ ಬಳಿಗೆ ಬರುವ ಸುನಾಮಿ ಆಕಾಶ್‌ ಬರೆದ ಡೈರಿ ಸಹನಾಗೆ ಕೊಟ್ಟಿರುವ ವಿಚಾರವನ್ನು ಇನ್‌ಡೈರೆಕ್ಟ್‌ ಆಗಿ ಹೇಳುತ್ತಾನೆ. ಆದರೆ ಆಕಾಶ್‌ಗೆ ಅವನು ಏನು ಹೇಳಿದ ಎಂಬುದು ಸ್ವಷ್ಟವಾಗಿ ಅರ್ಥವಾಗುವುದಿಲ್ಲ.

ಭಾರ್ಗವಿ ಹೇಳಿದಂತೆ ಸುಧಾಮೂರ್ತಿ ಮನೆಯವರನ್ನು ಒಬ್ಬೊರನ್ನಾಗಿ ಸಾಯಿಸ್ತಾಳಾ, ಬೃಂದಾವನದ ಒಗ್ಗಟ್ಟು ಮುರಿಯಲು ಆಕೆ ಏನು ತಂತ್ರ ಹೂಡುತ್ತಾಳೆ, ಸಹನಾ ಆಕಾಶ್‌ಗೆ ಪ್ರಪೋಸ್‌ ಮಾಡಿದ್ರೆ ಮುಂದೇನಾಗಬಹುದು? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.