ಕನ್ನಡ ಸುದ್ದಿ  /  Karnataka  /  Bangalore News Trains Cancelled Route Changed From Yashwantpur To Kerala Tamilnadu Dadar Mysuru Tumkur Kub

Trains Cancelled: ಬೆಂಗಳೂರು, ಮೈಸೂರು, ತುಮಕೂರು ಸಹಿತ ಹಲವು ರೈಲುಗಳು ಏಪ್ರಿಲ್‌ನಲ್ಲಿ ರದ್ದು, ವಿವರ ಇಲ್ಲಿದೆ

ಏಪ್ರಿಲ್‌ನಲ್ಲಿ ಕರ್ನಾಟಕದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು. ಅದರ ವಿವರ ಇಲ್ಲಿದೆ.

ಏಪ್ರಿಲ್‌ ಮೊದಲ ವಾರ ಕರ್ನಾಟಕದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಏಪ್ರಿಲ್‌ ಮೊದಲ ವಾರ ಕರ್ನಾಟಕದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ಬೆಂಗಳೂರಿನ ಯಶವಂತಪುರದಿಂದ ಕೇರಳ, ತಮಿಳುನಾಡು, ಮೈಸೂರು, ತುಮಕೂರು. ಚಿಕ್ಕಬಳ್ಳಾಪುರಕ್ಕೆ ಹೋಗುವ ಕೆಲವು ರೈಲುಗಳನ್ನು ಏಪ್ರಿಲ್‌ ತಿಂಗಳ ಕೆಲವು ದಿನಗಳಂದು ರದ್ದು ಮಾಡಲಾಗಿದೆ. ಇದಲ್ಲದೇ ದಾದರ್‌, ಕಣ್ಣೂರು ಸಹಿತ ಹಲವು ರೈಲುಗಳ ಮಾರ್ಗಗಳನ್ನು ಕೂಡ ಬದಲಾವಣೆ ಮಾಡಲಾಗಿದೆ. ರೈಲು ಮಾರ್ಗದ ದುರಸ್ಥಿ ಕಾರ್ಯದ ಕಾರಣಕ್ಕೆ ಏಪ್ರಿಲ್‌ನಲ್ಲಿ ಬದಲಾವಣೆಯಾಗಿರುವ ರೈಲು ಮಾರ್ಗದ ಕುರಿತು ಪ್ರಯಾಣಿಕರು ಗಮನ ಇಡುವಂತೆ ನೈರುತ್ಯ ರೈಲ್ವೆ ವಲಯದ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ರೈಲುಗಳ ರದ್ದತಿ

ಬೈಯ್ಯಪ್ಪನಹಳ್ಳಿ ಯಾರ್ಡ್ ನಲ್ಲಿ ಬಾಣಸವಾಡಿ-ಕರ್ಮಮೇಳಂ ಮಾರ್ಗದಲ್ಲಿ ಬಾಕ್ಸ್ ಸೇತುವೆ ನಿರ್ಮಾಣಕ್ಕಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾರಣದಿಂದಾಗಿ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗುವುದು

1. ರೈಲು ಸಂಖ್ಯೆ 16211 ಯಶವಂತಪುರ-ಸೇಲಂ ಎಕ್ಸ್ಪ್ರೆಸ್ 01.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

2. ರೈಲು ಸಂಖ್ಯೆ 16212 ಸೇಲಂ-ಯಶವಂತಪುರ ಎಕ್ಸ್ಪ್ರೆಸ್ 02.04.2024 ರಿಂದ 06.04.2024 ರವರೆಗೆ ರದ್ದಾಗಿದೆ.

3. ರೈಲು ಸಂಖ್ಯೆ 16208 ಮೈಸೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು 01.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

4. ರೈಲು ಸಂಖ್ಯೆ 16207 ಯಶವಂತಪುರ-ಮೈಸೂರು ಎಕ್ಸ್ಪ್ರೆಸ್ ರೈಲು 02.04.2024 ರಿಂದ 06.04.2024 ರವರೆಗೆ ರದ್ದಾಗಿದೆ.

5. ರೈಲು ಸಂಖ್ಯೆ 06573 ಯಶವಂತಪುರ-ತುಮಕೂರುಮೆಮು ರೈಲು 01.04.2024 ರಿಂದ 04.04.2024 ರವರೆಗೆ ರದ್ದಾಗಿದೆ.

6. ರೈಲು ಸಂಖ್ಯೆ 06574ತುಮಕೂರು-ಯಶವಂತಪುರ ಮೆಮು ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

7. ರೈಲು ಸಂಖ್ಯೆ 06591 ಯಶವಂತಪುರ-ಹೊಸೂರು ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

8. ರೈಲು ಸಂಖ್ಯೆ 06592 ಹೊಸೂರು-ಯಶವಂತಪುರ ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

9. ರೈಲು ಸಂಖ್ಯೆ. 06593 ಯಶವಂತಪುರ-ಚಿಕ್ಕಬಳ್ಳಾಪುರ ಮೆಮು ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

10. ರೈಲು ಸಂಖ್ಯೆ. 06594 ಚಿಕ್ಕಬಳ್ಳಾಪುರ-ಯಶವಂತಪುರ ಮೆಮು ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

11. ರೈಲು ಸಂಖ್ಯೆ. 06393 ಯಶವಂತಪುರ-ಹೊಸೂರು ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

12. ರೈಲು ಸಂಖ್ಯೆ. 06394 ಹೊಸೂರು-ಯಶವಂತಪುರ ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

ರೈಲುಗಳ ಮಾರ್ಗ ಬದಲಾವಣೆ

⦁ ರೈಲು ಸಂಖ್ಯೆ 16528 ಕಣ್ಣೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು 01.04.2024 ರಿಂದ 04.04.2024 ರವರೆಗೆ ಕಾರ್ಮೆಲಾರಂ, ಬೈಯಪ್ಪನಹಳ್ಳಿ ಕ್ಯಾಬಿನ್, ಬೈಯಪ್ಪನಹಳ್ಳಿ, ಎಸ್ಎಂವಿಟಿ ಬೆಂಗಳೂರು ಮತ್ತು ಬಾಣಸವಾಡಿ ಮಾರ್ಗವಾಗಿ ಸಂಚರಿಸಲಿದೆ.

⦁ ರೈಲು ಸಂಖ್ಯೆ. 16527 ಯಶವಂತಪುರ-ಕಣ್ಣೂರು ಎಕ್ಸ್ಪ್ರೆಸ್ ರೈಲು 02.04.2024 ರಿಂದ 05.04.2024 ರವರೆಗೆ ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಬೈಯ್ಯಪ್ಪನಹಳ್ಳಿ, ಬೈಯಪ್ಪನಹಳ್ಳಿ ಕ್ಯಾಬಿನ್ ಮತ್ತು ಕರ್ಮಮೇಳಂ ಮಾರ್ಗವಾಗಿ ಸಂಚರಿಸಲಿದೆ.

⦁ ರೈಲು ಸಂಖ್ಯೆ. 12257 ಯಶವಂತಪುರ-ಕೊಚುವೇಲಿ ಎಕ್ಸ್ಪ್ರೆಸ್ ರೈಲು 02.04.2024 ಮತ್ತು 04.04.2024 ರಂದು ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಬೈಯಪ್ಪನಹಳ್ಳಿ ಕ್ಯಾಬಿನ್, ಕಾರ್ಮೇಳರಾಮ್ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ.

⦁ ರೈಲು ಸಂಖ್ಯೆ. 11021 ದಾದರ್-ತಿರುನೆಲ್ವೇಲಿ ಎಕ್ಸ್ಪ್ರೆಸ್ ರೈಲು 02.04.2024 ಮತ್ತು 03.04.2024 ರಂದು ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಬೈಯಪ್ಪನಹಳ್ಳಿ ಕ್ಯಾಬಿನ್, ಕಾರ್ಮೆಲಾರಾಮ್ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ.

⦁ ರೈಲು ಸಂಖ್ಯೆ 11022 ತಿರುನೆಲ್ವೇಲಿ-ದಾದರ್ ಎಕ್ಸ್ಪ್ರೆಸ್ ರೈಲು 01.04.2024 ಮತ್ತು 04.04.2024 ರಂದು ಹೊಸೂರು, ಕಾರ್ಮೆಲಾರಂ, ಬೈಯಪ್ಪನಹಳ್ಳಿ ಕ್ಯಾಬಿನ್, ಬೈಯಪ್ಪನಹಳ್ಳಿ, ಎಸ್ಎಂವಿಟಿ ಬೆಂಗಳೂರು ಮತ್ತು ಬಾಣಸವಾಡಿ ಮಾರ್ಗವಾಗಿ ಸಂಚರಿಸಲಿದೆ.

⦁ ರೈಲು ಸಂಖ್ಯೆ 12258 ಕೊಚುವೇಲಿ-ಯಶವಂತಪುರ ಎಕ್ಸ್ಪ್ರೆಸ್ ರೈಲು 01.04.2024 ಮತ್ತು 03.04.2024 ರಂದು ಹೊಸೂರು, ಕಾರ್ಮೆಲಾರಂ, ಬೈಯಪ್ಪನಹಳ್ಳಿ ಕ್ಯಾಬಿನ್, ಬೈಯಪ್ಪನಹಳ್ಳಿ, ಎಸ್ಎಂವಿಟಿ ಬೆಂಗಳೂರು ಮತ್ತು ಬಾಣಸವಾಡಿ ಮಾರ್ಗವಾಗಿ ಸಂಚರಿಸಲಿದೆ.

⦁ ರೈಲು ಸಂಖ್ಯೆ 16573 ಯಶವಂತಪುರ-ಪುದುಚೇರಿ ಎಕ್ಸ್ಪ್ರೆಸ್ ರೈಲು 05.04.2024 ರಂದು ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಬೈಯಪ್ಪನಹಳ್ಳಿ ಕ್ಯಾಬಿನ್, ಕರ್ಮಲಾರಾಮ್ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ.