ಕನ್ನಡ ಸುದ್ದಿ  /  Karnataka  /  Big Twist In Bmtc Conductor Death Case The Secret Revealed In Bengaluru Police Investigation

Bangalore Crime: ಬಸ್ ನಲ್ಲೇ ಬಿಎಂಟಿಸಿ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸಾವಿನ ರಹಸ್ಯ!

ಕರ್ತವ್ಯ ಮುಗಿಸಿ ರಾತ್ರಿ ಮಲಗಿದ್ದ ಬಿಎಂಟಿಸಿ ಬಸ್ ನಲ್ಲೇ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಆಕಸ್ಮಿಕ ಸಾವಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಬಿಎಂಟಿಸಿ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಬಿಎಂಟಿಸಿ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿ ಬಸ್​​ಗೆ ಬೆಂಕಿ ತಗುಲಿ ಕಂಡಕ್ಟರ್ ಸಜೀವ ದಹನವಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಗ್ನಿ ದುರಂತವು ಆಕಸ್ಮಿಕವೋ ಅಥವಾ ಪೂರ್ವಸಂಚಿನ ಕೃತ್ಯವೋ ಎಂಬ ಬಗ್ಗೆ ತನಿಖೆ ನಡೆಸಿದ್ದರು. ಪ್ರಕರಣದ ತನಿಖೆಯಲ್ಲಿ ಇದೀಗ ಸ್ಪೋಟಕ ರಹಸ್ಯ ಬಯಲಾಗಿದೆ.

ಪೊಲೀಸರ ತನಿಖೆಯ ಅಂಶಗಳನ್ನು ಗಮನಿಸಿದಾಗ ಬಸ್‌ನಲ್ಲಿ ಇಂಜಿನ್ ದೋಷವಿರಲಿಲ್ಲ, ಇದೊಂದು ಹತ್ಯೆಯೂ ಅಲ್ಲ ಬದಲಾಗಿ ನಿರ್ವಾಹಕ ಮುತ್ತಯ್ಯ ತಾನೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಆವೊಂದು ಹಣಕಾಸಿನ ವ್ಯವಹಾರ.

ನಿರ್ವಾಹಕ ಬಸ್ಸಿನೊಳಗೆ ಸುಟ್ಟು ಕರಕಲಾದ ಘಟನೆ ಸಂಭವಿಸುವ ಕೆಲವೇ ಗಂಟೆಗಳ ಮುನ್ನ ಹತ್ತಿರದ ಪೆಟ್ರೋಲ್ ಬಂಕ್ ನಲ್ಲಿ ಐದು ಲೀಟರ್ ಪೆಟ್ರೋಲ್ ಮತ್ತು 2 ಲೀಟರ್ ಡೀಸೆಲ್ ಖರೀದಿಸಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಅದೇ ದಿನ ರಾತ್ರಿ ಮುತ್ತಯ್ಯ ಅವರ ಯುಪಿಐ ಐಡಿಯಿಂದ 700 ರೂಪಾಯಿ ಹಣ ವರ್ಗಾವಣೆಯಾಗಿದೆ. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್‌ ಖಾತೆಗೆ ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದಲೂ ಮಾಹಿತಿ ದೊರೆತಿದ್ದು, ಸಿಸಿಟಿವಿಯಲ್ಲಿ ಮುತ್ತಯ್ಯ ಅವರ ಚಲನವಲನ ಸೆರೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಲ ತೀರಿಸಲಾಗದೆ ಕಂಡಕ್ಟರ್ ಆತ್ಮಹತ್ಯೆ!

ತಾನು ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗದೆ ಕಂಡಕ್ಟರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​​ ಸಲ್ಲಿಸಲಿದ್ದಾರೆ.

ಮಾರ್ಚ್ 10 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಿವಾಸಿ 43 ವರ್ಷದ ಕಂಡಕ್ಟರ್ ಮುತ್ತಯ್ಯ ಸುಮ್ಮನಹಳ್ಳಿ ಡಿಪೋದಲ್ಲಿ ನಿಂತಿದ್ದ ಬಿಎಂಟಿಸಿ ಬಸ್ಸಿನೊಳಗೆ ಸುಟ್ಟು ಕರಕಲಾಗಿದ್ದರು.

ಬಸ್ಸಿನ ಒಳಭಾಗವೂ ಸುಟ್ಟು ಕರಕಲಾಗಿದ್ದ ಹಿನ್ನೆಲೆಯಲ್ಲಿ ಬೆಂಕಿಗೆ ಕಾರಣ ಏನೆಂಬುದು ಪ್ರಾಥಮಿಕವಾಗಿ ತಿಳಿದುಬಂದಿರಲಿಲ್ಲ. ಪ್ರಕರಣದ ತನಿಖೆ ನಡೆಸಿದ ಬ್ಯಾಡರಹಳ್ಳಿ ಪೊಲೀಸರು ಪೆಟ್ರೋಲ್ ಬಂಕ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ.

ಘಟನೆ ನಡೆದ ಪ್ರದೇಶ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮುತ್ತಯ್ಯ ಪೆಟ್ರೋಲ್ ಬಂಕ್ ಹೋಗಿ ಪೆಟ್ರೋಲ್ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

IPL_Entry_Point

ವಿಭಾಗ