ಕನ್ನಡ ಸುದ್ದಿ  /  ಕರ್ನಾಟಕ  /  Karnataka Cet 2023: ಸಿಇಟಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ, ಅರ್ಜಿ ತಿದ್ದುಪಡಿಗೆ ಕೊನೆಯ ಅವಕಾಶ

Karnataka CET 2023: ಸಿಇಟಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ, ಅರ್ಜಿ ತಿದ್ದುಪಡಿಗೆ ಕೊನೆಯ ಅವಕಾಶ

Karnataka CET 2023: ಸಿಇಟಿ-2023ಕ್ಕೆ ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಟ್ಟಕಡೆಯ ಅವಕಾಶ ನೀಡಿದೆ.

Karnataka CET 2023: ಸಿಇಟಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ, ಅರ್ಜಿ ತಿದ್ದುಪಡಿಗೆ ಕೊನೆಯ ಅವಕಾಶ
Karnataka CET 2023: ಸಿಇಟಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ, ಅರ್ಜಿ ತಿದ್ದುಪಡಿಗೆ ಕೊನೆಯ ಅವಕಾಶ

ಬೆಂಗಳೂರು: ಸಿಇಟಿ (Karnataka CET 2023) ಪರೀಕ್ಷೆಗೆ ಸಂಬಂಧಪಟ್ಟಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಮುಖ ಅಪ್‌ಡೇಟ್‌ ನೀಡಿದೆ. ಇದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ ಅರ್ಜಿಗಳ ತಿದ್ದುಪಡಿಗೆ ಸಂಬಂಧಪಟ್ಟ ವಿಷಯವಾಗಿದೆ. ಸಿಇಟಿ-2023ಕ್ಕೆ ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಟ್ಟಕಡೆಯ ಅವಕಾಶ ನೀಡಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು 21-05-2023 ರ ಸಂಜೆ 6ರಿಂದ 24-05-2023 ರ ರಾತ್ರಿ 11.59 ರವರೆಗೆ ಮಾಹಿತಿ ತಿದ್ದುಪಡಿ ಮಾಡಬಹುದು ಎಂದು ಕೆಇಎ ಕಾಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಸಿಇಟಿ-2023 ರ ಫಲಿತಾಂಶ ಪ್ರಕಟಿಸುವ ಮುನ್ನ ಇದು ತಿದ್ದುಪಡಿಗೆ ಕೊನೆಯ ಅವಕಾಶ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸಿಇಟಿ-2023ರ ಫಲಿತಾಂಶ ಘೋಷಣೆಯಾದ ಮೇಲೆ ಯಾವುದೇ ಕಾರಣಕ್ಕೂ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಅಥವಾ ಮೀಸಲಾತಿ ಕ್ಷೇಮ್ ಮಾಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಆದ್ದರಿಂದ ಅಭ್ಯರ್ಥಿಗಳು ಮತ್ತು ಪೋಷಕರು ತಮಗೆ ಸಂಬಂಧಿಸಿದ ಅರ್ಜಿಗಳಲ್ಲಿ ಮಾಡಿರುವ ಕ್ಷೇಮ್‌ಗಳನ್ನು / ಮಾಹಿತಿಯನ್ನು ತಪ್ಪದೇ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ವಿವರಕ್ಕೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ ಸೈಟ್ http://kea.kar.nic.in ನೋಡಬಹುದು.

ಸಿಇಟಿ' ಬಗ್ಗೆ ಗೊತ್ತು, ಆದ್ರೆ 'ಸಿಯುಇಟಿ' ಬಗ್ಗೆ ಗೊತ್ತಿಲ್ವಾ?

ನೀಟ್, ಜೆಇಇ, ಸಿಇಟಿ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಹೊಂದಿರುವ ದ್ವಿತೀಯ ಪಿಯುಸಿ ಬಹಳಷ್ಟು ವಿದ್ಯಾರ್ಥಿಗಳು ಸಿಯುಇಟಿ ಬಗ್ಗೆ ತಿಳಿಯದೆ ತಮಗಿರುವ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. 2022ರವರೆಗೆ ಪ್ರತಿ ಕೇಂದ್ರ ವಿಶ್ವವಿದ್ಯಾಲಯಗಳು ತಮ್ಮ ಪದವಿ ಕೋರ್ಸುಗಳಿಗೆ ಪ್ರವೇಶ ತೆಗೆದುಕೋಳ್ಳಲು ತಮ್ಮದೇ ಆದ ವಿಭಿನ್ನ ಕಾರ್ಯವಿಧಾನವನ್ನು ಹೊಂದಿದ್ದವು. ಈ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಕೀಕರಿಸಲು ಶಿಕ್ಷಣ ಸಚಿವಾಲಯ ಯುಜಿಸಿಯೊಂದಿಗೆ ಸೇರಿ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ (ಸಿಯುಇಟಿ) ಎಂಬ ವಿನೂತನ ಪರೀಕ್ಷೆಯನ್ನು ಪರಿಚಯಿಸಿದೆ. ಈ ಪರೀಕ್ಷೆಯ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಿಇಟಿ-ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶದ ಹೆಬ್ಬಾಗಿಲು

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿಯೂ ಜೆಇಇ(ಐಐಟಿ ಮತ್ತು ಎನ್‌ಇಟಿ) ಹಾಗೂ ನೀಟ್ ಬಗ್ಗೆ ಕನಸು ಕಾಣುವುದು ಸಹಜ. ಆದರೆ ಎಲ್ಲರೂ ಈ ಪರೀಕ್ಷೆಗಳನ್ನು ಪಾಸ್‌ ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಪ್ರೌಢಶಾಲಾ ಹಂತದಿಂದಲೇ ಅತ್ಯಂತ ಪರಿಶ್ರಮದಿಂದ ವ್ಯಾಸಂಗ ಮಾಡಿದ ಹಾಗೂ ಅದಕ್ಕೆ ಬೆಂಬಲ ನೀಡಿದ ದೂರದೃಷ್ಟಿಯುಳ್ಳ ಪೋಷಕರ ಮನೆಗಳಲ್ಲಿ ಮಾತ್ರ ನಾವು ಅಂತಹ ಫಲಿತಾಂಶ ಕಾಣುವುದು ಸಾಧ್ಯ. ಸಿಇಟಿ ಎಂದರೆ ಕೇವಲ ಕರ್ನಾಟಕ ರಾಜ್ಯದ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಪಡೆಯಲು ಎದುರಿಸಬೇಕಿರುವ ಪರೀಕ್ಷೆ ಎಂದೇ ಬಿಂಬಿತವಾಗಿದೆ. ಸಿಇಟಿ ಹಲವು ಪದವಿ ಕೋರ್ಸುಗಳಿಗೆ ಅವಕಾಶ ಕಲ್ಪಿಸುವ ಏಕೈಕ ಸ್ಪರ್ಧಾತ್ಮಕ ಪರೀಕ್ಷೆ. ಸಿಇಟಿ ಪರೀಕ್ಷೆಯ ಕುರಿತು ಸಂಪೂರ್ಣ ವಿವರ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point