ಕನ್ನಡ ಸುದ್ದಿ  /  Karnataka  /  Hillside Collapse In Dakshina Kannada Sullia, Three Laborers Were Under The Soil

Mangaluru News: ಸುಳ್ಯದಲ್ಲಿ ಧರೆ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ, ಮೃತಪಟ್ಟಿರುವ ಶಂಕೆ

ಶನಿವಾರ ಗಾಂಧಿನಗರ ಆಲೆಟ್ಟಿ ರಸ್ತೆಯಲ್ಲಿ ಸೆಂಟರಿಂಗ್‌ ಕೆಲಸ ಮಾಡುತ್ತಿದ್ದಾಗ ಬರೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ.

Mangaluru News: ಸುಳ್ಯದಲ್ಲಿ ಧರೆ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ, ಮೃತಪಟ್ಟಿರುವ ಶಂಕೆ
Mangaluru News: ಸುಳ್ಯದಲ್ಲಿ ಧರೆ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ, ಮೃತಪಟ್ಟಿರುವ ಶಂಕೆ (Photo Source: News Not Out)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರದಲ್ಲಿ ಮೂವರು ಕಾರ್ಮಿಕರು ಸೆಂಟರಿಂಗ್‌ ಕೆಲಸ ಮಾಡುತ್ತಿದ್ದ ವೇಳೆ, ಧರೆ ಕುಸಿದು ಮಣ್ಣಿನಡಿಗೆ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

"ಬಿದ್ದಿರುವ ಬರೆ/ಧರೆ ದೊಡ್ಡ ಪ್ರಮಾಣದ್ದಾಗಿದ್ದು, ಇಷ್ಟು ಸಮಯ ಬದುಕುಳಿಯುವುದು ಸಂಶಯ. ಆ ಕಾರ್ಮಿಕರ ಜೀವಕ್ಕೆ ಅಪಾಯವಾಗದೆ ಇರಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಜೆಸಿಬಿ ಇತ್ಯಾದಿಗಳಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ" ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಶನಿವಾರ ಗಾಂಧಿನಗರ ಆಲೆಟ್ಟಿ ರಸ್ತೆಯಲ್ಲಿ ಸೆಂಟರಿಂಗ್‌ ಕೆಲಸ ಮಾಡುತ್ತಿದ್ದಾಗ ಬರೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ. ಮಣ್ಣಿನಡಿಗೆ ಸಿಲುಕಿರುವ ಕಾರ್ಮಿಕರು ಉತ್ತರ ಭಾರತೀಯ ಮೂಲದವರು ಎಂದು ಸ್ಥಳೀಯ ಪತ್ರಿಕೆ ನ್ಯೂಸ್‌ ನಾಟ್‌ ಔಟ್‌ ವರದಿ ಮಾಡಿದೆ. . ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಸ್ಥಳೀಯರೂ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಸುಳ್ಯದ ಗಾಂಧಿನಗರದ ಗುರುಂಪು ಬಳಿ ಈ ಅನಾಹುತ ಸಂಭವಿಸಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

11 ಕೆ.ಜಿ.ಗಾಂಜಾ ನಾಶಪಡಿಸಿದ ಮಂಗಳೂರು ಪೊಲೀಸರು

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 11 ಕೆ.ಜಿ. ಗಾಂಜಾ, 14 ಮಿ.ಗ್ರಾಂ ಎಂಡಿಎಂಐ ಸಹಿತ ಮಾದಕ ವಸ್ತುವನ್ನು ಪೊಲೀಸ್ ಅಧಿಕಾರಿಗಳು ನಿನ್ನೆ ನಾಶ ಪಡಿಸಿರುವುದು ವರದಿಯಾಗಿದೆ.

ಜಿಲ್ಲೆಯ ಮೂಲ್ಕಿಯ ರಾಮ್ಕಿ ಎನರ್ಜಿ ಎನ್‌ವಯರ್ನ್‌ಮೆಂಟ್‌ ಲಿಮಿಟೆಡ್‌ನಲ್ಲಿ ಗಾಂಜಾ ಮತ್ತು ಎಂಡಿಎಂಐ ಅನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.

ಸೆನ್ ಪೊಲೀಸ್ ಠಾಣೆ, ಕೊಣಾಜೆ, ಪಣಂಬೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಸುರತ್ಕಲ್, ಬಜಪೆ, ಕಂಕನಾಡಿ ಪೊಲೀಸ್ ಠಾಣೆ ಪೊಲೀಸರು ವಿವಿಧ ಪ್ರಕರಣಗಳನ್ನು ಭೇದಿಸಿ ಈ ಗಾಂಜಾವನ್ನು ವಶಪಡಿಸಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.

ಬಿಲ್ಕಿಸ್‌ ಬಾನು ಪ್ರಕರಣ- ಮಾರ್ಚ್ 27ರಂದು ವಿಚಾರಣೆ

ಬೆಂಗಳೂರು: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 11 ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆ ಮಾಡಲು ಅನುಮತಿ ನೀಡಿದ ಗುಜರಾತ್ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠದ ಮುಂದೆ ಮಾರ್ಚ್ 27, 2023 ರಂದು ಪಟ್ಟಿ ಮಾಡಲಾಗಿದೆ.

ಬಿಲ್ಕೀಸ್ ಬಾನು ಅವರ ಪರ ವಕೀಲೆ ಶೋಭಾ ಗುಪ್ತಾ ಅವರು ಭಾರತದ ಸುಪ್ರೀಂ ಕೋರ್ಟ್ ಮುಂದೆ ಐದು ಬಾರಿ ಪ್ರಸ್ತಾಪಿಸಿದ ನಂತರ ಈ ವಿಷಯವನ್ನು ಪಟ್ಟಿ ಮಾಡಲಾಗಿದೆ.

ಎರಡು ದಿನಗಳ ಹಿಂದೆ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅರ್ಜಿಯ ವಿಚಾರಣೆಗಾಗಿ ವಿಶೇಷ ಪೀಠವನ್ನು ರಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗುಪ್ತಾ ಅವರಿಗೆ ಭರವಸೆ ನೀಡಿದೆ.

IPL_Entry_Point

ವಿಭಾಗ