ಕನ್ನಡ ಸುದ್ದಿ  /  Karnataka  /  Karnataka Assembly Election 2023: Defeat Is Certain If Contested In One Constituency ; Siddaramaiah Gets Warning From God

Karnataka assembly election 2023: ಒಂದೇ ಕಡೆ ಸ್ಪರ್ಧಿಸಿದರೆ ಸೋಲು ಖಚಿತ; ಸಿದ್ದರಾಮಯ್ಯಗೆ ʻಮನೆದೇವರʼ ಎಚ್ಚರಿಕೆ

Karnataka assembly election 2023: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ? ಕೋಲಾರ ಅಥವಾ ವರುಣಾ? ದೈವವಾಣಿಯನ್ನು ಅವರು ನಂಬ್ತಾರಾ? ಎರಡು ಕಡೆ ಸ್ಪರ್ಧಿಸುತ್ತಾರಾ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (PTI)

ವಿಧಾನಸಭಾ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ಸಂದೇಶವನ್ನು ಕಾಂಗ್ರೆಸ್‌ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವರ ʻಮನೆದೇವರುʼ ನೀಡಿದ್ದಾರೆ ಎಂದು ಸ್ಥಳೀಯ ಟಿವಿಮಾಧ್ಯಮಗಳು ವರದಿ ಮಾಡಿವೆ.

ಈ ವಾರ ಆರಂಭದಲ್ಲಿ ಅವರು ಕೋಲಾರದಿಂದ ಸ್ಪರ್ಧಿಸುವ ವಿಚಾರ ಸುದ್ದಿಯಾಗಿತ್ತು. ಆದಾಗ್ಯೂ, ಕೋಲಾರ ಕ್ಷೇತ್ರ ಅಂತಿಮ ಅಲ್ಲ ಎಂಬ ಸುದ್ದಿಯೂ ಹರಡಿತ್ತು. ತವರು ಕ್ಷೇತ್ರ ವರುಣಾದಲ್ಲಿ ಸ್ಪರ್ಧಿಸಿದರೆ ಹೇಗೆ ಎಂಬ ಚಿಂತನೆಯೂ ಇದೆ. ಇವೆಲ್ಲದರ ನಡುವೆ, ಹೈಕಮಾಂಡ್‌ ಎಲ್ಲಿಂದ ಟೆಕೆಟ್‌ ಕೊಡುವುದೋ ಅಲ್ಲಿಂದಲೇ ಸ್ಪರ್ಧಿಸುವೆ ಎಂದೂ ಸಿದ್ದರಾಮಯ್ಯ ಹೇಳಿದ್ದರು. ಬಾದಾಮಿ ಕ್ಷೇತ್ರದ ವಿಚಾರವನ್ನು ಈ ಸಲ ಅವರು ಎಲ್ಲಿಯೂ ಪ್ರಸ್ತಾಪಿಸಿಲ್ಲ.

ಈ ವಿದ್ಯಮಾನಗಳ ನಡುವೆ, ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಕುರಿತಾದ ʻದೈವವಾಣಿʼ ರಾಜ್ಯದ ಗಮನಸೆಳೆದಿದೆ. ಮಂಡ್ಯದ ಮಳವಳ್ಳಿ ತಾಲೂಕು ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕತಾಯಮ್ಮ ದೇವರು ಈ ಭವಿಷ್ಯ ನುಡಿದಿರುವಂಥದ್ದು. ಆದಿನಾಡು ಚಿಕ್ಕತಾಯಮ್ಮ ದೇವರು ಸಿದ್ದರಾಮಯ್ಯ ಕುಟುಂಬಕ್ಕೆ ಮೂಲ ದೇವರು, ಮನೆದೇವರು ಎಂದು ವರದಿ ಹೇಳಿದೆ.

ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಮತ್ತು ಇತರರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆಗ ದೇವಾಲಯದ ಅರ್ಚಕ ಲಿಂಗಣ್ಣ ಅವರ ಮೈಮೇಲೆ ಬಂದ ದೇವರು, ರಾಜಕೀಯವಾಗಿ ಪ್ರಬಲ ಶಕ್ತಿಗಳ ವಿರೋಧ ನಿಮಗಿದೆ. ಒಂದು ಕಡೆ ಬಾಹುಬಲ ಚಾಚಿದ್ರೆ ಸಾಕಾಗಲ್ಲ. ಎರಡೂ ಕಡೆಗೆ ಬಾಹುಬಲ ಚಾಚಬೇಕು. ಆಗ ಗೆಲ್ಲಿಸಿಕೊಂಡು ಬರುವುದು ಸಾಧ್ಯವಿದೆ" ಎಂದು ಹೇಳಿದ್ದರು.

ನಾನು ನಿಮ್ಮ ಮನೆದೇವತೆ. ಕುಟುಂಬದ ಮೂಲದೇವರು. ನೆನಪಿದೆಯಾ? ಅವಕಾಶ ಸಿಕ್ಕರೆ ಯಾವಾಗಲಾದರೂ ಬಂದು ಆಶೀರ್ವಾದ ತಗೊಂಡು ಹೋಗಲು ಹೇಳು ಎಂದು ಡಾ.ಯತೀಂದ್ರ ಅವರಿಗೆ ದೇವರು ಹೇಳಿದ್ದಾಗಿ ವರದಿಯಾಗಿದೆ.

ಸುದ್ದಿಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಾ.ಯತೀಂದ್ರ, ಸಿದ್ದರಾಮಯ್ಯ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಅನ್ನೋದು ಇನ್ನೂ ಅಂತಿಮವಾಗಿಲ್ಲ. ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ. ಕೋಲಾರದಿಂದ ಸ್ಪರ್ಧಿಸಬೇಕು ಎಂಬುದು ಅವರ ಮನಸ್ಸಿನ ಇಂಗಿತ. ಆದರೆ ಇದು ಅವರ ಕೊನೆಯ ಚುನಾವಣೆ. ಹಾಗಾಗಿ ಅವರು ವರುಣಾದಿಂದಲೇ ಸ್ಪರ್ಧಿಸಿ, ಗೆದ್ದು ಜನಸೇವೆ ಮಾಡಲಿ ಎಂಬುದು ನಮ್ಮೆಲ್ಲರ ಆಸೆ ಎಂದು ಹೇಳಿದರು.

ಗಮನಿಸಬಹುದಾದ ಸುದ್ದಿಗಳು

Siddaramaiah: ಅಂತೂ ಕ್ಷೇತ್ರ ಫೈನಲ್‌ ಮಾಡಿದ ಸಿದ್ದರಾಮಯ್ಯ: ಕೋಲಾರದಲ್ಲಿ ಚುನಾವಣಾ ಕೋಲಾಟಕ್ಕೆ ಮಾಜಿ ಸಿಎಂ ಸಜ್ಜು!

ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೋಲಾರ ಕ್ಷೇತ್ರದ ಜನತೆ, ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರ ಅಭಿಲಾಷೆ ಮತ್ತು ಒತ್ತಡಕ್ಕೆ ಮಣಿದು, ಇಲ್ಲಿಂದಲೇ ಸ್ಪರ್ಧಿಸಲು ತೀರ್ಮಾನ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Karnataka cabinet expansion: ಸಂಪುಟ ಭರ್ತಿಗೆ ʻಸಂಕ್ರಾಂತಿʼ ಮುಹೂರ್ತ?; ಈಶ್ವರಪ್ಪ, ಜಾರಕಿಹೊಳಿ ಮತ್ತಿನ್ಯಾರಿಗೆ ಎಳ್ಳುಬೆಲ್ಲ?

Karnataka cabinet expansion: ಸಂಕ್ರಾಂತಿಯ ಉಡುಗೊರೆಯಾಗಿ ಕೆಲವರಿಗೆ ʻಸಿಹಿʼ ಸುದ್ದಿ ನೀಡಲು ಮುಖ್ಯಮಂತ್ರಿ ಬೊಮ್ಮಾಯಿ ಸಿದ್ದತೆ ಮಾಡಿಕೊಂಡಿದ್ದಾರೆ. ಇದು ಚುನಾವಣಾ ಕಾರ್ಯತಂತ್ರದ ಭಾಗವಾಗಿ ನಡೆಯುವ ಪ್ರಕ್ರಿಯೆ. ಸಚಿವ ಸಂಪುಟ ವಿಸ್ತರಣೆ ಅಲ್ಲ, ಖಾಲಿ ಇರುವ ಆರು ಸ್ಥಾನಗಳ ಭರ್ತಿ ಪ್ರಕ್ರಿಯೆ ಎಂಬುದು ಪಕ್ಷದ ಮೂಲಗಳ ಹೇಳಿಕೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point