K'taka Assembly Polls:ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ 42 ಮಂದಿ; ಗುಬ್ಬಿಗೆ ಶ್ರೀನಿವಾಸ್, ಕಡೂರಿನಲ್ಲಿ ದತ್ತಗೆ ಸಿಗದ ಟಿಕೆಟ್
ಕನ್ನಡ ಸುದ್ದಿ  /  ಕರ್ನಾಟಕ  /  K'taka Assembly Polls:ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ 42 ಮಂದಿ; ಗುಬ್ಬಿಗೆ ಶ್ರೀನಿವಾಸ್, ಕಡೂರಿನಲ್ಲಿ ದತ್ತಗೆ ಸಿಗದ ಟಿಕೆಟ್

K'taka Assembly Polls:ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ 42 ಮಂದಿ; ಗುಬ್ಬಿಗೆ ಶ್ರೀನಿವಾಸ್, ಕಡೂರಿನಲ್ಲಿ ದತ್ತಗೆ ಸಿಗದ ಟಿಕೆಟ್

ರಾಜ್ಯ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಇಂದು ಕಾಂಗ್ರೆಸ್​ ಬಿಡುಗಡೆ ಮಾಡಿದೆ. 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಖಚಿತಪಡಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಇಂದು ಕಾಂಗ್ರೆಸ್​ ಬಿಡುಗಡೆ ಮಾಡಿದೆ. 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಖಚಿತಪಡಿಸಿದೆ.

ಗುಬ್ಬಿಗೆ ಎಸ್‌.ಆರ್.ಶ್ರೀನಿವಾಸ್

ಬಾಬೂರಾವ್​ ಚಿಂಚನಸೂರ್, ಇಕ್ಬಾಲ್​ ಅನ್ಸಾರಿ, ಸಂತೋಷ್​​ ಎಸ್​ ಲಾಡ್​, ಕಿಮ್ಮನೆ ರತ್ನಾಕರ, ದರ್ಶನ್ ಪುಟ್ಟಯ್ಯ ಸೇರಿದಂತೆ 42 ಮಂದಿ ಎರಡನೇ ಲಿಸ್ಟ್​ನಲ್ಲಿದ್ದಾರೆ. ಹೈವೋಲ್ಟೇಜ್‌ ಕ್ಷೇತ್ರ ಗುಬ್ಬಿಯಿಂದ ಎಸ್‌.ಆರ್.ಶ್ರೀನಿವಾಸ್ ಅವರನ್ನು ಕಾಂಗ್ರೆಸ್​ ಕಣಕ್ಕಿಳಿಸಿದೆ. 4 ಬಾರಿ ಶಾಸಕರಾಗಿದ್ದ ಶ್ರೀನಿವಾಸ್ ಅವರು ಜೆಡಿಎಸ್​​ನಿಂದ ಉಚ್ಛಾಟನೆಗೊಂಡ ಬಳಿಕ ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಪಕ್ಷಾಂತರಗೊಂಡ ಇವರಿಗೆ ಟಿಕೆಟ್​ ನೀಡಬಾರದೆಂದು ಸ್ಥಳೀಯ ಕಾಂಗ್ರೆಸ್​ ಮುಖಂಡರು ಆಗ್ರಹಿಸಿದ್ದರು.

ದತ್ತ ಅವರಿಗೆ ಕೈ ತಪ್ಪಿದ ಟಿಕೆಟ್​

ಕಳೆದ ವರ್ಷ ಡಿಸೆಂಬರ್​ನಲ್ಲಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಹೆಚ್​ ಡಿ ದೇವೇಗೌಡರ ಮಾನಸಪುತ್ರ (ಮಗನಂತಿದ್ದ), ಕಡೂರು ಮಾಜಿ ವೈ ಎಸ್ ವಿ ದತ್ತ ಅವರು ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದರೆ. ಆದರೆ ಅವರಿಗೆ ಪಕ್ಷ ಮಣೆ ಹಾಕಿಲ್ಲ. ಇವರ ಬದಲಾಗಿ ಕೆ.ಎಸ್.ಆನಂದ ಅವರಿಗೆ ಟಿಕೆಟ್​ ನೀಡಲಾಗಿದೆ. ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್‌. ಆನಂದ್ ಅವರು 2018ರ ಚುನಾವಣೆಯಲ್ಲಿ ಸೋಲುಂಡಿದ್ದರು.

ಕ್ಷೇತ್ರಗಳು ಹಾಗೂ ಅಭ್ಯರ್ಥಿಗಳ ಕಂಪ್ಲೀಟ್​ ಲಿಸ್ಟ್ ಇಲ್ಲಿದೆ…

  1. ನಿಪ್ಪಾಣಿ - ಕಾಕಾಸಾಹೇಬ್​ ಪಾಟೀಲ್​

2. ಗೋಕಾಕ್ -​ ಮಹಂತೇಶ್​ ಕಡದಿ

3. ಕಿತ್ತೂರು - ಬಾಬಾಸಾಹೇಬ್​​ ಡಿ. ಪಾಟೀಲ್​

4. ಸೌದತ್ತಿ ಯಲ್ಲಮ್ಮ - ವಿಶ್ವಾಸ್​ ವಸಂತ್​ ವೈದ್ಯ

5. ಮುಧೋಳ್​ - ರಾಮಪ್ಪ ಬಾಲಪ್ಪ ತಿಮ್ಮಾಪುರ್​

6. ಬಿಳಿಗಿ- ಜೆ ಟಿ ಪಾಟೀಲ್​

7. ಬಾದಾಮಿ - ಭೀಮಸೇನ್​ ಚಿಮ್ಮಣ್ಣಕತ್ತಿ

8. ಬಾಗಲಕೋಟೆ- ಹುಲ್ಲಪ್ಪ ವೈ ಮೇಟಿ

9. ಬಿಜಾಪುರ (ನಗರ)- ಅಬ್ದುಲ್​ ಹಮೀದ್​ ಕಾಜಾಸಾಹೇಬ್​ ಮುಶ್ರಿಫ್​

10. ನಾಗ್​ತಾನ್​ (ಎಸ್​ಸಿ) - ವಿಠ್ಠಲ್​

11. ಅಫ್ಝಲ್​ಪುರ್​ - ಎಂ ವೈ ಪಾಟೀಲ್​

12. ಯಾದಗಿರಿ - ಚನ್ನರೆಡ್ಡಿ ಪಾಟೀಲ್​

13. ಗುರ್​ಮಿಟ್ಕಲ್​ - ಬಾಬೂರಾವ್​ ಚಿಂಚನಸೂರ್​

14. ಗುಲ್ಬರ್ಗ (ದಕ್ಷಿಣ) - ಅಲ್ಲಮಪ್ರಭು ಪಾಟೀಲ್​

15. ಬಸವಕಲ್ಯಾಣ - ವಿಜಯ್ ಧರಂ ಸಿಂಗ್​

16. ಗಂಗಾವತಿ - ಇಕ್ಬಾಲ್​ ಅನ್ಸಾರಿ

17. ನರಗುಂದ - ಬಿ ಆರ್ ಯವಗಲ್​

18. ಧಾರವಾಡ - ವಿನಯ್​ ಕುಲಕರ್ಣಿ

19. ಕಲಘಟಗಿ - ಸಂತೋಷ್​​ ಎಸ್​ ಲಾಡ್​

20. ಶಿರಸಿ - ಭೀಮಣ್ಣ ನಾಯಕ್​

21. ಯಲ್ಲಾಪುರ- ವಿ.ಎಸ್.ಪಾಟೀಲ

22. ಕೂಡ್ಲಿಗಿ (ಎಸ್‌ಟಿ)- ಡಾ ಎನ್‌.ಟಿ.ಶ್ರೀನಿವಾಸ

23. ಮೊಳಕಾಲ್ಮೂರು (ಎಸ್‌ಟಿ)- ಎನ್‌.ವೈ.ಗೋಪಾಲಕೃಷ್ಣ

24. ಚಿತ್ರದುರ್ಗ- ಕೆ.ಸಿ.ವೀರೇಂದ್ರ (ಪಪ್ಪಿ)

25. ಹೊಳಲ್ಕೆರೆ (ಎಸ್‌ಸಿ)- ಎಚ್‌.ಆಂಜನೇಯ

26. ಚನ್ನಗಿರಿ- ಬಸವರಾಜು ವಿ.ಶಿವಗಂಗ,

27. ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ,

28. ಉಡುಪಿ- ಪ್ರಸಾದ್‌ರಾಜ್ ಕಾಂಚನ್,

29. ಕಡೂರು- ಕೆ.ಎಸ್.ಆನಂದ,

30. ತುಮಕೂರು ನಗರ- ಇಕ್ಬಾಲ್ ಅಹಮದ್,

31. ಗುಬ್ಬಿ- ಎಸ್‌.ಆರ್.ಶ್ರೀನಿವಾಸ್,

32. ಯಲಹಂಕ- ಬಿ.ಕೇಶವ ರಾಜಣ್ಣ,

33. ಯಶವಂತಪುರ- ಬಿ.ಬಾಲರಾಜ್ ಗೌಡ,

34. ಮಹಾಲಕ್ಷ್ಮೀ ಲೇಔಟ್- ಕೇಶವಮೂರ್ತಿ,

35. ಪದ್ಮನಾಭನಗರ- ವಿ.ರಘುನಾಥ ನಾಯ್ಡು,

36. ಮೇಲುಕೋಟೆ- ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಯ್ಯ ಅವರಿಗೆ ಬಿಟ್ಟುಕೊಡಲಾಗಿದೆ,

37. ಮಂಡ್ಯ- ಪಿ.ರವಿಕುಮಾರ್,

38. ಕೃಷ್ಣರಾಜಪೇಟೆ- ಬಿ.ಎಲ್.ದೇವರಾಜ್,

39. ಬೇಲೂರು- ಬಿ.ಶಿವರಾಮ್,

40. ಮಡಿಕೇರಿ- ಡಾ ಮಂತರ ಗೌಡ,

41. ಚಾಮುಂಡೇಶ್ವರಿ- ಸಿದ್ದೇಗೌಡ,

42. ಕೊಳ್ಳೇಗಾಲ (ಎಸ್‌ಸಿ)- ಎ.ಆರ್.ಕೃಷ್ಣಮೂರ್ತಿ

Whats_app_banner