ಕನ್ನಡ ಸುದ್ದಿ  /  Karnataka  /  Kolar News Ahead Of Karnataka Polls, Unaccounted Cash Of <Span Class='webrupee'>₹</span>4 Crore Seized By Kgf Police Pcp

Karnataka polls: ಕರ್ನಾಟಕ ಚುನಾವಣೆ, ಕೋಲಾರದಲ್ಲಿ ದಾಖಲೆ ಇಲ್ಲದ 4 ಕೋಟಿ ನಗದು ಜಪ್ತಿ

Kolar News: ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್) ಪೊಲೀಸರು ಗುರುವಾರ ಕೋಲಾರದ ಜಿಯಾನ್ ಹಿಲ್ಸ್‌ನಲ್ಲಿ ಮನೆ ಮತ್ತು ಕಾರಿನಲ್ಲಿ ದಾಖಲೆ ಇಲ್ಲದ 4 ಕೋಟಿ ರೂ. ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ.

Karnataka polls: ಕರ್ನಾಟಕ ಚುನಾವಣೆ, ಕೋಲಾರದಲ್ಲಿ ದಾಖಲೆ ಇಲ್ಲದ 4 ಕೋಟಿ ನಗದು ಜಪ್ತಿ
Karnataka polls: ಕರ್ನಾಟಕ ಚುನಾವಣೆ, ಕೋಲಾರದಲ್ಲಿ ದಾಖಲೆ ಇಲ್ಲದ 4 ಕೋಟಿ ನಗದು ಜಪ್ತಿ

ಕೋಲಾರ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ದಾಖಲೆ ಇಲ್ಲದ ಹಣವನ್ನು ಜಪ್ತಿ ಮಾಡುವ ಕೆಲಸವನ್ನು ಪೊಲೀಸರು ಮುಂದುವರೆಸಿದ್ದಾರೆ. ಇದೀಗ ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್) ಪೊಲೀಸರು ಗುರುವಾರ ಕೋಲಾರದ ಜಿಯಾನ್ ಹಿಲ್ಸ್‌ನಲ್ಲಿ ಮನೆ ಮತ್ತು ಕಾರಿನಲ್ಲಿ ದಾಖಲೆ ಇಲ್ಲದ 4 ಕೋಟಿ ರೂ. ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ.

ಎಸ್ಪಿ ಡಾ.ಧರಣಿದೇವಿ ಅವರ ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ ಜಿಯಾನ್ ಹಿಲ್ಸ್‌ನಲ್ಲಿನ ಮನೆ ಮತ್ತು ಕಾರಿನಲ್ಲಿ ಲೆಕ್ಕಕ್ಕೆ ಸಿಗದ 4,04,94,500 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತದಾರರಿಗೆ ಹಂಚಲು ಈ ಹಣವನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ.

ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 14 ರಂದು ಬೆಂಗಳೂರು ನಗರ ಮಾರುಕಟ್ಟೆ ಬಳಿ ಆಟೋ ರಿಕ್ಷಾವೊಂದರಲ್ಲಿ 1 ಕೋಟಿ ರೂಪಾಯಿ ದಾಖಲೆರಹಿತ ನಗದು ಪತ್ತೆಯಾಗಿತ್ತು. ಈ ಹಣದೊಂದಿಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಆಟೋ ರಿಕ್ಷಾದಲ್ಲಿ ಎರಡು ಬ್ಯಾಗ್ ನಗದಿನೊಂದಿಗೆ ಸಿಕ್ಕಿಬಿದ್ದ ಇಬ್ಬರನ್ನು ಸುರೇಶ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ.

ನಗದು ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಪೊಲೀಸರು ಇಬ್ಬರನ್ನು ಕೇಳಿದ್ದರು. ಆದರೆ, ಅವರು ದಾಖಲೆ ನೀಡಲು ವಿಫಲರಾಗಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ, ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಕ್ರಮ ಹಣದ ವಹಿವಾಟನ್ನು ತಪ್ಪಿಸಲು ಈಗಾಗಲೇ ರಾಜ್ಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿರುವ ಚುನಾವಣಾ ಆಯೋಗ, ವಾಹನಗಳ ತಪಾಸಣೆ ಪ್ರಕ್ರಿಯೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಚುನಾವಣೆಗೆ ಇನ್ನು ಕೆಲವೇ ದಿನ ಇರುವುದರಿಂದ ತಪಾಸಣೆಯನ್ನು ಬಿಗಿಗೊಳಿಸಿದೆ.

ಇತ್ತೀಚೆಗೆ ಮೈಸೂರಿನಲ್ಲಿ ಕೆ. ಸುಬ್ರಹ್ಮಣ್ಯ ರೈ ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ಮನೆಯಂಗಳದ ಗಿಡದ ಬುಡದಲ್ಲಿದ್ದ ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪತ್ತೆ ಹಚ್ಚಿದ್ದಾರೆ. ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಕಂತೆ ಕಂತೆ ನೋಟುಗಳನ್ನು ನೋಡಿದ ಐಟಿ ಅಧಿಕಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. ಆ ಹಣವನ್ನು ಎಣಿಕೆ ಮಾಡಿದಾಗ ಬರೋಬ್ಬರಿ ಒಂದು ಕೋಟಿ ರೂಪಾಯಿ ಪತ್ತೆಯಾಗಿದ್ದು, ಹಣವನ್ನು ವಶಪಡಿಸಿಕೊಂಡಿದ್ದರು. ಈ ವರದಿ ಓದಿ.

ಇತ್ತೀಚಿನ ವರದಿಯ ಪ್ರಕಾರ ನಗದು ಮತ್ತು ವಸ್ತುಗಳ ಮುಟ್ಟುಗೋಲು ಸಂಬಂಧ ಚುನಾವಣಾ ನೀತಿ ಸಂಹಿತೆ ಕುರಿತು ಈವರೆಗೆ 2,346 ಎಫ್‌ಐಆರ್ ದಾಖಲಾಗಿವೆ. ಚುನಾವಣೆ ಘೋಷಣೆಗೆ ಮೊದಲೇ (ಮಾರ್ಚ್ 9ರಿಂದ 27ರ ಅವಧಿ) ಮುಟ್ಟುಗೋಲು ಹಾಕಿಕೊಂಡಿದ್ದು ನಗದು ಮತ್ತು ವಸ್ತುಗಳ ಮೊತ್ತ 58 ಕೋಟಿ ರೂಪಾಯಿ ದಾಟಿತ್ತು.

IPL_Entry_Point