ಕನ್ನಡ ಸುದ್ದಿ  /  ಕರ್ನಾಟಕ  /  It Raid In Mysuru: ಮೈಸೂರಿನ ವಿವಿಧೆಡೆ ಐಟಿ ದಾಳಿ; ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಒಂದು ಕೋಟಿ ಹಣ ಪತ್ತೆ

IT Raid in Mysuru: ಮೈಸೂರಿನ ವಿವಿಧೆಡೆ ಐಟಿ ದಾಳಿ; ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಒಂದು ಕೋಟಿ ಹಣ ಪತ್ತೆ

ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಭಾಗಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸುಬ್ರಹ್ಮಣ್ಯ ರೈ ಎಂಬುವವರ ಮನೆಯ ಗಿಡ ಬಳಿ ಇದ್ದ ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಒಂದು ಕೋಟಿ ಹಣ ಪತ್ತೆಯಾಗಿತ್ತು.

ಮೈಸೂರಿನ ಬಾಂಬೆ ಟಿಫಾನೀಸ್‌ನಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
ಮೈಸೂರಿನ ಬಾಂಬೆ ಟಿಫಾನೀಸ್‌ನಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮೈಸೂರಿನ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೈಸೂರಿನಲ್ಲಿ ಕೆ. ಸುಬ್ರಹ್ಮಣ್ಯ ರೈ ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ಮನೆಯಂಗಳದ ಗಿಡದ ಬುಡದಲ್ಲಿದ್ದ ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪತ್ತೆ ಹಚ್ಚಿದ್ದಾರೆ. ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಕಂತೆ ಕಂತೆ ನೋಟುಗಳನ್ನು ನೋಡಿದ ಐಟಿ ಅಧಿಕಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. ಆ ಹಣವನ್ನು ಎಣಿಕೆ ಮಾಡಿದಾಗ ಬರೋಬ್ಬರಿ ಒಂದು ಕೋಟಿ ರೂಪಾಯಿ ಪತ್ತೆಯಾಗಿದ್ದು, ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ರೈ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರ ಎಂದು ತಿಳಿದುಬಂದಿದೆ. ಹಣವನ್ನು ಮನೆಯಲ್ಲಿಟ್ಟರೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದಾಗ ಸಿಗಬಹುದೆಂದು ಮನೆಯಂಗಳದ ಗಿಡದ ಸಮೀಪ ಇಟ್ಟಿದ್ದರು.

ನಗರದ ಡಿ. ದೇವರಾಜ ಅರಸು ರಸ್ತೆಯಲ್ಲಿರುವ ಅನಿಲ್ ಎಂಬುವರ ಮಾಲೀಕತ್ವದ ಬಾಂಬೆ ಟಿಫಾನಿಸ್ ಸಿಹಿ ತಿಂಡಿ ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೇ ಯಾದವಗಿರಿ ಹಾಗೂ ಆರ್.ಟಿ.ಓ. ಕಚೇರಿ ಬಳಿ ಇರುವ ಅವರ ನಿವಾಸಗಳ ಮೇಲೂ ಏಕಕಾಲಕ್ಕೆ ದಾಳಿ ಮಾಡಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಹಾಗೂ ದೇವರಾಜ ಅರಸು ರಸ್ತೆ, ಸಿದ್ದಾರ್ಥ ನಗರ ಜೆಪಿ ನಗರದಲ್ಲಿರುವ ಶಾಖೆಗಳು ಹಾಗೂ ತಯಾರಿಕಾ ಘಟಕದಲ್ಲೂ ಪರಿಶೀಲನೆ ನಡೆಸಿದ್ದಾರೆ.

ವರದಿ: ಧಾತ್ರಿ ಭಾರದ್ವಾಜ್‌

ಈ ಸುದ್ದಿಗಳನ್ನೂ ಓದಿ

Mylary Hotel: ಪ್ರಿಯಾಂಕ ಗಾಂಧಿ ಭೇಟಿ ನೀಡಿದ್ದ ಮೈಲಾರಿ ಹೋಟೆಲ್‌ ವೈಶಿಷ್ಟ್ಯ ಏನು; ಹೋಟೆಲ್‌ಗೆ ಈ ಹೆಸರು ಬಂದಿದ್ದು ಹೇಗೆ, ಇಲ್ಲಿದೆ ಮಾಹಿತಿ

ಅಜ್ಜಿ ಕಾಲದಿಂದಲೂ ಹೋಟೆಲ್‌ ಇತ್ತಾದರೂ ಅದು ಜನರಿಗೆ ಹೆಚ್ಚು ಪರಿಚಯವಾಗಿದ್ದು ಮೈಲಾರ ಸ್ವಾಮಿ ಅವರ ಸಮಯದಲ್ಲಿ. ಆಗ ಈ ಹೋಟೆಲ್‌ಗೆ ಬೇರೆ ಹೆಸರಿತ್ತಾದರೂ, ಈ ಹೋಟೆಲ್‌ನ ತಿಂಡಿ ರುಚಿಗೆ ಮಾರುಹೋದ ಜನರು ಮಾಲೀಕರ ಹೆಸರಾದ ಮೈಲಾರಿ ಎಂದೇ ಕರೆಯುತ್ತಿದ್ದರು.

ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ನೆನಪಾಗುವುದು ಅಲ್ಲಿನ ತಿಂಡಿಗಳು. ಅದರಲ್ಲೂ ಮಸಾಲೆ ದೋಸೆ ಎಂದರೆ ಎಲ್ಲೆಡೆ ಬಹಳ ಫೇಮಸ್.‌ ಮೈಸೂರಿಗೆ ಬಂದವರು ಮಸಾಲೆ ದೋಸೆ ಟೇಸ್ಟ್‌ ಮಾಡದೆ ಹೋಗುವುದಿಲ್ಲ. ದೋಸೆ ತಿನ್ನಲು ಕೆಲವೇ ಕೆಲವು ಹೋಟೆಲ್‌ಗಳನ್ನು ಹುಡುಕಿ ಹೋಗಿ ಸವಿದು ಬರುತ್ತಾರೆ. ಅದರಲ್ಲಿ ಮೈಲಾರಿ ಅಗ್ರಹಾರ ಹೋಟೆಲ್‌ ಕೂಡಾ ಒಂದು. ಇತ್ತೀಚೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕೂಡಾ ಇಲ್ಲಿ ದೋಸೆ ಹಾಗೂ ಇಡ್ಲಿ ಸವಿದಿದ್ದರು.

Political Analysis: ಮುಂದಿನ ಲೋಕಸಭಾ ಚುನಾವಣೆಗೆ ಕರ್ನಾಟಕವೇ ಮಾದರಿ; ಬಿಜೆಪಿ, ಕಾಂಗ್ರೆಸ್ ಕಂಡುಕೊಂಡ ದೆಹಲಿ ಗದ್ದುಗೆಯ ಹಾದಿಯಿದು

Karnataka Politics: ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಅನುಸರಿಸುವ ಕಾರ್ಯತಂತ್ರಗಳ ಯಶಸ್ಸು ಮತ್ತು ವೈಫಲ್ಯ ನಿಚ್ಚಳವಾಗಿ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ತನ್ನದೇ ಆದ ರೀತಿಯಲ್ಲಿ ಪ್ರಭಾವ, ಪರಿಣಾಮಗಳನ್ನು ಬೀರಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ವಿಶ್ಲೇಷಣೆ ಇಲ್ಲಿದೆ.

IPL_Entry_Point