Mangalore News: ಮತದಾನದ ವಿಶೇಷ; ನದಿ ದಾಟಿ ಬಂದು ಮತ ಚಲಾಯಿಸಿದ ಮಂಗಳೂರಿನ ಪಾವೂರು, ಉಳಿಯ ದ್ವೀಪದ ಜನತೆ-mangaluru news lok sabha election 2024 pavoor uliya island people came across the river to vote hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮತದಾನದ ವಿಶೇಷ; ನದಿ ದಾಟಿ ಬಂದು ಮತ ಚಲಾಯಿಸಿದ ಮಂಗಳೂರಿನ ಪಾವೂರು, ಉಳಿಯ ದ್ವೀಪದ ಜನತೆ

Mangalore News: ಮತದಾನದ ವಿಶೇಷ; ನದಿ ದಾಟಿ ಬಂದು ಮತ ಚಲಾಯಿಸಿದ ಮಂಗಳೂರಿನ ಪಾವೂರು, ಉಳಿಯ ದ್ವೀಪದ ಜನತೆ

ಮತದಾನ ಮಾಡಲೇಬೇಕು ಅಂತ ನಿರ್ಧಾರ ಮಾಡುವವರು ಎಷ್ಟೇ ಕಷ್ಟವಾದರೂ ತಮ್ಮ ಹಕ್ಕು ಚಲಾಯಿಸುತ್ತಾರೆ. ಮಂಗಳೂರಿನ ಪಾವೂರು, ಉಳಿಯ ದೀಪದ ಜನತೆ ಬೋಟ್ ಮೂಲಕ ನದಿ ದಾಟಿ ಬಂದು ಮತ ಚಲಾಯಿಸಿದ್ದಾರೆ. (ವರದಿ: ಹರೀಶ್ ಮಾಂಬಾಡಿ)

ಮಂಗಳೂರಿನ ಪಾವೂರು, ಉಳಿಯ ದ್ವೀಪದ ಜನತೆ ನದಿ ದಾಟಿ ಬಂದು ಮತ ಚಲಾಯಿಸಿದ್ದಾರೆ.
ಮಂಗಳೂರಿನ ಪಾವೂರು, ಉಳಿಯ ದ್ವೀಪದ ಜನತೆ ನದಿ ದಾಟಿ ಬಂದು ಮತ ಚಲಾಯಿಸಿದ್ದಾರೆ.

ಮಂಗಳೂರು (ದಕ್ಷಿಣ ಕನ್ನಡ): ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Karnataka Lok Sabha Election 2024) ಮೊದಲ ಹಂತದ 14 ಕ್ಷೇತ್ರಗಳ ಮತದಾನ ಇವತ್ತು (ಏಪ್ರಿಲ್ 26, ಶುಕ್ರವಾರ) ಮುಕ್ತಾಯವಾಗಿದೆ. ಸಾಕಷ್ಟು ಮಂದಿ ಮತದಾನ ಮಾಡಲೇಬೇಕೆಂಬ ಉದ್ದೇಶದಿಂದ ದೂರದ ಊರುಗಳಿಂದ ಬಂದು ಹಕ್ಕು ಚಲಾಯಿಸಿದ್ದಾರೆ. ಅದೇ ರೀತಿಯಾಗಿ ಮಂಗಳೂರಿನಿಂದ ಅನತಿ ದೂರದಲ್ಲಿರುವ ದ್ವೀಪ ಪ್ರದೇಶ ಪಾವೂರು - ಉಳಿಯದ (Pavoor Uliya Island) ಜನತೆ ಬೋಟ್ ಮೂಲಕ ನದಿಯನ್ನು ದಾಟಿ ಬಂದು ಮತ ಚಲಾಯಿಸಿದ್ದಾರೆ.

ದ್ವೀಪದ ಜನರು ತಮ್ಮ ದೈನಂದಿನ ವ್ಯವಹಾರಕ್ಕಾಗಿ ನಗರ ಪ್ರದೇಶಕ್ಕೆ ಬರಬೇಕಾದರೆ ಬೋಟ್ ಅನ್ನೇ ಅವಲಂಬಿಸಬೇಕು. ಯಾಕೆಂದರೆ ಇದೊಂದು ದ್ವೀಪ ಪ್ರದೇಶ. ಆದ್ದರಿಂದ ಇಲ್ಲಿನ ಜನರು ಇವತ್ತು (ಏಪ್ರಿಲ್ 26, ಶುಕ್ರವಾರ) ಬೋಟ್ ಏರಿ, ನದಿದಾಟಿ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ತಮ್ಮ ಊರಿಗೆ ರಸ್ತೆ ಸಂಪರ್ಕ ಸೇತುವೆ ಇಲ್ಲದ ಪಾವೂರು ಉಳಿಯ ದ್ವೀಪದ ಜನರು ಮತದಾನವೆಂಬ ತಮ್ಮ ಕರ್ತವ್ಯವನ್ನು ಮಾತ್ರ ಮರೆಯಲಿಲ್ಲ. ಆದ್ದರಿಂದ ಸುತ್ತಲೂ ಹರಿಯುತ್ತಿರುವ ನೇತ್ರಾವತಿ ನದಿಯನ್ನೇ ದಾಟಿ ಬಂದು ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.

ನದಿ ದಾಟಿ ಬಂದು 50ಕ್ಕೂ ಅಧಿಕ ಕುಟುಂಬಗಳಿಂದ ಮತದಾನ

ಇಲ್ಲಿನ ಜನತೆ ಸಂಪರ್ಕ ಸೇತುವೆಯಿಲ್ಲದೆ ಹಲವು ವರ್ಷಗಳಿಂದ ಪರದಾಡುತ್ತಿದ್ದಾರೆ. ಸಂಪರ್ಕ ಸೇತುವೆಗಾಗಿ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿಯನ್ನು ನೀಡಿದ್ದಾರೆ. ಆದರೆ ಇವರ ಬೇಡಿಕೆ ಇನ್ನು ಈಡೇರಿಲ್ಲ. ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದೆ. ಇಲ್ಲಿ ಸುಮಾರು 150ಕ್ಕೂ ಅಧಿಕ ಮತದಾರರಿದ್ದಾರೆ. ಆದ್ದರಿಂದ ಇಲ್ಲಿನ ಮತದಾರರು ಹಿರಿ - ಕಿರಿಯರೆನ್ನದೆ ಎಲ್ಲರೂ ಬೋಟ್ ಏರಿ ಬಂದು ಮತದಾನದ ಕರ್ತವ್ಯದಲ್ಲಿ ಭಾಗಿಯಾದರು.

ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ತಲಾ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 18ನೇ ಲೋಕಸಭಾ ಚುನಾವಣೆ ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. (ವರದಿ: ಹರೀಶ್ ಮಾಂಬಾಡಿ).

mysore-dasara_Entry_Point