ಕನ್ನಡ ಸುದ್ದಿ  /  Karnataka  /  Nitin Gadkari Gets Threat Call Union Minister Nitin Gadkari Threatened By Bengaluru Young Lady S Number

Nitin Gadkari gets threat call: ಬೆಂಗಳೂರು ಯುವತಿಯ ನಂಬರ್‌ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ; ಏನು ವಿಷಯ?!

Nitin Gadkari gets threat call: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಮ್ಮೆ ಬೆದರಿಕೆ ಬಂದಿದೆ. ಕರೆ ಮಾಡಿದವರು ಅವರ ಮನೆ ಮತ್ತು ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪೋಲೀಸರ ಪ್ರಕಾರ, ಕರೆ ಮಾಡಿದ ವ್ಯಕ್ತಿ ತನ್ನ ಹೆಸರನ್ನು ಜಯೇಶ್ ಪೂಜಾರಿ ಎಂದು ಹೇಳಿಕೊಂಡಿದ್ದಾನೆ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ
ಕೇಂದ್ರ ಸಚಿವ ನಿತಿನ್‌ ಗಡ್ಕರಿ (ANI / HT_PRINT)

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಮ್ಮೆ ಬೆದರಿಕೆ ಬಂದಿದೆ. ಕರೆ ಮಾಡಿದವರು ಅವರ ಮನೆ ಮತ್ತು ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನ ಹೆಸರನ್ನು ಜಯೇಶ್ ಪೂಜಾರಿ ಎಂದು ಪರಿಚಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಸಲ ಕರೆ ಮಾಡಿದಾಗ 100 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಒಡ್ಡಿದವರು ಕೇಳಿದ್ದರು. ಆದರೆ ಈ ಬಾರಿ ಕನಿಷ್ಠ 10 ಕೋಟಿ ರೂಪಾಯಿಯನ್ನು ಕೇಂದ್ರ ಸಚಿವರು ನೀಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಪಶ್ಚಿಮ ನಾಗ್ಪುರ ಪ್ರದೇಶದ ಖಮ್ಲಾದಲ್ಲಿರುವ ನಿತಿನ್ ಗಡ್ಕರಿ ಅವರ ಕಚೇರಿ ಈ ಸಂಬಂಧ ದೂರು ದಾಖಲಿಸಿದೆ. ಇದಾದ ಬಳಿಕ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭವಾಗಿದೆ.

ಬೆಂಗಳೂರು ಯುವತಿಯ ಫೋನ್‌ ನಂಬರ್‌!

ಪೊಲೀಸರ ಪ್ರಕಾರ, ಗಡ್ಕರಿ ಅವರ ಖಮ್ಲಾ ಕಚೇರಿಗೆ ಫೋನ್‌ ಕರೆ ಬಂದಿತ್ತು. ಗಡ್ಕರಿ ಬದಲಿಗೆ, ಈ ಬಾರಿ ಕರೆ ಮಾಡಿದವರು ಮನೆ ಮತ್ತು ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕರೆಗೆ ಬಳಸಲಾದ ಸಂಖ್ಯೆ ಬೆಂಗಳೂರಿನ ಯುವತಿಗೆ ಸಂಬಂಧಿಸಿದ್ದು. ಆ ಯುವತಿಯು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಸ್ನೇಹಿತ ಜೈಲಿನಲ್ಲಿದ್ದಾನೆ. ನಾಗಪುರ ಪೊಲೀಸರು ಫೋನ್‌ ನಂಬರ್‌ ಬೆನ್ನುಹತ್ತಿ ಶೋಧ ಶುರುಮಾಡಿದ್ದಾರೆ.

ಅಷ್ಟಕ್ಕೂ ಫೋನ್‌ ಕರೆ ಮಾಡಿದವರು ಯಾರು?

ಹೌದು.. ಅಷ್ಟಕ್ಕೂ ಈ ಫೋನ್ ಕರೆಗಳನ್ನು ಮಾಡಿದವರು ಯಾರು? ವಿಚಾರವನ್ನು ಸಚಿವ ಗಡ್ಕರಿ ಅವರ ಖಮ್ಲಾ ಕಚೇರಿಯಲ್ಲಿರುವ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ವಿವರಿಸಿದ್ದು ಹೀಗೆ -

ನಮಗೆ ಎರಡು ಬೆದರಿಕೆ ಕರೆಗಳು ಬಂದಿವೆ. ಇದು ಮಂಗಳವಾರ ಬಂದಿರುವಂಥದ್ದು. ಸದ್ಯ ಕೇಂದ್ರ ಸಚಿವರು ಸಂಸತ್ ಅಧಿವೇಶನಕ್ಕೆ ತೆರಳಿದ್ದಾರೆ. ಅವರು ದೆಹಲಿಯಲ್ಲಿದ್ದಾರೆ. ಬೆದರಿಕೆ ಕರೆ ಬಂದ ತಕ್ಷಣ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ.

ಈ ವರ್ಷದ ಜನವರಿಯಲ್ಲಿ ನಿತಿನ್ ಗಡ್ಕರಿ ಅವರ ನಿವಾಸ ಮತ್ತು ಕಚೇರಿಗೆ ಇದೇ ರೀತಿಯ ಬೆದರಿಕೆ ಕರೆಗಳು ಬಂದಿದ್ದವು. ಜನವರಿ 14ರಂದು ಕರೆ ಮಾಡಿದ ವ್ಯಕ್ತಿ ತನ್ನನ್ನು ದಾವೂದ್ ಇಬ್ರಾಹಿಂ ಗ್ಯಾಂಗ್ ಸದಸ್ಯ ಎಂದು ಪರಿಚಯಿಸಿಕೊಂಡು 100 ಕೋಟಿ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ.

ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ ಅಂದು ಪೂರ್ವಾಹ್ನ 11.25 ಮತ್ತು ಮಧ್ಯಾಹ್ನ 12.30 ರ ನಡುವೆ ಕರೆಗಳು ಬಂದಿದ್ದವು. ಆದ್ದರಿಂದ ನಾಗಪುರ ಸಂಸದರ ಮನೆ ಮತ್ತು ಕಚೇರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕರೆ ಮಾಡಿದ ವ್ಯಕ್ತಿ ತಾನು ಜಯೇಶ್‌ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಡ್ಕರಿ ಅವರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಪ್ರಗತಿಯಲ್ಲಿದೆ ಪ್ರಕರಣದ ತನಿಖೆ

ಕರೆ ಮಾಡಿದ ವ್ಯಕ್ತಿ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಮರಣದಂಡನೆಯನ್ನೂ ವಿಧಿಸಿತ್ತು. ಜೈಲಿನಿಂದಲೇ ಈ ಫೋನ್ ಕರೆ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಗಡ್ಕರಿ ಮನೆ, ಕಚೇರಿಗೆ ಭದ್ರತೆ ಹೆಚ್ಚಳ

ಬೆದರಿಕೆ ಕರೆಗಳ ಕಾರಣ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಮನೆ ಮತ್ತು ಕಚೇರಿಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಿತಿನ್ ಗಡ್ಕರಿ ಅವರಿಗೆ ಈಗಾಗಲೇ Z ಪ್ಲಸ್‌ ಭದ್ರತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಾದ ಕೂಡಲೇ ವಲಯ ಉಪ ಪೊಲೀಸ್ ಆಯುಕ್ತ ರಾಹುಲ್ ಮದನೆ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದರು.

ನಾವು ಇಡೀ ವಿಷಯವನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ಸುರಕ್ಷತೆಯ ಬಗ್ಗೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಸಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮದನ್ ಹೇಳಿದರು.

IPL_Entry_Point