ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pm Modi: ವೈಟ್‌ಫೀಲ್ಡ್‌ ಮೆಟ್ರೋ ಉದ್ಘಾಟಿಸಿದ ಪ್ರಧಾನಿ: ಟಿಕೆಟ್‌ ಪಡೆದು ರೈಲಿನಲ್ಲಿ ಪ್ರಯಾಣಿಸಿದ ಮೋದಿ

PM Modi: ವೈಟ್‌ಫೀಲ್ಡ್‌ ಮೆಟ್ರೋ ಉದ್ಘಾಟಿಸಿದ ಪ್ರಧಾನಿ: ಟಿಕೆಟ್‌ ಪಡೆದು ರೈಲಿನಲ್ಲಿ ಪ್ರಯಾಣಿಸಿದ ಮೋದಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (ಮಾ.೨೫-ಶನಿವಾರ) ವೈಟ್‌ಫೀಲ್ಡ್‌- ಕೆಆರ್‌ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಟಿಕೆಟ್‌ ಪಡೆದು ರೈಲಿನಲ್ಲಿ ಸಂಚರಿಸಿದರು. ಈ ಕುರಿತು ಇಲ್ಲಿದೆ ಮಾಹಿತಿ..

ನೂತನವಾಗಿ ಸಿದ್ಧಗೊಂಡಿರುವ ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೈಟ್‌ಫೀಲ್ಡ್ (ಕಾಡುಗೋಡಿ)-ಕೆ.ಆರ್.ಪುರಂ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು.
icon

(1 / 5)

ನೂತನವಾಗಿ ಸಿದ್ಧಗೊಂಡಿರುವ ವೈಟ್‌ಫೀಲ್ಡ್‌ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೈಟ್‌ಫೀಲ್ಡ್ (ಕಾಡುಗೋಡಿ)-ಕೆ.ಆರ್.ಪುರಂ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು.(ANI)

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಶಾಸಕರಾದ ಅರವಿಂದ್‌ ಲಿಂಬಾವಳಿ ಸೇರಿದಂತೆ, ಹಲವು ಮೆಟ್ರೋ ಅಧಿಕಾರಿಗಳು ಉಪಸ್ಥಿತರಿದ್ದರು.
icon

(2 / 5)

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಶಾಸಕರಾದ ಅರವಿಂದ್‌ ಲಿಂಬಾವಳಿ ಸೇರಿದಂತೆ, ಹಲವು ಮೆಟ್ರೋ ಅಧಿಕಾರಿಗಳು ಉಪಸ್ಥಿತರಿದ್ದರು.(ANI)

ರೈಲು ಮಾರ್ಗ ಉದ್ಘಾಟನೆ ಬಳಿಕ ನಿಲ್ದಾಣದಲ್ಲಿ ಟಿಕೆಟ್‌ ಪಡೆದ ಪ್ರಧಾನಿ ಮೋದಿ, ಮುಂದಿನ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು.
icon

(3 / 5)

ರೈಲು ಮಾರ್ಗ ಉದ್ಘಾಟನೆ ಬಳಿಕ ನಿಲ್ದಾಣದಲ್ಲಿ ಟಿಕೆಟ್‌ ಪಡೆದ ಪ್ರಧಾನಿ ಮೋದಿ, ಮುಂದಿನ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು.(ANI)

ಈ ವೇಳೆ ಮೆಟ್ರೋ ಸಿಬ್ಬಂದಿ ಅವರೊಂದಿಗೆ ಪ್ರಧಾನಿ ಮೋದಿ ಆತ್ಮೀಯ ಚರ್ಚೆ ನಡೆಸಿದರು.
icon

(4 / 5)

ಈ ವೇಳೆ ಮೆಟ್ರೋ ಸಿಬ್ಬಂದಿ ಅವರೊಂದಿಗೆ ಪ್ರಧಾನಿ ಮೋದಿ ಆತ್ಮೀಯ ಚರ್ಚೆ ನಡೆಸಿದರು.(PTI)

ಪ್ರಧಾನಿ ಮೋದಿ ಅವರನ್ನು ಕಂಡು ಪುಳಕಿತರಾದ ಮೆಟ್ರೋ ಸಿಬ್ಬಂದಿ, ಅವರ ಪಕ್ಕದಲ್ಲೇ ಕುಳಿತು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದರು.
icon

(5 / 5)

ಪ್ರಧಾನಿ ಮೋದಿ ಅವರನ್ನು ಕಂಡು ಪುಳಕಿತರಾದ ಮೆಟ್ರೋ ಸಿಬ್ಬಂದಿ, ಅವರ ಪಕ್ಕದಲ್ಲೇ ಕುಳಿತು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದರು.(PTI)


IPL_Entry_Point

ಇತರ ಗ್ಯಾಲರಿಗಳು