ಕನ್ನಡ ಸುದ್ದಿ  /  ಕ್ರಿಕೆಟ್  /  Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

Royal Challengers Bengaluru vs Chennai Super Kings: ಆರ್‌ಸಿಬಿ ಗೆಲ್ಲುತ್ತಿದ್ದಂತೆಯೇ ಬೆಂಗಳೂರು ಮಾತ್ರವಲ್ಲದೆ ದೇಶಾದ್ಯಂತ ಅಭಿಮಾನಿಗಳ ಸಂಭ್ರಮಾಚಾರಣೆ ಜೋರಾಗಿದೆ. ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್
ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್ (X)

ತವರಿನ ಅಭಿಮಾನಿಗಳಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಭರಪೂರ ಮನರಂಜನೆ ನೀಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಪ್ಲೇಆಫ್‌ ಪ್ರವೇಶ ಮಾಡಿದೆ. ಇದರೊಂದಿಗೆ ಸಿಎಸ್‌ಕೆ ಜೊತೆಗೆ ಎಲ್‌ಎಸ್‌ಜಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಕೂಡಾ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಆರ್‌ಸಿಬಿ ಗೆಲ್ಲುತ್ತಿದ್ದಂತೆ ಚಿನ್ನಸ್ವಾಮಿ ಸ್ಟೇಡಿಯಂ ಮಾತ್ರವಲ್ಲದೆ, ಇಡೀ ಬೆಂಗಳೂರಿನಲ್ಲೇ ಸಂಭ್ರಮ ಮನೆ ಮಾಡಿತ್ತು. ರಾಜಧಾನಿ ಮಾತ್ರವಲ್ಲದೆ ಭಾರತದಾದ್ಯಂತ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಟ್ರೆಂಡಿಂಗ್​ ಸುದ್ದಿ

ಟೂರ್ನಿ ಆರಂಭಕ್ಕೂ ಮುನ್ನ ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ವಿರಾಟ್‌ ಕೊಹ್ಲಿ ಹೇಳಿದ್ದರು. ಅದು ಸಾಬೀತಾಗಿದೆ. ಐಪಿಎಲ್‌ 2024ರ ಮೊದಲಾರ್ಧದ ನಂತರ, ಆರ್‌ಸಿಬಿ ತಂಡ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶ 1 ಶೇಕಡಕ್ಕಿಂತ ಕಡಿಮೆ ಎಂದು ಹೇಳಲಾಗಿತ್ತು. ಅದನ್ನು ಫಾಫ್‌ ಪಡೆ ಸುಳ್ಳಾಗಿಸಿದೆ. ಪ್ಲೇಆಫ್​ ಪ್ರವೇಶಿಸುವುದೇ ಅನುಮಾನ ಎಂದು ಹೇಳಲಾಗುತ್ತಿದ್ದ ತಂಡವು, ಇದೀಗ ಮಾಜಿ ಚಾಂಪಿಯನ್‌ಗಳನ್ನು ಮಣಿಸಿ ನಾಲ್ಕನೇ ತಂಡವಾಗಿ‌ ಮುಂದಿನ ಹಂತ ತಲುಪಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು 27 ರನ್‌​ಗಳಿಂದ ಮಣಿಸಿದೆ. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ 9ನೇ ಬಾರಿಗೆ ಪ್ಲೇಆಫ್​​ಗೆ ಲಗ್ಗೆ ಇಟ್ಟಿದೆ.

ಟೂರ್ನಿಯನ್ನುಸೋಲಿನೊಂದಿಗೆ ಆರಂಭಿಸಿದ್ದ ಆರ್‌ಸಿಬಿ, ಮೊದಲ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿತ್ತು. ಸತತ 6 ಸೋಲು ಸಹಿತ ಒಟ್ಟು 7 ಪಂದ್ಯಗಳಲ್ಲಿ ಹೀನಾಯ ಸೋಲು ಕಡಿತ್ತು. ಆರ್‌ಸಿಬಿ ಮನೆಗೆ ನಡೆಯುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಅಚ್ಚರಿಯ ಹಾಗೂ ಬಲಿಷ್ಠ ಕಂಬ್ಯಾಕ್‌ ಎಂಬಂತೆ ಸತತ 6 ಪಂದ್ಯಗಳನನ್ನು ಗೆದ್ದ ಬೆಂಗಳೂರು, ಅಭಿಮಾನಿಗಳ ನಂಬಿಕೆ ಉಳಿಸಿಕೊಂಡಿದೆ. ನಿಷ್ಠಾವಂತ ಫ್ಯಾನ್ಸ್‌ಗೆ ಖುಷಿ ಉಣಬಡಿಸಿದೆ.

ಇದನ್ನೂ ಓದಿ | ಐಪಿಎಲ್​ ಇತಿಹಾಸದಲ್ಲಿ 700 ಬೌಂಡರಿ ಸಿಡಿಸಿದ ವಿರಾಟ್ ಕೊಹ್ಲಿ; ಫೋರ್​​ಗಳಿಂದಲೂ ಐತಿಹಾಸಿಕ ದಾಖಲೆ ಬರೆದ ಕಿಂಗ್

ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆಯೇ ಎಲ್ಲೆಡೆ ಸಂಭ್ರಮ ಒಂದೆಡೆಯಾದರೆ, ಸೋಷಿಯಲ್‌ ಮೀಡಿಯಾದಲ್ಲೂ ಗೆಲುವಿನ ಕುರಿತ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ. ಎಕ್ಸ್‌ನಲ್ಲಿ RcbvsCsk ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿದೆ. ಹಾಗಿದ್ರೆ ಪಂದ್ಯದ ಬಳಿಕ ಫ್ಯಾನ್ಸ್‌ ಸಂಭ್ರಮ ಹೇಗಿತ್ತು ಎಂಬುದನ್ನು ನೋಡೋಣ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 20 ಓವರ್‌​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ನಾಯಕ ಫಾಫ್ ಡು ಪ್ಲೆಸಿಸ್ 54, ವಿರಾಟ್ ಕೊಹ್ಲಿ 47, ರಜತ್ ಪಾಟೀದಾರ್ 41, ಕ್ಯಾಮರೂನ್ ಗ್ರೀನ್ 38 ರನ್ ಪೇರಿಸಿದರು. ಗೆಲುವಿಗೆ 219 ರನ್‌ಗ​ಗಳ ಗುರಿ ಬೆನ್ನಟ್ಟಿದ ಸಿಎಸ್‌​ಕೆ 20 ಓವರ್‌​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಮಾತ್ರವೇ ಗಳಿಸಿತು. ಧೋನಿ ಹಾಗೂ ಜಡೇಜಾ ತಂಡದ ಗೆಲುವಿಗೆ ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಮಿಂಚಿನ ಬೌಲಿಂಗ್‌ ನಡೆಸಿದ ಯಶ್‌ ದಯಾಳ್‌, ಪಂದ್ಯದ ಗೆಲುವಿನಲ್ಲಿ ಪಾಲು ಪಡೆದರು.

ಇದನ್ನೂ ಓದಿ | ಹೊಸ ಅಧ್ಯಾಯ ಆರಂಭ, ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024