ಕನ್ನಡ ಸುದ್ದಿ  /  ಕರ್ನಾಟಕ  /  Satish Jarkiholi Faces Flak: ಪ್ರತಿಭಟನಾ ನಿರತ ಮರಾಠರ ಬಳಿ ತೆರಳಿದ ಸತೀಶ್‌ ಜಾರಕಿಹೊಳಿ; ಭಾಷಣಕ್ಕೆ ತೀವ್ರ ಅಡ್ಡಿ, ಪೊಲೀಸ್‌ ರಕ್ಷಣೆ

Satish Jarkiholi faces flak: ಪ್ರತಿಭಟನಾ ನಿರತ ಮರಾಠರ ಬಳಿ ತೆರಳಿದ ಸತೀಶ್‌ ಜಾರಕಿಹೊಳಿ; ಭಾಷಣಕ್ಕೆ ತೀವ್ರ ಅಡ್ಡಿ, ಪೊಲೀಸ್‌ ರಕ್ಷಣೆ

Satish Jarkiholi faces flak: ಲಕ್ಷ್ಮಿ ಹೆಬ್ಬಾಳ್ಕರ್‌ ಭಾಷಣಕ್ಕೆ ಯಾವುದೇ ಅಡ್ಡಿ ಮಾಡದ ಮರಾಠರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣ ಮಾಡಲು ಮುಂದಾದ ಕೂಡಲೇ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿ ಉಂಟುಮಾಡಿದರು.

ಬೆಳಗಾವಿಯ  ಸುವರ್ಣಸೌಧದ ಬಳಿ ಮರಾಠ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜತೆಯಾಗಿ ಭಾಗವಹಿಸಿದ್ದರು.
ಬೆಳಗಾವಿಯ ಸುವರ್ಣಸೌಧದ ಬಳಿ ಮರಾಠ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜತೆಯಾಗಿ ಭಾಗವಹಿಸಿದ್ದರು. (Social media)

ಬೆಳಗಾವಿ: ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದ ಬಳಿ ಮರಾಠ ಸಮುದಾಯದವರು ಪ್ರತಿಭಟನೆ ನಡೆಸುತಿದ್ದಾರೆ. ಈ ಪ್ರತಿಭಟನೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜತೆಯಾಗಿ ಭಾಗವಹಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಲಕ್ಷ್ಮಿ ಹೆಬ್ಬಾಳ್ಕರ್‌ ಭಾಷಣಕ್ಕೆ ಯಾವುದೇ ಅಡ್ಡಿ ಮಾಡದ ಮರಾಠರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣ ಮಾಡಲು ಮುಂದಾದ ಕೂಡಲೇ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿ ಉಂಟುಮಾಡಿದರು.

ಹಿಂದು ಪದದ ವ್ಯಾಖ್ಯಾನ, ಸಂಭಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಸತೀಶ್​ ಅವರಿಗೆ ಭಾಷಣ ಮಾಡಲು ಬಿಡದೆ ಶಿವಾಜಿ​ ಮಹಾರಾಜ್ ಪರ ಘೋಷಣೆ, ಹರ ಹರ ಮಹದೇವ್​, ಜೈಶ್ರೀರಾಮ್​ ಎಂದು ಘೋಷಣೆಗಳನ್ನುಕೂಗಿದರು.

ವೇದಿಕೆ ಮೇಲಿದ್ದ ಮರಾಠ ಮುಖಂಡರಿಗೂ ಇದು ಅನಿರೀಕ್ಷಿತವಾದ ಕಾರಣ, ಅವರೂ ಇರಿಸು ಮುರುಸು ಅನುಭವಿಸಿದರು. ಅಲ್ಲದೆ, ಘೋಷಣೆ ಕೂಗದಂತೆ ಮುಖಂಡರು ಮನವಿ ಮಾಡಿದರು. ಆದರೆ, ಮುಖಂಡರ ಮಾತನ್ನೂ ಕೇಳದ ಪ್ರತಿಭಟನಾಕಾರರು ಜೈ ಶ್ರೀರಾಮ್​​ ಎಂದು ಘೋಷಣೆ ಕೂಗಿದರು.

ಇಷ್ಟಾಗುವ ಹೊತ್ತಿಗೆ ಸತೀಶ್‌ ಜಾರಕಿಹೊಳಿ ಮೈಕ್‌ ಹಿಡಿದು ಭಾಷಣ ಶುರುಮಾಡಿದರು. ಆ ವಿಚಾರವೇ ಬೇರೆ, ಈ ವಿಷಯವೇ ಬೇರೆ ಎಂದು ಹೇಳುತ್ತ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನವನ್ನು ಅವರು ಮಾಡಿದರು. ಆದರೆ ಅದು ಸಫಲವಾಗಲಿಲ್ಲ. ಕೊನೆಗೆ ಲಗುಬಗೆಯಿಂದ ಮಾತುಮುಗಿಸಿದರು. ಪೊಲೀಸ್‌ ರಕ್ಷಣೆಯಲ್ಲಿ ಅಲ್ಲಿಂದ ಹೊರಗೆ ಹೋದರು.

ಸತೀ್ ಜಾರಕಿಹೊಳಿ, ಇತ್ತೀಚೆಗೆ ಹಿಂದು ಪದದ ಹೇಳಿಕೆ ಹಾಗೂ ಶಂಭಾಜಿ ಮಹಾರಾಜ್ ಬಗ್ಗೆ ನೀಡಿದ್ದ ಹೇಳಿಕೆಗಳು ವಿವಾದಕ್ಕೀಡಾಗಿದ್ದವು. ಹೀಗಾಗಿ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಪ್ರಯತ್ನವನ್ನು ಜಾರಕಿಹೊಳಿ ಮಾಡಿದರು ಎನ್ನುತ್ತಿವೆ ಸ್ಥಳೀಯ ಮಾಧ್ಯಮಗಳು.

ಗಮನಿಸಬಹುದಾದ ಸುದ್ದಿಗಳು

ಮರಾಠಿಗರಿಗೆ 2 ಎ ಮೀಸಲಾತಿ ಬೇಡಿಕೆ; ರಾಜಕೀಯ ಮರುಜನ್ಮನೀಡಿದವರಿಗೆ ಇಷ್ಟು ಮಾಡದಿದ್ದರೆ ಹೇಗೆ ಎಂದ ಲಕ್ಷ್ಮಿ

Laxmi Hebbalkar woos marathas: ನನಗೆ ರಾಜಕೀಯ ಮರುಜನ್ಮ ನೀಡಿದವರು ಮರಾಠಿಗರು. 2 ಎ ಮೀಸಲಾತಿ ವಿಚಾರದಲ್ಲಿ ನಿಮ್ಮ ಜತೆಗೆ ನಿಲ್ಲದಿದ್ದರೆ ಹೇಗೆ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಬಳಿಕ ಮರಾಠಿಯಲ್ಲಿ ಮಾತು ಮುಂದುವರಿಸಿ ಓಲೈಸಲು ಪ್ರಯತ್ನಿಸಿದ್ದು ಗಮನಸೆಳೆಯಿತು. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

ಡಿಕೆಶಿ ಮತ್ತು ಸಿದ್ರಾಮಣ್ಣ ಪರಸ್ಪರ ಸೋಲಿಸ್ತಾರೆ, ಬಿಜೆಪಿ ಬೆಂಬಲಕ್ಕೆ ಜನ ನಿಲ್ತಾರೆ ಎಂದ ಕಟೀಲ್‌

BJP state office bearers meet: ಡಿಕೆಶಿ ಕೊಟ್ಟ ಸೀಟನ್ನು ಸಿದ್ರಾಮಣ್ಣ ಸೋಲಿಸ್ತಾರೆ. ಅದೇ ಮಾದರಿಯಲ್ಲಿ ಸಿದ್ರಾಮಣ್ಣ ಬೆಂಬಲಿಗರನ್ನು ಡಿಕೆಶಿ ಮುಗಿಸುತ್ತಾರೆ. ಇವರಿಬ್ಬರನ್ನು ಸೋಲಿಸಲು ಖರ್ಗೆ ಶ್ರಮಿಸುತ್ತಾರೆ. ಇನ್ನೊಂದೆಡೆ, ರೇವಣ್ಣ- ಕುಮಾರಣ್ಣನ ನಡುವೆ ಗಲಾಟೆ ಕಾರಣ ಹಾಸನದ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

ಗೆದ್ದು ಅಧಿಕಾರ ಚುಕ್ಕಾಣಿ ಉಳಿಸುವುದು ಅನಿವಾರ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

BJP meet in Murudeshwar: ಟಿಪ್ಪು ನರಮೇಧದ ಕುರಿತು ಸಾಮಾನ್ಯ ಜನರಿಗೆ ಮನವರಿಕೆ ಮಾಡಬೇಕಲ್ಲವೇ? ವೀರ ಸಾವರ್ಕರ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದನ್ನು ಖಂಡಿಸಬೇಕಲ್ಲವೇ? ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಅವರು ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

IPL_Entry_Point