ಕನ್ನಡ ಸುದ್ದಿ  /  Latest News  /  Karnataka Cabinet 24 Mlas Took Oath As Ministers In Siddaramaiah Cabinet Congress Govt Without Portfolio Politics Kub

Karnataka Cabinet: ಕರ್ನಾಟಕ ಕ್ಯಾಬಿನೆಟ್‌ ವಿಸ್ತರಣೆ, 24 ಸಚಿವರ ಪ್ರಮಾಣ ಸ್ವೀಕಾರ; ಶೀಘ್ರದಲ್ಲೇ ಖಾತೆ ಹಂಚಿಕೆ

೧೫ ದಿನದ ಹಿಂದೆಯೇ ಮತ ಎಣಿಕೆ ನಡೆದು ಬಹುಮತ ಪಡೆದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಯ್ಕೆ, ನಂತರ ಸಂಪುಟ ವಿಸ್ತರಣೆ ಗೊಂದಲಗಳು 15 ದಿನಗಳವರೆಗೂ ಮುಂದುವರೆದು ಈಗ ಸಂಪುಟ ಸಂಕಟ ಮುಗಿದಿದೆ. ಶನಿವಾರ ಸಂಜೆ ಒಳಗೆ ಖಾತೆಗಳೂ ಹಂಚಿಕೆಯಾಗುವ ಸಾಧ್ಯತೆಯಿದೆ.

ಸಂಪುಟ ದರ್ಜೆ ಸಚಿವರಾಗಿ ಎಚ್‌.ಕೆ.ಪಾಟೀಲ ಶನಿವಾರ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಪುಟ ದರ್ಜೆ ಸಚಿವರಾಗಿ ಎಚ್‌.ಕೆ.ಪಾಟೀಲ ಶನಿವಾರ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರು: ಹದಿನೈದು ದಿನಗಳ ರಾಜಕೀಯ ಏರಳಿತಗಳ ನಡುವೆ ಸಿದ್ದರಾಮಯ್ಯ ಅವರ ಸಂಪುಟ ಕೊನೆಗೂ ಭರ್ತಿಯಾಯಿತು.

ಬೆಂಗಳೂರಿನ ರಾಜಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ 24 ಸಚಿವರು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಹಿರಿಯ ಸಚಿವರು, ಪಕ್ಷದ ಪ್ರಮುಖರು, ಕಾರ್ಯಕರ್ತರು, ಕುಟುಂಬದವರ ಉಪಸ್ಥಿತಿಯಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಐವರು ಸಚಿವರಂತೆ ಪ್ರಮಾಣ ವಚನಕ್ಕೆ ಸಿದ್ದತೆ ಮಾಡಿಕೊಂಡಿದ್ದರೂ ಸಿದ್ದರಾಮಯ್ಯ ಅವರ ಕೋರಿಕೆ ಮೇರೆಗೆ ರಾಜ್ಯಪಾಲರು ಒಬ್ಬೊಬ್ಬರಿಗೆ ಪ್ರಮಾಣ ವಚನ ಬೋಧಿಸಿದರು. ಮೊದಲು ಎಚ್‌ಕೆಪಾಟೀಲ, ನಂತರ ಕೃಷ್ಣಬೈರೇಗೌಡ, ಎನ್‌.ಚಲುವರಾಯಸ್ವಾಮಿ. ಡಾ.ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌ ಪ್ರಮಾಣ ಸ್ವೀಕರಿಸಿದರು. ಆನಂತರ ಉಳಿದ ಶಾಸಕರೂ ಪ್ರಮಾಣ ವಚನ ಸ್ವೀಕರಿಸಿದರು.

ಈ ಹಿಂದೆ ಎಚ್‌.ಕೆ.ಪಾಟೀಲ(ಗದಗ). ಡಾ.ಎಚ್‌.ಸಿ.ಮಹದೇವಪ್ಪ(ತಿ.ನರಸೀಪುರ).,ಕೆ.ವೆಂಕಟೇಶ್‌( ಪಿರಿಯಾಪಟ್ಟಣ), ಶರಣಬಸಪ್ಪ ದರ್ಶನಾಪುರ( ಶಹಾಪುರ), ಕೃಷ್ಣಭೈರೇಗೌಡ(ಬ್ಯಾಟರಾಯನಪುರ). ಶಿವಾನಂದ ಪಾಟೀಲ( ಬಸವನಬಾಗೇವಾಡಿ),ದಿನೇಶ್‌ಗುಂಡೂರಾವ್‌( ಗಾಂಧಿನಗರ), ಶಿವರಾಜ ತಂಗಡಿ( ಕನಕಗಿರಿ), ರುದ್ರಪ್ಪ ಲಮಾಣಿ( ಹಾವೇರಿ), ರಹೀಂಖಾನ್‌( ಬೀದರ್‌), ಶರಣಪ್ರಕಾಶ ಪಾಟೀಲ( ಸೇಡಂ), ಈಶ್ವರ ಖಂಡ್ರೆ( ಭಾಲ್ಕಿ) ಡಿ. ಸುಧಾಕರ್‌( ಹಿರಿಯೂರು), ಸಂತೋಷ್‌ ಲಾಡ್‌( ಕಲಘಟಗಿ), ಎನ್‌..ಚಲುವರಾಯಸ್ವಾಮಿ( ನಾಗಮಂಗಲ), ಆರ್‌.ಬಿ.ತಿಮ್ಮಾಪುರ( ಮುಧೋಳ) ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಇವರಲ್ಲಿ ಕೆ.ಎನ್‌.ರಾಜಣ್ಣ(ಮಧುಗಿರಿ) ಲಕ್ಷ್ಮಿ ಹೆಬ್ಬಾಳಕರ( ಬೆಳಗಾವಿ ಗ್ರಾಮೀಣ), ಮಧುಬಂಗಾರಪ್ಪ( ಸೊರಬ), ಬಿ.ನಾಗೇಂದ್ರ( ಬಳ್ಳಾರಿ ಗ್ರಾಮೀಣ), ಬೈರತಿ ಸುರೇಶ(ಹೆಬ್ಬಾಳ), ಮಂಕಾಳ ವೈದ್ಯ( ಭಟ್ಟಳ), ಡಾ.ಎಂ.ಸಿ.ಸುಧಾಕರ( ಚಿಂತಾಮಣಿ), ಎನ್‌.ಎಸ್‌.ಬೋಸರಾಜು( ರಾಯಚೂರು) ಮೊದಲ ಬಾರಿಗೆ ಸಚಿವರಾದವರು.

ಇಬ್ಬರಿಗೆ ೨೫ ವರ್ಷದ ನಂತರ ಸಚಿವ ಗಾದಿ: ಹಿರಿಯ ಶಾಸಕರಾಗಿರುವ ಕೆ.ವೆಂಕಟೇಶ್‌ ಹಾಗೂ ಶರಣಬಸಪ್ಪ ದರ್ಶನಾಪುರ ಅವರಿಗೆ 25 ವರ್ಷದ ಬಳಿಕೆ ಸಚಿವ ಸ್ಥಾನ ಸಿಗುತ್ತಿದೆ. ಜೆ.ಎಚ್‌.ಪಟೇಲ್‌ ಅವರ ಸಂಪುಟದಲ್ಲಿ ವೆಂಕಟೇಶ್‌ ಪ್ರದೇಶಾಭಿವೃದ್ದಿ ಹಾಗೂ ದರ್ಶನಾಪುರ ಇಂಧನ ಸಚಿವರಾಗಿದ್ದರು. ಆಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು.

ಮಾಜಿ ಮುಖ್ಯಮಂತ್ರಿಗಳ ಪುತ್ರರಾದ ಕುಮಾರ ಬಂಗಾರಪ್ಪ ಹಾಗೂ ದಿನೇಶ್‌ ಗುಂಡೂರಾವ್‌ ಸಂಪುಟ ಸೇರಿದ್ದು ವಿಶೇಷ .

15 ದಿನದ ಹಿಂದೆಯೇ ಮತ ಎಣಿಕೆ ನಡೆದು ಬಹುಮತ ಪಡೆದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಯ್ಕೆ, ನಂತರ ಸಂಪುಟ ವಿಸ್ತರಣೆ ಗೊಂದಲಗಳು 15 ದಿನಗಳವರೆಗೂ ಮುಂದುವರೆದು ಈಗ ಸಂಪುಟ ಸಂಕಟ ಮುಗಿದಿದೆ. ಶನಿವಾರ ಸಂಜೆ ಒಳಗೆ ಖಾತೆಗಳೂ ಹಂಚಿಕೆಯಾಗುವ ಸಾಧ್ಯತೆಯಿದೆ.