ಕನ್ನಡ ಸುದ್ದಿ  /  ಜೀವನಶೈಲಿ  /  ಫಿಶ್‌ ಬಿರಿಯಾನಿ, ಮಟನ್‌ ಕುರ್ಮಾ, ಕೈಮಾ ಸಮೋಸಾ ಸೇರಿದಂತೆ ಮಾಂಸಾಹಾರಿಗಳು ಇಷ್ಟಪಡುವ 14 ನಾನ್‌ವೆಜ್‌ ರೆಸಿಪಿಗಳ ಡೀಟೇಲ್ಸ್‌ ಇಲ್ಲಿದೆ ನೋಡಿ

ಫಿಶ್‌ ಬಿರಿಯಾನಿ, ಮಟನ್‌ ಕುರ್ಮಾ, ಕೈಮಾ ಸಮೋಸಾ ಸೇರಿದಂತೆ ಮಾಂಸಾಹಾರಿಗಳು ಇಷ್ಟಪಡುವ 14 ನಾನ್‌ವೆಜ್‌ ರೆಸಿಪಿಗಳ ಡೀಟೇಲ್ಸ್‌ ಇಲ್ಲಿದೆ ನೋಡಿ

ಮಾಂಸಾಹಾರಿಗಳಿಗೆ ಕನಿಷ್ಠ ವಾರಕ್ಕೆ ಒಮ್ಮೆಯಾದರೂ ನಾನ್‌ವೆಜ್‌ ಅಡುಗೆ ಸೇವಿಸದಿದ್ದರೆ ತೃಪ್ತಿ ಎನಿಸುವುದಿಲ್ಲ. ಸಾಮಾನ್ಯವಾಗಿ ಬಹುತೇಕ ಜನರು ಮಟನ್‌, ಚಿಕನ್‌ ಖರೀದಿಸಿ ತಂದಾಗ ಸಾಂಬಾರ್‌, ಗ್ರೇವಿ, ಕಬಾಬ್‌ ತಯಾರಿಸುತ್ತಾರೆ. ಆದರೆ ಏನಾದರೂ ಬದಲಾವಣೆ ಇರಬೇಕಲ್ಲವೇ? ಪ್ರತಿ ಬಾರಿ ಒಂದೇ ರೆಸಿಪಿ ಮಾಡುವ ಬದಲಿಗೆ ಏನಾದರೂ ಡಿಫರೆಂಟ್‌ ತಯಾರಿಸಿ.

ನಾನ್‌ವೆಜ್‌ ಪ್ರಿಯರು ಇಷ್ಟಪಡುವ ಬೆಸ್ಟ್‌ ರೆಸಿಪಿಗಳು
ನಾನ್‌ವೆಜ್‌ ಪ್ರಿಯರು ಇಷ್ಟಪಡುವ ಬೆಸ್ಟ್‌ ರೆಸಿಪಿಗಳು (PC: Unsplash)

ಗ್ರಿಲ್ಡ್‌ ಚಿಕನ್‌, ಮಟನ್‌ ಕುರ್ಮಾ, ತಂದೂರಿ ಲ್ಯಾಂಬ್‌ ಚಾಪ್ಸ್‌ ಸೇರಿದಂತೆ ಎಲ್ಲಾ ನಾನ್‌ವೆಜ್‌ಪ್ರಿಯರಿಗೂ ಇಷ್ಟವಾಗುವ 14 ನಾನ್‌ ವೆಜ್‌ ರೆಸಿಪಿಗಳು ಇಲ್ಲಿವೆ. ನಿಮಗೆ ಈ ರೆಸಿಪಿ ಮಾಡಲು ಬರುವುದಿಲ್ಲ ಎಂಬ ಚಿಂತೆ ಬೇಡ. ಯೂಟ್ಯೂಬ್‌ನಲ್ಲಿ ಯಾವುದೇ ರೆಸಿಪಿ ಆದರೂ ನೀವು ಹಂತ ಹಂತವಾಗಿ ಕಲಿಯಬಹುದು.

ಟ್ರೆಂಡಿಂಗ್​ ಸುದ್ದಿ

1. ಗ್ರಿಲ್ಡ್‌ ಚಿಕನ್‌ ವಿತ್‌ ಫ್ರೆಶ್‌ ಸಾಲ್ಸಾ

ಚಿಕನ್‌ ಬ್ರೆಸ್ಟ್‌ , ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಚೆರ್ರಿ ಟೊಮ್ಯಾಟೋ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಗ್ರಿಲ್‌ ಚಿಕನ್‌ ತಿನ್ನಲು ಬಹಳ ರುಚಿಯಾಗಿರುತ್ತದೆ. ಚಿಕನ್‌ ಬ್ರೆಸ್ಟನ್ನು ಉಪ್ಪು, ಪೆಪ್ಪರ್‌, ಸ್ಪೈಸಿ ಪೌಡರ್‌, ಗ್ರೀನ್‌ ಪೇಸ್ಟ್‌ ಸೇರಿಸಿ ಅರ್ಧ ಗಂಟೆ ಮ್ಯಾರಿನೇಟ್‌ ಮಾಡಿ ಪ್ಯಾನ್‌ ಅಥವಾ ಗ್ರಿಲ್‌ನಲ್ಲಿ ಕುಕ್‌ ಮಾಡಿದರೆ ಗ್ರಿಲ್ಡ್‌ ಚಿಕನ್‌ ರೆಡಿ, ಇದನ್ನು ಬೇಕ್‌ ಕೂಡಾ ಮಾಡಬಹುದು. ನೀವು ತಯಾರಿಸಿದ ಗಿಲ್ಡ್‌ ಚಿಕನನ್ನು ಸಾಲ್ಸಾ ಜೊತೆ ಸರ್ವ್‌ ಮಾಡಿ.

2. ಮಟನ್‌ ಕುರ್ಮಾ

ಮಾಂಸಾಹಾರಿಪ್ರಿಯರು ಇಷ್ಟಪಡುವ ನಾನ್‌ವೆಜ್‌ ಐಟಮ್‌ಗಳಲ್ಲಿ ಮಟನ್‌ ಕುರ್ಮಾ ಕೂಡಾ ಒಂದು. ಮಸಾಲೆ ಪದಾರ್ಥಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಜೊತೆಗೆ ಇನ್ನಿತರ ಸಾಮಗ್ರಿಗಳನ್ನು ಸೇರಿಸಿ ರುಚಿಯಾದ ಮಟನ್‌ ಕುರ್ಮಾ ತಯಾರಿಸಿ ನಿಮ್ಮವರಿಗೆ ಸರ್ವ್‌ ಮಾಡಿ. ಪಾರ್ಟಿ ಅಥವಾ ಹಬ್ಬದ ಸಮಯದಲ್ಲಿ ನೀವು ಈ ರೆಸಿಪಿ ತಯಾರಿಸಬಹುದು. ಅನ್ನ, ಗೀ ರೈಸ್‌, ಚಪಾತಿ, ರೊಟ್ಟಿಯೊಂದಿಗೆ ತಿನ್ನಲು ಇದು ಬಹಳ ರುಚಿ ಇರುತ್ತದೆ.

3. ಪಿನಾ ಕೊಲಾಡಾ ಪೋರ್ಕ್‌ ರಿಬ್ಸ್‌

ನೀವು ಪೋರ್ಕ್‌ಪ್ರಿಯರಾಗಿದ್ದಲ್ಲಿ ಪಿನಾ ಕೊಲಾಡಾ ಪೋರ್ಕ್‌ ರಿಬ್ಸ್‌ ತಯಾರಿಸಬಹುದು. ನಾಲಿಗೆ ಚಪ್ಪರಿಸುವ ರುಚಿಯ ಈ ಡಿಶ್‌ ತಯಾರಿಸುವುದು ಬಹಳ ಸುಲಭ. ಮಸಾಲೆ ಸಾಮಗ್ರಿಗಳೊಂದಿಗೆ ಬ್ಲೆಂಡ್‌ ಮಾಡಿ ಸ್ಲೋ ಕುಕ್‌ ಮಾಡಿದರೆ ಈ ರೀತಿಯ ಡಿಶ್‌ ಆಗ್ಗಾಗ್ಗೆ ಮಾಡುತ್ತೀರ. ಇದಕ್ಕೆ ಬಳಸುವ ಶುಂಠಿ ಹಾಗೂ ಪೈನಾಪಲ್‌ ಜ್ಯೂಸ್‌ ಇಂಗ್ರೀಡಿಯಂಟ್‌ಗಳು ರುಚಿಯನ್ನು ಹೆಚ್ಚಿಸುತ್ತದೆ.

4. ತಂದೂರಿ ಲ್ಯಾಂಬ್‌ ಚಾಪ್ಸ್‌

ಹೆಸರೇ ಹೇಳುವಂತೆ ಇದು ಕುರಿಮರಿಯ ಮಾಂಸದಿಂದ ತಯಾರಿಸುವ ನಾನ್‌ ವೆಜ್‌ ರೆಸಿಪಿ. ಯೋಗರ್ಟ್‌, ಗರಂ ಮಸಾಲೆ, ಲ್ಯಾಂಬ್‌, ಲೆಮನ್‌ ಜ್ಯೂಸ್‌ ಹಾಗೂ ಇನ್ನಿತರ ಮಸಾಲೆ ಸಾಮಗ್ರಿಗಳನ್ನು ಸೇರಿಸಿ ಮ್ಯಾರಿನೇಟ್‌ ಮಾಡಿ ಪ್ರೀ ಹೀಟ್‌ ಮಾಡಿದ ತಂದೂರ್‌ ಒಲೆಯಲ್ಲಿ ಕುಕ್‌ ಮಾಡಿದರೆ ತಂದೂರಿ ಲ್ಯಾಂಬ್‌ ಚಾಪ್ಸ್‌ ರೆಡಿ. ಸರ್ವ್‌ ಮಾಡುವಾಗ ಪುದೀನಾ ಚಟ್ನಿ ಹಾಗೂ ಆನಿಯನ್‌ ರಿಂಗ್ಸನ್ನು ಜೊತೆ ಸೇರಿಸಿ.

5. ಮಲಬಾರ್‌ ಫಿಶ್‌ ಬಿರಿಯಾನಿ

ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಚಿಕನ್‌ ಮಟನ್‌ನಿಂದ ಮಾತ್ರವಲ್ಲ ಫಿಶ್‌ನಿಂದ ಕೂಡಾ ರುಚಿಯಾದ ಬಿರಿಯಾನಿ ತಯಾರಿಸಬಹುದು. ಅದರಲ್ಲೂ ಮಲಬಾರಿ ಫಿಶ್‌ ಬಿರಿಯಾನಿ ಬಹಳ ರುಚಿ ಇರುತ್ತದೆ. ನಿಮ್ಮ ಪ್ರೀತಿಪಾತ್ರರಿಗೆ ಅಥವಾ ಮನೆಗೆ ಗೆಸ್ಟ್‌ ಬಂದರೆ ಫಿಶ್‌ ಬಿರಿಯಾನಿ ತಯಾರಿಸಿ ಕೊಟ್ಟು ಅವರನ್ನು ಇಂಪ್ರೆಸ್‌ ಮಾಡಿ.

6. ಕೀಮಾ ಸಮೋಸಾ ವಿತ್‌ ಯೋಗರ್ಟ್‌ ಡಿಪ್

ಯೋಗರ್ಟ್‌ ಡಿಪ್‌ ಅಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಬಹಳ ಇಷ್ಟ. ರೆಸ್ಟೋರೆಂಟ್‌ಗಳಲ್ಲಿ ತಂದೂರಿ ಚಿಕನ್‌ ಜೊತೆಯೂ ಇದನ್ನು ಕೊಡಲಾಗುತ್ತದೆ. ಇದೊಂದು ಪಂಜಾಬಿ ಡಿಶ್.‌ ಚಿಕನ್‌ ಅಥವಾ ಮಟನ್‌ ಕೈಮಾ ಜೊತೆಗೆ ಕೆಲವು ಇಂಗ್ರೀಡಿಯಂಟ್ಸ್‌ ಸೇರಿಸಿ ಅದನ್ನು ಸಮೋಸಾ ಶೀಟ್‌ನಲ್ಲಿ ರ್ಯಾಪ್‌ ಮಾಡಿ ಕಂದು ಬಣ್ಣ ಬರುವರೆಗೂ ಕರಿದು ಡಿಪ್‌ ಜೊತೆ ಎಂಜಾಯ್‌ ಮಾಡುತ್ತಿದ್ದರೆ ಆ ರುಚಿಯ ಮುಂದೆ ಬೇರೆ ಏನೂ ಬೇಡ ಎನಿಸುವುದು ಪಕ್ಕಾ.

7.ಕರೀಡ್‌ ಪಾರ್ಸ್‌ಮೆನ್‌ ಫಿಶ್‌ ಫಿಂಗರ್ಸ್‌ ರೆಸಿಪಿ

ಪೊಟ್ಯಾಟೋ ಫಿಂಗರ್ಸ್‌ ಗೊತ್ತು ಫಿಶ್‌ ಫಿಂಗರ್ಸ್‌ ರೆಸಿಪಿ ತಿಂದಿದ್ದೀರಾ? ಇಲ್ಲವಾದರೆ ನೀವೊಮ್ಮೆ ಟ್ರೈ ಮಾಡಲೇಬೇಕು. ಫಿಶ್‌ ಫಿಂಗರ್ಸ್‌ ತಯಾರಿಸಿಲು ಪ್ರತ್ಯೇಕ ಬ್ಯಾಟರ್‌ ತಯಾರಿಸಬೇಕು. ನಂತರ ಮೀನಿನ ತುಂಡುಗಳನ್ನು ಅದರಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಬೇಕು. ಟೊಮ್ಯಾಟೋ ಕೆಚಪ್‌, ಮಯೋ, ಮಸ್ಟರ್ಡ್‌ ಸಾಸ್‌ ಜೊತೆ ಫಿಶ್‌ ಫಿಂಗರ್ಸ್‌ ಎಂಜಾಯ್‌ ಮಾಡಿ.

8. ಚಿಕನ್‌ 65

ಚಿಕನ್‌ 65 ಮದ್ರಾಸ್‌ ಮೂಲದ ರೆಸಿಪಿ. ತಯಾರಿಸಲು ಬಹಳ ಸುಲಭ. ಚಿಕನ್‌ ಪ್ರಿಯರು ಇಷ್ಟಪಡುವ ಟಾಪ್‌ 5 ಚಿಕನ್‌ ರೆಸಿಪಿಗಳಲ್ಲಿ ಇದೂ ಕೂಡಾ ಒಂದು. ವಿವಿಧ ಫ್ಲೇವರ್‌ಗಳೊಂದಿಗೆ ಚಿಕನ್‌ ತುಂಡುಗಳನ್ನು ಮಿಕ್ಸ್‌ ಮಾಡಿ, ಸ್ವಲ್ಪ ಸಮಯ ಮ್ಯಾರಿನೇಟ್‌ ಮಾಡಿ ಡೀಪ್‌ ಫ್ರೈ ಮಾಡಿದರೆ ಚಿಕನ್‌ 65 ತಿನ್ನಲು ರೆಡಿ. ಬೇಕಿದ್ದರೆ ಇದನ್ನು ಪುದೀನಾ ಚಟ್ನಿ ಅಥವಾ ಯೋಗರ್ಟ್‌ ಡಿಪ್‌ ಜೊತೆ ಕೂಡಾ ತಿನ್ನಬಹುದು.

9. ಗೋವನ್‌ ಪ್ರಾನ್‌ ಕರಿ ವಿತ್‌ ರಾ ಮ್ಯಾಂಗೋ

ಡಿಶ್‌ ಹೆಸರೇ ಸೂಚಿಸುವಂತೆ ಈ ರೆಸಿಪಿ ಗೋವಾ ಮೂಲದ್ದು. ಗೋವಾದ ಪ್ರತಿ ಮನೆಯಲ್ಲೂ ಈ ರೆಸಿಪಿಯನ್ನು ತಯಾರಿಸುತ್ತಾರೆ. ಮಾವಿನ ಕಾಯಿಯೊಂದಿಗೆ ಪ್ರಾನ್ಸ್‌ ಕಾಂಬಿನೇಶನ್‌ ನೀವು ಒಮ್ಮೆಯೂ ಟ್ರೈ ಮಾಡಿಲ್ಲವೆಂದರೆ ತಪ್ಪದೆ ಟ್ರೈ ಮಾಡಲೇಬೇಕು. ಪ್ರಾನ್ಸ್‌ ಜೊತೆಗೆ ಮಾವಿನ ಕಾಯಿ ಫ್ಲೇವರ್‌ ಈ ರೆಸಿಪಿ ರುಚಿಯನ್ನು ದುಪ್ಪಟ್ಟಾಗಿಸುತ್ತದೆ. ಇದನ್ನು ನೀವು ರೊಟ್ಟಿ, ಚಪಾತಿ, ಅನ್ನದೊಂದಿಗೆ ಕೂಡಾ ತಿನ್ನಬಹುದು.

10. ನಿಹಾರಿ ಗೋಸ್ತ್‌

ಇದೊಂದು ಸಾಂಪ್ರದಾಯಿಕ ಮುಸ್ಲಿಂ ಶೈಲಿಯ ಫುಡ್.‌ ಈ ರೆಸಿಪಿಯನ್ನು ಮೊಘಲರು ಭಾರತಕ್ಕೆ ಪರಿಚಯಿಸಿದರು. ಪಾಕ್ತಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಇದು ಬಹಳ ಫೇಮಸ್.‌ ಇದು ಪಾಕಿಸ್ತಾನದ ರಾಷ್ಟ್ರೀಯ ಫುಡ್‌ ಎಂದೇ ಘೋಷಣೆ ಆಗಿದೆ. ಪಾಕಿಸ್ತಾನದ ಪ್ರತಿ ಹಬ್ಬ, ಪಾರ್ಟಿಯಲ್ಲಿ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಪರಾಟ ಹಾಗೂ ಅನ್ನದೊಂದಿಗೆ ಇದು ರುಚಿಯಾಗಿರುತ್ತದೆ. ವಿದೇಶದ ಆಹಾರ ಸಂಸ್ಕೃತಿಯನ್ನು ನೀವು ಪರಿಚಯಿಸಿಕೊಳ್ಳಬೇಕು ಎಂದಾದಲ್ಲಿ ಒಮ್ಮೆ ಈ ರೆಸಿಪಿ ಟ್ರೈ ಮಾಡಿ.

11. ಬಟರ್‌ ಚಿಕನ್‌ ರೆಸಿಪಿ

ಬಟರ್‌ ಚಿಕನ್‌ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ರೆಸ್ಟೋರೆಂಟ್‌ನಲ್ಲಿ ಮಾತ್ರ ಅಲ್ಲ ಅದಕ್ಕಿಂತ ರುಚಿಯಾದ ಬಟರ್‌ ಚಿಕನನ್ನು ನೀವು ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ಹೆಚ್ಚಿನ ಮಸಾಲೆ ಸಾಮಗ್ರಿಗಳು ಕೂಡಾ ಅಗತ್ಯವಿಲ್ಲ. ಬಟರ್‌ ನಾನ್‌, ಪರಾಟ ಜೊತೆಗೆ ಬಟರ್‌ ಚಿಕನ್‌ ರೆಸಿಪಿ ಬೆಸ್ಟ್‌ ಕಾಂಬಿನೇಶನ್.‌

12. ಹೈದರಾಬಾದ್‌ ಚಿಕನ್‌ ಫ್ರೈ

ಹೈದರಾಬಾದ್‌ ಮೂಲದ ರೆಸಿಪಿಗಳಲ್ಲಿ ಚಿಕನ್‌ ಫ್ರೈ ಕೂಡಾ ಒಂದು. ನಾನ್‌ವೆಜ್‌ ಸೇವಿಸುವವರ ಎಲ್ಲರ ಮನೆಯಲ್ಲೂ ಚಿಕನ್‌ ಫ್ರೈ ತಯಾರಿಸುತ್ತಾರೆ. ಆದರೆ ಹೈದರಾಬಾದಿ ಚಿಕನ್‌ ಫ್ರೈ ಯೂನಿಕ್‌ ಎನ್ನಬಹುದು. ಇದೊಂದು ಪರ್ಫೆಕ್ಟ್‌ ಅಪಟೈಸರ್.‌ ನಿಮ್ಮ ಮನೆಗೆ ಯಾರಾದರೂ ಗೆಸ್ಟ್‌ ಬಂದರೆ, ಬರ್ತ್‌ಡೇ, ಆನಿವರ್ಸರಿಯಂತ ಪಾರ್ಟಿ ಇದ್ದರೆ ಈ ರೆಸಿಪಿ ತಯಾರಿಸಬಹುದು. ಈ ಜ್ಯೂಸಿ ಹಾಗೂ ಫ್ಲೇವರ್‌ ರೆಸಿಪಿ ಖಂಡಿತ ನಿಮಗೆ ಇಷ್ಟವಾಗುತ್ತದೆ.

13. ಜಿಂಜರ್‌ ಚಿಕನ್‌

ಜಿಂಜರ್‌ ಚಿಕನ್‌ ಕೂಡಾ ಹೆಸರೇ ಹೇಳುವಂತೆ ಈ ರೆಸಿಪಿಯಲ್ಲಿ ಜಿಂಜರ್‌ ಫ್ಲೇವರ್‌ ಹೆಚ್ಚಾಗಿರುತ್ತದೆ. ಈ ರೆಸಿಪಿಗೆ ಶುಂಠಿಯನ್ನು ಹೆಚ್ಚು ಬಳಸಲಾಗುತ್ತದೆ. ಚಳಿಗಾಲಕ್ಕೆ ಜಿಂಜರ್‌ ಚಿಕನ್‌ ಹೇಳಿಮಾಡಿಸಿದಂತ ರೆಸಿಪಿ. ರೊಟ್ಟಿಯೊಂದಿಗೆ ಇದು ಬೆಸ್ಟ್‌ ಕಾಂಬಿನೇಶನ್‌ ದೋಸೆ, ಚಪಾತಿ, ಅನ್ನದೊಂದಿಗೆ ಕೂಡಾ ಇದನ್ನು ಸೇವಿಸಬಹುದು.

14. ಹೈದರಾಬಾದ್‌ ಕೀಮಾ

ಕೈಮಾ ಅಥವಾ ಕೀಮಾವನ್ನು ಕೂಡಾ ಅನೇಕರು ಇಷ್ಟಪಟ್ಟು ತಿನ್ನುತ್ತಾರೆ. ನೀವು ಪ್ರತಿಬಾರಿ ಕೈಮಾ ಬಾಲ್‌ ತಯಾರಿಸುವ ಬದಲಿಗೆ ಒಮ್ಮೆ ನಮ್ಮ ನೆರೆ ರಾಜ್ಯದ ಅಥೆಂಟಿಕ್‌ ಫುಡ್‌ ಟ್ರೈ ಮಾಡಿ. ಇದನ್ನೂ ನೀವು ತಂದೂರಿ ನಾನ್‌ ಜೊತೆಗೆ ಸೇವಿಸಿದರೆ ಅದು ಬೆಸ್ಟ್‌ ಕಾಂಬಿನೇಶನ್.‌

ನಾನ್‌ವೆಜ್‌ಪ್ರಿಯರು ಒಮ್ಮೆ ಈ ರೆಸಿಪಿಗಳನ್ನು ತಪ್ಪದೆ ಟ್ರೈ ಮಾಡಿ.

ವಿಭಾಗ