Oats Paddu Recipe: ಮನೇಲಿ ಓಟ್ಸ್‌ ಇದ್ರೆ ಫಟಾಫಟ್‌ ರೆಡಿಯಾಗುತ್ತೆ ಬಿಸಿ ಬಿಸಿ ಪಡ್ಡು; ಸಂಜೆ ಸ್ನ್ಯಾಕ್ಸ್‌ಗೆ ಇದು ಹೇಳಿ ಮಾಡಿಸಿದ ರೆಸಿಪಿ..
ಕನ್ನಡ ಸುದ್ದಿ  /  ಜೀವನಶೈಲಿ  /  Oats Paddu Recipe: ಮನೇಲಿ ಓಟ್ಸ್‌ ಇದ್ರೆ ಫಟಾಫಟ್‌ ರೆಡಿಯಾಗುತ್ತೆ ಬಿಸಿ ಬಿಸಿ ಪಡ್ಡು; ಸಂಜೆ ಸ್ನ್ಯಾಕ್ಸ್‌ಗೆ ಇದು ಹೇಳಿ ಮಾಡಿಸಿದ ರೆಸಿಪಿ..

Oats Paddu Recipe: ಮನೇಲಿ ಓಟ್ಸ್‌ ಇದ್ರೆ ಫಟಾಫಟ್‌ ರೆಡಿಯಾಗುತ್ತೆ ಬಿಸಿ ಬಿಸಿ ಪಡ್ಡು; ಸಂಜೆ ಸ್ನ್ಯಾಕ್ಸ್‌ಗೆ ಇದು ಹೇಳಿ ಮಾಡಿಸಿದ ರೆಸಿಪಿ..

ಸಂಜೆ ಆಗ್ತಿದ್ದಂತೆ ನಾವು ಸುಮ್ಮನಿದ್ದರೂ, ಬಾಯಿ ಮಾತ್ರ ಸುಮ್ಮನಿರಲ್ಲ. ಏನಾದರೂ ಬಾಯಾಡಿಸಲೇಬೇಕು. ಅದರಲ್ಲೂ ಬಿಸಿ ಬಿಸಿ ಐಟಂ ಇದ್ರೆ ಆ ಸಂಜೆ ಇನ್ನಷ್ಟು ಸವಿ ಆಗುತ್ತೆ. ಹಾಗಾದರೆ ಈ ಸಂಜೆಯ ವೇಳೆ ಯಾವ ತಿನಿಸು ಮಾಡಬೇಕು ಎಂಬ ಆಲೋಚನೆ ಇದ್ದರೆ, ಇಲ್ಲೊಂದು ರೆಸಿಪಿ ಇದೆ ನೋಟ್‌ ಮಾಡಿಕೊಳ್ಳಿ.

ಮನೇಲಿ ಓಟ್ಸ್‌ ಇದ್ರೆ ಫಟಾಫಟ್‌ ರೆಡಿಯಾಗುತ್ತೆ ಬಿಸಿ ಬಿಸಿ ಪಡ್ಡು; ಸಂಜೆ ಸ್ನ್ಯಾಕ್ಸ್‌ಗೆ ಇದು ಹೇಳಿ ಮಾಡಿಸಿದ ರೆಸಿಪಿ..
ಮನೇಲಿ ಓಟ್ಸ್‌ ಇದ್ರೆ ಫಟಾಫಟ್‌ ರೆಡಿಯಾಗುತ್ತೆ ಬಿಸಿ ಬಿಸಿ ಪಡ್ಡು; ಸಂಜೆ ಸ್ನ್ಯಾಕ್ಸ್‌ಗೆ ಇದು ಹೇಳಿ ಮಾಡಿಸಿದ ರೆಸಿಪಿ..

ಸಂಜೆ ಆಗ್ತಿದ್ದಂತೆ ನಾವು ಸುಮ್ಮನಿದ್ದರೂ, ಬಾಯಿ ಮಾತ್ರ ಸುಮ್ಮನಿರಲ್ಲ. ಏನಾದರೂ ಬಾಯಾಡಿಸಲೇಬೇಕು. ಅದರಲ್ಲೂ ಬಿಸಿ ಬಿಸಿ ಐಟಂ ಇದ್ರೆ ಆ ಸಂಜೆ ಇನ್ನಷ್ಟು ಸವಿ ಆಗುತ್ತೆ. ಹಾಗಾದರೆ ಈ ಸಂಜೆಯ ವೇಳೆ ಯಾವ ತಿನಿಸು ಮಾಡಬೇಕು ಎಂಬ ಆಲೋಚನೆ ಇದ್ದರೆ, ಇಲ್ಲೊಂದು ರೆಸಿಪಿ ಇದೆ ನೋಟ್‌ ಮಾಡಿಕೊಳ್ಳಿ. ಮನೆಯಲ್ಲಿ ಓಟ್ಸ್‌ ಇದ್ದರೆ ಫಟಾಫಟ್‌ ಅಂತ ಈ ರೆಸಿಪಿ ಮಾಡಬಹುದು. ಓಟ್ಸ್‌ನಲ್ಲಿ ಪೌಷ್ಠಿಕಾಂಶಗಳಿಂದ ಕೂಡಿದ ಆಹಾರ. ಇದನ್ನು ನಿತ್ಯ ಸೇವಿಸುತ್ತ ಬಂದರೆ, ಇದರಿಂದ ನಾನಾ ವಿಧದ ಪ್ರಯೋಜನಗಳಿವೆ. ಹಾಗಾದರೆ, ಈ ಓಟ್ಸ್‌ನಿಂದ ಪಡ್ಡು ಮಾಡುವುದು ಹೇಗೆ? ಇಲ್ಲಿದೆ ನೋಡಿ..

ಓಟ್ಸ್ ಪಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು

ಓಟ್ಸ್ ಪುಡಿ

ಉದ್ದಿನ ಹಿಟ್ಟು (ನೆನೆಸಿ ತುಬ್ಬಿಟ್ಟುಕೊಂಡ ಹಿಟ್ಟು)

ಖಾರದ ಪುಡಿ

ಉಪ್ಪು

ಕಾಳುಮೆಣಸಿನ ಪುಡಿ

ಈರುಳ್ಳಿ

ಕ್ಯಾರೆಟ್

ದಪ್ಪ ಮೆಣಸಿನ ಕಾಯಿ

ತುಪ್ಪ/ಎಣ್ಣೆ

ಓಟ್ಸ್ ಪಡ್ಡು ಮಾಡುವುದು ಹೇಗೆ

ಮೊದಲಿಗೆ ನೆನೆಸಿದ ಉದ್ದಿನಬೇಳೆಯನ್ನು ನಯವಾಗುವವರೆಗೆ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ಓಟ್ಸ್ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಕಾಳುಮೆಣಸು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ಬೆರೆಸಿದ ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಸೇರಿಸಿ. ನಂತರ ಪಡ್ಡು ಮಾಡುವ ಬಾಣಲಿ ತೆಗೆದುಕೊಂಡು ಎಣ್ಣೆಯಿಂದ ಚೆನ್ನಾಗಿ ಆ ಬಟ್ಟಲುಗಳನ್ನು ಸವರಿ. ಬಳಿಕ ಹಿಟ್ಟನ್ನು ಪಡ್ಡಿನ ಪಾತ್ರೆಗೆ ಹಾಕಿ ಚೆನ್ನಾಗಿ ಬ್ರೌನ್‌ ಬಣ್ಣಕ್ಕೆ ಬರುವವರೆಗೂ ಬೇಯಿಸಿ. ಇಲ್ಲಿಗೆ ಓಟ್ಸ್‌ ಪಡ್ಡು ಸವಿಯಲು ಸಿದ್ಧ. ಈ ಪಡ್ಡಿಗೆ ನೀವು ಕೊಬ್ಬರಿ ಚಟ್ನಿ ಅಥವಾ ಕೆಂಪು ಮೆಣಸಿನ ಚಟ್ನಿಯನ್ನು ಕಾಂಬಿನೇಷನ್‌ ಆಗಿ ಬಳಸಬಹುದು.

Whats_app_banner