ಕನ್ನಡ ಸುದ್ದಿ  /  Lifestyle  /  How To Make Pepper Sev Recipe

Pepper Sev Recipe: ಟೀ ಟೈಂ ಸ್ನಾಕ್ಸ್...ನೀವೂ ಮಾಡಿ ರುಚಿಯಾದ ಪೆಪ್ಪರ್‌ ಸೇವ್‌

ಪೆಪ್ಪರ್‌ ಸೇವ್‌, ತಯಾರಿಸುವುದು ಬಹಳ ಸುಲಭ ಹಾಗೂ ಇದನ್ನು ಕೆಲವು ದಿನಗಳ ಕಾಲ ಕೆಡದಂತೆ ಇಡಬಹುದು. ಮಕ್ಕಳಿಗಂತೂ ಇದು ಬಹಳ ಇಷ್ಟ. ಕಡ್ಲೆಹಿಟ್ಟಿನಿಂದ ತಯಾರಿಸುವ ಈ ರೆಸಿಪಿ ಬಹಳ ರುಚಿಯಾಗಿರುತ್ತದೆ.

ಪೆಪ್ಪರ್‌ ಸೇವ್‌
ಪೆಪ್ಪರ್‌ ಸೇವ್‌ (PC: Freepilk.com)

ಬಿಸ್ಕೆಟ್‌, ವಡೆ, ಬಜ್ಜಿ ಹೀಗೆ ಕಾಫಿ ಅಥವಾ ಟೀ ಜೊತೆಗೆ ತಿನ್ನಲು ಏನಾದರೂ ಖಾರವಾದ ರುಚಿಯಾದ ಸ್ನಾಕ್ಸ್‌ ಇದ್ದರೆ ನಾಲಿಗೆಗೆ ರುಚಿ ಮಾತ್ರವಲ್ಲ, ಮನಸ್ಸಿಗೆ ಖುಷಿ ಕೂಡಾ. ವಡೆ, ಬಜ್ಜಿ ತಯಾರಿಸಿದರೆ ಅದನ್ನು ಹೆಚ್ಚು ದಿನ ಇಡಲು ಸಾಧ್ಯ ಇಲ್ಲ. ಬಿಸ್ಕೆಟ್‌ ಯಾವಾಗಲೂ ತಿಂದು ತಿಂದೂ ಬೋರ್‌ ಇರಬಹುದು. ಆದರೆ ಬಹಳ ದಿನಗಳ ಕಾಲ ಸ್ಟೋರಿ ಮಾಡಿ ಇಡಬಹುದಾದ ಸೇವ್‌ ತಯಾರಿಸಿದರೆ ಹೇಗೆ..?

ಪೆಪ್ಪರ್‌ ಸೇವ್‌, ತಯಾರಿಸುವುದು ಬಹಳ ಸುಲಭ ಹಾಗೂ ಇದನ್ನು ಕೆಲವು ದಿನಗಳ ಕಾಲ ಕೆಡದಂತೆ ಇಡಬಹುದು. ಮಕ್ಕಳಿಗಂತೂ ಇದು ಬಹಳ ಇಷ್ಟ. ಕಡ್ಲೆಹಿಟ್ಟಿನಿಂದ ತಯಾರಿಸುವ ಈ ರೆಸಿಪಿ ಬಹಳ ರುಚಿಯಾಗಿರುತ್ತದೆ. ಪೆಪ್ಪರ್‌ ಸೇವ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆಂದು ನೋಡೋಣ.

ಪೆಪ್ಪರ್‌ ಸೇವ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಕಡ್ಲೆಹಿಟ್ಟು - 1 ಕಪ್‌

ಅಕ್ಕಿಹಿಟ್ಟು - 1/2 ಕಪ್

ಕ್ರಷ್‌ ಮಾಡಿದ ಕರಿಮೆಣಸು - 2 ಟೀ ಸ್ಪೂನ್‌

ಜೀರ್ಗೆ - 1 ಟೀ ಸ್ಪೂನ್‌

ಅಚ್ಚ ಖಾರದ ಪುಡಿ - 1 ಟೀ ಸ್ಪೂನ್

ಹಿಂಗು - 1/2 ಟೀ ಸ್ಪೂನ್‌

ಬೆಣ್ಣೆ - 1 ಟೀ ಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ಪೆಪ್ಪರ್‌ ಸೇವ್‌ ತಯಾರಿಸುವ ವಿಧಾನ

ಕಡ್ಲೆಹಿಟ್ಟು ಹಾಗೂ ಅಕ್ಕಿಹಿಟ್ಟನ್ನು ಜರಡಿ ಮಾಡಿಕೊಳ್ಳಿ‌

ಇದರೊಂದಿಗೆ ಕ್ರಷ್‌ ಮಾಡಿದ ಕರಿಮೆಣಸು, ಜೀರ್ಗೆ, ಅಚ್ಚ ಖಾರದ ಪುಡಿ, ಹಿಂಗು, ಉಪ್ಪು ಸೇರಿಸಿ ಮಿಕ್ಸ್‌ ಮಾಡಿ

ಬೆಣ್ಣೆಯನ್ನು ಸ್ವಲ್ಪ ಕರಗಿಸಿ, ಕಡ್ಲೆಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಮಿಕ್ಸ್‌ ಮಾಡಿ

ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ

ಮೂರು ರಂಧ್ರಗಳಿರುವ ಬಿಲ್ಲೆಯನ್ನು ಚಕ್ಕುಲಿ ಹೊರಳಿಗೆ ಸೇರಿಸಿ ತುಪ್ಪ ಸವರಿ

ಬಿಸಿ ಎಣ್ಣೆಯಲ್ಲಿ ಸೇವ್‌ ಒತ್ತಿಕೊಂಡು ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ

ಹೆಚ್ಚುವರಿ ಎಣ್ಣೆ ತೆಗೆದು, ಸೇವನ್ನು ತುಂಡುಗಳನ್ನಾಗಿ ಮಾಡಿ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ

ಊಟದೊಂದಿಗೆ ಅಥವಾ ಕಾಫಿ/ಟೀಯೊಂದಿಗೆ ಪೆಪ್ಪರ್‌ ಸೇವ್‌ ರೆಸಿಪಿ ಬಹಳ ರುಚಿಯಾಗಿರುತ್ತದೆ

ವಿಭಾಗ